ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಸಾವಿಗೀಡಾದ ರೆಸ್ಟೋರೆಂಟ್ ಧ್ವಂಸಕ್ಕೆ ಹೈಕೋರ್ಟ್ ತಡೆಯಾಜ್ಞೆ

ನವದೆಹಲಿ: ಮದ್ಯದಲ್ಲಿ ವಿಷ ಬೆರೆಸಿ ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಅವರನ್ನು ಹತ್ಯೆ ಮಾಡಿದ್ದ ಗೋವಾದ ಕರ್ಲೀಸ್ ರೆಸ್ಟೋರೆಂಟ್ ಕಟ್ಟಡವನ್ನು ಧ್ವಂಸಗೊಳಿಸಬೇಕೆಂಬ ರಾಷ್ಟ್ರೀಯ ಹಸಿರು ನ್ಯಾಯಪೀಠ (SGT)ನೀಡಿರುವ ಆದೇಶಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಕರಾವಳಿ ತೀರ ರಕ್ಷಣೆ ನಿಯಮಗಳನ್ನು ಉಲ್ಲಂಘಿಸಿರುವ ಗೋವಾದ ಕರ್ಲೀಸ್ ರೆಸ್ಟೋರೆಂಟ್ ಕಟ್ಟಡವನ್ನು ಧ್ವಂಸಗೊಳಿಸಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಪೀಠ ಆದೇಶ ನೀಡಿತ್ತು.

ಇದರಿಂದಾಗಿ ಗೋವಾ ಸರ್ಕಾರ ಬೆಳಗ್ಗೆ ಅಂಜುನಾದಲ್ಲಿರುವ ಕರ್ಲೀಸ್ ರೆಸ್ಟೋರೆಂಟ್ ಕಟ್ಟಡ ಒಡೆಯುವ ಕೆಲಸ ಆರಂಭಿಸಿತ್ತು. ಏತನ್ಮಧ್ಯೆ ಕರ್ಲೀಸ್ ರೆಸ್ಟೋರೆಂಟ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ಅಲ್ಲದೆ ಶೀಘ್ರ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿತ್ತು.ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕರ್ಲೀಸ್ ರೆಸ್ಟೋರೆಂಟ್ ಕಟ್ಟಡ ಧ್ವಂಸಗೊಳಿಸಬೇಕೆಂಬ ರಾಷ್ಟ್ರೀಯ ಹಸಿರು ನ್ಯಾಯಪೀಠದ ಆದೇಶಕ್ಕೆ ತಡೆ ನೀಡಿದ್ದು, ಇದರೊಂದಿಗೆ ಕರ್ಲೀಸ್ ರೆಸ್ಟೋರೆಂಟ್ ಕಟ್ಟಡ ಧ್ವಂಸಗೊಳಿಸುವ ಕಾರ್ಯಕ್ಕೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ ಎಂದು ವರದಿ ತಿಳಿಸಿದೆ.

Leave A Reply

Your email address will not be published.