ಗರ್ಭಿಣಿಯೆಂದು ಸುಳ್ಳು ಹೇಳಿ ಮನೆಯವರ ಕೈಗೆ ಹೆರಿಗೆಯ ಬಳಿಕ ಸಿಕ್ಕಿಬಿದ್ದ ಮಹಿಳೆ !!| 9 ತಿಂಗಳುಗಳ ಕಾಲ ಗರ್ಭಿಣಿಯೆಂದು ನಾಟಕ ಮಾಡಿದ್ದು ಯಾಕೆ ಗೊತ್ತಾ??

ಪ್ರತಿಯೊಂದು ಹೆಣ್ಣು ಕೂಡ ತಾಯ್ತನವನ್ನು ಬಯಸುತ್ತಾಳೆ. ತಾನು ಕೂಡ ಒಂದು ಮಗುವಿಗೆ ಜನ್ಮ ನೀಡಬೇಕೆಂಬುದು ಆಕೆಯ ಇಚ್ಛೆಯಾಗಿರುತ್ತದೆ. ಆದರೆ ಇಲ್ಲೊಬ್ಬಳು ಮಹಿಳೆ 9 ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂದು ನಿಂದಿಸುವ ಜನರಿಂದ ತಪ್ಪಿಸಿಕೊಳ್ಳಲು, ಗರ್ಭಿಣಿ ಎಂದು ಸುಳ್ಳು ಹೇಳಿ 9 ತಿಂಗಳು ಕುಟುಂಬಸ್ಥರನ್ನೇ ಮೂರ್ಖರನ್ನಾಗಿ ಮಾಡಿರುವ ವಿಚಿತ್ರ ಘಟನೆ ವರದಿಯಾಗಿದೆ.

Ad Widget

ಮಹಿಳೆಯೊಬ್ಬರು 9 ವರ್ಷಗಳ ಹಿಂದೆ ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದರು. ಮದುವೆಯಾಗಿ 9 ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಮಕ್ಕಳಿಲ್ಲವಾ ಎಂದು ನೆರೆಹೊರೆಯವರು, ಕುಟುಂಬಸ್ಥರು, ಸ್ನೇಹಿತರು ಕೇಳುತ್ತಿದ್ದರು. ಈ ವಿಚಾರವಾಗಿ ಮಾನಸಿಕವಾಗಿ ನೊಂದಿದ್ದ ಮಹಿಳೆ ಖತರ್ನಾಕ್ ಉಪಾಯವನ್ನು ಮಾಡಿ ಸಿಕ್ಕಿ ಬಿದ್ದಿದ್ದಾಳೆ.

Ad Widget . . Ad Widget . Ad Widget . Ad Widget

Ad Widget

ಗರ್ಭಧರಿಸಿದ್ದೇನೆ ಎಂದು ಅತ್ತೆಗೆ ಸುಳ್ಳು ಹೇಳಿ ತವರು ಮನೆಗೆ ಹೆರಿಗೆಗೆ ಹೋಗಿದ್ದಾಳೆ. ತನ್ನ ತಾಯಿಯೊಂದಿಗೂ 9 ತಿಂಗಳು ಗರ್ಭಿಣಿಯಂತೆಯೇ ನಟಿಸಿದ್ದಾಳೆ. ಪ್ರತಿ ತಿಂಗಳು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದಾಳೆ. ವೈದ್ಯರು ತನ್ನ ಹೆರಿಗೆಯ ದಿನಾಂಕವನ್ನು ಜನವರಿ 5 ಬುಧವಾರದಂದು ನೀಡಿದ್ದಾರೆ ಎಂದು ಎಲ್ಲರಿಗೂ ತಿಳಿಸಿದ್ದಾಳೆ. ಒಂದು ದಿನ ಮಧ್ಯರಾತ್ರಿ ತನಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಕುಟುಂಬದವರಿಗೂ ತಿಳಿಸಿದ್ದಾಳೆ.

Ad Widget
Ad Widget Ad Widget

ಅದಲ್ಲದೆ ಹೆರಿಗೆಯನ್ನೂ ಮಾಡಿಕೊಂಡಂತೆ ನಟನೆ ಕೂಡಾ ಮಾಡಿದ್ದಾಳೆ. ಬಳಿಕ ಮಗು ನೋಡಲು ಬಂದ ಮನೆಯವರಿಗೆ ಕಥೆ ಕಟ್ಟಿದ್ದಾಳೆ. ಹೆರಿಗೆಗೆ ಸಹಾಯ ಮಾಡಲು ಬಂದ ಇಬ್ಬರು ವ್ಯಕ್ತಿಗಳು ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾಳೆ. ಮಹಿಳೆಯ ಈ ಮಾತಿನ್ನು ಅನುಮಾನಿಸಿದ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ವಿಚಾರವಾಗಿ ಪೊಲೀಸರು ಆಕೆಯನ್ನು ವಿಚಾರಿಸಿದಾಗ ನಿಜ ಗೊತ್ತಾಗಿದೆ. ತಾನು ಇಷ್ಟು ದಿನ ಮಾಡಿದ್ದೆಲ್ಲವೂ ನಾಟಕವೆಂದು ಸತ್ಯ ಒಪ್ಪಿಕೊಂಡಿದ್ದಾಳೆ. ಅಂತೂ ಇಂತೂ ತನ್ನ ಕುಟುಂಬಸ್ಥರನ್ನು ಒಂಬತ್ತು ತಿಂಗಳು ಮೂರ್ಖರನ್ನಾಗಿ ಮಾಡಿದ್ದಂತೂ ಸತ್ಯ.

Leave a Reply

error: Content is protected !!
Scroll to Top
%d bloggers like this: