Day: December 23, 2021

ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ,ಕಾಂಗ್ರೆಸ್, ಜೆಡಿಎಸ್ ಆಕ್ರೋಶ : ನಮ್ಮ ತಂಟೆಗೆ ಬಂದರೆ ಚಿಂದಿ ಚಿಂದಿ ಮಾಡ್ತೇವೆ -ಈಶ್ವರಪ್ಪ

ಬೆಳಗಾವಿ: ಭಾರೀ ವಿರೋಧದ ಮಧ್ಯೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2021 ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರಕಿದ್ದು, ವಿಧೇಯಕದ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಗ್ರಾಮೀಣಾಭೀವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ‘ನಾವು ಮತಾಂತರಕ್ಕೆ ಅವಕಾಶ ಮಾಡಿ ಕೊಡುವುದಿಲ್ಲ, ನಮ್ಮ ಸುದ್ದಿಗೆ ಬಂದರೆ ಅವರನ್ನು ಚಿಂದಿ ಚಿಂದಿ ಮಾಡ್ತೇವೆ’ ಎಂದು ಹೇಳಿಕೆ ನೀಡಿದ್ದು, ಕೆಲಕಾಲ ಸದನದಲ್ಲಿ ಗದ್ದಲ ಸೃಷ್ಟಿಯಾಗಿರುವ ಪ್ರಸಂಗ ನಡೆದಿದೆ. ಈ ಕಾನೂನಿನ ಹಿಂದೆ ಆರೆಸ್ಸೆಸ್ ಕೈವಾಡವಿದೆ. ಇದೊಂದು ಅಮಾನವೀಯ, ಸಂವಿಧಾನ ಬಾಹಿರ ಕಾನೂನು …

ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ,ಕಾಂಗ್ರೆಸ್, ಜೆಡಿಎಸ್ ಆಕ್ರೋಶ : ನಮ್ಮ ತಂಟೆಗೆ ಬಂದರೆ ಚಿಂದಿ ಚಿಂದಿ ಮಾಡ್ತೇವೆ -ಈಶ್ವರಪ್ಪ Read More »

ಮಂಗಳೂರು : ಮತ್ತೋರ್ವನಲ್ಲಿ ಓಮಿಕ್ರಾನ್ ಪತ್ತೆ ,ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆ

ಮಂಗಳೂರಿನಲ್ಲಿ ಓಮಿಕ್ರಾನ್ ರೂಪಾಂತಾರಿ ಮತ್ತೋರ್ವ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ . ಡಿಸೆಂಬರ್ 16 ರಂದು ಘಾನಾ ದೇಶದಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಓಮಿಕ್ರಾನ್ ರೂಪಾಂತರಿ ವೈರಸ್ ಇರುವುದು ದೃಢಪಟ್ಟಿದೆ. ಈತ ಹೈ ರಿಸ್ಕ್ ದೇಶದಿಂದ ಬಂದಿದ್ದು ವಿಮಾನ ನಿಲ್ದಾಣದಲ್ಲಿ ಡಿಸೆಂಬರ್ 16 ರಂದು ಬಂದಿದ್ದ ವೇಳೆ ತಪಾಸಣೆ ನಡೆಸಿದಾಗ ಈತನಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೈರಿಸ್ಕ್ ದೇಶದಿಂದ ಬಂದ ಈ ವ್ಯಕ್ತಿಯ ಗಂಟಲು ದ್ರವದ ಮಾದರಿಯನ್ನು ಜಿನೊಮಿಕ್ ಸ್ಟಡಿಗೆ ಕಳುಹಿಸಲಾಗಿತ್ತು. ಇದರ …

ಮಂಗಳೂರು : ಮತ್ತೋರ್ವನಲ್ಲಿ ಓಮಿಕ್ರಾನ್ ಪತ್ತೆ ,ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆ Read More »

ಮಂಗಳೂರು ವಿ.ವಿ.ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಪುತ್ತೂರಿನ ಭವಿತ್ ಕುಮಾರ್ ಗೆ ಚಿನ್ನ,ಬೆಳ್ಳಿ ಪದಕ

