Day: April 20, 2022

ಕಡಬ : ಸರಕಾರಿ ಶಾಲೆಯ ಪೈಪ್ ಲೈನ್, ನಳ್ಳಿ,ಗೇಟಿಗೆ ಹಾನಿ : ದೈವದ ಮೊರೆ ಹೋದ ಶಾಲಾಭಿವೃದ್ದಿ ಸಮಿತಿ

ಕಡಬ: ಕೊಯಿಲ ಗ್ರಾಮದ ಕೊಯಿಲ ಕೆ ಸಿ ಫಾರ್ಮ್ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿನ ಕೃಷಿ ತೋಟಕ್ಕೆ ಮತ್ತು ಕುಡಿಯುವ ನೀರಿಗಾಗಿ ಅಳವಡಿಸಿದ ಪೈಪುಗಳಿಗೆ , ನಳ್ಳಿಗಳಿಗೆ, ಗೇಟಿನ ಸರಳುಗಳಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ ಎಂದು ಶಾಲಾಭಿವೃದ್ದಿ ಸಮಿತಿಯಿಂದ ಕಡಬ ಠಾಣೆಗೆ ದೂರು ನೀಡಲಾಗಿದೆ. ಎರಡು ಕುಡಿಯುವ ನೀರಿನ ನಳ್ಳಿಗಳನ್ನು , ಮೂರು ಕಡೆ ಕೃಷಿ ತೋಟದ ಪೈಪುಗಳನ್ನು ಮುರಿಯಲಾಗಿದೆ. ಆವರಣಕ್ಕೆ ಪ್ರವೇಶಿಸುವ ಮುಖ್ಯ ದ್ವಾರದ ಗೇಟಿನ ಸರಳನ್ನು ಮುರಿದಿದ್ದಾರೆ. ಮಂಗಳವಾರ ರಾತ್ರಿ ಸಮಯದಲ್ಲಿ …

ಕಡಬ : ಸರಕಾರಿ ಶಾಲೆಯ ಪೈಪ್ ಲೈನ್, ನಳ್ಳಿ,ಗೇಟಿಗೆ ಹಾನಿ : ದೈವದ ಮೊರೆ ಹೋದ ಶಾಲಾಭಿವೃದ್ದಿ ಸಮಿತಿ Read More »

‘ ನಮ್ಮ ರಾಜ್ಯದ ಜನತೆಗೆ ಶ್ರೀರಾಮ ಯಾರೆಂಬುದೇ ಗೊತ್ತಿಲ್ಲ’ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಸಂಸದೆ!!!

ಶ್ರೀರಾಮ ಯಾರೆಂಬುದೇ ಗೊತ್ತಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಸಂಸದೆಯೊಬ್ಬರು ಭಾರೀ ಟೀಕೆಗೆ ಗುರಿಯಾಗಿದ್ದಾರೆ. ‘ನಮ್ಮ ರಾಜ್ಯದ ಯಾರೊಬ್ಬರಿಗೂ ಶ್ರೀರಾಮ ಯಾರೆಂಬುದೇ ಗೊತ್ತೇ ಇಲ್ಲ’ ಎನ್ನುವ ಮೂಲಕ ತಮಿಳುನಾಡಿನ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ವಿವಾದಕ್ಕೆ ಗುರಿಯಾಗಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಜ್ಯೋತಿಮಣಿ ಅವರು ಈ ಹೇಳಿಕೆ ನೀಡಿದ್ದಾರೆ. ನಾನು ತಮಿಳುನಾಡು ಮೂಲದವಳು. ನನಗೆ ರಾಮ ಯಾರೆಂಬುದು ಗೊತ್ತಿಲ್ಲ. ತಮಿಳುನಾಡಿನಲ್ಲಿ ನೀವು ಯಾರನ್ನೇ ಕೇಳಿ ಅವರು ಕೂಡ ಇದೇ ಮಾತನ್ನು ಹೇಳುತ್ತಾರೆ. ನಾವು ಯಾವುದೇ ರಾಮ ದೇವಸ್ಥಾನವನ್ನು ನೋಡಿಲ್ಲ …

‘ ನಮ್ಮ ರಾಜ್ಯದ ಜನತೆಗೆ ಶ್ರೀರಾಮ ಯಾರೆಂಬುದೇ ಗೊತ್ತಿಲ್ಲ’ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಸಂಸದೆ!!! Read More »

HIV ಸ್ನೇಹಿತೆಯ ಗುಟ್ಟನ್ನು ಬಹಿರಂಗ ಪಡಿಸುವುದಾಗಿ ಹಣ ಪೀಕಿಸಿದ ಖದೀಮ ಸ್ನೇಹಿತ !!! ಪೊಲೀಸ್ ಠಾಣೆಯಲ್ಲಿ ದೂರು ದಾಖಲು!

