Day: April 9, 2022

ಪಾಲ್ತಾಡಿ : ಗುಡ್ಡೆಯಲ್ಲಿ ವ್ಯಕ್ತಿಯ ಕೊಲೆ : ಇಬ್ಬರ ವಿರುದ್ದ ಪ್ರಕರಣ ದಾಖಲು

ಸವಣೂರು : ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು,ಇದೊಂದು ಕೊಲೆಯಾಗಿರುವ ಸಾಧ್ಯತೆ ಇದೆ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಪಾಲ್ತಾಡಿ ಗ್ರಾಮದ ಬೊಳಿಯಾಲ ನಿವಾಸಿ ಸೇಸಪ್ಪ ಪೂಜಾರಿ (76ವ.) ಎಂಬವರ ಮೃತದೇಹ ಪತ್ತೆಯಾಗಿದೆ.ಫೆ.5ರಿಂದ ನಾಪತ್ತೆಯಾಗಿದ್ದಾರೆಂದು ಹೇಳಲಾಗಿರುವ ಸೇಸಪ್ಪ ಪೂಜಾರಿಯವರ ಶವ ಪತ್ತೆಯಾಗಿದೆ.ಸಾವಿನಲ್ಲಿ ಸಂಶಯವಿರುವ ಹಿನ್ನೆಲೆಯಲ್ಲಿ ಸೇಸಪ್ಪ ಪೂಜಾರಿಯವರ ಪುತ್ರಿ ಶುಭವತಿ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸೇಸಪ್ಪ ಪೂಜಾರಿಯವರು ತನ್ನ ತಮ್ಮ ಬಾಲಕೃಷ್ಣ ಪೂಜಾರಿಯವರ ಮನೆಯಲ್ಲಿ ಮೂಳೆ ಮುರೀತಕ್ಕೋಳಗಾಗಿ …

ಪಾಲ್ತಾಡಿ : ಗುಡ್ಡೆಯಲ್ಲಿ ವ್ಯಕ್ತಿಯ ಕೊಲೆ : ಇಬ್ಬರ ವಿರುದ್ದ ಪ್ರಕರಣ ದಾಖಲು Read More »

ಪುತ್ತೂರು: ಬಿಜೆಪಿಯ ಅಲ್ಪಸಂಖ್ಯಾತ ಕಾರ್ಯಕರ್ತ ಅಬ್ದುಲ್ ರಜಾಕ್ ಗೆ ಫೋನ್ ಕರೆಯಲ್ಲಿ ಕೊಲೆ ಬೆದರಿಕೆ!! ಎರಡನೇ ಬಾರಿ ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಟಾರ್ಗೆಟ್ -ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು: ಇಲ್ಲಿನ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ,ಬಿಜೆಪಿ ಯುವ ನಾಯಕ ಚಂದ್ರಹಾಸ ಈಶ್ವರಮಂಗಲ ಅವರಿಗೆ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆ ಕರೆ ಬಂದ ಬೆನ್ನಲ್ಲೇ, ಬಡಗನ್ನೂರು ಗ್ರಾಮದ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ಅನಾಮಧೇಯ ವ್ಯಕ್ತಿಗಳು ಫೋನ್ ಕರೆಯಲ್ಲಿ ಬೆದರಿಕೆ ಹಾಕಿದ ಬಗ್ಗೆ ವರದಿಯಾಗಿದೆ. ಬಡಗನ್ನೂರು ಗ್ರಾಮದ ಬಿಜೆಪಿ ಕಾರ್ಯಕರ್ತ ಅಬ್ದುಲ್ ರಜಾಕ್ ಎಂಬವರಿಗೆ ಕೆಲ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದು, ಫೋನ್ ಕರೆಯ ಮೂಲಕ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ, ಕುತ್ತಿ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. …

