Day: November 20, 2021

ಶಬರಿಮಲೆ : ಅಪಾಯದ ಮಟ್ಟದಲ್ಲಿ ಹರಿದ ಪಂಪಾ ನದಿ,ಭಕ್ತರ ಪ್ರವೇಶಕ್ಕೆ ನಿರ್ಬಂಧ

ಕೇರಳದಲ್ಲಿ ಮಳೆ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಪಂಪಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ದೇವಸ್ಥಾನಕ್ಕೆ ಶನಿವಾರ ಭಕ್ತರ ಪ್ರವೇಶವನ್ನು ನಿಷೇಧಿಸಿ ಪತ್ತನಂತಿಟ್ಟ ಜಿಲ್ಲಾಡಳಿತ ಆದೇಶ ಹೊರಡಿಸಿತು.ಭಾನುವಾರ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ಪಂಪಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಕಕ್ಕಿ-ಅನತೋಡೆ ಜಲಾಶಯ (ಗೇಟ್‌ಗಳನ್ನು ತೆರೆಯಲಾಗಿದೆ) ಮತ್ತು ಪಂಪಾ ಅಣೆಕಟ್ಟೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಯಾತ್ರಾರ್ಥಿಗಳ ಸುರಕ್ಷತೆಗಾಗಿ ಪಂಪಾ ಮತ್ತು ಶಬರಿಮಲೆಗೆ ಯಾತ್ರೆಯನ್ನು ನಿಷೇಧಿಸಲಾಗಿದೆ …

ಶಬರಿಮಲೆ : ಅಪಾಯದ ಮಟ್ಟದಲ್ಲಿ ಹರಿದ ಪಂಪಾ ನದಿ,ಭಕ್ತರ ಪ್ರವೇಶಕ್ಕೆ ನಿರ್ಬಂಧ Read More »

ಥೈರಾಯ್ಡ್ ದೂರ ಮಾಡಲು ಸಹಾಯ ಮಾಡುತ್ತೆ ಈ ಸೂಪರ್ ಫುಡ್

ಥೈರಾಯ್ಡ್  ಎಂಬುದು ಕುತ್ತಿಗೆಯಲ್ಲಿರುವ ಚಿಟ್ಟೆ ಆಕಾರದ ಗ್ರಂಥಿಯಾಗಿದ್ದು, ಇದು ದೇಹದ ಸರಿಯಾದ ಕಾರ್ಯನಿರ್ವಹಣೆಯಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಇದು ಟಿ4 ಮತ್ತು ಟಿ3 ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದು ಹೃದಯ ಬಡಿತ  ಉಸಿರಾಟಜೀರ್ಣಕ್ರಿಯ  ಮತ್ತು ದೇಹದ ತಾಪಮಾನವನ್ನು ಸೂಕ್ತ ವ್ಯಾಪ್ತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ. ಥೈರಾಯ್ಡ್ ನ ಅನುಚಿತ ಕಾರ್ಯನಿರ್ವಹಣೆಯು ಹಲವಾರು ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಈ ಕಾರ್ಯವಿಧಾನದಲ್ಲಿನ ದೌರ್ಬಲ್ಯಗಳು ಹೈಪರ್ ಥೈರಾಯ್ಡಿಸಮ್  ಹೈಪೋಥೈರಾಯ್ಡಿಸಮ್ ಮತ್ತು ಥೈರಾಯ್ಡೈಟಿಸ್ ನಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು, ಅಲ್ಲಿ ಕೂದಲು …

ಥೈರಾಯ್ಡ್ ದೂರ ಮಾಡಲು ಸಹಾಯ ಮಾಡುತ್ತೆ ಈ ಸೂಪರ್ ಫುಡ್ Read More »

ಕೇರಳದ 104 ವಯಸ್ಸಿನ ವೃದ್ಧೆಯೊಬ್ಬರು ಪರೀಕ್ಷೆ ಬರೆದು 100ಕ್ಕೆ 89 ಅಂಕಗಳನ್ನು ಪಡೆದು ಉತ್ತೀರ್ಣ ರಾಗಿ ಎಲ್ಲರಿಗೂ ಸ್ಪೂರ್ತಿದಾಯಕಾರದ ಕಥೆ.

