Mangaluru : ಸ್ಕೂಟರ್ ಗೆ ಲಾರಿ ಡಿಕ್ಕಿ- ಚಕ್ರಕ್ಕೆ ಸಿಲುಕಿ ಆನ್ಲೈನ್ ಫುಡ್ ಡೆಲಿವರಿ ಯುವಕ ಸಾವು !!
Mangaluru : ಲಾರಿ ಹಾಗೂ ಸ್ಕೂಟರ್ ನಡುವಿನ ಭೀಕರ ಅಪಘಾತದಿಂದಾಗಿ ಡೆಲಿವರಿ ಬಾಯ್ ಒಬ್ಬ ಮೃತಪಟ್ಟ ದಾರುಣ ಘಟನೆಯೊಂದು ಮಂಗಳೂರಿನಲ್ಲಿ(Mangaluru) ನಡೆದಿದೆ
ಹೌದು, ಮಂಗಳವಾರ ಮಧ್ಯರಾತ್ರಿ ರಾ.ಹೆ. 66ರ ಉಚ್ಚಿಲ- ಸಂಕೋಳಿಗೆಯಲ್ಲಿ ಲಾರಿಯೊಂದು ಆನ್ಲೈನ್ ಫುಡ್ ಡೆಲಿವರಿ ಯುವಕನ ಸ್ಕೂಟರ್ ಗೆ ಡಿಕ್ಕಿ ಹೊಡೆಡಿದೆ. ಪರಿಣಾಮ ಸವಾರ ರಸ್ತೆಗೆಸೆಯಲ್ಪಟ್ಟು, ಲಾರಿ ಹಿಂಬದಿಯ ಚಕ್ರ ಹರಿದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಮೃತ ಸವಾರ ನನ್ನು ನಾಟೆಕಲ್ ಪನೀರ್ ನಿವಾಸಿ ಉಮ್ಮರ್ ಫಾರೂಕ್ ಯಾನೆ ಅಝರ್(33) ಎಂದು ಗುರುತಿಸಲಾಗಿದೆ .
ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅಝರ್, ಮಂಗಳವಾರ ರಾತ್ರಿ ತಲಪಾಡಿ ಯಿಂದ ಬರುತ್ತಿದ್ದ ವೇಳೆ ಸಂಕೊಳಿಗೆ ಹಾಲ್ ಬಳಿ ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ಸ್ಕೂಟರ್ ಗೆ ತಾಗಿದೆ ಎನ್ನಲಾಗಿದೆ.
ಅಝರ್ ಅವರ ಮೃತದೇಹವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಕಾರಣವಾದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.