ಮಂಗಳೂರು : BMW ಕಾರು ಚಾಲಕನ ನಿರ್ಲಕ್ಷ್ಯ! ಡಿವೈಡರ್ ದಾಟಿ,ಇನ್ನೊಂದು ಕಾರು ಮತ್ತು ಸ್ಕೂಟರ್ ಗೆ ಡಿಕ್ಕಿ !

ಮಂಗಳೂರು: ಮಂಗಳೂರು ನಗರದ ಎಂ.ಜಿ ರಸ್ತೆಯ ಬಲ್ಲಾಳ್‌ಬಾಗ್ ಬಳಿ ಇಂದು ಎರಡು ಕಾರುಗಳ ಮಧ್ಯೆ ದ್ವಿಚಕ್ರ ವಾಹನ ಸಿಲುಕಿ ಮಹಿಳೆಯೋರ್ವಳು ಗಂಭೀರ ಗಾಯಗೊಂಡ ಘಟನೆಯೊಂದು ಮಧ್ಯಾಹ್ನ ನಡೆದಿದೆ.

ಪಿವಿಎಸ್ ಕಡೆಯಿಂದ ಲಾಲ್‌ಭಾಗ್ ಕಡೆಗೆ ಅತೀ ವೇಗದಿಂದ ತೆರಳುತ್ತಿದ್ದ ಬಿಎಂಡಬ್ಲ್ಯೂ ಕಾರು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.

ಕಾರು ಹೊಡೆದ ವೇಗಕ ಸ್ಕೂಟಿ ಚಲಾಯಿಸುತ್ತಿದ್ದ ಮಹಿಳೆ ರಸ್ತೆಗೆ ಬಿದ್ದ ಸಂದರ್ಭ ಸ್ಕೂಟಿಯ ಹಿಂದಿನಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮತ್ತೆ ಮಹಿಳೆಗೆ ಡಿಕ್ಕಿ ಹೊಡೆದಿದೆ.

ಎರಡೂ ಕಾರುಗಳ ನಡುವೆ ಅಪಚ್ಚಿಯಾದ ಸ್ಕೂಟಿ ಮಧ್ಯೆ ಸಿಲುಕಿದ ಮಹಿಳೆಗೆ ಗಂಭೀರ ಗಾಯಗಳಾಗಿದೆ.

ಮಹಿಳೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಮಂಗಳೂರು ಪೂರ್ವ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಚಾಲಕ ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ್ದ ಎಂದು ಅನುಮಾನ ವ್ಯಕ್ತವಾಗಿದೆ.

Leave A Reply