ಹಿಜಾಬ್ ವಿವಾದ ಪ್ರಕರಣ : ವಿಚಾರಣೆ ಮುಂದೂಡಿದ ತ್ರಿಸದಸ್ಯ ಪೀಠ| ಸೋಮವಾರ ಮುಂದಿನ ವಿಚಾರಣೆ ನಡೆಸುತ್ತೇವೆ – ಸಿಜೆ

ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ‌ ಕುಂದಾಪುರದ ಭಂಡಾರ್ಕರ್ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ಹಿಜಾಬ್ ಧರಿಸಿದವರ ಪ್ರವೇಶ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಹಾಗೂ ಸಮವಸ್ತ್ರ ಸಂಹಿತೆ ಜಾರಿಗೊಳಿಸಿ ಫೆ.5 ರಂದು ಸರಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಹಲವು ತಕರಾರು ಅರ್ಜಿ‌ಗಳು ಸಲ್ಲಿಕೆಯಾಗಿದೆ.

ಇದರ ಮುಂದುವರಿದ ವಿಚಾರಣೆಯನ್ನು ನ್ಯಾ.ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ, ವಿಸ್ತ್ರತ ಪೀಠದಲ್ಲಿ ವಿಚಾರಣೆ ನಡೆಸುವ ಅಗತ್ಯವಿದೆ ಎಂಬುದನ್ನು ಹೇಳಿ ನಿನ್ನೆ ವಿಸ್ತ್ರತ ಪೀಠಕ್ಕೆ ವರ್ಗಾಯಿಸಲಾಯಿತು.

ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಹಾಗೂ ಖಾಜಿ ಜೈಬುನ್ನೀಸಾ ಮೊಹಿದ್ದೀನ್ ಅವರನ್ನೊಳಗೊಂಡ ಈ ಪೂರ್ಣಪೀಠ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಗುರುವಾರ ( ಇಂದು) ಮಧ್ಯಾಹ್ನ 2.30 ಕ್ಕೆ‌ ವಿಚಾರಣೆಗೆ ಕೈಗೆತ್ತಿಕೊಂಡಿದೆ.

ವಿಸ್ತ್ರತ ಪೀಠವು ವಾದವನ್ನು ಆಲಿಸಿದ ನಂತರ ಮುಂದಿನ ಆದೇಶದವರೆಗೆ ಧಾರ್ಮಿಕ ಗುರುತು ಬಳಸುವಂತಿಲ್ಲ. ಶಾಲಾ ಕಾಲೇಜುಗಳು ಆದಷ್ಟು ಬೇಗ ಪ್ರಾರಂಭ ಆಗಲಿ. ಅಲ್ಲಿಯವರೆಗೂ ಶಲ್ಯ ಹಿಜಾಬ್ ಧರಿಸುವಂತಿಲ್ಲ ಎಂದು ಸಿಜೆ ಹೇಳಿದ್ದಾರೆ. ಸೋಮವಾರ ಮಧ್ಯಾಹ್ನ 2.30ಕ್ಕೆ ವಾದ ಮುಂದೂಡಿದ ತ್ರಿಸದಸ್ಯ ಪೀಠ.

ಅರ್ಜಿದಾರರ ಪರವಾಗಿ ಮೂವರು ವಕೀಲರು ಇಂದು ವಾದ ಮಂಡನೆ ಮಾಡಲಿದ್ದಾರೆ. ದೇವದತ್ತ್ ಕಾಮತ್, ಮೊಹಮ್ಮದ್ ತಾಹಿರ್, ಸಂಜಯ್ ಹೆಗಡೆ, ಸರಕಾರದ ಪರವಾಗಿ ಎಜಿ ಪ್ರಭುಲಿಂಗ ನಾವದಗಿ,ಶಾಲಾ ಅಭಿವೃದ್ಧಿ ಸಮಿತಿ ಪರ ಸಜ್ಜನ್ ಪೂವಯ್ಯ ವಾದ ಮಂಡನೆ ಮಾಡಿದ್ದಾರೆ.

ಹೈಕೋರ್ಟ್ ಹಾಲ್ ನಂಬರ್ 1 ರಲ್ಲಿ ವಾದ ಮಂಡನೆ ಶುರು ಆಗೋ ಮೊದಲೇ ಕಿಕ್ಕಿರಿದು ವಕೀಲರು ನೆರೆದಿದ್ದರು.

ಅರ್ಜಿದಾರರ ಪರವಾಗಿ‌‌ ವಕೀಲ ಸಂಜಯ್ ಹೆಗಡೆ ಮೊದಲು ವಾದ ಮಂಡಿಸಲು ಅವಕಾಶ ಕೇಳುತ್ತಾರೆ.

ಪ್ರಕರಣದ ಹಿನ್ನೆಲೆ ತಿಳಿಸಿ ವಾದ ಮಂಡನೆ ಮಾಡಲು ಸಿಜೆ ಸೂಚನೆ ನೀಡುತ್ತಾರೆ.

ತ್ರಿ ಸದಸ್ಯ ಪೀಠಕ್ಕೆ ಪ್ರಕರಣದ ಸಂಪೂರ್ಣ ವಿವರಣೆ ನೀಡುತ್ತಿರುವ ವಕೀಲರು.

ಅನಂತರ, ಹಿಜಾಬ್ ಧರಿಸುವುದು ಮುಸ್ಲಿಂ ಮಹಿಳೆಯರ ಹಕ್ಕು. ಸಂವಿಧಾನದ ಪ್ರಶ್ನೆಗಳನ್ನು ಹೈಕೋರ್ಟ್ ನಿರ್ಧರಿಸಬೇಕಿದೆ. ಸಮವಸ್ತ್ರ ಧರಿಸುವ ಬಗ್ಗೆ ಶಿಕ್ಷಣ ಕಾಯ್ದೆಯಲ್ಲಿ ನಿಯಮ ವಿಲ್ಲ. ಸ್ಥಳೀಯ ಶಾಸಕರು ಕೂಡಾ ಈ ವಿವಾದ ಹೆಚ್ಚಲು ಕಾರಣ. ಹೃದಯ ವೈಶ್ಯಲತೆ ಇಲ್ಲದೆ ದೇಶದ ಬೆಳವಣಿಗೆ ಸಾಧ್ಯವಿಲ್ಲ. ಸಮವಸ್ತ್ರ ಮೊದಲು ಪ್ರಾರಂಭವಾದದ್ದು ತಮಿಳುನಾಡಿನಲ್ಲಿ. 1995 ರಲ್ಲಿ ಈ ನಿಯಮ ಕರ್ನಾಟಕದಲ್ಲೂ ಮಾಡಲಾಯಿತು. ಸಮವಸ್ತ್ರ 5 ವರ್ಷಗಳಿಗೊಮ್ಮೆ‌ ಬದಲಾಗಬೇಕು. ಇಚ್ಛೆ ಬಂದ ಕಡೆ ಸಮವಸ್ತ್ರ ಹೊಲಿಸಲು ಅವಕಾಶವಿದೆ. ಪಿಯು ಕಾಲೇಜುಗಳಿಗೆ ಸಮವಸ್ತ್ರ ನಿಯಮ ಇಲ್ಲ. ಸಮವಸ್ತ್ರ ಸಂಬಂಧ ಗೊತ್ತುವಳಿ ಅಂಗೀಕರಿಸಲಾಗಿದೆ. ಸಮವಸ್ತ್ರ ಧರಿಸದಿದ್ದರೆ ದಂಡಕ್ಕೆ ಅವಕಾಶವಿಲ್ಲ. ಧರ್ಮ ವಸ್ತ್ರ ಇದ್ರೂ ಎಲ್ಲಾ ವಿದ್ಯಾರ್ಥಿಗಳು ನಮ್ಮವರು‌. ಹಿಜಾಬ್ ಗೆ ಯಾರೂ ಆಕ್ಷೇಪಣೆ ಮಾಡಬಾರದು. ಶಾಂತಿ ನೆಲೆಸಬೇಕೆಂಬುದು ನನ್ನ ಬಯಕೆ. ಮಹಿಳೆಯರ ಗುರುತು, ಗೌರವಕ್ಕೆ ಧಕ್ಕೆ ಬರಬಾರದು . ಮುಖ್ಯ ನ್ಯಾಯಮೂರ್ತಿಗಳು ಸರಕಾರಕ್ಕೆ ಸಲಹೆ ನೀಡಬೇಕು. ನಮಗೆ ಯಾವುದೇ ಪ್ರತ್ಯೇಕತೆ ಬೇಡ. ಎಂದು ವಾದ ಮಂಡಿಸುತ್ತಾರೆ.

ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಅವರು, ಸಂಜಯ್ ಹೆಗ್ಡೆ ಅರ್ಜಿಯಲ್ಲಿ ಸರಕಾರಿ ಆದೇಶ ಪ್ರಶ್ನಿಸಿಲ್ಲ. ನಾವು ನಮ್ಮ ಅರ್ಜಿಯಲ್ಲಿ ಸರಕಾರಿ ಆದೇಶ ಪ್ರಶ್ನಿಸಿದ್ದೇವೆ. ಮಧ್ಯಂತರ ಆದೇಶಕ್ಕೆ ನಮ್ಮ ಮನವಿ. ಇದು ಸಮವಸ್ತ್ರದ ಪ್ರಶ್ನೆಯೇ ಅಲ್ಲ. ಸರಕಾರ ಹಿಜಾಬ್ ಧರಿಸಬಾರದು ಎಂದಿದೆ. ವಿದ್ಯಾರ್ಥಿಗಳನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಒತ್ತೆಯಾಳನ್ನಾಗಿ ಮಾಡುತ್ತಿದೆ. ಸಂಜಯ್ ಹೆಗ್ಡೆ ವಾದವನ್ನು ನಾನು ಅನುಮೋದಿಸುತ್ತೇನೆ. ಏನಾದರೂ ಪರಿಹಾರ ಕಂಡುಕೊಳ್ಳಬೇಕು. 10 ರಿಂದ 15 ನಿಮಿಷ ಸಮಯ ಕೊಡಿ ಸರಕಾರದ ಆದೇಶ ಕಾನೂನು ಬಾಹಿರ ಎಂದು ನಿರೂಪಿಸುತ್ತೇನೆ . ಸಮವಸ್ತ್ರ ಬಣ್ಣದ ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಿ.ಎಂದು ವಾದ ಮಂಡನೆ ಮಾಡುತ್ತಾರೆ.

ಸಜನ್ ಪೂವಯ್ಯ ಅವರು ವಾದ ಮಂಡಿಸುತ್ತಾ, ಸಂಜಯ್ ಹೆಗ್ಡೆ ಸಲ್ಲಿಸಿರುವ ದಾಖಲೆ ನಮಗೂ ಒದಗಿಸಬೇಕು. ಇ ಮೇಲ್ ಮೂಲಕ ದಾಖಲೆ ಕಳುಹಿಸಲು ಮನವಿ ಮಾಡುತ್ತಾರೆ.

ಸರಕಾರದ ಪರ ವಕೀಲ ಎಜಿ ಪ್ರಭುಲಿಂಗ ನಾವದಗಿ ಅಂತಿಮ ತೀರ್ಪು ಕೊಡಲು ಮನವಿ ಮಾಡುತ್ತಾರೆ. ಶಾಲಾ ಕಾಲೇಜುಗಳಲ್ಲಿ ಗಲಭೆ ವಾತಾವರಣ ಪ್ರಾರಂಭವಾಗಿದೆ. ನಾವು ಶಾಲಾ ಕಾಲೇಜುಗಳನ್ನು ಆರಂಭಿಸೋಕೆ ಸಿದ್ಧರಿದ್ದೇವೆ. ಶಾಲಾ ಮಂಡಳಿಯ ವಸ್ತ್ರಸಂಹಿತೆ ರೂಪಿಸಿದ್ದಾರೋ ಅದಕ್ಕೆ ವಿದ್ಯಾರ್ಥಿಗಳು ಬದ್ಧರಾಗಿರಲಿ ಎಂದು ವಾದ ಮಂಡನೆ ಮಾಡುತ್ತಾರೆ.

ಹಿಜಾಬ್ ಧರಿಸುವುದು ಧಾರ್ಮಿಕ ಆಚರಣೆ ಅಲ್ಲವೇ ಎಂಬುದನ್ನು ನಾವು ಪರಿಶೀಲನೆ ಮಾಡುತ್ತೇವೆ ಎಂದಿ ಸಿಜೆ ಹೇಳುತ್ತಾರೆ. ಮಧ್ಯಂತರ ಆದೇಶಕ್ಕೆ ವಾದಿಸುತ್ತಿದ್ದೀರಾ ಸ್ಪಷ್ಟಪಡಿಸಿ ಎಂದೂ ಸಿಜೆ ಕೇಳುತ್ತಾರೆ.
ಹಿಜಾಬ್ ನ ಪ್ರಶ್ನೆ ಮತ್ತೆ ನಿರ್ಧಾರ ಮಾಡಬಹುದು. ಈಗ ಶಾಲೆಗೆ ತೆರಳುವ ಬಗ್ಗೆ ನಿರ್ಧಾರ ಮಾಡಬೇಕು ಎಂಬುದಾಗಿ ಹೇಳುತ್ತಾರೆ

Leave A Reply

Your email address will not be published.