Udupi: ನೇಣು ಹಾಕಿಕೊಳ್ಳುವಾಗ ಹಗ್ಗ ತುಂಡಾಗಿ ಕೆಳಗೆ ಬಿದ್ದು ವ್ಯಕ್ತಿ ಸಾವು!!

Udupi: ವ್ಯಕ್ತಿಯೊಬ್ಬ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಹಗ್ಗ ತುಂಡಾಗಿ ಕೆಳಗೆ ಬಿದ್ದು ಗಾಯಗೊಂಡು ಸಾವನಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

 

ಹೌದು, ಉಡುಪಿ(Udupi) ಜಿಲ್ಲೆಯ ಮಣಿಪಾಲದಲ್ಲಿರುವ 80 ಬೆಡಗುಗುಟ್ಟು ಗ್ರಾಮದ ನವಗ್ರಹ ಕಾಲೋನಿಯಲ್ಲಿ ಈ ರೀತಿಯ ವಿಚಿತ್ರ ಘಟನೆ ನಡೆದಿದೆ. ಮೃತರನ್ನು ಮಿಲ್ರಾಯ್ ಎಂದು ಗುರುತಿಸಲಾಗಿದೆ. ಅವರು ವಾಸವಿದ್ದ ಮನೆಯ ಮೊದಲ ಅಂತಸ್ತಿನ ಮೇಲ್ಛಾವಣಿಗೆ ಹಗ್ಗ ಕಟ್ಟಿ ನೇಣು ಬಿಗಿದುಕೊಂಡು ಸಾವಿಗೀಡಾಗಲು ಯತ್ನಿಸಿದ್ದರು. ನೇಣಿ ಬಿಗಿದುಕೊಂಡಾದ ನಂತರ ಒದ್ದಾಡುವಾಗ ಹಗ್ಗ ತುಂಡಾಗಿದೆ. ಆಗ ಅವರು 20 ಅಡಿ ಎತ್ತರಿಂದ ನೆಲಕ್ಕೆ ಬಿದ್ದಿದ್ದಾರೆ. ತಲೆಗೆ ಗಂಭೀರವಾಗಿ ಪೆಟ್ಟಾಗಿ ಅವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

 

ಇನ್ನು ವಿಶೇಷವೆಂದರೆ 2018ರಲ್ಲಿ ಮರಣದ ನಂತರ ಅಂಗಾಂಗ ದಾನ ಮಾಡುವುದಾಗಿ ನಿರ್ಧರಿಸಿ, ಅದರ ಪ್ರಕಾರ ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಪತ್ರ ಪಡೆದಿದ್ದರು.

Leave A Reply

Your email address will not be published.