Personality Test: ಹಣೆಯ ಆಕಾರ ನೋಡಿ ವ್ಯಕ್ತಿಗಳ ರಹಸ್ಯ ವ್ಯಕ್ತಿತ್ವ ತಿಳಿದುಕೊಳ್ಳಿ, ಸ್ವತಃ ನಿಮ್ಮ ಬಗ್ಗೆಯೇ ಒಮ್ಮೆ ಪರೀಕ್ಷಿಸಿ ನೋಡಿ !

Personality Test: ಮುಖ ನೋಡಿದ್ರೆ ಗೊತ್ತಾಗಲ್ವಾ ಅನ್ನೋದು ಒಂದು ಸಾಮಾನ್ಯ ಹೇಳಿಕೆ. ಅಂದ್ರೆ ನಿಮ್ಮ ಮುಖವು ನಿಮ್ಮ ಬಗೆಗಿನ ಸಾವಿರಾರು ಸತ್ಯಗಳನ್ನು ನಿಮಗೆ ಅರಿವಿಲ್ಲದಂತೆಯೇ ಹೊರಗೆ ಹಾಕುತ್ತದೆ ಅನ್ನುವುದು ಒಂದು ನಂಬಿಕೆ. ಬಹುಶಃ ಮುಖ ನೋಡಿ ಮನೆ ಹಾಕು ಅಂತ ಅದಕ್ಕೇ ಹೇಳಿರಬೇಕು. ಮುಖ ನೋಡಿ ವ್ಯಕ್ತಿಯ ಚರಿತ್ರೆ ಮತ್ತು ಭವಿಷ್ಯ ಹೇಳುವ ಕಲೆ ಈಗಿನದಲ್ಲ. ಅದಕ್ಕೆ ಗ್ರೀಸ್ ನಾಗರಿಕತೆಯ ಕಾಲದ ಇತಿಹಾಸವಿದೆ. ಭಾರತೀಯ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂಡಾ ಮುಖವನ್ನ ಓದುವ ಕಲೆ ಇಂದಿಗೂ ಚಾಲ್ತಿಯಲ್ಲಿದೆ. ಮುಖವನ್ನು ನೋಡಿ ಭವಿಷ್ಯ ನುಡಿಯುವ ಅಥವಾ ವ್ಯಕ್ತಿತ್ವದ ಬಗ್ಗೆ ಹೇಳುವ ಈ ಶಾಸ್ತ್ರ ಕೇವಲ ನಂಬಿಕೆಯನ್ನೇ ಆಧರಿಸಿದ ಶಾಸ್ತ್ರವಲ್ಲ, ಇದರ ಹಿಂದೆ ವೈಜ್ಞಾನಿಕ ಅಂಶ ಅಡಗಿದೆ. ಈ ಬಗೆಗಿನ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

ವ್ಯಕ್ತಿಗಳ ಹಣೆಯ ಆಕಾರ ಗಾತ್ರ ವಿನ್ಯಾಸಗಳನ್ನು ನೋಡಿ ಅವರ ವ್ಯಕ್ತಿತ್ವವನ್ನು ಅಳೆಯುವ ವಿಧಾನದ ಬಗ್ಗೆ ಈ ಲೇಖನ. ಹಣೆಯ ಯಾವ ಆಕಾರದವರ ವ್ಯಕ್ತಿತ್ವ (Personality Test) ಹೇಗೆ ಇರುತ್ತದೆ ಅನ್ನೋದು ಇಲ್ಲಿ ನೀಡಲಾಗಿದೆ. ಕನ್ನಡಿಯಲ್ಲಿ ನಿಮ್ಮ.ಹಣೆಯ ಆಕಾರ ನೋಡಿಕೊಳ್ಳಿ, ಮತ್ತು ನಿಮ್ಮ ಹಣೆಬರ ಎಂಥದ್ದು ಎಂದು ನೀವೇ ಭವಿಷ್ಯ ನುಡಿದುಕೊಳ್ಳಿ.

