Day: January 7, 2022

ಕೊರೋನಾ ನಿಯಮಾವಳಿ ಹಿನ್ನೆಲೆ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಉರಿ ಬಿಸಿಲಲ್ಲಿ ಭಕ್ತರ ಸರದಿ ಸಾಲು

ಕಡಬ : ದೇವಸ್ಥಾನದ ಒಳಗೆ ದೇವರ ದರ್ಶನಕ್ಕೆ ಒಂದು ಬಾರಿ 50 ಭಕ್ತಾದಿಗಳಿಗೆ ಅವಕಾಶದ ನಿಯಮ ಜಾರಿಗೊಳಿಸಿದೆ. ಆದರೆ ಇದು ಭಕ್ತಾದಿಗಳಿಗೆ ತಿಳಿಯದಾಗಿದ್ದು ಸಾವಿರಾರು ಭಕ್ತರು ಸುಬ್ರಹ್ಮಣ್ಯಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿ ದೇವಸ್ಥಾನದ ಹೊರಾಂಗಣದಲ್ಲಿ ನಿಲ್ಲಲು ಅವಕಾಶವಿಲ್ಲ. ಶುಕ್ರವಾರ ಮಧ್ಯಾಹ್ನ ಭಕ್ತರು ರಾಜಗೋಪುರದ ಎದುರು ರಥಬೀದಿಯಲ್ಲಿ ಬಿಸಿಲಲ್ಲೇ ಸಾಲುಗಟ್ಟಿ ನಿಂತಿರುವುದು ಕಂಡುಬಂತು

ವೀಕೆಂಡ್ ಕರ್ಫ್ಯೂ : ಮದ್ಯದಂಗಡಿ ಓಪನ್ ಇದೆಯಾ? ಇಲ್ಲವೋ | ಅಬಕಾರಿ ಸಚಿವರು ಹೇಳಿದಿಷ್ಟು….

ಕರ್ನಾಟಕದಲ್ಲಿ ಕೊರೋನಾ ವೈರಸ್ ನಿಯಂತ್ರಿಸುವ ಹಿನ್ನೆಲೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಮದ್ಯದಂಗಡಿ ಇರುತ್ತಾ? ಪಾರ್ಸಲ್ ಇರುತ್ತಾ ಎನ್ನುವ ಗೊಂದಲಗಳು ಇದ್ದವು. ಇದಕ್ಕೆ ಇದೀಗ ಸ್ವತಃ ಅಬಕಾರಿ ಸಚಿವ ಕೆ ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ. ಇಂದು(ಶುಕ್ರವಾರ) ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹೆಚ್ಚುತ್ತಿರುವ ಕಾರಣ ಸರ್ಕಾರ ಘೋಷಿಸಿರುವ ವಾರಾಂತ್ಯದ ಲಾಕ್ ಡೌನ್ ಹಿನ್ನೆಲೆ ಇಂದು(ಶುಕ್ರವಾರ) ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಅಬಕಾರಿ ಸಚಿವ …

ವೀಕೆಂಡ್ ಕರ್ಫ್ಯೂ : ಮದ್ಯದಂಗಡಿ ಓಪನ್ ಇದೆಯಾ? ಇಲ್ಲವೋ | ಅಬಕಾರಿ ಸಚಿವರು ಹೇಳಿದಿಷ್ಟು…. Read More »

ಅರಣ್ಯ ಇಲಾಖೆಯ ಸಿಬ್ಬಂದಿಯಿದ್ದ ವಾಹನದ ಮೇಲೆ ಕಾಡಾನೆ ದಾಳಿ | ವಾಹನವನ್ನು ನಜ್ಜುಗುಜ್ಜು ಮಾಡಿದ ಕಾಡಾನೆ

ಅರಣ್ಯ ಇಲಾಖೆಯ ಸಿಬ್ಬಂದಿಯಿದ್ದ ವಾಹನದ ಮೇಲೆಯೇ ಕಾಡಾನೆಯೊಂದು ದಾಳಿ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿ ಶಿವಕುಮಾರಪುರ ಬಳಿ ಇಂದು ಮುಂಜಾನೆ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವ್ಯಾಪ್ತಿಯಲ್ಲಿಂದು ಬೆಳಗ್ಗೆ 6:30ರ ವೇಳೆ ಘಟನೆ ನಡೆದಿದೆ. ಇಂದು ಮುಂಜಾನೆ ಶಿವಕುಮಾರಪುರ ಮಠ ಪ್ರದೇಶದಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಯ ವಾಹನದ ಮೇಲೆಯೇ …

ಅರಣ್ಯ ಇಲಾಖೆಯ ಸಿಬ್ಬಂದಿಯಿದ್ದ ವಾಹನದ ಮೇಲೆ ಕಾಡಾನೆ ದಾಳಿ | ವಾಹನವನ್ನು ನಜ್ಜುಗುಜ್ಜು ಮಾಡಿದ ಕಾಡಾನೆ Read More »

ಗರ್ಭಿಣಿಯೆಂದು ಸುಳ್ಳು ಹೇಳಿ ಮನೆಯವರ ಕೈಗೆ ಹೆರಿಗೆಯ ಬಳಿಕ ಸಿಕ್ಕಿಬಿದ್ದ ಮಹಿಳೆ !!| 9 ತಿಂಗಳುಗಳ ಕಾಲ ಗರ್ಭಿಣಿಯೆಂದು ನಾಟಕ ಮಾಡಿದ್ದು ಯಾಕೆ ಗೊತ್ತಾ??

ಪ್ರತಿಯೊಂದು ಹೆಣ್ಣು ಕೂಡ ತಾಯ್ತನವನ್ನು ಬಯಸುತ್ತಾಳೆ. ತಾನು ಕೂಡ ಒಂದು ಮಗುವಿಗೆ ಜನ್ಮ ನೀಡಬೇಕೆಂಬುದು ಆಕೆಯ ಇಚ್ಛೆಯಾಗಿರುತ್ತದೆ. ಆದರೆ ಇಲ್ಲೊಬ್ಬಳು ಮಹಿಳೆ 9 ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂದು ನಿಂದಿಸುವ ಜನರಿಂದ ತಪ್ಪಿಸಿಕೊಳ್ಳಲು, ಗರ್ಭಿಣಿ ಎಂದು ಸುಳ್ಳು ಹೇಳಿ 9 ತಿಂಗಳು ಕುಟುಂಬಸ್ಥರನ್ನೇ ಮೂರ್ಖರನ್ನಾಗಿ ಮಾಡಿರುವ ವಿಚಿತ್ರ ಘಟನೆ ವರದಿಯಾಗಿದೆ. ಮಹಿಳೆಯೊಬ್ಬರು 9 ವರ್ಷಗಳ ಹಿಂದೆ ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದರು. ಮದುವೆಯಾಗಿ 9 ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಮಕ್ಕಳಿಲ್ಲವಾ ಎಂದು ನೆರೆಹೊರೆಯವರು, …

ಗರ್ಭಿಣಿಯೆಂದು ಸುಳ್ಳು ಹೇಳಿ ಮನೆಯವರ ಕೈಗೆ ಹೆರಿಗೆಯ ಬಳಿಕ ಸಿಕ್ಕಿಬಿದ್ದ ಮಹಿಳೆ !!| 9 ತಿಂಗಳುಗಳ ಕಾಲ ಗರ್ಭಿಣಿಯೆಂದು ನಾಟಕ ಮಾಡಿದ್ದು ಯಾಕೆ ಗೊತ್ತಾ?? Read More »

ಜೈಲಿಗೆ ತೆರಳಿದಲ್ಲದೇ ಅಪಾಯಕಾರಿ ಖೈದಿಗೆ ಲಿಪ್ ಲಾಕ್!! ನ್ಯಾಯಾಧೀಶೆಯಿಂದಲೇ ನಡೆಯಿತು ಮುಜುಗರ ತರಿಸುವಂತಹ ಕೃತ್ಯ

