LPG: ಹೊಸ ವರ್ಷಕ್ಕೆ ಭರ್ಜರಿ ಗುಡ್ ನ್ಯೂಸ್ – LPG ಸಿಲಿಂಡರ್ ದರದಲ್ಲಿ 14. 50ರೂ ಇಳಿಕೆ !!

LPG: ಹೊಸ ವರ್ಷದ ಮೊದಲ ದಿನವೇ ಗ್ರಾಹಕರಿಗೆ ಗುಡ್ನ್ಯೂಸ್ ಸಿಕ್ಕಿದೆ. LPG ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರಿ ಇಳಿಕೆಯಾಗಿದ್ದು ಗ್ರಾಹಕರಿಗೆ ನಿರಾಳವನ್ನುಂಟು ಮಾಡಿದೆ.
ಹೌದು, ಹೊಸ ವರ್ಷದ ಮೊದಲ ದಿನವೇ LPG ಗ್ರಾಹಕರಿಗೆ ಸಂತಸದ ಸುದ್ದಿ ಲಭಿಸಿದೆ. ತೈಲ ಕಂಪನಿಗಳು LPG ಸಿಲಿಂಡರ್‌ಗಳ ಬೆಲೆಯಲ್ಲಿ ₹14.50 ಇಳಿಕೆ ಮಾಡಿವೆ. ಆದರೆ, 19 ಕೆಜಿ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ಮಾತ್ರ ಈ ಕಡಿತ ಮಾಡಲಾಗಿದ್ದು, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅಂದರೆ 14 KG LPG ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸರ್ಕಾರಿ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆ ಮಾಡಲು ನಿರ್ಧರಿಸಿದ್ದು, ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಲ್ಲಿದೆ.