ಶಿವಮೊಗ್ಗ : ಮತ್ತೊಮ್ಮೆ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ| ನಡುರಾತ್ರಿಯಲ್ಲಿ ನಡೆದ ಘಟನೆ!

ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷನ ಸಾವಿನ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ಕೋಮು ದಳ್ಳುರಿಯ ಕಾವು ತಣ್ಣಗಾಗಿಲ್ಲ. ನಿನ್ನೆ ನಡುರಾತ್ರಿ ಫೈ ಓವರ್ ಮೇಲೆ ಬರುತ್ತಿದ್ದವನ ಮೇಲೆ ಹಲ್ಲೆಯೊಂದು ನಡೆದಿದೆ. ಉರ್ದುವಿನಲ್ಲಿ ಕೇಳಿದ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ಬಜರಂಗದಳದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ರೈಲ್ವೇ ನಿಲ್ದಾಣದ ಬಳಿಕ ಹೊನ್ನಾಳಿ ರಸ್ತೆ ಫೈಓವರ್ ಮೇಲೆ ಘಟನೆ ನಡೆದಿದೆ.

 

ಸ್ಕೂಟಿಯಲ್ಲಿ ಬಂದ ಮೂವರು ‘ಕಹಾ ಜಾ ರಹಾ ಹೈ’ ಎಂದು ಕೇಳಿದ್ದಾರೆ. ಮನೆಗೆ ಹೋಗ್ತಾ ಇದ್ದೇನೆ ಎಂದ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಆತ ತಪ್ಪಿಸಿಕೊಂಡು ಹೋಗುವಾಗ ಲಾರಿ ಅಡ್ಡ ಬಂದಿತೆಂದು ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆ.

Leave A Reply

Your email address will not be published.