ತಿರುವನಂತಪುರ: ಕೇರಳದ ವೃದ್ಧೆಯೊಬ್ಬರು ಪರೀಕ್ಷೆ ಬರೆದು 100ಕ್ಕೆ 89 ಅಂಕಗಳನ್ನು ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ .ಮನಸ್ಸಿದ್ದರೆ ಮಾರ್ಗವಿದೆ ಎಂಬ ಗಾದೆ ಮಾತಿದೆ. ಅಂದರೆ ನಮಗೆ ಮನಸ್ಸಿದ್ದರೆ, ಛಲವಿದ್ದರೆ ನಾವು ಏನನ್ನು ಬೇಕಾದರೂ ಸಾಧಿಸಬಹುದು. ಸಾಧನೆ ಮಾಡಲು ಮನಸ್ಸು ಇದ್ದರೆ ಅದಕ್ಕೆ ವಯಸ್ಸು ಅಡ್ಡಿ ಬರುವುದಿಲ್ಲ.ವಯಸ್ಸು ಕೇವಲ ಸಂಖ್ಯೆಯಷ್ಟೇ. ಮನಸ್ಸಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುವುದಕ್ಕೆ ಈ ಕಥೆ ಒಂದು ಸಾಕ್ಷಿಯಾಗಿದೆ. ಕೊಟ್ಟಾಯಂನ ಅಯರ್ಕುನ್ನಂ ಪಂಚಾಯತ್‍ನಲ್ಲಿ ‘ಸಾಕ್ಷರತಾ’ ಪರೀಕ್ಷೆಯನ್ನು ನಡೆಸಲಾಯಿತು. ಈ ಪರೀಕ್ಷೆಗೆ 104 ವರ್ಷದ ಕುಟ್ಟಿಯಮ್ಮ ಅವರು …

ಕೇರಳದ 104 ವಯಸ್ಸಿನ ವೃದ್ಧೆಯೊಬ್ಬರು ಪರೀಕ್ಷೆ ಬರೆದು 100ಕ್ಕೆ 89 ಅಂಕಗಳನ್ನು ಪಡೆದು ಉತ್ತೀರ್ಣ ರಾಗಿ ಎಲ್ಲರಿಗೂ ಸ್ಪೂರ್ತಿದಾಯಕಾರದ ಕಥೆ. Read More »

ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಅಪಹರಣ ಪ್ರಕರಣ | ಪ್ರಮುಖ ಆರೋಪಿಯ ಬಂಧನ,ಯುವತಿಯ ರಕ್ಷಣೆ | ಪೊಲೀಸರ ಸಕಾಲಿಕ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ

ಕಾರವಾರ : ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿಯ ಅಪಹರಣ ಪ್ರಕರಣವನ್ನು ಭೇದಿಸಿ ಪ್ರಮುಖ ಆರೋಪಿಯನ್ನು ಬಂಧಿಸಿ, ವಿದ್ಯಾರ್ಥಿನಿಯನ್ನು ರಕ್ಷಿಸಿದ ಪೊಲೀಸರ ಕಾರ್ಯಕ್ಕೆ ಉತ್ತರಕನ್ನಡ ಎಸ್ಪಿ ಸುಮನ್ ಪೆನ್ನೇಕರ್ ಸೇರಿದಂತೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ. ನ.15ರಂದು ಶಿರಸಿಯ ರಾಯಪ್ಪ ಹುಲೇಕಲ್ ಕಾಲೇಜ್ ಕ್ರಾಸ್ ಹತ್ತಿರದ ಶಿರಸಿ – ಬನವಾಸಿ ರಸ್ತೆಯಲ್ಲಿ  ಕಾಲೇಜಿಗೆ ಹೋಗುತ್ತಿದ್ದ ತನ್ನ ಮಗಳನ್ನು ಯಾರೋ ಅಪರಿಚಿತರು ಒಂದು ಕಾರಿನಲ್ಲಿ ಅಪಹರಿಸಿದ್ದಾರೆ ಎಂದು ವಿದ್ಯಾರ್ಥಿನಿಯ ತಾಯಿ ಠಾಣೆಗೆ ನೀಡಿದ ದೂರಿನಂತೆ …

ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಅಪಹರಣ ಪ್ರಕರಣ | ಪ್ರಮುಖ ಆರೋಪಿಯ ಬಂಧನ,ಯುವತಿಯ ರಕ್ಷಣೆ | ಪೊಲೀಸರ ಸಕಾಲಿಕ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ Read More »

ಮುಸ್ಲಿಂ ಯುವಕನನ್ನು ಮದುವೆಯಾಗಬಯಸಿದ್ದ ಹಿಂದೂ ಯುವತಿ!!|ವಿಷಯ ತಿಳಿದು ಯುವತಿಯ ಮನೆಗೆ ಮನವೊಲಿಕೆಗೆ ತೆರಳಿದ್ದ ಗುರುಪುರ ಶ್ರೀ

ಮಂಗಳೂರಿನ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನೊಬ್ಬನನ್ನು ಮದುವೆಯಾಗಲು ನಿಶ್ಚಯಿಸಿರುವ ಸುದ್ದಿ ತಿಳಿದು ಇಂದು ಜಿಲ್ಲೆಯ ಹಿಂದೂ ಸಂಘಟನೆಗಳ ಮುಖಂಡರ ಜೊತೆಗೆ ಯುವತಿಯ ಮನೆಗೆ ತೆರಳಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಯುವತಿಯ ಹಾಗೂ ಮನೆಯವರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ. ಮಂಗಳೂರಿನ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಕಾಲೇಜಿನಲ್ಲಿ ಕೇರಳ ಮೂಲದ ಮುಸ್ಲಿಮ್ ಯುವಕನನ್ನು ಪ್ರೀತಿಸುತ್ತಿದ್ದು, ಆತನನ್ನು ಮದುವೆಯಾಗುವ ಸಂಬಂಧ ಮನೆಯವರಿಂದ ಒಪ್ಪಿಗೆ ಪಡೆದು, ಎಲ್ಲವೂ ನಿಗದಿಯಾಗಿ ಆಹ್ವಾನ ಪತ್ರಿಕೆ ಕೂಡ ಮುದ್ರಣಗೊಂಡಿತ್ತು. ಈ ಕರೆಯೋಲೆ ವೈರಲ್ ಆಗಿದ್ದರಿಂದ …

ಮುಸ್ಲಿಂ ಯುವಕನನ್ನು ಮದುವೆಯಾಗಬಯಸಿದ್ದ ಹಿಂದೂ ಯುವತಿ!!|ವಿಷಯ ತಿಳಿದು ಯುವತಿಯ ಮನೆಗೆ ಮನವೊಲಿಕೆಗೆ ತೆರಳಿದ್ದ ಗುರುಪುರ ಶ್ರೀ Read More »

ವೇದಿಕೆಗೆ ಬಂದ ಮೇಲೆ ಏನಾದರೂ ಮಾತನಾಡಬೇಕಲ್ಲಾ -ಸೋಮಶೇಖರ್ ಹೇಳಿಕೆಗೆ ರಾಜೇಂದ್ರ ಕುಮಾರ್ ಪ್ರತಿಕ್ರಿಯೆ

