ಅಡುಗೆ ಮಾಡುವಾಗ ಬಿಸಿ ತಾಗಿ ಕೈ ಸುಟ್ಟರೆ, ಈ ತಪ್ಪುಗಳನ್ನು ಖಂಡಿತಾ ಮಾಡಬೇಡಿ!

ಯಾರೇ ಆದರೂ ಅಡುಗೆ ಮಾಡುವಾಗ ಕೈ ಸುಟ್ಟುಕೊಳ್ಳುವುದು ಸಾಮಾನ್ಯ. ಹಾಗಾಗಿ ತಕ್ಷಣಕ್ಕೆ ನೆನಪಾಗುವುದೇ ಮನೆಮದ್ದು. ಆದರೆ ಕೆಲವೊಂದು ಮನೆಮದ್ದಿನಿಂದ ನೋವು ನಿವಾರಣೆಯಾದರೂ, ಗಾಯ ವಾಸಿಯಾದರೂ ಕಲೆ‌ಹೋಗುವುದಿಲ್ಲ. ಹಾಗಾಗಿ ನೀವು ಈ ಸಂದರ್ಭದಲ್ಲಿ ಏನು ಮಾಡಬಾರದಂದು ಇಲ್ಲಿ ನೀಡಲಾಗಿದೆ. ಬನ್ನಿ ಅದೇನೆಂದು ತಿಳಿಯೋಣ :

ಸರಿಯಾದ ರೀತಿಯಲ್ಲಿ ಈ ಕ್ರಮಗಳನ್ನ ಅನುಸರಿಸಿ. ಇಲ್ಲವಾದರೆ ಸುಟ್ಟ ಕಲೆಗಳು ಹಾಗೆ ಉಳಿಯಬಹುದು.


Ad Widget

Ad Widget

Ad Widget

ಅನೇಕರು ಕೈ ಸುಟ್ಟಾಗ ಕೈಗೆ ಐಸ್ ಕ್ಯೂಬ್ ನಿಂದ ಉಜ್ಜಿಕೊಳ್ಳುತ್ತಾರೆ.ಇದರಿಂದ ನಿಮಗೆ ಉರಿ ಕಡಿಮೆಯಾಗಬಹುದು. ಆದರೆ ಇದರಿಂದ ಕಲೆ ಉಳಿಯಬಹುದು. ಹಾಗಾಗಿ ಐಸ್ ಬದಲು ನೀರನ್ನು ಬಳಸಿದರೆ ಒಳ್ಳೆಯದು.

ಕೆಲವರು ಚರ್ಮ ಸುಟ್ಟಾಗ ಟೂತ್ ಪೇಸ್ಟ್ ಅನ್ನು ಹಚ್ಚುತ್ತಾರೆ. ಇದು ಸೋಂಕಿಗೆ ಕಾರಣವಾಗುತ್ತದೆ ಮತ್ತು ಗಾಯ ವಾಸಿಯಾಗುವುದಿಲ್ಲ.

ಚರ್ಮದಲ್ಲಿ ಸುಟ್ಟ ಗಾಯವಿದ್ದಾಗ ಸೂರ್ಯನ ಬಿಸಿಲಿಗೆ ಹೋಗಬೇಡಿ. ಇದರಿಂದ ಚರ್ಮದ ಕಿರಿಕಿರಿ ಉಂಟಾಗುತ್ತದೆ. ಅಲ್ಲದೇ ಅದರ ಮೇಲೆ ಗುಳ್ಳೆಗಳು ಸಹ ಮೂಡುತ್ತದೆ. ಹಾಗಾಗಿ ಸುಟ್ಟ ಗಾಯವನ್ನು ಮುಚ್ಚಿಕೊಂಡು ಹೋಗಿ.

Leave a Reply

error: Content is protected !!
Scroll to Top
%d bloggers like this: