ತುಳುನಾಡ ಕಾರ್ಣಿಕ ದೈವ ಕೊರಗಜ್ಜನಿಗೆ ಮತ್ತೊಮ್ಮೆ ಅವಮಾನ !! | ವಾಟ್ಸಾಪ್ ನಲ್ಲಿ ಅವಹೇಳನಕಾರಿ ಪೋಸ್ಟ್ ಶೇರ್ ಮಾಡುವ ಮೂಲಕ ವಿಕೃತಿ ಮೆರೆದ ನೀಚ
ಕರಾವಳಿ ಭಾಗದ ಭಕ್ತರು ಯಾವುದೇ ಕಷ್ಟ ಕಾರ್ಪಣ್ಯಗಳು ಎದುರಾದಾಗ ಕೊರಗಜ್ಜ ದೇವರಿಗೆ ಹರಕೆ ಹೊರುತ್ತಾರೆ. ತಮ್ಮ ಇಷ್ಟಾರ್ಥಗಳು ಈಡೇರಬೇಕೆಂದರೆ ಒಂದು ಬಾಟಲಿ ಎಣ್ಣೆ, ಚಕ್ಕುಲಿ ಮತ್ತು ಒಂದು ಕಟ್ಟು ಬೀಡಿಯನ್ನು ಕೊರಗಜ್ಜನಿಗೆ ಹರಕೆಯಾಗಿ ಸಲ್ಲಿಸುತ್ತಾರೆ. ಇಂತಹ ಕಾರ್ಣಿಕ ದೈವಕ್ಕೆ ಮತ್ತೊಮ್ಮೆ ಅವಮಾನ ಮಾಡಿರುವ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಆರಾಧ್ಯ ದೈವ ಕೊರಗಜ್ಜನನ್ನು ವಿಕೃತವಾಗಿ ಇಮೋಜಿಗಳನ್ನು ಶೇರ್ ಮಾಡಲಾಗಿದ್ದು, ಇದು ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದೆ. ಹಂಕರ ಜಾಲು ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಕೊರಗಜ್ಜನ ಬಗ್ಗೆ …