ಮಂಗಳೂರು: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಂಗಳೂರು ವಿ.ವಿ.ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಉಜಿರೆ ಎಸ್.ಡಿ.ಎಂ.ಕಾಲೇಜನ್ನು ಪ್ರತಿನಿಧಿಸಿದ್ದ ಪುತ್ತೂರಿನ ಭವಿತ್ ಕುಮಾರ್ ಅವರು ಚಿನ್ನ,ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.ಭವಿತ್ ಕುಮಾರ್ ಅವರು ಪೋಲ್ ವಾಲ್ಟ್‌ ನಲ್ಲಿ ಚಿನ್ನದ ಪದಕ (4.20 ಮೀ.) ,ಹೈ ಜಂಪ್‌ನಲ್ಲಿ ಬೆಳ್ಳಿ ಪದಕ (1.89 ಮೀ.) ಪಡೆದುಕೊಂಡಿದ್ದಾರೆ. ಇವರು ಶಾಂತಿಗೋಡು ಗ್ರಾಮದ ಆನಡ್ಕ ಮರಕ್ಕೂರು ಶ್ರೀಧರ ಪೂಜಾರಿ ,ವನಜಾಕ್ಷಿ ದಂಪತಿಯ ಪುತ್ರ.ಪುತ್ತೂರು ಸಂತ ಫಿಲೋಮಿನ ಕಾಲೇಜಿನ ಹಳೆ ವಿದ್ಯಾರ್ಥಿ.

ನಕಲಿ ಆಭರಣ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರ ಬಂಧನ

ಬಾಗಲಕೋಟೆ: ಚಿನ್ನದ ವ್ಯಾಪಾರಿಗೆ ನಕಲಿ ಆಭರಣಗಳನ್ನು ಮಾರಾಟ ಮಾಡಿ ಹಣ, ಆಭರಣ ಪಡೆದು ವಂಚಿಸುತ್ತಿದ್ದ,ಬೆಂಗಳೂರು ಮೂಲದ ಇಬ್ಬರು ಮಹಿಳೆಯರನ್ನು ಬಂಧಿಸಿರುವ ಘಟನೆ ಜಿಲ್ಲೆಯ ಇಲಕಲ್ಲ ಪಟ್ಟಣದಲ್ಲಿ ನಡೆದಿದೆ. ಬೆಂಗಳೂರಿನ ಕನಕ ನಗರ ನಿವಾಸಿ ರೆಹಾನಾ ಬೇಗಂ ಸೈಯದ್ ಅಪ್ಸರ್ ಹಾಗೂ ವಿಮಾನಪುರ ನಿವಾಸಿ ಮೆಹರಾಜನ್ ಸೈಯದ್ ಅಪ್ಸರ್ ಬಂಧಿತ ಆರೋಪಿಗಳು. ಇಲಕಲ್ಲ ಪಟ್ಟಣದ ಚಿನ್ನದ ವ್ಯಾಪಾರಿಗೆ ನಕಲಿ ಚಿನ್ನದ ಆಭರಣ ಕೊಟ್ಟು 1,86, 000 ಮೌಲ್ಯದ ಆಭರಣ ಹಾಗೂ 13 ಸಾವಿರ ಹಣ ಪಡೆದಿದ್ದರು ಎನ್ನಲಾಗಿದೆ. ನಕಲಿ …

ನಕಲಿ ಆಭರಣ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರ ಬಂಧನ Read More »

ಇಲ್ಲಿ ಅರ್ಧ ಕೆ.ಜಿ ಟೊಮೆಟೊ ಮತ್ತು 1 ಕೆ.ಜಿ ಸಕ್ಕರೆಗೆ ಕೇವಲ ಒಂದೇ ರೂಪಾಯಿ!! | ಅತಿ ದುಬಾರಿ ಬೆಳೆಯತ್ತ ಹೆಜ್ಜೆ ಹಾಕುತ್ತಿರುವ ಟೊಮೆಟೊ ಇಷ್ಟು ಅಗ್ಗದ ಬೆಲೆಗೆ ಎಲ್ಲಿ ಸಿಗುತ್ತೆ ಗೊತ್ತಾ??