1. ಅಗಲವಾದ ಹೊಳೆಯುವ ಹಣೆ
ಈ ರೀತಿಯ ಹಣೆ ನಿಮ್ಮದಾಗಿದ್ದರೆ ನೀವು ತುಂಬಾ ಅದೃಷ್ಟವಂತರು. ಇದು, ಶಕ್ತಿ, ಖ್ಯಾತಿ ಹಾಗೂ ಆರೋಗ್ಯದ ಸಂಕೇತ. ಇಲ್ಲಿರುವ ನಂಬರ್ 1 ರ ಫೋಟೊದಲ್ಲಿರುವ ಮುಖದಲ್ಲಿ ಹಣೆ ತುಂಬಾ ವಿಶಾಲವಾಗಿದೆ. ಈ ರೀತಿ ಅಗಲವಾದ ಹಣೆಯನ್ನು ಹೊಂದಿರುವವರು ಎಲ್ಲ ಜನರಿಗಿಂತ ಒಂದು ಹೆಜ್ಜೆ ಮುಂದೆ ಸಾಗಲು ಬಯಸುತ್ತಾರೆ. ಅವರುಗಳು ಪ್ರಶಾಂತವಾಗಿರುತ್ತಾರೆ. ಅಗಲ ಹಣೆಯ ಜನರದ್ದು ಬಹು ತೂಕದ ಮಾತು ಮತ್ತು ಅತ್ಯಂತ ಬುದ್ಧಿವಂತಿಕೆಯ ನಾಜೂಕಾದ ನಡೆ. ಅದೇ ಕಾರಣಕ್ಕೆ ಜನರು ಅವರನ್ನು ಬಹುವೇಗ ನಂಬುತ್ತಾರೆ. ಚತುರತೆ ಮತ್ತು ಭಾವನಾತ್ಮಕತೆ ಇವೆರಡರ ಬ್ಯಾಲೆನ್ಸ್ ಹೊಂದಿರುವ ಈ ವಿಶಾಲವಾದ ಹಣೆಯ ಜನರು ತಮ್ಮ ಹಣೆಬರಹ ತಾವೇ ಬರೆದುಕೊಳ್ಳುತ್ತಾರೆ ಎಂದರು ತಪ್ಪೇನಿಲ್ಲ. ಒಟ್ಟಾರೆ ಈ ಜನರು ತಮಗೆ ಇಷ್ಟವಾದ ವಸ್ತುಗಳನ್ನು ತಮ್ಮ ಚತುರ ನಡೆಯಿಂದ ಪಡೆಯುತ್ತಾರೆ. ಇಂಥವರು ಯಾವುದೇ ಕಲೆಯನ್ನಾದರೂ ಶೀಘ್ರವಾಗಿ ಕಲಿತುಕೊಳ್ಳುತ್ತಾರೆ ಮತ್ತು ಸದಾ ಕಾಲ ಗುಂಪನ್ನು ಮುನ್ನಡೆಸಲು ಬಯಸುತ್ತಾರೆ. ನೀವು ಕೂಡ ಇಂತಹ ಹಣೆಯುಳ್ಳವರಾದರೆ ನೀವು ಅದೃಷ್ಟವಂತರೇ ಸರಿ. ಒಮ್ಮೆ ಕನ್ನಡಿಯ ಮುಂದೆ ನಿಂತು ನೋಡಿಕೊಳ್ಳಿ ನಿಮ್ಮ ಹಣೆಬರಹ ಎಂಥದ್ದು ಎಂದು !!

2. ಕಿರಿದಾದ ಹಣೆಯ ಆಕಾರ
ಈ ರೀತಿಯ ಹಣೆಯ ಜನರು ಇತರರಿಗಿಂತ ಜಾಸ್ತಿ ಪ್ರಮಾಣದ ಏಕಾಂತವನ್ನು ಇಷ್ಟ ಪಡುತ್ತಾರೆ. ಇಂತಹ ವ್ಯಕ್ತಿಗಳು ತಮ್ಮ ಪಾಡಿಗೆ ತಾವೀರುತ್ತಾರೆ. ಇವರಿಗೆ ಇತರ ವಿಷಯಗಳಿಗಿಂತ ಭಾವನಾತ್ಮಕ ವಿಷಯಗಳೇ ಮುಖ್ಯ ಅನ್ನಿಸುತ್ತವೆ. ಇವರು ತಲೆಯ ಮಾತಿಗಿಂತ ಹೃದಯದ ಭಾವಕ್ಕೆ ಹೆಚ್ಚು ಮಿಡಿಯುತ್ತಾರೆ. ಬೇರೆಯವರಿಗೆ ಸಹಾಯ ಮಾಡುವುದನ್ನು ತುಂಬಾ ಇಷ್ಟ ಪಡುತ್ತಾರೆ. ಆದರೆ ಎಷ್ಟೋ ಸಲ ಬೇರೆಯವರ ನಕಾರಾತ್ಮಕ ಅಂಶಗಳನ್ನು ತಮ್ಮೊಳಗೆ ಬಿಟ್ಟುಕೊಳ್ಳುತ್ತಾರೆ ಇಂತಹ ಕಿರಿಯ ಹಣೆಯ ವ್ಯಕ್ತಿಗಳು.

3. ಬಾಗಿದ ಹಣೆಯ ಆಕಾರ
ಬಾಗಿದಂತೆ ಇರುವ ಹಣೆಯ ಆಕಾರವನ್ನು ಹೊಂದಿರುವ ಜನರು ಸ್ನೇಹಮಯಿಗಳು. ಸುಲಭವಾಗಿ ಅವರು ಜನರೊಂದಿಗೆ ಬೆರೆಯುತ್ತಾರೆ, ಮಾತನಾಡುತ್ತಾರೆ. ಇವರು ಒಳ್ಳೆಯ ಮಾತುಗಾರರು. ಇತರರನ್ನು ಅತ್ಯಂತ ವೇಗ ತಮ್ಮ ಮಾತಿನ ಶೈಲಿಯ ಮತ್ತು ವ್ಯಕ್ತಿತ್ವದ ಒಳಗೆ ಎಳೆದುಕೊಳ್ಳುತ್ತಾರೆ. ಸಾಟಿ ಜನರನ್ನು ಪ್ರೇರೇಪಿಸುತ್ತಾರೆ. ಅಯಸ್ಕಾಂತೀಯ ವ್ಯಕ್ತಿತ್ವದ ಇಂತಹ ಜನರು ಇತರರನ್ನು ಬಹುಬೇಗ ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಾರೆ ಇಂಥವರಿಗೆ ರಾಜಕೀಯ ಆಗಲಿ ಅಥವಾ ಇನ್ಯಾವುದೇ ನಾಯಕತ್ವದ ಕ್ಷೇತ್ರಗಳು ಒಗ್ಗಿ ಬರುತ್ತವೆ.

4. ಇಂಗ್ಲಿಷ್ M ಆಕಾರದ ಹಣೆಯ ಜನರ ವ್ಯಕ್ತಿತ್ವ
M ಷೇಪಿನ ಹಣೆಯವರ ವ್ಯಕ್ತಿತ್ವ ತುಂಬಾ ವಿಶಿಷ್ಟವಾಗಿರುತ್ತದೆ ಅವರು ಕನಸುಗಾರರು ಮತ್ತು ಕಲಾತ್ಮಕರು. ಜೊತೆಗೆ ಇತರರನ್ನು ವಿಶ್ಲೇಷತ್ಮಕವಾಗಿ ನೋಡಬಲ್ಲವರು. ಅಂದರೆ ಹೃದಯದಿಂದ ಮತ್ತು ತಲೆಯಿಂದ ಏಕಕಾಲದಲ್ಲಿ ಆಲೋಚಿಸಿ ಇವೆರಡರ ಮಧ್ಯೆ ಬ್ಯಾಲೆನ್ಸ್ ಆಗಿ ನಿಲ್ಲಬಲ್ಲವರು ಈ ಮಂದಿ. ಇವರನ್ನು ಪ್ರಪಂಚದಲ್ಲಿ ಅತ್ಯುತ್ತಮರು ಎಂದು ನಿರ್ಧರಿಸಲಾಗಿದೆ. ಇವರು ಗುಂಪುಗಳನ್ನು ಎಂದೂ ಅನುಸರಿಸುವುದಿಲ್ಲ. ಉಳಿದವರು ತಮ್ಮನ್ನು ಅನುಸರಿಸುವಂತೆ ಇವರು ಮಾಡುತ್ತಾರೆ ಆ ಬುದ್ಧಿವಂತಿಗೆ ಇವರಲ್ಲಿ ಧಾರಾಳವಾಗಿ ಇದೆ. ಸ್ವಯಂ ಅಭಿವ್ಯಕ್ತಿಗೆ ಅವಕಾಶ ನೀಡುವ ವಿಷಯಗಳನ್ನು ತುಂಬಾ ಆನಂದಿಸುತ್ತಾ ಮಾಡುತ್ತಾರೆ. ನೇತ್ತ್ಯಾತ್ಮಕ ವಿಷಯಗಳಿಂದ ಇವರು ದೂರ ಸರಿಯುತ್ತಾರೆ.

ಹಣೆಬರಹ ಹೇಳುವುದು ಒಂದು ಕಲೆಯೇ?
ಹಣೆ ನೋಡಿ ವ್ಯಕ್ತಿತ್ವ ಹೇಳುವ ಕಲೆಯನ್ನು ಮೆಟೊಪೋಸ್ಕೋಪಿ ಎಂದು ಕರೆಯಲಾಗುತ್ತದೆ. ಅದು ವ್ಯಕ್ತಿಯ ಭವಿಷ್ಯ ಮತ್ತು ವ್ಯಕ್ತಿತ್ವದ ಬಗ್ಗೆ ಹೇಳಲು ವಿಷಯದ ಹಣೆಯ ಮೇಲಿನ ಗೆರೆಗಳನ್ನು ಬಳಸುತ್ತದೆ. ಇದು ಹಸ್ತಸಾಮುದ್ರಿಕ ಶಾಸ್ತ್ರ ಎಂದು ಕರೆಯಲ್ಪಡುವ Palmistri ನಿಕಟ ಸಂಬಂಧಿ ಕಲಾ ವಿದ್ಯೆ.

ಮುಖ ನೋಡಿ ವ್ಯಕ್ತಿತ್ವ ತಿಳಿಯಬಲ್ಲ ಈ ಶಾಸ್ತ್ರದ ಉಪಯೋಗವೇನು ?
ವ್ಯಕ್ತಿಯ ಮುಖದ ವೈಶಿಷ್ಟ್ಯಗಳಿಂದ ನೀವು ಅವರ ಪಾತ್ರವನ್ನು ಹೇಳಬಹುದು ಇಂದು ನಂಬಲಾಗಿದೆ. ನಮ್ಮ ಮುಖದ ನೋಟದಿಂದ ನಮ್ಮ ಪಾತ್ರ ಮತ್ತು ವ್ಯಕ್ತಿತ್ವದ ಲಕ್ಷಣಗಳು ಪ್ರಭಾವಿತವಾಗಿವೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿವೆ. ಅಲ್ಲದೆ, ಫಸ್ಟ್ ಇಂಪ್ರೆಷನ್ ಇಸ್ ಬೆಸ್ಟ್ ಇಂಪ್ರೆಶನ್ ಅನ್ನೋದನ್ನು ನಾವು ಕೇಳಿದ್ದೇವೆ ಇದು ಮುಖದ ಚರಿಯೇ ನೋಡಿಯೇ ವ್ಯಕ್ತಿತ್ವವನ್ನು ಅಳೆದು ಹೇಳಿದ್ದು. ನಮ್ಮ ಮುಖದ ಗುಣಲಕ್ಷಣಗಳು ಇತರರ ಮೊದಲ ಅನಿಸಿಕೆಗಳ ಮೇಲೆ ಗುರುತರವಾದ ಪ್ರಭಾವವನ್ನು ಬೀರುತ್ತವೆ. ಮುಖ ಮತ್ತು ಲಕ್ಷಣಗಳನ್ನು ಓದಿಕೊಂಡು ಎದುರು ವ್ಯಕ್ತಿಯನ್ನು ನಾವು ಮಾತನಾಡಿಸದೆ ಮುನ್ನವೇ ಆತನ ಅಥವಾ ಆಕೆಯ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ಈ ಭಾಗಶಃ ವಿಜ್ಞಾನವನ್ನು ಬಳಸಿಕೊಂಡು ಔದ್ಯೋಗಿಕ ಕ್ಷೇತ್ರಗಳಲ್ಲಿ ಅಂದರೆ ಮುಖ್ಯವಾಗಿ ಇಂಟರ್ವ್ಯೂ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಬಳಸಬಹುದು. ನೀವು ನಂಬಿಕಸ್ತ ವ್ಯಕ್ತಿಗಳ ಹುಡುಕಾಟದಲ್ಲಿದ್ದರೆ ಕೂಡ ಈ ವ್ಯಕ್ತಿತ್ವದ ಟೆಸ್ಟ್ ನಿಮ್ಮ ಸಹಾಯಕ್ಕೆ ಬರುತ್ತದೆ. ನೀವು ನಿಮಗೆ ಹೊಂದಾಣಿಕೆ ಜೀವನ ಸಂಗಾತಿಯ ಹುಡುಕಾಟದಲ್ಲಿದ್ದರೆ ಆಗ ಕೂಡ ಇಂತಹ ಪರ್ಸನಾಲಿಟಿ ಟೆಸ್ಟ್ ನಿಮ್ಮ ಸಹಾಯಕ್ಕೆ ಬರುತ್ತದೆ. ಮಾತನಾಡಿಸುವ ಮುನ್ನವೇ ಮತ್ತು ಜೊತೆಗೆ ಬೆರೆಯುವ ಮುನ್ನವೇ ಎದುರು ವ್ಯಕ್ತಿಗಳ ಬಗ್ಗೆ ಅವರ ವ್ಯಕ್ತಿತ್ವದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವಿರಾದರೆ ಅದಕ್ಕಿಂತ ಬೇರೆ ದೊಡ್ಡ ಲಾಭ ಏನಿದೆ ಹೇಳಿ ?!

ಇದನ್ನೂ ಓದಿ: Karnataka Rain: ರಾಜ್ಯದ ಈ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ, 6 ಜಿಲ್ಲೆಗಳಿಗೆ ರೆಡ್ ಅಲರ್ಟ್ !

Leave A Reply

Your email address will not be published.