ಪುತ್ತೂರು: ಬಿಜೆಪಿಯ ಅಲ್ಪಸಂಖ್ಯಾತ ಕಾರ್ಯಕರ್ತ ಅಬ್ದುಲ್ ರಜಾಕ್ ಗೆ ಫೋನ್ ಕರೆಯಲ್ಲಿ ಕೊಲೆ ಬೆದರಿಕೆ!! ಎರಡನೇ ಬಾರಿ ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಟಾರ್ಗೆಟ್ -ಠಾಣೆಯಲ್ಲಿ ಪ್ರಕರಣ ದಾಖಲು Read More »

ಆಕ್ಸಿಜನ್ ಕೊರತೆಯಿಂದ ಆಂಬುಲೆನ್ಸ್ ನಲ್ಲಿಯೇ ಕೊನೆಯುಸಿರೆಳೆದ ನವಜಾತ ಶಿಶು!

ಆಕ್ಸಿಜನ್ ಕೊರತೆಯಿಂದಾಗಿ ನವಜಾತಶಿಶು ಆಂಬುಲೆನ್ಸ್ ನಲ್ಲಿಯೇ ಕೊನೆಯುಸಿರೆಳೆದ ಘಟನೆಯೊಂದು ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ನಡೆದಿದೆ. ಬಸವಪಟ್ಟಣದ ಶೃಂಗಾಯಬಾಬು ತಾಂಡಾದ ಹಾಲೇಶ್ ನಾಯಕ್ ಹಾಗೂ ಸ್ವಾತಿ ದಂಪತಿಯ ಕೂಸೇ ಸಾವನ್ನಪ್ಪಿದ ಮಗು. ಉಸಿರಾಟದ ಸಮಸ್ಯೆ ಮಗುವಿಗೆ ಎದುರಾಗಿತ್ತು. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಹೊನ್ನಾಳಿ ಆಸ್ಪತ್ರೆಗೆ ಕರೆದೊಯ್ಯಲು ಪೋಷಕರು ನಿರ್ಧಾರ ಮಾಡಿದ್ದರು. ಆದರೆ ಆಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್ ಇರಲಿಲ್ಲ. ಆದರೆ ಆಂಬುಲೆನ್ಸ್ ಚಾಲಕ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅರ್ಧದಾರಿಗೆ ಹೋಗುತ್ತಿದ್ದಂತೆ ಮತ್ತೊಂದು ಆ್ಯಂಬುಲೆನ್ಸ್ ಬರುತ್ತದೆ ಎಂದು …

ಆಕ್ಸಿಜನ್ ಕೊರತೆಯಿಂದ ಆಂಬುಲೆನ್ಸ್ ನಲ್ಲಿಯೇ ಕೊನೆಯುಸಿರೆಳೆದ ನವಜಾತ ಶಿಶು! Read More »

ರಾಜಕೀಯದಲ್ಲಿ ಮೂಲೆಗುಂಪಾಗುತ್ತಿದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ !! | ಚುನಾವಣೆಯಲ್ಲಿ ತಲೆ ತಗ್ಗಿಸಿದ ಬಳಿಕ ‘ಕೈ’ ಆದಾಯದ ಡಬ್ಬಿಗೆ ದೊಡ್ಡ ಹೊಡೆತ

ಪಂಚರಾಜ್ಯಗಳ ಚುನಾವಣೆ ಬಳಿಕ ಕಾಂಗ್ರೆಸ್ ಗೆ ದೇಶದಲ್ಲೆಡೆ ತೀವ್ರ ಹಿನ್ನಡೆಯಾಗಿದೆ. ಅದೆಷ್ಟೋ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತ್ಯಜಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಪಕ್ಷದ ಆದಾಯಕ್ಕೂ ದೊಡ್ಡ ಪೆಟ್ಟು ಬಿದ್ದಿದೆ. 2020-2021 ರ ಹಣಕಾಸು ವರ್ಷದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಆದಾಯವು 58% ಕ್ಕಿಂತಲೂ ಕಡಿಮೆಯಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ರೂ. 682 ಕೋಟಿಯಷ್ಟಿದ್ದ ಆದಾಯವು ರೂ. 285 ಕೋಟಿಗೆ ಕುಸಿದಿದೆ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯಲ್ಲಿ ಕಾಂಗ್ರೆಸ್ ಹೇಳಿಕೊಂಡಿದೆ.ಆದಾಯವೂ ಕಡಿಮೆಯಾಗಿರುವಂತೆ ಪಕ್ಷದ ಖರ್ಚು ವೆಚ್ಚಗಳು …