ಭಾರತದ ಅತ್ಯಂತ ಜನಪ್ರಿಯ ಇ-ಕಾಮರ್ಸ್ ಸೇವೆಯಲ್ಲಿ ‌ಸೈ ಎನಿಸಿಕೊಂಡಿರುವುದು ಅಮೆಜಾನ್. ಪ್ರತಿದಿನ ಅಮೆಜಾನ್‌ ತನ್ನ ಗ್ರಾಹಕರಿಗಾಗಿ ಏನಾದರೊಂದು ಕೊಡುಗೆಯನ್ನು ನೀಡುತ್ತಿರುತ್ತದೆ. ಮಾತ್ರವಲ್ಲದೆ ಕಡಿಮೆ ಬೆಲೆಗೆ ವಸ್ತುಗಳನ್ನು, ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುತ್ತದೆ. ಹಾಗೆಯೇ ಇದೀಗ ದಿನಸಿ ವಸ್ತುಗಳ ಮೇಲೆ ಅದ್ಭುತವಾದ ರಿಯಾಯಿತಿಯನ್ನು ನೀಡಿದೆ. ನೀವು ಪಡಿತರವನ್ನು ಖರೀದಿಸಲು ಬಯಸುತ್ತಿದ್ದು, ಆಫರ್ ಗಳಿಗಾಗಿ ಕಾಯುತ್ತಿದ್ದರೆ, ಇಂದು ಅದಕ್ಕೆ ಸುವರ್ಣಾವಕಾಶ ಒದಗಿಬಂದಿದೆ ಎನ್ನಬಹುದು. ಅಮೆಜಾನ್ ನಲ್ಲಿ ದಿನಸಿ ವಸ್ತುಗಳ ಮೇಲೆ ಅದ್ಭುತವಾದ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಫ್ರೆಶ್ ಡೀಲ್ಸ್ @ Rs 1 …

ಇಲ್ಲಿ ಅರ್ಧ ಕೆ.ಜಿ ಟೊಮೆಟೊ ಮತ್ತು 1 ಕೆ.ಜಿ ಸಕ್ಕರೆಗೆ ಕೇವಲ ಒಂದೇ ರೂಪಾಯಿ!! | ಅತಿ ದುಬಾರಿ ಬೆಳೆಯತ್ತ ಹೆಜ್ಜೆ ಹಾಕುತ್ತಿರುವ ಟೊಮೆಟೊ ಇಷ್ಟು ಅಗ್ಗದ ಬೆಲೆಗೆ ಎಲ್ಲಿ ಸಿಗುತ್ತೆ ಗೊತ್ತಾ?? Read More »

ಬೆಳ್ತಂಗಡಿ: ವೇಣೂರಿನಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ಬಂಟ್ವಾಳ ಎಎಸ್ಪಿ ದಾಳಿ

ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ಅಡ್ಡೆಗೆ ಬಂಟ್ವಾಳ ಎಎಸ್ಪಿ ದಾಳಿ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಕೊಡಮಣಿ ಎಂಬಲ್ಲಿ ನಡೆದಿದೆ. ಇಂದು ಮಧ್ಯಾಹ್ನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಮಣಿ ಎಂಬಲ್ಲಿ ಫಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದಾಗ ಬಂಟ್ವಾಳ ಎಎಸ್ಪಿ ಶಿವಂಶು ರಾಜಪೂತ್ ಮತ್ತು ತಂಡ ದಾಳಿ ಮಾಡಿದ್ದಾರೆ. ದಾಳಿ ವೇಳೆ ಒಂದು ದೋಣಿ ಮತ್ತು ಒಂದು ಟಿಪ್ಪರ್ ವಾಹನ ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆಗಾಗಿ ವೇಣೂರು ಠಾಣೆಗೆ ಹಸ್ತಾಂತರಿಸಲಾಗಿದೆ.

