Arecanut : ಕರ್ನಾಟಕದಲ್ಲಿ ಬೆಳೆಯೋ ಅಡಿಕೆಯಲ್ಲಿ ಈ ಭಾಗದ ಅಡಿಕೆಯೇ ಬೆಸ್ಟ್ ಅಂತೆ !!

Arecanut : ಅಡಿಕೆ ಕರಾವಳಿ ಹಾಗೂ ಮಲೆನಾಡಿನ ಸಾಂಪ್ರದಾಯಿಕ ಬೆಳೆ. ಆರಂಭದಲ್ಲಿ ಕೊಂಚ ಶ್ರಮ ಹಾಕಿದರೆ, ಚೆನ್ನಾಗಿ ಆರೈಕೆ ಮಾಡಿದರೆ ಜೀವನ ಪರ್ಯಂತ ಕೂತು ತಿನ್ನುವಂತಹ ಆದಾಯ ತರುವ ಬೆಳೆ ಇದು. ಇದರ ದುಪ್ಪಟ್ಟು ಲಾಭ ಕಂಡು ಇಂದು ಬಯಲು ಕರ್ನಾಟಕದಲ್ಲೂ ಅಡಿಕೆ ಬೆಳೆ ಬೆಳೆಯುತ್ತಿದ್ದಾರೆ. ನಾಡಿನ ಯಾವ ಮೂಲೆಗೆ ಹೋದರೂ ಅಡಿಕೆ ನಾಟಿ ಕಣ್ಣಿಗೆ ರಾಚುತ್ತದೆ. ಆದರೆ ಎಲ್ಲಿ ಎಷ್ಟೇ ಅಡಿಕೆ ಬೆಳೆದರೂ ಕರ್ನಾಟಕದ ಈ ಭಾಗದಲ್ಲಿ ಬೆಳೆಯೋ ಅಡಿಕೆಯೇ ಬೆಸ್ಟ್ ಅಂತೆ !!

ಹೌದು, ಶಿವಮೊಗ್ಗ(Shivamogga) ಜಿಲ್ಲೆಯ ತೀರ್ಥಹಳ್ಳಿ(Teertahalli) ಪ್ರದೇಶದಲ್ಲಿ ಬೆಳೆಯುವ ಅಡಿಕೆಯೇ ಕರ್ನಾಟಕದಲ್ಲಿ ಉತ್ತಮ ಅಡಿಕೆ, ದಿ ಬೆಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದಹಾಗೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅರೆಕಾ ಸಂಶೋಧನಾ ಕೇಂದ್ರವು ನಡೆಸಿದ ವಿಶ್ಲೇಷಣೆಯಲ್ಲಿ ಈ ಮಾಹಿತಿ ಹೊರಹೊಮ್ಮಿದೆ.

ಹೇಗೆ ಗುರುತಿಸಲಾಯಿತು?
ಇತ್ತೀಚೆಗೆ, ಕೇಂದ್ರದ ವಿಜ್ಞಾನಿಗಳು(Central Scientist) ವಿವಿಧ ಸ್ಥಳಗಳಲ್ಲಿ ಬೆಳೆದ ಅಡಿಕೆ ಪ್ರಭೇದಗಳನ್ನು 60 ಜನರ ಗುಂಪಿಗೆ ತೋರಿಸಿದ್ದಾರೆ. ಇದರಲ್ಲಿ ಗ್ರಾಹಕರು, ವ್ಯಾಪಾರಿಗಳು, ಸಂಶೋಧನಾ ವಿದ್ವಾಂಸರು, ವಿಜ್ಞಾನಿಗಳು ಮತ್ತು ಬೆಳೆಗಾರರನ್ನು ಒಳಗೊಂಡಿದ್ದರು. ತೀರ್ಪಿನಲ್ಲಾಗುವ ಪಕ್ಷಪಾತವನ್ನು ತಪ್ಪಿಸಲು ಕೇವಲ ಪ್ರಭೇದಗಳನ್ನು ಮಾತ್ರ ಎಣಿಸಲಾಗಿದೆ. ನಂತರ ಕಾಯಿಗಳನ್ನು ಸ್ಪರ್ಶಿಸಲು ಮತ್ತು ರುಚಿ ನೋಡಲು ಅವರಿಗೆ ಅವಕಾಶ ನೀಡಲಾಯಿತು. ನೋಟ ಮತ್ತು ಅನುಭವ, ಅಡಿಕೆ ಕಡಿಯುವಾಗ ಆಗುವ ಅನುಭವ, ಪರಿಮಳ ಮತ್ತು ಪ್ರತಿ ವೈವಿಧ್ಯತೆಯ ಕುರಿತು ಅವರು ಪ್ರಶ್ನೆಗಳಿಗೆ ಉತ್ತರಿಸಿ ಈ ತೀರ್ಪು ನೀಡಿದ್ದಾರೆ.

ಇಷ್ಟೇ ಅಲ್ಲದೆ ಅರೆಕಾ ಸಂಶೋಧನಾ ಕೇಂದ್ರವು ತೀರ್ಥಹಳ್ಳಿ(Areca Research centre) ತಳಿಯನ್ನು ಬೆಳೆಯುವ 80 ರೈತರ ಅಭಿಪ್ರಾಯಗಳನ್ನು ಪಡೆದುಕೊಂಡಿದೆ. ಅವರು ತಮ್ಮ ಉತ್ಪನ್ನವನ್ನು ಇತರ ತಳಿಗಳಿಗೆ ಹೋಲಿಸಿ ಹೇಗೆ ಅಂಕ ನೀಡುತ್ತಾರೆ ಎಂಬುದರ ಕುರಿತು ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಹೀಗಾಗಿ ತೀರ್ಥಹಳ್ಳಿ ತಳಿಯು ಉನ್ನತ ದರ್ಜೆಯ ಅಡಿಕೆಗೆ ಸೂಕ್ತವಾಗಿದೆ.

ಇದನ್ನೂ ಓದಿ: Personality Test: ಹಣೆಯ ಆಕಾರ ನೋಡಿ ವ್ಯಕ್ತಿಗಳ ರಹಸ್ಯ ವ್ಯಕ್ತಿತ್ವ ತಿಳಿದುಕೊಳ್ಳಿ, ಸ್ವತಃ ನಿಮ್ಮ ಬಗ್ಗೆಯೇ ಒಮ್ಮೆ ಪರೀಕ್ಷಿಸಿ ನೋಡಿ !

Leave A Reply

Your email address will not be published.