Nandini : ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ನಂದಿನಿ ದೋಸೆ, ಇಡ್ಲಿ ಹಿಟ್ಟಿಗೆ ಬಾರಿ ಡಿಮ್ಯಾಂಡ್ – ಮೂರೇ ದಿನಗಳಲ್ಲಿ ದಾಖಲೆಯ ಮಾರಾಟ !! ಎಲ್ಲಿ ಸಿಗುತ್ತೆ ಇದು, ರೇಟ್ ಎಷ್ಟು?

Nandini: ನಂದಿನಿ ಬ್ರಾಂಡ್ ಕನ್ನಡಿಗರ ಸ್ವಾಭಿಮಾನದ ಪ್ರತೀಕ. ಕನ್ನಡಿಗರೆಲ್ಲರಿಗೂ ನೇರವಾಗಿ ನಾಟಿದ ಬ್ರಾಂಡ್ ಇದು. ಕೇವಲ ಹಾಲಿನ ಮುಖಾಂತರ ಆರಂಭಗೊಂಡ ನಂದಿನಿಯು ನಂತರದ ದಿನಗಳಲ್ಲಿ ಹಲವಾರು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟು ಸಕ್ಸಸ್ ಕಂಡಿತ್ತು. ಇದೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿರುವ ನಮ್ಮ ಹೆಮ್ಮೆಯ ನಂದಿನಿ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಬಿಟ್ಟಿದೆ. ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಲವೇ ದಿನಗಳಲ್ಲಿ ಈ ರುಚಿಕರ ದೋಸೆ ಮತ್ತು ಇಡ್ಲಿ ಹಿಟ್ಟಿಗೆ ಗ್ರಾಹಕರು ಮನಸೋತಿದ್ದಾರೆ. ಕೇವಲ ಮೂರೇ ದಿನಗಳಲ್ಲಿ ದಾಖಲೆಯ ಮಟ್ಟದಲ್ಲಿ ಹಿಟ್ಟು ಮಾರಾಟವಾಗಿರುವುದೇ ಇದಕ್ಕೆ ಸಾಕ್ಷಿ. ಅಂದರೆ ದಾಖಲೆ ಮಟ್ಟದಲ್ಲಿ ನಂದಿನಿಯ ಹೊಸ ಉತ್ಪನ್ನ ಮಾರಾಟವಾಗಿದೆ.
ಹೌದು, ನಂದಿನಿ’ ಬ್ರ್ಯಾಂಡ್‌ನ ಮೌಲ್ಯ ವೃದ್ಧಿ ಹಾಗೂ ಮಾರುಕಟ್ಟೆ ವಿಸ್ತರಣೆಯ ಭಾಗವಾಗಿ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್) ಇಡ್ಲಿ ಮತ್ತು ದೋಸೆ ಹಿಟ್ಟನ್ನು ಪರಿಚಯಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರ ಈ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಈ ನಂದಿನಿಯ ದೋಸೆ ಮತ್ತು ಇಡ್ಲಿ ಹಿಟ್ಟಿಗೆ ಗ್ರಾಹಕರು ಮನಸೋತಿದ್ದು, ಮಾರುಕಟ್ಟೆಗೆ ಲಗ್ಗೆಯಿಟ್ಟ ಕೇವಲ 3 ದಿನಗಳಲ್ಲಿ 2.250 ಮೆಟ್ರಿಕ್ ಟನ್ ಇಡ್ಲಿ – ದೋಸೆ ಹಿಟ್ಟು ಮಾರಾಟವಾಗಿದೆ. ವೇ ಪ್ರೋಟೀನ್ ಆಧಾರಿತ ಉತ್ಕೃಷ್ಟ ಗುಣಮಟ್ಟದ ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟನ್ನು ಗ್ರಾಹಕರು ಖುಷಿಯಿಂದ ಮುಗಿಬಿದ್ದು ಖರೀದಿಸುತ್ತಿದ್ದಾರೆ.
ಅಂದಹಾಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳ ಉತ್ಪಾದನೆಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಿಡುಗಡೆ ಮಾಡುವುದಾಗಿ ಕೆಎಂಎಫ್ ಈ ಹಿಂದೆಯೇ ಘೋಷಿಸಿತ್ತು. ಆದರೆ, ಕಾರಣಾಂತರಗಳಿಂದ ಈ ಉತ್ಪನ್ನಗಳ ಬಿಡುಗಡೆಯಲ್ಲಿ ವಿಳಂಬವಾಗಿತ್ತು. ತಡವಾದರೂ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ನಂದಿನಿ ಪಾರ್ಲರ್‌ಗಳಲ್ಲಿ ಈ ಉತ್ಪನ್ನಗಳ ಮಾರಾಟ ಆರಂಭವಾಗಿದೆ. ಇದಕ್ಕೀಗ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಸ್ಪೂರ್ತಿಗೊಂಡಿರುವ ನಂದಿನಿ ಮತ್ತಷ್ಟು ದೋಸೆ ಮತ್ತು ಇಡ್ಲಿ ಹಿಟ್ಟು ಸರಬರಾಜು ಮಾಡಲು ಮುಂದಾಗಿದೆ. ಇಡ್ಲಿ ಹಿಟ್ಟು ವಿತರಣೆಗೆ ಪ್ರಸ್ತುತ 5-6 ವಾಹನಗಳಿದ್ದು, ಶೀಘ್ರದಲ್ಲೇ ಇನ್ನೂ 18 ವಾಹನ ಖರೀದಿಗೆ ಕೆಎಂಎಫ್ ಚಿಂತನೆ ನಡೆಸಿದೆ.
ನಂದಿನಿ ಇಡ್ಲಿ-ದೋಸೆ ಹಿಟ್ಟಿನ ದರ ಎಷ್ಟು?
ಪ್ರಯೋಗಿಕವಾಗಿ ಬೆಂಗಳೂರು ನಗರದಲ್ಲಿ ಈ ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದ್ದು, ಗ್ರಾಹಕರಿಗೆ ಕೈಗೆಟುವ ದರದಲ್ಲಿ ನೀಡಲಾಗುತ್ತಿದೆ. ದೋಸೆ ಮತ್ತು ಇಡ್ಲಿ ಹಿಟ್ಟಿನ 450 ಗ್ರಾಂ ಪ್ಯಾಕ್ಗೆ 40 ರೂ. ಹಾಗೂ 900 ಗ್ರಾಂ ಪ್ಯಾಕೇಟ್ಗೆ 80 ರೂಪಾಯಿ ದರ ನಿಗದಿ ಮಾಡಲಾಗಿದೆ.
ಎಲ್ಲಿ ಸಿಗುತ್ತೆ?
ಸಧ್ಯ ಪ್ರಪ್ರಥಮ ಬಾರಿಗೆ ಇಡ್ಲಿ ಹಾಗೂ ದೋಸೆ ಹಿಟ್ಟಿನಲ್ಲಿ ಪ್ರೊಟೀನ್ ಅಂಶವನ್ನು ಶೇ.5ರ ಪ್ರಮಾಣದಲ್ಲಿ ಮಿಶ್ರಣಗೊಳಿಸಿ ಹಿಟ್ಟನ್ನು ತಯಾರಿಸಲಾಗುತ್ತದೆ. ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ಎರಡು ವಿವಿಧ ಪ್ಯಾಕುಗಳಲ್ಲಿ ಮಾರಾಟ ಮಾಡಲಾಗುತ್ತದೆ. 450 ಗ್ರಾಂ ಪ್ಯಾಕೆಟ್‌ಗೆ ರೂ.40 ಹಾಗೂ 900 ಗ್ರಾಂ ಪ್ಯಾಕೆಟ್‌ಗೆ ರೂ.80 ದರ ನಿಗದಿ ಪಡಿಸಲಾಗಿದೆ. ಗ್ರಾಹಕರ ಪ್ರತಿಕ್ರಿಯೆಯನ್ನು ಅವಲೋಕಿಸಿ ಮುಂದೆ ಇತರೇ ನಗರಗಳಿಗೂ ಮಾರಾಟವನ್ನು ವಿಸ್ತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೆಎಂಎಫ್ ತಿಳಿಸಿದೆ.