ಹೆಜ್ಜೇನು ದಾಳಿ : ಅಬಕಾರಿ ಇಲಾಖೆಯ ಸಿಬ್ಬಂದಿ ಮೃತ್ಯು

ಉತ್ತರಕನ್ನಡ : ಅಂಕೋಲ ತಾಲೂಕಿನ ಅಜ್ಜಿಕಟ್ಟಾ ಬಳಿ ಹೆಜ್ಜೇನು ದಾಳಿಗೆ ಸಿಲುಕಿ ತೀವ್ರವಾಗಿ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಲ್ಲಾಪುರ ನಿವಾಸಿ ಅಂಕೋಲಾ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಸನ್ ಖಾನ್ ಕರೀಂ ಖಾನ್ (45) ಮೃತಪಟ್ಟಿದ್ದಾರೆ. ಹಸನ್ ಕರೀಂ ಖಾನ್ ಅವರು ಬುಧವಾರ ಮಧ್ಯಾಹ್ನ ಊಟ ತರಲು ಹೋಗಿದ್ದ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಹೆಜ್ಜೇನು ಕಡಿತ ಮಾಡಿದ್ದರಿಂದ ಅವರನ್ನು ತಾಲೂಕಿನ ಆಸ್ಪತ್ರೆಗೆ ದಾಖಲಿಸಿ ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ …

ಹೆಜ್ಜೇನು ದಾಳಿ : ಅಬಕಾರಿ ಇಲಾಖೆಯ ಸಿಬ್ಬಂದಿ ಮೃತ್ಯು Read More »

ಬೆಂಗಳೂರಿನಲ್ಲಿ ಪಿಎಫ್‌ಐ ರಾಜ್ಯ ಕಾರ್ಯಕಾರಿ ಸಭೆ, ಪ್ರಮುಖ ನಿರ್ಣಯ ಕೈಗೊಂಡ ಸಭೆ

ಬೆಂಗಳೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ಡಿ.20-21ರಂದು ಬೆಂಗಳೂರಿನಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಂವಿಧಾನ ವಿರೋಧಿ ಮತಾಂತರ ನಿಷೇಧ ವಿಧೇಯಕ ರದ್ದುಗೊಳಿಸಿ:ನಾಗರಿಕರು ತಮ್ಮ ಇಚ್ಛೆಯ ಧರ್ಮವನ್ನು ಆಚರಿಸುವ, ಸ್ವೀಕರಿಸುವ ಧಾರ್ಮಿಕ ಸ್ವಾತಂತ್ರ‍್ಯದ ಹಕ್ಕನ್ನು ಮೊಟಕುಗೊಳಿಸುವ ಮತಾಂತರ ನಿಷೇಧ ವಿಧೇಯಕ ಯಾವುದೇ ಕಾರಣಕ್ಕೂ ಸ್ವೀಕಾರ್ಹವಲ್ಲ. ಬಲವಂತದ ಮತಾಂತರಕ್ಕೆ ಸ್ವತಃ ಸಂವಿಧಾನವೂ ಅವಕಾಶ ಕಲ್ಪಿಸಿಲ್ಲ. ಹೀಗಿರುವಾಗ ರಾಜ್ಯ ಸರಕಾರದ ಮತಾಂತರ …

ಬೆಂಗಳೂರಿನಲ್ಲಿ ಪಿಎಫ್‌ಐ ರಾಜ್ಯ ಕಾರ್ಯಕಾರಿ ಸಭೆ, ಪ್ರಮುಖ ನಿರ್ಣಯ ಕೈಗೊಂಡ ಸಭೆ Read More »

ಹಿಂದುತ್ವವನ್ನು ಐಸಿಸ್, ಬೋಕೊ ಹರಾಮ್ ಗೆ ಹೋಲಿಸಿದ ಸಲ್ಮಾನ್ ಖುರ್ಷಿದ್ | ಕೇಸು ದಾಖಲಿಸಲು ಕೋರ್ಟ್ ಸೂಚನೆ

ವಿವಾದಿತ ಲೇಖಕ ,ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ತಮ್ಮ ಕೃತಿ `ಸನ್‌ರೈಸ್ ಓವರ್ ಅಯ್ಯೋಧ್ಯಾ: ನೇಷನ್‌ಹುಡ್ ಇನ್ ಅವರ್ ಟೈಮ್ಸ್’ನಲ್ಲಿ ಹಿಂದುತ್ವವನ್ನು ಉಗ್ರ ಸಂಘಟನೆಗಳಾದ ಐಸಿಸ್ ಹಾಗೂ ಬೊಕೋ ಹರಾಮ್‌ಗೆ ಹೋಲಿಸಿದ್ದಾರೆ. ಸಲ್ಮಾನ್ ಖುರ್ಷಿದ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಲಕ್ಕೋದ ಮ್ಯಾಜಿಸ್ಟ್ರೇಟ್ ಕೋರ್ಟ್ ಉತ್ತರ ಪ್ರದೇಶ ಪೊಲೀಸರಿಗೆ ಸೂಚನೆ ನೀಡಿದೆ. ಎಫ್‌ಐಆರ್ ಪ್ರತಿಯನ್ನು ನ್ಯಾಯಾಲಯಕ್ಕೆ ಮೂರು ದಿನಗಳೊಳಗೆ ಕಳುಹಿಸಬೇಕೆಂದೂ ಸೂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಂಡಸಂಹಿತೆಯಡಿ ಕೇಸ್ ದಾಖಲಿಸಿ ತನಿಖೆ ನಡೆಸಬೇಕೆಂದು ನ್ಯಾಯಾಲಯ …

