Bigg Boss Kannada: ಬಿಗ್ ಬಾಸ್ -11 ರ ಫಿನಾಲಗೆ ಡೇಟ್ ಫಿಕ್ಸ್?

Bigg Boss Kannada: ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಬಿಗ್‌ಬಾಸ್ ಪ್ರಮುಖವಾದದ್ದು. ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿಯಲು ಇನ್ನೇನು ಕೆಲವೇ ಕೆಲವು ವಾರಗಳು ಬಾಕಿ ಇವೆ. ಸೆಪ್ಟೆಂಬರ್ 29ರಂದು ಆರಂಭವಾದ ಬಿಗ್ ಬಾಸ್ -11 ಹಲವು ಡ್ರಾಮಗಳಿಗೆ ಸಾಕ್ಷಿಯಾಗಿದೆ. ಸಾಕಷ್ಟು ರೆಕಾರ್ಡ್ಗಳನ್ನು ಬ್ರೇಕ್ ಮಾಡಿದೆ. ಕೆಲವು ಇತಿಹಾಸ ಸೃಷ್ಟಿಸಿದೆ. ಇಂದು ನಡೆದ ಘಟನೆಗಳಿಗೆ ಸಾಕ್ಷಿಯಾಗಿದೆ. ಒಟ್ಟಿನಲ್ಲಿ ಎಲ್ಲಾ ಸೀಸನ್ ಗಳಿಗಿಂತ ಈ 11ನೇ ಸೀಸನ್ ತುಂಬಾ ಸ್ಪೆಷಲ್ ಆಗಿ ಮೂಡಿ ಬರುತ್ತಿದೆ. ಹಾಗಿದ್ರೆ ಈ ಸೀಸನ್ ಮುಗಿಯುವುದು ಯಾವಾಗ? ಬಿಗ್ ಬಾಸ್ ಸೀಸನ್ ಹನ್ನೊಂದರ ಪಿನಾಲೆ ಯಾವಾಗ? ಇಲ್ಲಿದೆ ನೋಡಿ ಉತ್ತರ
ಪ್ರಸ್ತುತ 90 ದಿನಗಳನ್ನು ಪೂರ್ಣಗೊಳಿಸಿ ಬಿಗ್‌ಬಾಸ್ ಮುನ್ನಡೆಯುತ್ತಿದೆ. ಈ ನಡುವೆ ಬಿಗ್‌ಬಾಸ್ ಫಿನಾಲೆ ಯಾವಾಗ ನಡೆಯುತ್ತದೆ ಎನ್ನುವುದಕ್ಕೆ ದಿನಾಂಕ ಫಿಕ್ಸ್ ಆಗಿದೆ. ಈ ಬಾರಿ ಒಂದು ವಾರ ಹೆಚ್ಚುವರಿಯಾಗಿ ಬಿಗ್ ಬಾಸ್ ನಡೆಯಲಿದೆ ಎನ್ನಲಾಗುತ್ತಿದೆ. ಅದು ನಿಜವೇ ಆದಲ್ಲಿ ಜನವರಿ 26ರಂದು ಫಿನಾಲೆ ನಡೆಯಲಿದೆ. ಅಂದು ಭಾನುವಾರ ಹಾಗೂ ಗಣರಾಜ್ಯೋತ್ಸವ ಎರಡೂ ಇದೆ. ಈ ವಿಶೇಷ ದಿನದಂದೇ ಫಿನಾಲೆ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಸದ್ಯ ದೊಡ್ಮನೆಯಲ್ಲಿ ಒಂಭತ್ತು ಮಂದಿ ಇದ್ದಾರೆ. ಈ ಪೈಕಿ ಐವರು ಫಿನಾಲೆ ತಲುಪಲಿದ್ದಾರೆ. ಉಳಿದ ನಾಲ್ವರ ಪೈಕಿ ಒಂದು ಡಬಲ್ ಎಲಿಮಿನೇಷನ್ ನಡೆದು, ಮತ್ತಿಬ್ಬರು ಒಂದೊಂದು ವಾರ ಎಲಿಮಿನೇಟ್ ಆಗುವ ಸಾಧ್ಯತೆ ದಟ್ಟವಾಗಿದೆ. ಒಂದೊಮ್ಮೆ ಬಿಗ್ ಬಾಸ್ 112 ದಿನಕ್ಕೆ ಪೂರ್ಣಗೊಳ್ಳುತ್ತದೆ ಎಂದಾದರೆ ಡಿಸೆಂಬರ್ 19ಕ್ಕೆ ಫೈನಲ್ ಆಗಲಿದೆ.
ಒಂದು ವೇಳೆ ಬಿಗ್‌ಬಾಸ್ 125 ದಿನ ನಡೆಯದೆ 112 ದಿನಕ್ಕೆ ಕೊನೆಗೊಂಡರೆ ಜನವರಿ 19ಕ್ಕೆ ಬಿಗ್‌ಬಾಸ್ ಫಿನಾಲೆ ನಡೆಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಜನವರಿ ಮೂರನೇವಾರ ಅಥವಾ ನಾಲ್ಕನೆ ವಾರ ಫಿನಾಲೆ ನಡೆಯುವುದು ಮಾತ್ರ ಫಿಕ್ಸ್ ಎನ್ನಲಾಗುತ್ತಿದೆ.