ನ್ಯಾಯಾಧೀಶೆಯೊಬ್ಬರು ಜೈಲಿನಲ್ಲಿದ್ದ ಖೈದಿಯನ್ನು ಭೇಟಿಯಾಗಲು ತೆರಳಿದಲ್ಲದೇ ಆತನಿಗೆ ಲಿಪ್ ಲಾಕ್ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ತುಟಿಯಿಂದ ತುಟಿಗೆ ಚುಂಬನ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅರ್ಜೆಂಟಿನಾದಲ್ಲಿ ಈ ಘಟನೆ ನಡೆದಿದ್ದು,ಅಲ್ಲಿನ ಮಹಿಳಾ ನ್ಯಾಯಾಧೀಶೆ ಕೊಲೆ ಕೃತ್ಯವೆಸಗಿಜೈಲುಸೇರಿದ್ದ ಅಪಾಯಕಾರಿ ಖೈದಿಯನ್ನು ಭೇಟಿ ಮಾಡಲು ಜೈಲಿನೊಳಗೆ ತೆರಳಿದ ಬಳಿಕ ಅಲ್ಲಿ ಆತನನ್ನು ಚುಂಬಿಸಲಾಗಿದೆ. ತಪ್ಪು ಮಾಡಿದ ಆರೋಪಿಗಳಿಗೆ ಸರಿಯಾದ ಶಿಕ್ಷೆ ವಿಧಿಸುವ ನ್ಯಾಯಾಧೀಶರೇ ಇಂತಹ ಕೃತ್ಯ ಎಸಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಮಂಗಳೂರು: ಬದುಕಿರುವಾಗಲೇ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ನಕಲಿ ಪ್ರಮಾಣ ತಯಾರಿಸಿ ಜೀವ ವಿಮಾ ಪಾಲಿಸಿಯ ಹಣ ಪಡೆದು ವಂಚನೆ | ಆರೋಪಿಗೆ ಮೂರುವರೆ ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಮಂಗಳೂರು: ಬದುಕಿರುವಾಗಲೇ,ಪತ್ನಿ ಸಾವನ್ನಪ್ಪಿದ್ದಾಳೆ ಎಂದು ನಕಲಿ ಪ್ರಮಾಣಪತ್ರ ತಯಾರಿಸಿ ಜೀವವಿಮಾ ಪಾಲಿಸಿಯ ಹಣ ಪಡೆದು ವಂಚಿಸಿದ ಪ್ರಕರಣದ ವಿಚಾರಣೆ ಬಳಿಕ ವ್ಯಕ್ತಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ 2ನೇ ಸಿಜೆಎಂ ನ್ಯಾಯಾಲಯವು ತೀರ್ಪು ನೀಡಿದೆ. ಬಂಧಿತ ಆರೋಪಿಯನ್ನು ಶಿವರಾಮ ಶೆಣೈ (55) ಎಂದು ಗುರುತಿಸಲಾಗಿದೆ. ಘಟನೆಯ ವಿವರ : ಆರೋಪಿ ನಗರದ ಕೆಎಸ್. ರಾವ್ ರಸ್ತೆಯ ಪಾಪ್ಯುಲರ್ಬಿಲ್ಡಿಂಗ್‌ನಲ್ಲಿರುವ ಜೀವ ವಿಮಾ ಕಚೇರಿಯಲ್ಲಿ ತನ್ನ ಪತ್ನಿ ಸುಮನಾ ಶೆಣೈ ಹೆಸರಿನಲ್ಲಿ ಇದ್ದ 2 ಎಲ್‌ಐಸಿ ಪಾಲಿಸಿಗಳಿಗೆ ತನ್ನನ್ನು ನಾಮ …

ಮಂಗಳೂರು: ಬದುಕಿರುವಾಗಲೇ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ನಕಲಿ ಪ್ರಮಾಣ ತಯಾರಿಸಿ ಜೀವ ವಿಮಾ ಪಾಲಿಸಿಯ ಹಣ ಪಡೆದು ವಂಚನೆ | ಆರೋಪಿಗೆ ಮೂರುವರೆ ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ Read More »

ಹೋಟೆಲ್ ನಲ್ಲಿ ಊಟ ಮಾಡೋ ಹೆಂಡತಿಯ ಬಯಕೆಯನ್ನು ತೀರಿಸದ ಹಳ್ಳಿ ಸೊಗಡಲ್ಲಿ ಬೆಳೆದ ಗಂಡ |ಬೇಸರದಿಂದ ಇಬ್ಬರು ಮಕ್ಕಳ ಜೊತೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಇಲ್ಲಿ ಊಟದ ವಿಚಾರಕ್ಕೇ ಮೂವರ ಹೆಣ ಬಿದ್ದಿರುವ ಘಟನೆ ದೊಡ್ಡಬಳ್ಳಾಪುರದ ಎಸ್.ಎಂ.ಗೊಲ್ಲಹಳ್ಳಿಯಲ್ಲಿ ನಡೆದುಹೋಗಿದೆ. ದೊಡ್ಡಬಳ್ಳಾಪುರ ಪಟ್ಟಣದಲ್ಲಿ ಬೆಳೆದಿದ್ದ ಮೃತ ಮಹಿಳೆಗೆ ವಾರಕ್ಕೆ ಒಮ್ಮೆ ಹೋಟೆಲ್ ನಲ್ಲಿ ಊಟಕ್ಕೆ ಹೋಗುವ ಆಸೆ ಇತ್ತಂತೆ. ಆದರೆ ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದ ಪತಿ ತನ್ನ ಆಸೆ ಈಡೇರಿಸುತ್ತಿಲ್ಲ ಎಂದು ಜಿಗುಪ್ಸೆಗೊಂಡು 2 ಮಕ್ಕಳ ಜೊತೆ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಆದರೆ ಮಹಿಳೆಗೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ …

ಹೋಟೆಲ್ ನಲ್ಲಿ ಊಟ ಮಾಡೋ ಹೆಂಡತಿಯ ಬಯಕೆಯನ್ನು ತೀರಿಸದ ಹಳ್ಳಿ ಸೊಗಡಲ್ಲಿ ಬೆಳೆದ ಗಂಡ |ಬೇಸರದಿಂದ ಇಬ್ಬರು ಮಕ್ಕಳ ಜೊತೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ Read More »