ಅವರಿಬ್ಬರೂ ಉತ್ತಮ ಸ್ನೇಹಿತರು. ಇಬ್ಬರೂ ಕೆಲಸದ ಸ್ಥಳದಲ್ಲಿ ಪರಿಚಯ ಆದವರು. ಈ ರೀತಿ ಪರಿಚಯ ಆಗಿ ಒಂದು ದಿನ ಗೆಳತಿ ಗೆಳೆಯನಲ್ಲಿ ತನ್ನ ಸೀಕ್ರೇಟ್ ವೊಂದನ್ನು ಹೇಳುತ್ತಾಳೆ. ಅನಂತರ ಆಕೆಗೆ ಗೊತ್ತಾಯಿತು ತನ್ನ ಸ್ನೇಹಿತ ಎಂತ ನೀಚ ಎಂದು. ಸಂತ್ರಸ್ತೆ ತನಗೆ ಎಚ್‌ಐವಿ ಇರುವ ವಿಚಾರವನ್ನು ಸ್ನೇಹಿತನಲ್ಲಿ ಹೇಳಿದ್ದಾಳೆ. ಇದು ಗೊತ್ತಾದ ಕೂಡಲೇ ಆರೋಪಿ ಅರುಣ್ ಕುಮಾರ್ ಈ ವಿಷಯವನ್ನು ಬಹಿರಂಗಪಡಿಸುವುದಾಗಿ ಹೇಳಿ ಮಹಿಳೆಯಿಂದ 2.8 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನೂ ಸುಲಿಗೆ ಮಾಡಿದ್ದಾನೆ. 42 …

HIV ಸ್ನೇಹಿತೆಯ ಗುಟ್ಟನ್ನು ಬಹಿರಂಗ ಪಡಿಸುವುದಾಗಿ ಹಣ ಪೀಕಿಸಿದ ಖದೀಮ ಸ್ನೇಹಿತ !!! ಪೊಲೀಸ್ ಠಾಣೆಯಲ್ಲಿ ದೂರು ದಾಖಲು! Read More »

ಮಂಗಳೂರು: ಬಾಲಕನ ಮೇಲೆ ಹರಿದ ಟಿಪ್ಪರ್!! ಸೈಕಲ್ ನಲ್ಲಿ ಆಡುತ್ತಿದ್ದಾಗ ಘಟನೆ-ಆರು ವರ್ಷದ ಬಾಲಕ ಮೃತ್ಯು

ಮಂಗಳೂರು : ನಗರದ ಬಜಾಲ್ ಕಟ್ಟಪುಣಿ ಎಂಬಲ್ಲಿ ಟಿಪ್ಪರ್ ಲಾರಿ ಹರಿದು ಆರು ವರ್ಷದ ಬಾಲಕ ಸಾವನ್ನಪ್ಪಿದ ಬುಧವಾರ ಸಂಜೆ ಆರು ಗಂಟೆ ವೇಳೆಗೆ ನಡೆದಿದೆ. ಬಜಾಲ್ ಕಟ್ಟಪುಣಿಯ ಜಲ್ಲಿಗುಡ್ಡೆ ಸಮೀಪದಕೋರ್ದಬ್ಬು ದೈವಸ್ಥಾನದ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ಬಾಲಕ ಸೈಕಲ್ ನಲ್ಲಿ ಆಡುತ್ತಿದ್ದಾಗ ಟಿಪ್ಪರ್ ಲಾರಿ ಬಾಲಕನ ಮೇಲಿನಿಂದ ಹರಿದಿದೆ. ಸ್ಥಳೀಯ ನಿವಾಸಿ ಹಿದಾಯತುಲ್ಲಾ ಎಂಬವರ ಪುತ್ರ ಮೊಹಮ್ಮದ್ ಜೀಶನ್ (6) ಎಂಬುವವನೇ ಮೃತ ಬಾಲಕ. ಮೊಹಮ್ಮದ್ ಜೀಶನ್ ಮತ್ತು ಇನ್ನೊಬ್ಬ ಬಾಲಕ ಜೊತೆಯಾಗಿ ಅಂಗಡಿಗೆಂದು …