ರಾಜಕೀಯದಲ್ಲಿ ಮೂಲೆಗುಂಪಾಗುತ್ತಿದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ !! | ಚುನಾವಣೆಯಲ್ಲಿ ತಲೆ ತಗ್ಗಿಸಿದ ಬಳಿಕ ‘ಕೈ’ ಆದಾಯದ ಡಬ್ಬಿಗೆ ದೊಡ್ಡ ಹೊಡೆತ Read More »

ಕಡಬ: ನೂತನ ಠಾಣಾಧಿಕಾರಿಯಾಗಿ ಆಂಜನೇಯರೆಡ್ಡಿ ಅಧಿಕಾರ ಸ್ವೀಕಾರ

ಕಡಬ: ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ಆಂಜನೇಯ ರೆಡ್ಡಿ ಅಧಿಕಾರ ಸ್ವೀಕರಿಸಿದ್ದಾರೆ. ಬೆಳ್ಳಾರೆಯಲ್ಲಿ ಉತ್ತಮ ಆಡಳಿತ ನೀಡಿ ಜನಸ್ನೇಹಿ, ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡು ಸಾರ್ವಜನಿಕ ವಾಗಿ ಉತ್ತಮ ಬಾಂದವ್ಯ ಹೊಂದಿದ್ದರು.

ಕನುಸಗಾರನಿಗೆ ದೊರೆತ ಗೌರವ ಡಾಕ್ಟರೇಟ್

ಕ್ರೇಜಿಸ್ಟಾರ್ ರವಿಚಂದ್ರನ್ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಪ್ರೇಮ ಲೋಕವನ್ನೇ ನಿರ್ಮಿಸಿದ ಕನಸಿನ ಸಾಹುಕಾರರಾದ ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ದೊರಕಿದೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ‌ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ಚಲನಚಿತ್ರ ರಂಗದಲ್ಲಿನ ಸೇವೆ ಪರಿಗಣಿಸಿ ನಟ ರವಿಚಂದ್ರನ್ ಅವರಿಗೆ ಬೆಂಗಳೂರು ನಗರ ವಿವಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ. ಸಮಾಜ ಕ್ಷೇತ್ರದ ಅನುಪಮ ಸೇವೆಗಾಗಿ ರಂ.ಆರ್. ಜೈಶಂಕರ್, ವೈದ್ಯಕೀಯ ಕ್ಷೇತ್ರದ …

ಕನುಸಗಾರನಿಗೆ ದೊರೆತ ಗೌರವ ಡಾಕ್ಟರೇಟ್ Read More »

ಮಂಗಳೂರು : BMW ಕಾರು ಚಾಲಕನ ನಿರ್ಲಕ್ಷ್ಯ! ಡಿವೈಡರ್ ದಾಟಿ,ಇನ್ನೊಂದು ಕಾರು ಮತ್ತು ಸ್ಕೂಟರ್ ಗೆ ಡಿಕ್ಕಿ !

ಮಂಗಳೂರು: ಮಂಗಳೂರು ನಗರದ ಎಂ.ಜಿ ರಸ್ತೆಯ ಬಲ್ಲಾಳ್‌ಬಾಗ್ ಬಳಿ ಇಂದು ಎರಡು ಕಾರುಗಳ ಮಧ್ಯೆ ದ್ವಿಚಕ್ರ ವಾಹನ ಸಿಲುಕಿ ಮಹಿಳೆಯೋರ್ವಳು ಗಂಭೀರ ಗಾಯಗೊಂಡ ಘಟನೆಯೊಂದು ಮಧ್ಯಾಹ್ನ ನಡೆದಿದೆ. ಪಿವಿಎಸ್ ಕಡೆಯಿಂದ ಲಾಲ್‌ಭಾಗ್ ಕಡೆಗೆ ಅತೀ ವೇಗದಿಂದ ತೆರಳುತ್ತಿದ್ದ ಬಿಎಂಡಬ್ಲ್ಯೂ ಕಾರು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಕಾರು ಹೊಡೆದ ವೇಗಕ ಸ್ಕೂಟಿ ಚಲಾಯಿಸುತ್ತಿದ್ದ ಮಹಿಳೆ ರಸ್ತೆಗೆ ಬಿದ್ದ ಸಂದರ್ಭ ಸ್ಕೂಟಿಯ ಹಿಂದಿನಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ …

ಮಂಗಳೂರು : BMW ಕಾರು ಚಾಲಕನ ನಿರ್ಲಕ್ಷ್ಯ! ಡಿವೈಡರ್ ದಾಟಿ,ಇನ್ನೊಂದು ಕಾರು ಮತ್ತು ಸ್ಕೂಟರ್ ಗೆ ಡಿಕ್ಕಿ ! Read More »

ಭಾರತದ ಹೆಮ್ಮೆಯಾದ ವಿಶ್ವದ ಅತೀ ಎತ್ತರದ ಮುರಗನ್ ಪ್ರತಿಮೆ

ತಮಿಳುನಾಡಿನ ಸೇಲಂ ಜಿಲ್ಲೆಯ ಪುತಿರಗೌಂಡಂಪಾಳ್ಯಂನಲ್ಲಿ ವಿಶ್ವದ ಅತಿ ಎತ್ತರದ ಮುರುಗನ್ ಪ್ರತಿಮೆ ಸ್ಥಾಪನೆಯಾಗಿದೆ. . ಶ್ರೀ ಮುತ್ತುಮಲೈ ಮುರುಗನ್ ಟ್ರಸ್ಟ್‌ನ ಅಧ್ಯಕ್ಷ ಎನ್ ಶ್ರೀಧರ್ ತಮ್ಮ ಹುಟ್ಟೂರಾದ ಅತ್ತೂರಿನಲ್ಲಿ ಅತಿ ಎತ್ತರದ ಮುರುಗನ್ ಪ್ರತಿಮೆಯನ್ನು ನಿರ್ಮಿಸಲು ಬಯಸಿದ್ದರು. 2014 ರಲ್ಲಿ, ಉದ್ಯಮಿಯೂ ಆಗಿರುವ ಶ್ರೀಧರ್ ತಮ್ಮ ಜಮೀನಿನಲ್ಲಿ ದೇವಸ್ಥಾನ ಮತ್ತು ಮುತ್ತುಮಲೈ ಮುರುಗನ್ ಪ್ರತಿಮೆ ನಿರ್ಮಿಸಲು ಸಂಕಲ್ಪಿಸಿದ್ದರು.ಮಲೇಷ್ಯಾದ ಮುರುಗನ್ ಪ್ರತಿಮೆಯೇ ಸೇಲಂನಲ್ಲಿ ದೊಡ್ಡ ಪ್ರತಿಮೆ ನಿರ್ಮಾಣಕ್ಕೆ ಸ್ಫೂರ್ತಿ ನೀಡಿದೆ. ಎಲ್ಲರೂ ಮಲೇಷ್ಯಾಕ್ಕೆ ಹೋಗಿ ಅಲ್ಲಿನ ದೇವರನ್ನು ಪೂಜಿಸಲು …

ಭಾರತದ ಹೆಮ್ಮೆಯಾದ ವಿಶ್ವದ ಅತೀ ಎತ್ತರದ ಮುರಗನ್ ಪ್ರತಿಮೆ Read More »

