Day: February 10, 2022

ಬಜ್ಪೆ:ರಾತ್ರಿ ಉಂಡು ಮಲಗಿದ್ದ ಸಹೋದರಿಯರಿಬ್ಬರು ನಾಪತ್ತೆ!! ತಡರಾತ್ರಿ ಬೆಳಕಿಗೆ ಬಂದ ಘಟನೆ-ಬಜ್ಪೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು

ಬಜ್ಪೆ: ಠಾಣಾ ವ್ಯಾಪ್ತಿಯ ಕೊಂಚಾರ್ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿದ್ದ ಇಬ್ಬರು ಸಹೋದರಿಯರು ಕಾಣೆಯಾಗಿರುವ ಬಗ್ಗೆ ಬಜಪೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ನಾಪತ್ತೆಯಾದವರನ್ನು ಮುಬೀನ(22) ಹಾಗೂ ಬುಶ್ರಾ(21)ಎಂದು ಗುರುತಿಸಲಾಗಿದೆ. ಫೆಬ್ರವರಿ 07 ರ ರಾತ್ರಿ ಮನೆಮಂದಿಯೊಂದಿಗೆ ಊಟ ಮಾಡಿ ಮಲಗಿದ್ದ ಯುವತಿಯರು ರಾತ್ರಿ ಸುಮಾರು 02 ಗಂಟೆಯ ಹೊತ್ತಿಗೆ ನಾಪತ್ತೆಯಾಗಿದ್ದಾರೆ. ಯುವತಿಯರ ತಂದೆ ಎದ್ದು ನೋಡಿದಾಗ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು,ಎಲ್ಲಾ ಕಡೆ ಹುಡುಕಾಡಿದರೂ ಪ್ರಯೋಜನಕ್ಕೆ ಬಾರದೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉಪ್ಪಿನಂಗಡಿ:ಚಲಿಸುತ್ತಿದ್ದ ಗೂಡ್ಸ್ ವಾಹನ ಬೆಂಕಿಗಾಹುತಿ!! ಉಪ್ಪಿನಂಗಡಿ ಸಮೀಪದ ಬೆದ್ರೋಡಿ ಎಂಬಲ್ಲಿ ಘಟನೆ

ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಬೆದ್ರೋಡಿ ಎಂಬಲ್ಲಿ ಇಂದು ಸಂಜೆ ವೇಳೆ ಗೂಡ್ಸ್ ವಾಹನವೊಂದಕ್ಕೆ ಬೆಂಕಿ ಹಿಡಿದ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಗೂಡ್ಸ್ ವಾಹನಕ್ಕೆ ಬೆದ್ರೋಡಿ ತಲುಪುತ್ತಿದ್ದಂತೆ ಬೆಂಕಿ ಹಿಡಿದ ಪರಿಣಾಮ ವಾಹನವು ಹೊತ್ತಿ ಉರಿದಿದ್ದು, ವಿಷಯ ತಿಳಿದ ಕೂಡಲೇ ಉಪ್ಪಿನಂಗಡಿ ಠಾಣಾಧಿಕಾರಿ ಓಮನ ನೇತೃತ್ವದ ಪೊಲೀಸರ ತಂಡ ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.ರಾಷ್ಟೀಯ ಹೆದ್ದಾರಿಯಲ್ಲಿ ವಾಹನಗಳ ಸಾಲು ಹೆಚ್ಚಾಗಿದ್ದು, ಬದಲಿ ಮಾರ್ಗದ ಮೂಲಕ …

ಉಪ್ಪಿನಂಗಡಿ:ಚಲಿಸುತ್ತಿದ್ದ ಗೂಡ್ಸ್ ವಾಹನ ಬೆಂಕಿಗಾಹುತಿ!! ಉಪ್ಪಿನಂಗಡಿ ಸಮೀಪದ ಬೆದ್ರೋಡಿ ಎಂಬಲ್ಲಿ ಘಟನೆ Read More »

ರಾಜ್ಯಾದ್ಯಂತ ಶಾಲೆ ಪ್ರಾರಂಭದ ಬಗ್ಗೆ ಸಿಎಂ ಬಸವರಾ ಬೊಮ್ಮಾಯಿ ಮಹತ್ವದ ಮಾಹಿತಿ | ಮೊದಲನೇ ಹಂತದಲ್ಲಿ ಸೋಮವಾರದಿಂದ 8-10 ನೇ ತರಗತಿಯವರಿಗೆ ಶಾಲೆ ಆರಂಭ| ಎರಡನೇ ಹಂತದಲ್ಲಿ ಪಿಯುಸಿ ಮತ್ತು ಡಿಗ್ರಿ ಕಾಲೇಜು ಪ್ರಾರಂಭ

