ಅಲರ್ಜಿ ಸಮಸ್ಯೆ ಇರೋರಿಗೆ ಬರೋದಿಲ್ಲವಂತೆ ಈ ಕಾಯಿಲೆ

ಕೋರೋನ ವೈರಸ್ ಭೀತಿ ಹೆಚ್ಚುತ್ತಲೇ. ಯಾರಲ್ಲಿ, ಹೇಗೆ ಪತ್ತೆಯಾಗಬಹುದೆಂಬುದೇ ದೊಡ್ಡ ಪ್ರಶ್ನೆಯಾಗಿದೆ. ಆದ್ರೆ, ಅಲರ್ಜಿ ಪ್ರಿಯರಿಗೆ ಮಾತ್ರ ಕೊರೋನ ವೈರಸ್ ಟೆನ್ಷನ್ ಬೇಡ ಅನ್ನುತ್ತಾರೆ ವೈದ್ಯರು. ಹೌದು. ಅಧ್ಯಯನದ ಪ್ರಕಾರ ಅಲರ್ಜಿ ಹೊಂದಿರುವವರಲ್ಲಿ ಸೋಂಕು ಕಾಣಿಸುವುದು ಕಡಿಮೆ.

ಕೊರೋನ ವೈರಸ್ ಯಾವ ರೋಗಗಳಿಂದ ಹೆಚ್ಚು ವೇಗವಾಗಿ ಬೆಳೆಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳು ಮತ್ತು ವೈದ್ಯರು ಅಧ್ಯಯನವನ್ನು ನಡೆಸಿದ್ದಾರೆ. ಸ್ಥೂಲಕಾಯತೆ, ವೃದ್ಧಾಪ್ಯ ಮತ್ತು ಹಲವಾರು ಸಣ್ಣ ಕಾಯಿಲೆಗಳನ್ನು ಮುಖ್ಯ ಕಾರಣಗಳಾಗಿ ಉಲ್ಲೇಖಿಸಿ ಕೋವಿಡ್‌ನೊಂದಿಗೆ ತೀವ್ರ ಸಮಸ್ಯೆ ತಂದೊಡ್ಡುವ ಅಪಾಯಕಾರಿ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿನ ಅಧ್ಯಯನದ ಪ್ರಕಾರ ಸುಮಾರು 300 ಮಿಲಿಯನ್ ಜನರು ಅಲರ್ಜಿಕ್ ಆಸ್ತಮಾದಿಂದ ಬಳಲುತ್ತಿದ್ದಾರೆ. ಸುಮಾರು 250 ಮಿಲಿಯನ್ ಜನರಿಗೆ ಆಹಾರಕ್ಕೆ ಸಂಬಂಧಪಟ್ಟ ಅಲರ್ಜಿಯಿದೆ. ಅನೇಕರಿಗೆ ಔಷಧಗಳ ಸೇವನೆಯಿಂದ್ಲೇ ಅಲರ್ಜಿಯಾಗುತ್ತದೆ. ಧೂಳು, ಸುಗಂಧ ದ್ರವ್ಯ ಅಥವಾ ಕೊಳೆತ ವಸ್ತುಗಳೆಂದರೆ ಕೆಲವರಿಗೆ ಅಲರ್ಜಿ ಇರುತ್ತದೆ. ಅಲರ್ಜಿ ಕೆಲವೊಮ್ಮೆ ಸಾವಿಗೂ ಕಾರಣವಾಗಬಹುದು. ಆದ್ರೆ ಅಟೊಪಿಕ್ ಕಾಯಿಲೆ ಇರುವವರಲ್ಲಿ ಕೋವಿಡ್‌ ಸೋಂಕು ಬರುವ ಸಾಧ್ಯತೆ ಶೇ.25ರಷ್ಟು ಕಡಿಮೆ ಇರುತ್ತದೆ. ಅಟೊಪಿಕ್ ಕಾಯಿಲೆ ಮತ್ತು ಆಸ್ತಮಾ ಹೊಂದಿರುವವರಿಗೂ ಕೊರೊನಾ ಅಪಾಯ ಶೇ.38ರಷ್ಟು ಕಡಿಮೆಯಾಗಿರುತ್ತದೆ. ಸಾಂಕ್ರಾಮಿಕ ರೋಗ ಆರಂಭವಾದ ಸಮಯದಲ್ಲಿ ಅಸ್ತಮಾ ಹೊಂದಿರುವವರಿಗೆ ಕೋವಿಡ್‌ ಅಪಾಯ ಹೆಚ್ಚು ಎಂದು ನಂಬಲಾಗಿತ್ತು. ಏಕೆಂದರೆ ಸೋಂಕು ಸಾಮಾನ್ಯವಾಗಿ ಅಸ್ತಮಾವನ್ನು ಉಲ್ಬಣಗೊಳಿಸುತ್ತದೆ.

ಆದರೆ ಸೌಮ್ಯವಾದ ಅಥವಾ ಚೆನ್ನಾಗಿ ನಿಯಂತ್ರಿತವಾಗಿರುವ ಅಸ್ತಮಾವು ಕೋವಿಡ್‌ನೊಂದಿಗೆ ತೀವ್ರವಾದ ಕಾಯಿಲೆಯ ಅಪಾಯವನ್ನು ಹೆಚ್ಚಿಸುವುದಿಲ್ಲ ಎಂಬುದು ಈಗ ಸಾಬೀತಾಗಿದೆ. ಹೆಚ್ಚು ತೀವ್ರವಾದ ಆಸ್ತಮಾ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದಕ್ಕೂ ಪುರಾವೆಗಳಿಲ್ಲ.. ಆದರೆ, ಮಾಸ್ ಇಂಡೆಕ್ಸ್ ಹೊಂದಿರುವ ಜನರು ಕೋವಿಡ್‌ಗೆ ತುತ್ತಾಗಬಹುದು ಎನ್ನುತ್ತಾರೆ ವೈದ್ಯರು.

Leave A Reply

Your email address will not be published.