ನೀವು ಕೂಡ ನಳಪಾಕ ಪ್ರವೀಣರಾ?? | ಹಾಗಿದ್ದರೆ ನಿಮಗೊಂದು ಪ್ರಸಿದ್ಧ ಕುಕಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಾದಿದೆ !!
ನೀವು ಕೂಡ ಪಾಕ ಪ್ರವೀಣರಾ?? ಹಾಗಿದ್ದರೆ ನಿಮಗಿದೆ ಇಲ್ಲೊಂದು ಅದ್ಭುತ ಅವಕಾಶ. ‘ವರ್ಲ್ಡ್ ಆಫ್ ಹಾಸ್ಪಿಟಾಲಿಟಿ’ ಇನ್ಕ್ರೆಡಿಬಲ್ ಶೆಫ್ ಚಾಲೆಂಜ್-2022ನ್ನು ಆಯೋಜಿಸುತ್ತಿದ್ದು, ಭಾರತದ ವೃತ್ತಿಪರ ಶೆಫ್ ಗಳು, ಆತಿಥ್ಯ ಕ್ಷೇತ್ರದ ತಜ್ಞರು, ಆಹಾರ ಸೇವೆ ಉತ್ಪನ್ನಗಳನ್ನು ಒಂದೇ ವೇದಿಕೆಯಡಿ ತರುತ್ತಿದೆ. ವರ್ಲ್ಡ್ ಆಫ್ ಹಾಸ್ಪಿಟಾಲಿಟಿಯು “ಲೈವ್ ಶೆಫ್ ಸ್ಪರ್ಧೆ”ಯನ್ನು ಅನಾವರಣಗೊಳಿಸಲು ಮುಂದಾಗಿದೆ. ದಕ್ಷಿಣ ಭಾರತ ಪಾಕಶಾಲೆ ಸಂಸ್ಥೆ ಸಹಯೋಗದಲ್ಲಿ ಈ ಪ್ರತಿಷ್ಠಿತ ಪಾಕಶಾಲೆ ಕಲಾಸ್ಪರ್ಧೆ ನಡೆಯಲಿದ್ದು, ಬೆಂಗಳೂರಿನ ಆಹಾರ ಸೇವಾ ವಲಯದ 250ಕ್ಕೂ ಹೆಚ್ಚು ರಾಷ್ಟ್ರಾದ್ಯಂತದ ವೃತ್ತಿಪರ …