ರಾಜ್ಯದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದೆ. ಒಂದು ಕಡೆ ಹಿಜಾಬ್ ನಮ್ಮ ಹಕ್ಕು ಅಂತ ಮುಸ್ಲಿಂ ವಿದ್ಯಾರ್ಥಿನಿಯರು ಹೋರಾಟ ಮಾಡುತ್ತಿದ್ದರೆ, ಇನ್ನೊಂದು ಕಡೆ ಹಿಜಾಬ್ ಧರಿಸುವವರೆಗೂ ಕೇಸರಿ ಶಾಲು ಧರಿಸುತ್ತೇವೆ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಇವತ್ತು ಮುಂದಿನ ಆದೇಶದವರೆಗೆ ಧಾರ್ಮಿಕ ಗುರುತು ಬಳಸುವಂತಿಲ್ಲ. ಹಿಜಾಬ್ ಶಲ್ಯ ಧರಿಸಿ ಶಾಲಾ ಕಾಲೇಜುಗಳಿಗೆ ಬರುವಂತಿಲ್ಲ. ಶಾಲಾ ಕಾಲೇಜುಗಳು ಆದಷ್ಟು ಬೇಗ ಪ್ರಾರಂಭ ಆಗಲಿ ಎಂದು ತ್ರಿಸದಸ್ಯ …

ರಾಜ್ಯಾದ್ಯಂತ ಶಾಲೆ ಪ್ರಾರಂಭದ ಬಗ್ಗೆ ಸಿಎಂ ಬಸವರಾ ಬೊಮ್ಮಾಯಿ ಮಹತ್ವದ ಮಾಹಿತಿ | ಮೊದಲನೇ ಹಂತದಲ್ಲಿ ಸೋಮವಾರದಿಂದ 8-10 ನೇ ತರಗತಿಯವರಿಗೆ ಶಾಲೆ ಆರಂಭ| ಎರಡನೇ ಹಂತದಲ್ಲಿ ಪಿಯುಸಿ ಮತ್ತು ಡಿಗ್ರಿ ಕಾಲೇಜು ಪ್ರಾರಂಭ Read More »

ಕೃಷಿಕರೇ ಕೇಂದ್ರದ ಈ ಯೋಜನೆಗಳಡಿ ಗೊಬ್ಬರ, ಬೀಜ ಮತ್ತು ಟ್ರ್ಯಾಕ್ಟರ್‌ಗಳನ್ನು ಅರ್ಧ ಬೆಲೆಗೆ ಖರೀದಿಸಿ!! | ಇಲ್ಲಿದೆ ಈ ಯೋಜನೆಗಳ ಕುರಿತು ಮಾಹಿತಿ

ಕೇಂದ್ರ ಸರ್ಕಾರ ಕೃಷಿಕರಿಗಾಗಿ ಅದೆಷ್ಟೋ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪ್ರಮುಖ ಯೋಜನೆಯೆಂದರೆ ಅದು ಪ್ರಧಾನಮಂತ್ರಿ ಕಿಸಾನ್ ಯೋಜನೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹೊರತಾಗಿ, ಸರ್ಕಾರವು ಇಂತಹ ಅನೇಕ ಯೋಜನೆಗಳನ್ನು ನಡೆಸುತ್ತಿದೆ, ಇದರಲ್ಲಿ ರೈತರಿಗೆ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಈ ಯೋಜನೆಯಡಿ ಸರ್ಕಾರವು ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಲ್ಲಿ, 2000 ರೂ.ಗಳ 3 ಕಂತುಗಳು …

ಕೃಷಿಕರೇ ಕೇಂದ್ರದ ಈ ಯೋಜನೆಗಳಡಿ ಗೊಬ್ಬರ, ಬೀಜ ಮತ್ತು ಟ್ರ್ಯಾಕ್ಟರ್‌ಗಳನ್ನು ಅರ್ಧ ಬೆಲೆಗೆ ಖರೀದಿಸಿ!! | ಇಲ್ಲಿದೆ ಈ ಯೋಜನೆಗಳ ಕುರಿತು ಮಾಹಿತಿ Read More »