ವಿಟ್ಲ : ಕೊರಗಜ್ಜನ ವೇಷ ಧರಿಸಿ ಬಂದ ಮದುಮಗ : ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡ ಖಂಡನೆ

ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದಲ್ಲಿ ತುಳುನಾಡಿನ ದೈವ ಕೊರಗಜ್ಜನ ರೀತಿ ಮುಖಕ್ಕೆ ಮಸಿ ಬಳಿದುಕೊಂಡು ಅಡಿಕೆ ಹಾಳೆಯ ಟೊಪ್ಪಿ ಧರಿಸಿ ಮುಸ್ಲಿಂ ಸಮುದಾಯದ ಮದುಮಗನೋರ್ವ ಕುಣಿದಿದ್ದು ಇದು ಹಿಂದುಗಳ ಧಾರ್ಮಿಕ ಭಾವನೆಗೆ ದಕ್ಕೆಯಾಗಿದ್ದು ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡ ಇದನ್ನು ಖಂಡನೆ ಮಾಡುತ್ತಿದೆ ಎಂದು ತಿಳಿಸಿದೆ. ಈ ಕೃತ್ಯ ಎಸಗಿದವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಕೋವಿಡ್ ಸೋಂಕು ತಡೆಯಲು ಕಠಿಣ ಕ್ರಮಗಳು ಜಾರಿ ಆದರೆ ಸಂಪೂರ್ಣ ಲಾಕ್‌ಡೌನ್ ಇಲ್ಲ -ಸಚಿವ ಡಾ.ಕೆ. ಸುಧಾಕರ್

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಸೋಂಕನ್ನು ತಡೆಯಲು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದೆ. ಜನ ಭಯಪಡುವ ಅಗತ್ಯವಿಲ್ಲ ,ರಾಜ್ಯದಲ್ಲಿ ಇನ್ನು ಮುಂದೆ ಸಂಪೂರ್ಣ ಲಾಕ್ ಡೌನ್ ವಿಷಯವೇ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಸಂಪೂರ್ಣ ಲಾಕ್ ಡೌನ್ ಕಳೆದುಹೋದ ನೀತಿ, ಆರಂಭದಲ್ಲಿ ಸೋಂಕಿನ ಚಿಕಿತ್ಸಾ ವಿಧಾನದ ಬಗ್ಗೆ ಅರಿವಿಲ್ಲದ ಕಾರಣ ಸಂಪೂರ್ಣ ಲಾಕ್ಡೌನ್ ವಿಧಿಸಲಾಗಿತ್ತು. ಲಾಕ್ ಡೌನ್ ನಿಂದ ಸೋಂಕನ್ನು ತಡೆಗಟ್ಟಲು ಸಾಧ್ಯವಿಲ್ಲ. ಲಸಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳಿಂದ ಮಾತ್ರ …

ಕೋವಿಡ್ ಸೋಂಕು ತಡೆಯಲು ಕಠಿಣ ಕ್ರಮಗಳು ಜಾರಿ ಆದರೆ ಸಂಪೂರ್ಣ ಲಾಕ್‌ಡೌನ್ ಇಲ್ಲ -ಸಚಿವ ಡಾ.ಕೆ. ಸುಧಾಕರ್ Read More »

ವಿಟ್ಲ : ಕೊರಗಜ್ಜನ ವೇಷ ಧರಿಸಿ ಬಂದ ಮದುಮಗ | ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ,ಕ್ರಮಕ್ಕೆ ಆಗ್ರಹ

ಬಂಟ್ವಾಳ : ಮದುವೆ ಸಮಾರಂಭದಲ್ಲಿ ಮದುಮಗನಿಗೆ ಕೊರಗ ವೇಷ ಹಾಕಿ ಕುಣಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ದಿನ ಈ ಘಟನೆ ನಡೆದಿದ್ದು, ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನ ಜೊತೆ ಅಝೀಝ್ ಪುತ್ರಿಯ ವಿವಾಹ ಮಧ್ಯಾಹ್ನ ನಡೆದಿದ್ದು, ಸಾವಿರಾರು ಜನರಿಗೆ ಔತಣ ಕೂಟವನ್ನು ಏರ್ಪಡಿಸಿದ್ದರು. ಅದೇ ದಿನ ರಾತ್ರಿ ಮುಸ್ಲಿಂ ಸಂಪ್ರದಾಯದಂತೆ ವರ …

ವಿಟ್ಲ : ಕೊರಗಜ್ಜನ ವೇಷ ಧರಿಸಿ ಬಂದ ಮದುಮಗ | ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ,ಕ್ರಮಕ್ಕೆ ಆಗ್ರಹ Read More »

error: Content is protected !!
Scroll to Top