ಮಂಗಳೂರು: ಬಾಲಕನ ಮೇಲೆ ಹರಿದ ಟಿಪ್ಪರ್!! ಸೈಕಲ್ ನಲ್ಲಿ ಆಡುತ್ತಿದ್ದಾಗ ಘಟನೆ-ಆರು ವರ್ಷದ ಬಾಲಕ ಮೃತ್ಯು Read More »

BMTC ಯಿಂದ ಉಚಿತ ಲಘು ಮತ್ತು ಭಾರೀ ವಾಹನ ತರಬೇತಿ ; ಆಸಕ್ತರು ಅರ್ಜಿ ಸಲ್ಲಿಸಬಹುದು!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು( ಬಿಎಂಟಿಸಿ) ಉಚಿತ ಊಟ, ವಸತಿಯೊಂದಿಗೆ ಉಚಿತ ಡ್ರೈವಿಂಗ್ (ಲಘು ಮತ್ತು ಭಾರಿ ವಾಹನ ಚಾಲನ) ತರಬೇತಿ ನೀಡುತ್ತಿದೆ. ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಬಹುದು. ಲಘು ವಾಹನ ಚಾಲನಾ ತರಬೇತಿ (ಕಾರ್ / ಜೀಪ್) ಪಡೆಯಲು ಅರ್ಹತೆ, ಅಗತ್ಯ ದಾಖಲೆಗಳು 1. ಕನಿಷ್ಠ 18 ವರ್ಷ ವರ್ಷ ಪೂರೈಸಿರಬೇಕು.ಜನ್ಮ ದಿನಾಂಕದ ಬಗ್ಗೆ ಜನನ ಪ್ರಮಾಣ ಪತ್ರ ಅಥವಾಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ಶಾಲಾವರ್ಗಾವಣಾ ಪ್ರಮಾಣ ಪತ್ರ (ಟಿ.ಸಿ) ಅಥವಾ ನೋಟರಿಯಿಂದ ಪ್ರಮಾಣ ಪತ್ರ ಹೊಂದಿರಬೇಕು.2. …

BMTC ಯಿಂದ ಉಚಿತ ಲಘು ಮತ್ತು ಭಾರೀ ವಾಹನ ತರಬೇತಿ ; ಆಸಕ್ತರು ಅರ್ಜಿ ಸಲ್ಲಿಸಬಹುದು! Read More »

‘ಶಿವಮೊಗ್ಗ ವಿಮಾನ ನಿಲ್ದಾಣ’ಕ್ಕೆ ಬಿ.ಎಸ್ ಯಡಿಯೂರಪ್ಪ ಹೆಸರು ನಾಮಕರಣ – ಸಿಎಂ ಬೊಮ್ಮಾಯಿ ಘೋಷಣೆ

ಶಿವಮೊಗ್ಗನಗರದಲ್ಲಿನ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಸಂಬಂಧ ವಿವಿಧ ಹೆಸರು ಇಡುವ ಕುರಿತು ಹಲವು ಹೆಸರು ಕೇಳಿ ಬಂದಿತ್ತು. ಆದರೆ ಶಿವಮೊಗ್ಗ ಏರ್ ಪೋರ್ಟ್ ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಹೆಸರನ್ನು ಇಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಇದ್ದಂತ ಏರ್ಪೋಟ್ ಹೆಸರಿನ ಗೊಂದಲಕ್ಕೆ ತೆರೆ ಎಳೆದಂತಾಗಿದೆ. ಇಂದು ಮುಖ್ಯಮಂತ್ರಿ ಅವರು ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ, ವಿಮಾನ ನಿಲ್ದಾಣಕ್ಕೆ ಬಿಎಸ್ ಯಡಿಯೂರಪ್ಪ ಅವರ ಹೆಸರನ್ನು …

‘ಶಿವಮೊಗ್ಗ ವಿಮಾನ ನಿಲ್ದಾಣ’ಕ್ಕೆ ಬಿ.ಎಸ್ ಯಡಿಯೂರಪ್ಪ ಹೆಸರು ನಾಮಕರಣ – ಸಿಎಂ ಬೊಮ್ಮಾಯಿ ಘೋಷಣೆ Read More »

ಅಡುಗೆ ಮಾಡುವಾಗ ಬಿಸಿ ತಾಗಿ ಕೈ ಸುಟ್ಟರೆ, ಈ ತಪ್ಪುಗಳನ್ನು ಖಂಡಿತಾ ಮಾಡಬೇಡಿ!