ಹಿಜಾಬ್ ವಿವಾದ ಪ್ರಕರಣ : ವಿಚಾರಣೆ ಮುಂದೂಡಿದ ತ್ರಿಸದಸ್ಯ ಪೀಠ| ಸೋಮವಾರ ಮುಂದಿನ ವಿಚಾರಣೆ ನಡೆಸುತ್ತೇವೆ – ಸಿಜೆ

ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ‌ ಕುಂದಾಪುರದ ಭಂಡಾರ್ಕರ್ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ಹಿಜಾಬ್ ಧರಿಸಿದವರ ಪ್ರವೇಶ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಹಾಗೂ ಸಮವಸ್ತ್ರ ಸಂಹಿತೆ ಜಾರಿಗೊಳಿಸಿ ಫೆ.5 ರಂದು ಸರಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಹಲವು ತಕರಾರು ಅರ್ಜಿ‌ಗಳು ಸಲ್ಲಿಕೆಯಾಗಿದೆ. ಇದರ ಮುಂದುವರಿದ ವಿಚಾರಣೆಯನ್ನು ನ್ಯಾ.ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ, ವಿಸ್ತ್ರತ ಪೀಠದಲ್ಲಿ ವಿಚಾರಣೆ ನಡೆಸುವ ಅಗತ್ಯವಿದೆ ಎಂಬುದನ್ನು ಹೇಳಿ ನಿನ್ನೆ ವಿಸ್ತ್ರತ ಪೀಠಕ್ಕೆ ವರ್ಗಾಯಿಸಲಾಯಿತು. ಮುಖ್ಯ …

ಹಿಜಾಬ್ ವಿವಾದ ಪ್ರಕರಣ : ವಿಚಾರಣೆ ಮುಂದೂಡಿದ ತ್ರಿಸದಸ್ಯ ಪೀಠ| ಸೋಮವಾರ ಮುಂದಿನ ವಿಚಾರಣೆ ನಡೆಸುತ್ತೇವೆ – ಸಿಜೆ Read More »

21ನೇ ಶತಮಾನದಲ್ಲೂ ಮೂಢನಂಬಿಕೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ನೈಜ ಉದಾಹರಣೆ ಈ ಘಟನೆ | ಗರ್ಭಿಣಿ ಮಹಿಳೆಯ ತಲೆಗೆ ಮೊಳೆ ಹೊಡೆದ ಧಾರ್ಮಿಕ ಮುಖಂಡ|ಇದರ ಹಿಂದಿರುವ ನಂಬಿಕೆ ಏನು ಗೊತ್ತೇ?

ಕೆಲವೊಂದು ಮೂಢನಂಬಿಕೆಗಳು ಇಂದಿಗೂ ಚಾಲ್ತಿಯಲ್ಲಿದೆ. ಕೆಲವೊಂದಿಷ್ಟು ಮಂದಿ ಅದೆಲ್ಲ ಹಿಂದಿನ ನಂಬಿಕೆಯೆಂದರೆ ಇನ್ನೂ ಕೆಲವರು ಪುರಾತನದ ಆರಾಧನೆಗಳನ್ನು ಇಂದಿಗೂ ನಂಬುತ್ತಾರೆ. ಹೌದು. ಇಲ್ಲೊಂದು ಕಡೆ ಮೂಢನಂಬಿಕೆಗಳ ಮೊರೆ ಹೋದ ಮಹಿಳೆಗೆ ಆದ ಪರಿಸ್ಥಿತಿ ಎಂತದ್ದು ಗೊತ್ತೇ? ಅಷ್ಟಕ್ಕೂ ಯಾವ ವಿಷಯದ ಮೇರೆಗೆ ಈ ರೀತಿ ಮಾಡಿದ್ದಾರೆ ಎಂದು ತಿಳಿದರೆ ಗಾಬರಿಯಾಗೋದು ಖಚಿತ. ಇಲ್ಲೊಂದು ಕಡೆ ಗಂಡು ಮಗುವಾಗುತ್ತದೆ ಎಂಬ ಮೂಢನಂಬಿಕೆಯಿಂದ ಪಾಕಿಸ್ತಾನದ ಗರ್ಭಿಣಿಯೊಬ್ಬರು ತಲೆಗೆ ಮೊಳೆ ಹೊಡೆದುಕೊಂಡಿರುವ ಪ್ರಸಂಗ ನಡೆದಿದೆ. ದಕ್ಷಿಣ ಏಷ್ಯಾದಲ್ಲಿ ಹೆಣ್ಣುಮಕ್ಕಳಿಗಿಂತ ಗಂಡು, ಪೋಷಕರಿಗೆ …