ಲಿಂಬೆಹಣ್ಣಿನ ದರ ಕೇಳಿದ ಗ್ರಾಹಕರ ಮುಖದಲ್ಲಿ ಹೆಚ್ಚಾದ ಹುಳಿ

ಊಟಕೆ ಉಪ್ಪಿನಕಾಯಿ ಎಷ್ಟು ಮುಖ್ಯವೊ ಹಾಗೆ ಅಡುಗೆಗೆ ಲಿಂಬೆಹಣ್ಣು ಅಷ್ಟೇ ಮುಖ್ಯ. ಉಪ್ಪು ಹುಳಿ ತಿಂದು ಬೆಳೆದ ದೇಹ ಇದು ಎಂದು ಹೆಮ್ಮೆಯಿಂದ ಹೇಳಲು ಹುಳಿಗೆ ಲಿಂಬೆ ಅತಿ ಪ್ರಾಮುಖ್ಯ. ಕೆಲವೆಡೆ ಅಮವಾಸ್ಯೆ ಗಾಡಿ ಪೂಜೆಗೂ ಲಿಂಬೆಕಾಯಿ ಇಡುತ್ತಾರೆ. ದಿನನಿತ್ಯ ಬಳಕೆಗೆ ಬೇಕಾಗುವ ಲಿಂಬೆ ಹಣ್ಣಿನ ಬೆಲೆ ಮುಖವನ್ನು ಹುಳಿ ಮಾಡುತ್ತಿದೆ. ಏಕೆಂದರೆ ಬೆಲೆ ಧೀಡಿರನೆ ಗಗನಕ್ಕೇರಿದೆ‌. ಬೇಸಿಗೆಯ ತಾಪಮಾನಕ್ಕಂತೂ ಲಿಂಬೆ ಹಣ್ಣಿನ ಪಾನಕ , ಲೆಮೆನ್ ಸೋಡಾ ಕುಡಿದು ಬಾಯಾರಿಗೆ ಕಳೆದುಕೊಳ್ಳುವ ಜನ ಬೆಲೆ ಕೇಳಿ …

ಲಿಂಬೆಹಣ್ಣಿನ ದರ ಕೇಳಿದ ಗ್ರಾಹಕರ ಮುಖದಲ್ಲಿ ಹೆಚ್ಚಾದ ಹುಳಿ Read More »

ಬಾಲಿವುಡ್ ನಟಿ ಸೋನಂ ಕಪೂರ್ ಮನೆಗೆ ನುಗ್ಗಿದ ಕಳ್ಳರು !! | 1.41 ಕೋಟಿ ಮೌಲ್ಯದ ನಗ-ನಗದು ಕಳ್ಳರ ಪಾಲು

ಬಾಲಿವುಡ್ ನ ಖ್ಯಾತ ನಟಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಸದ್ಯ ಮೊದಲ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ಆದರೆ ಆ ಸಂತೋಷದಲ್ಲಿದ್ದ ಜೋಡಿಗೆ ಕಳ್ಳರು ಬಹು ದೊಡ್ಡ ಶಾಕ್ ನೀಡಿದ್ದಾರೆ. ಹೌದು. ಸೋನಂ- ಆನಂದ್ ದಂಪತಿಯ ದೆಹಲಿ ಮನೆಯನ್ನು ದರೋಡೆ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ದರೋಡೆಕೋರರು ಮನೆಯಲ್ಲಿದ್ದ ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ಹಣ ಕದ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ಸೋನಂ ಕಪೂರ್ ಅವರ ಅತ್ತೆ ತುಘಲಕ್ ರಸ್ತೆಯಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು …

ಬಾಲಿವುಡ್ ನಟಿ ಸೋನಂ ಕಪೂರ್ ಮನೆಗೆ ನುಗ್ಗಿದ ಕಳ್ಳರು !! | 1.41 ಕೋಟಿ ಮೌಲ್ಯದ ನಗ-ನಗದು ಕಳ್ಳರ ಪಾಲು Read More »

error: Content is protected !!
Scroll to Top