ಯಾರೇ ಆದರೂ ಅಡುಗೆ ಮಾಡುವಾಗ ಕೈ ಸುಟ್ಟುಕೊಳ್ಳುವುದು ಸಾಮಾನ್ಯ. ಹಾಗಾಗಿ ತಕ್ಷಣಕ್ಕೆ ನೆನಪಾಗುವುದೇ ಮನೆಮದ್ದು. ಆದರೆ ಕೆಲವೊಂದು ಮನೆಮದ್ದಿನಿಂದ ನೋವು ನಿವಾರಣೆಯಾದರೂ, ಗಾಯ ವಾಸಿಯಾದರೂ ಕಲೆ‌ಹೋಗುವುದಿಲ್ಲ. ಹಾಗಾಗಿ ನೀವು ಈ ಸಂದರ್ಭದಲ್ಲಿ ಏನು ಮಾಡಬಾರದಂದು ಇಲ್ಲಿ ನೀಡಲಾಗಿದೆ. ಬನ್ನಿ ಅದೇನೆಂದು ತಿಳಿಯೋಣ : ಸರಿಯಾದ ರೀತಿಯಲ್ಲಿ ಈ ಕ್ರಮಗಳನ್ನ ಅನುಸರಿಸಿ. ಇಲ್ಲವಾದರೆ ಸುಟ್ಟ ಕಲೆಗಳು ಹಾಗೆ ಉಳಿಯಬಹುದು. ಅನೇಕರು ಕೈ ಸುಟ್ಟಾಗ ಕೈಗೆ ಐಸ್ ಕ್ಯೂಬ್ ನಿಂದ ಉಜ್ಜಿಕೊಳ್ಳುತ್ತಾರೆ.ಇದರಿಂದ ನಿಮಗೆ ಉರಿ ಕಡಿಮೆಯಾಗಬಹುದು. ಆದರೆ ಇದರಿಂದ ಕಲೆ …

ಅಡುಗೆ ಮಾಡುವಾಗ ಬಿಸಿ ತಾಗಿ ಕೈ ಸುಟ್ಟರೆ, ಈ ತಪ್ಪುಗಳನ್ನು ಖಂಡಿತಾ ಮಾಡಬೇಡಿ! Read More »

ಸುಳ್ಯ: ಚಲಿಸುತ್ತಿರುವ ಲಾರಿಯಡಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕ!! ಭಯಾನಕ ಘಟನೆಯ ವೀಡಿಯೋ ಸಿ.ಸಿ ಟಿವಿಯಲ್ಲಿ ಸೆರೆ!!

ಚಲಿಸುತ್ತಿರುವ ಲಾರಿಯಡಿಗೆ ಹಾರಿ ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಯತ್ನಿಸಿದ ಭಯಾನಕ ಘಟನೆ ಸುಳ್ಯ ನಗರದ ಗಾಂಧಿನಗರ ಬಳಿ ಸಂಭವಿಸಿದೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಗಾಯಾಳುವನ್ನು ಸುಳ್ಯದ ಗಾಂಧಿನಗರದಲ್ಲಿ ವಾಸವಿರುವ ಉತ್ತರ ಕರ್ನಾಟಕ ಮೂಲದ ಮಂಜುನಾಥ್ ಎಂದು ಗುರುತಿಸಲಾಗಿದೆ. ತೆಂಗಿನಕಾಯಿ ತುಂಬಿಕೊಂಡು ಬರುತ್ತಿದ್ದ ಲಾರಿ ಹತ್ತಿರಕ್ಕೆ ಆಗಮಿಸುತ್ತಿದ್ದಂತೆ ಆ ವ್ಯಕ್ತಿ ಲಾರಿಯ ಹಿಂದಿನ ಚಕ್ರಕ್ಕೆ ಹಾರಿದ್ದಾನೆ. ಆಗ ಲಾರಿ ಆತನನ್ನು ತಳ್ಳಿಕೊಂಡು ಸಾಗಿದ್ದು, ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದೀಗ ಆತನಿಗೆ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. …