21ನೇ ಶತಮಾನದಲ್ಲೂ ಮೂಢನಂಬಿಕೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ನೈಜ ಉದಾಹರಣೆ ಈ ಘಟನೆ | ಗರ್ಭಿಣಿ ಮಹಿಳೆಯ ತಲೆಗೆ ಮೊಳೆ ಹೊಡೆದ ಧಾರ್ಮಿಕ ಮುಖಂಡ|ಇದರ ಹಿಂದಿರುವ ನಂಬಿಕೆ ಏನು ಗೊತ್ತೇ? Read More »

ಬ್ಯಾಂಕ್ ಗಳಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ|ದೇಶದ 12 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ವರ್ಷವೇ ನಡೆಯಲಿದೆ ನೇಮಕಾತಿ

ಬೆಂಗಳೂರು :ಬ್ಯಾಂಕ್ ಗಳಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ದೇಶದ 12 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ವರ್ಷವೇ ನೇಮಕಾತಿ ನಡೆಯಲಿದೆ. ಬ್ಯಾಂಕುಗಳಲ್ಲಿ ಖಾಲಿ ಇರುವ 41,177 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS) ನಾನಾ ನೇಮಕಾತಿ ಪರೀಕ್ಷೆಗಳ ಸಂಭವನೀಯ ವೇಳಾಪಟ್ಟಿ ಪ್ರಕಟಿಸಿದೆ.ಐಬಿಪಿಎಸ್ 12 ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ 11 ಬ್ಯಾಂಕ್ ಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಐಬಿಪಿಎಸ್ ದೇಶದ ವಿವಿಧ ಬ್ಯಾಂಕುಗಳಲ್ಲಿನ ಪ್ರೊಬೆಷನರಿ ಆಫೀಸರ್\ಮ್ಯಾನೇಜ್ ಮೆಂಟ್ …

ಬ್ಯಾಂಕ್ ಗಳಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ|ದೇಶದ 12 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ವರ್ಷವೇ ನಡೆಯಲಿದೆ ನೇಮಕಾತಿ Read More »

ಹಿಜಾಬ್ ನಮ್ಮ ಕುಟುಂಬದ ವಿವಾದ, ಇದರಲ್ಲಿ ಪಾಕಿಸ್ತಾನ ತಲೆಹಾಕಬಾರದು ಎಂದು ಗುಡುಗಿದ ಕಾಂಗ್ರೆಸ್ ಮಹಿಳಾ ನಾಯಕಿ ಫಾತಿಮಾ ಹುಸೇನ್ !!

ನಮ್ಮ ರಾಜ್ಯದಲ್ಲಿ ನಡೆದಿರುವ ಹಿಜಾಬ್, ಕೇಸರಿ ಶಾಲು ವಿವಾದದಲ್ಲಿ ಪಾಕಿಸ್ತಾನ ತಲೆ ಹಾಕಬಾರದು. ಇದು ನಮ್ಮ ಕುಟುಂಬದ ಮಧ್ಯೆ ನಡೆಯುತ್ತಿರುವ ಸಮಸ್ಯೆ ಇದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ರಾಯಚೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ನಾಯಕಿ ಫಾತಿಮಾ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಜಾಬ್‍ಗೆ ಪಾಕಿಸ್ತಾನದಿಂದ ಬೆಂಬಲ ವಿಚಾರ ಹಿನ್ನೆಲೆ ನಮ್ಮ ದೇಶದ ಆಂತರಿಕ ವಿಚಾರದ ಬಗ್ಗೆ ಮಾತನಾಡಲು ಪಾಕಿಸ್ತಾನಕ್ಕೆ ಏನು ಹಕ್ಕಿದೆ. ಇದನ್ನು ನಾವೇ ಸರಿಪಡಿಸಿಕೊಳ್ಳುತ್ತೇವೆ. ನಿಮ್ಮ ದೇಶದಲ್ಲಿ ಭಯೋತ್ಪಾದನೆಯಂತಹ ವಿಚಾರಗಳಿವೆ. ಆ ಬಗ್ಗೆ ಮೊದಲು ಗಮನಹರಿಸಿ …

ಹಿಜಾಬ್ ನಮ್ಮ ಕುಟುಂಬದ ವಿವಾದ, ಇದರಲ್ಲಿ ಪಾಕಿಸ್ತಾನ ತಲೆಹಾಕಬಾರದು ಎಂದು ಗುಡುಗಿದ ಕಾಂಗ್ರೆಸ್ ಮಹಿಳಾ ನಾಯಕಿ ಫಾತಿಮಾ ಹುಸೇನ್ !! Read More »

ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಹಿಜಾಬ್ ವಿವಾದ !! | ವಕೀಲ ಕಪಿಲ್ ಸಿಬಲ್ ಅವರ ಮನವಿಗೆ ಹೈಕೋರ್ಟ್ ತೀರ್ಪು ಬರುವವರೆಗೂ ಕಾದು ನೋಡೋಣ ಎಂದ ಸುಪ್ರೀಂಕೋರ್ಟ್

ಕರ್ನಾಟಕದಲ್ಲಿ ತಲೆದೋರಿರುವ ಹಿಜಾಬ್‌-ಕೇಸರಿ ಶಾಲು ವಿವಾದ ಈಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಿಜಾಬ್‌ ವಿವಾದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಬೇಕು ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಮನವಿ ಮಾಡಿದ್ದಾರೆ. ಈ ಕುರಿತು ಮನವಿ ಸಲ್ಲಿಸಿರುವ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕು. ಇನ್ನೆರಡು ತಿಂಗಳಲ್ಲಿ ಪರೀಕ್ಷೆ ಇದೆ. ಆದರೆ ವಿವಾದ ಕಾಡ್ಗಿಚ್ಚಿನಂತೆ ಎಲ್ಲ ಜಿಲ್ಲೆಗಳಿಗೆ ಹಬ್ಬುತ್ತಿದೆ. ಇದು ಒಂಭತ್ತು ನ್ಯಾಯದೀಶರ ಸಾಂವಿಧಾನಿಕ ಪೀಠದಲ್ಲಿ …

ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಹಿಜಾಬ್ ವಿವಾದ !! | ವಕೀಲ ಕಪಿಲ್ ಸಿಬಲ್ ಅವರ ಮನವಿಗೆ ಹೈಕೋರ್ಟ್ ತೀರ್ಪು ಬರುವವರೆಗೂ ಕಾದು ನೋಡೋಣ ಎಂದ ಸುಪ್ರೀಂಕೋರ್ಟ್ Read More »

ದೇವಸ್ಥಾನಕ್ಕೆ ಹೆಣ್ಣು ಮಕ್ಕಳು ಚಡ್ಡಿಹಾಕಿಕೊಂಡು ಹೋಗುತ್ತಾರೆ, ಅವರನ್ನು ತಡೆಯಿರಿ ಎಂದ ನಗರಸಭೆ ಸದಸ್ಯ!!!

ರಾಜ್ಯದಲ್ಲಿ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಪ್ರಕರಣಗಳು ಈಗ ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ತೀರ್ಮಾನ ಇನ್ನಷ್ಟೇ ಬರಬೇಕಿದೆ. ಇಡೀ ರಾಜ್ಯವು ಕೋರ್ಟ್ ತೀರ್ಮಾನಕ್ಕೆ ಕಾಯುತ್ತಿದೆ. ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಈ ಪ್ರತಿಭಟನೆ ತೀವ್ರಗೊಂಡ ಕಾರಣ ಸರಕಾರ ಶಾಲಾ ಕಾಲೇಜುಗಳಿಗೆ ರಜೆ ಕೂಡಾ ಘೋಷಿಸಿದೆ. ಕಲಬುರಗಿಯಲ್ಲಿ ಮಂಗಳವಾರ ಹಿಜಾಬ್ ಪರವಾಗಿ ಪ್ರತಿಭಟನೆ ನಡೆದಿದ್ದು ಈ ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಡಾ.ಅಹ್ಮದ್ ಪಟೇಲ್ ಅವರು ದೇವಸ್ಥಾನಕ್ಕೆ ಹೆಣ್ಣು ಮಕ್ಕಳು ಚಡ್ಡಿ ಹಾಕಿಕೊಂಡು ಹೋಗ್ತಾರೆ. ಅವರನ್ನು …

ದೇವಸ್ಥಾನಕ್ಕೆ ಹೆಣ್ಣು ಮಕ್ಕಳು ಚಡ್ಡಿಹಾಕಿಕೊಂಡು ಹೋಗುತ್ತಾರೆ, ಅವರನ್ನು ತಡೆಯಿರಿ ಎಂದ ನಗರಸಭೆ ಸದಸ್ಯ!!! Read More »

error: Content is protected !!
Scroll to Top