ಭಾರತದ ಹೆಮ್ಮೆಯಾದ ವಿಶ್ವದ ಅತೀ ಎತ್ತರದ ಮುರಗನ್ ಪ್ರತಿಮೆ

Share the Article

ತಮಿಳುನಾಡಿನ ಸೇಲಂ ಜಿಲ್ಲೆಯ ಪುತಿರಗೌಂಡಂಪಾಳ್ಯಂನಲ್ಲಿ ವಿಶ್ವದ ಅತಿ ಎತ್ತರದ ಮುರುಗನ್ ಪ್ರತಿಮೆ ಸ್ಥಾಪನೆಯಾಗಿದೆ. . ಶ್ರೀ ಮುತ್ತುಮಲೈ ಮುರುಗನ್ ಟ್ರಸ್ಟ್‌ನ ಅಧ್ಯಕ್ಷ ಎನ್ ಶ್ರೀಧರ್ ತಮ್ಮ ಹುಟ್ಟೂರಾದ ಅತ್ತೂರಿನಲ್ಲಿ ಅತಿ ಎತ್ತರದ ಮುರುಗನ್ ಪ್ರತಿಮೆಯನ್ನು ನಿರ್ಮಿಸಲು ಬಯಸಿದ್ದರು.

2014 ರಲ್ಲಿ, ಉದ್ಯಮಿಯೂ ಆಗಿರುವ ಶ್ರೀಧರ್ ತಮ್ಮ ಜಮೀನಿನಲ್ಲಿ ದೇವಸ್ಥಾನ ಮತ್ತು ಮುತ್ತುಮಲೈ ಮುರುಗನ್ ಪ್ರತಿಮೆ ನಿರ್ಮಿಸಲು ಸಂಕಲ್ಪಿಸಿದ್ದರು.
ಮಲೇಷ್ಯಾದ ಮುರುಗನ್ ಪ್ರತಿಮೆಯೇ ಸೇಲಂನಲ್ಲಿ ದೊಡ್ಡ ಪ್ರತಿಮೆ ನಿರ್ಮಾಣಕ್ಕೆ ಸ್ಫೂರ್ತಿ ನೀಡಿದೆ.

ಎಲ್ಲರೂ ಮಲೇಷ್ಯಾಕ್ಕೆ ಹೋಗಿ ಅಲ್ಲಿನ ದೇವರನ್ನು ಪೂಜಿಸಲು ಸಾಧ್ಯವಿಲ್ಲ. ಹಾಗಾಗಿ ಸೇಲಂ ಜಿಲ್ಲೆಯಲ್ಲಿ ಸ್ಥಾಪಿಸಬಹುದೆಂದು ಶ್ರೀಧರ್ ಭಾವಿಸಿದ್ದರು. ಪ್ರತಿಮೆಯನ್ನು ನಿರ್ಮಿಸಲು ಶಿಲ್ಪಿ ತಿರುವರೂರ್ ತ್ಯಾಗರಾಜನ್ ಅವರನ್ನು ನೇಮಿಸಿಕೊಳ್ಳಲಾಗಿತ್ತು. 2006ರಲ್ಲಿ ಮಲೇಷ್ಯಾದಲ್ಲಿ ಮುರುಗನ್ ಪ್ರತಿಮೆಯನ್ನು ಇವರೇ ನಿರ್ಮಿಸಿದ್ದರು. ಸೇಲಂನಲ್ಲಿ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಿದ್ದಂತೆ ಹೆಲಿಕಾಪ್ಟರ್ ಮೂಲಕ ಅದರ ಮೇಲೆ ಗುಲಾಬಿ ದಳಗಳನ್ನು ಸುರಿಸಲಾಯಿತು. 

ಮಲೇಷ್ಯಾದ 140 ಅಡಿ ಎತ್ತರವಿರುವ ಪತ್ತುಮಲೈ ಮುರುಗನ್ ಪ್ರತಿಮೆಗಿಂತ ಈ ಪ್ರತಿಮೆಯು 146 ಅಡಿ ಎತ್ತರವನ್ನು ಹೊಂದಿದೆ.

Leave A Reply

Your email address will not be published.