ಹಿಂದುತ್ವವನ್ನು ಐಸಿಸ್, ಬೋಕೊ ಹರಾಮ್ ಗೆ ಹೋಲಿಸಿದ ಸಲ್ಮಾನ್ ಖುರ್ಷಿದ್ | ಕೇಸು ದಾಖಲಿಸಲು ಕೋರ್ಟ್ ಸೂಚನೆ Read More »

ಐತಿಹಾಸಿಕ ಕೆಂಪುಕೋಟೆ ನನ್ನ ಆಸ್ತಿ, ನನಗೆ ಬಿಟ್ಟುಕೊಡಿ ಇಲ್ಲವೇ ಪರಿಹಾರ ನೀಡಿ ಎಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ !! | ಇಷ್ಟಕ್ಕೂ ಕೋಟೆ ನನ್ನ ಆಸ್ತಿ ಎಂದು ಅರ್ಜಿ ಸಲ್ಲಿಸಿದ ಮಹಿಳೆ ಯಾರು ಗೊತ್ತೇ??

1947ರ ಆಗಸ್ಟ್‌ 15ರಂದು ಸ್ವತಂತ್ರ ಭಾರತದ ಮೊದಲ ರಾಷ್ಟ್ರ ಧ್ವಜಾರೋಹಣ ನಡೆದದ್ದು ಕೆಂಪುಕೋಟೆಯ ಮೇಲೆಯೇ. ಇಂತಹ ಐತಿಹಾಸಿಕ ಕೆಂಪು ಕೋಟೆ ತನ್ನ ವಂಶ ಪಾರಂಪರ್ಯದ ಸೊತ್ತು. ಇದನ್ನು ಭಾರತ ಸರ್ಕಾರವು ಅಕ್ರಮವಾಗಿ ಆಕ್ರಮಿಸಿಕೊಂಡಿದೆ. ಹೀಗಾಗಿ ಅದನ್ನು ತನಗೆ ವಹಿಸಬೇಕು ಎಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ದಾವೆಯನ್ನು ದೆಹಲಿ ಉಚ್ಛ ನ್ಯಾಯಾಲಯ ತಳ್ಳಿ ಹಾಕಿದೆ. ಸುಲ್ತಾನಾ ಬೇಗಂ ಎಂಬವರೇ ಕೆಂಪು ಕೋಟೆ ನಮ್ಮ ಪಾರಂಪರಿಕ ಸೊತ್ತು ಎಂದು ಅರ್ಜಿ ಸಲ್ಲಿಸಿದ ಮಹಿಳೆ. ಸುಲ್ತಾನಾ ಅವರ ಪತಿ ಮಿರ್ಜಾ ಮಹಮ್ಮದ್‌ …

ಐತಿಹಾಸಿಕ ಕೆಂಪುಕೋಟೆ ನನ್ನ ಆಸ್ತಿ, ನನಗೆ ಬಿಟ್ಟುಕೊಡಿ ಇಲ್ಲವೇ ಪರಿಹಾರ ನೀಡಿ ಎಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ !! | ಇಷ್ಟಕ್ಕೂ ಕೋಟೆ ನನ್ನ ಆಸ್ತಿ ಎಂದು ಅರ್ಜಿ ಸಲ್ಲಿಸಿದ ಮಹಿಳೆ ಯಾರು ಗೊತ್ತೇ?? Read More »

error: Content is protected !!
Scroll to Top