ಸುಳ್ಯ: ಚಲಿಸುತ್ತಿರುವ ಲಾರಿಯಡಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕ!! ಭಯಾನಕ ಘಟನೆಯ ವೀಡಿಯೋ ಸಿ.ಸಿ ಟಿವಿಯಲ್ಲಿ ಸೆರೆ!! Read More »

ಈ ವಾಣಿಜ್ಯ ಬೆಳೆಗಳ ಮಾರುಕಟ್ಟೆಯ ದರ ಧಾರಣೆ ; ಇಲ್ಲಿದೆ ಇಂದಿನ ಬೆಲೆ

ರಷ್ಯಾ- ಉಕ್ರೇನ್ ಸಮರ ಸಂಘರ್ಷದಿಂದಾಗಿ ಕೈಗಾರಿಕಾ ಡೀಸೆಲ್ ಬೆಲೆ ಏರಿಕೆಯಾಗಿದೆ. ಹಾಗಾಗಿ ರಫ್ತು ವಹಿವಾಟಿನಲ್ಲಿ ಏರಿಕೆ ಉಂಟಾಗಿದ್ದು, ಚಹಾ, ಏಲಕ್ಕಿ, ವಾಣಿಜ್ಯ ಬೆಲೆಯಲ್ಲದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಯುದ್ಧದ ಪರಿಸ್ಥಿತಿಯಿಂದ ಆಮದು-ರಫ್ತು ವ್ಯತ್ಯಯ, ಬೇಡಿಕೆ-ಪೂರೈಕೆ ಅಸಮತೋಲನ ಉಂಟಾಗಿದ್ದು, ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ.ಕರ್ನಾಟಕದಲ್ಲಿ ಮಂಗಳವಾರ (ಏಪ್ರಿಲ್ 19) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಹೆಚ್ಚಾಗಿದೆ. ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ …

ಈ ವಾಣಿಜ್ಯ ಬೆಳೆಗಳ ಮಾರುಕಟ್ಟೆಯ ದರ ಧಾರಣೆ ; ಇಲ್ಲಿದೆ ಇಂದಿನ ಬೆಲೆ Read More »

ಉಡುಪಿ: ಮುತಾಲಿಕ್ ಆಗಮನಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕೊರಗಜ್ಜನಿಗೆ ದೂರು ಸಲ್ಲಿಸಿದ ಹಿಂದೂ ಜಾಗರಣ ವೇದಿಕೆ

ಉಡುಪಿ ಜಿಲ್ಲಾ ಪ್ರವೇಶಕ್ಕೆ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಅಡ್ಡಿಪಡಿಸಿದವರ ವಿರುದ್ಧ ಕೊರಗಜ್ಜನಿಗೆ ದೂರು ನೀಡಿದ ಪ್ರಸಂಗ ಬೆಳಕಿಗೆ ಬಂದಿದೆ. ಮುತಾಲಿಕ್ ನಿಷೇಧ ಹೇರಿರುವ ಸಂಬಂಧ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಕುಂದಾಪುರ ತಾಲೂಕು ಮುಳ್ಳಿಕಟ್ಟೆ ಕೊರಗಜ್ಜನ ಮೊರೆಹೋಗಿದ್ದಾರೆ. ಅದಲ್ಲದೆ ಗಂಗೊಳ್ಳಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಏಳು ಕಿಲೋಮೀಟರ್ ಪಾದಯಾತ್ರೆ ಮಾಡಿ ಕೊರಗಜ್ಜನಿಗೆ ದೂರು ನೀಡಿದ್ದಾರೆ. ಹಿಂದೂ ಜಾಗರಣ ವೇದಿಕೆಯಿಂದ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಪೂಜೆಯ ಧಾರ್ಮಿಕ ಸಭೆಯಲ್ಲಿ ಪ್ರಮೋದ್ ಮುತಾಲಿಕ್ ಭಾಗವಹಿಸಬೇಕಿದ್ದರು. ಆದರೆ …

ಉಡುಪಿ: ಮುತಾಲಿಕ್ ಆಗಮನಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕೊರಗಜ್ಜನಿಗೆ ದೂರು ಸಲ್ಲಿಸಿದ ಹಿಂದೂ ಜಾಗರಣ ವೇದಿಕೆ Read More »

error: Content is protected !!
Scroll to Top