ಮಂಗಳೂರು : ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬರಬಾರದೆಂದು ಕಳೆದ 35ವರ್ಷಗಳಿಂದಲೂ ನಾನು ಪ್ರತಿಪಾದಿಸುತ್ತಾ ಬಂದಿದ್ದೇನೆ.ಈ ಬಾರಿ ನಾನು ಪಕ್ಷೇತರನಾಗಿ ವಿಧಾನ ಪರಿಷತ್ ಗೆ ಸ್ಪರ್ಧಿಸ ಬಯಸಿದ್ದೆ.ಆದರೆ ಬದಲಾದ ಪರಿಸ್ಥಿತಿಯಲ್ಲಿ ನಾನು ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದೇನೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ. ಮಾಧ್ಯಮದ ಜತೆ ಮಾತನಾಡಿದ ಅವರು ಅನೇಕರು ನನಗೆ ಬೆಂಬಲವಾಗಿ ನಿಂತಿದ್ದಾರೆ.ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ನಾನು ಅವರು ಸ್ನೇಹಿತರು.ವೇದಿಕೆ ಮೇಲೆ …

ವೇದಿಕೆಗೆ ಬಂದ ಮೇಲೆ ಏನಾದರೂ ಮಾತನಾಡಬೇಕಲ್ಲಾ -ಸೋಮಶೇಖರ್ ಹೇಳಿಕೆಗೆ ರಾಜೇಂದ್ರ ಕುಮಾರ್ ಪ್ರತಿಕ್ರಿಯೆ Read More »

ನನ್ನ ಸಾವಿಗೆ ಕಾರಣ ಯಾರೆಂದು ಬರೆಯಲು ಭಯವಾಗ್ತಿದೆ | ನಮ್ಮ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳದಿಂದ ಸಾಯುವ ಕೊನೆಯ ಹುಡುಗಿ ನಾನೇ ಆಗಿರಬೇಕು

ನನ್ನ ಸಾವಿಗೆ ಕಾರಣ ಯಾರೆಂದು ಬರೆಯಲು ಭಯವಾಗ್ತಿದೆ, ನಮ್ಮ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳದಿಂದ ಸಾಯುವ ಕೊನೆಯ ಹುಡುಗಿ ನಾನೇ ಆಗಿರಬೇಕು ಎಂದು ಡೆತ್ ನೋಟ್ ಬರೆದಿಟ್ಟು 17 ವರ್ಷ ಪ್ರಾಯದ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡು ರಾಜ್ಯದ ಕರೂರಿನಲ್ಲಿ ನಡೆದಿದೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. 12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಶುಕ್ರವಾರ ಸಂಜೆ ಮನೆಗೆ ಬಂದ ಬಳಿಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಾಲಕಿಯ ತಾಯಿ ಈ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ. ಪಕ್ಕದ …

ನನ್ನ ಸಾವಿಗೆ ಕಾರಣ ಯಾರೆಂದು ಬರೆಯಲು ಭಯವಾಗ್ತಿದೆ | ನಮ್ಮ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳದಿಂದ ಸಾಯುವ ಕೊನೆಯ ಹುಡುಗಿ ನಾನೇ ಆಗಿರಬೇಕು Read More »

ಮತ್ತೊಮ್ಮೆ ಭವಿಷ್ಯ ನುಡಿದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ|ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲವೆಂದು ಭವಿಷ್ಯ!!

ಧಾರವಾಡ:ವರುಣನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಊರು-ಕೇರಿ ಎನ್ನದೆ ಎಲ್ಲವನ್ನೂ ನಾಶ ಮಾಡುತ್ತಿದೆ. ರೈತರು ಕಷ್ಟ ಪಟ್ಟು ದುಡಿದ ಕೃಷಿಗೆ ಕಲ್ಲು ಹೊಡೆದಂತಾಗಿ, ಕೃಷಿಕರು ಗೋಳು ಪಡುವಂತಾಗಿದೆ. ಇದೀಗ ತಮ್ಮ ಭವಿಷ್ಯ ವಾಣಿಯಿಂದ ಹೆಸರುವಾಸಿಯಾಗಿರುವ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಮತ್ತೊಮ್ಮೆ ಭವಿಷ್ಯ ನುಡಿದಿದ್ದು,ರಾಜ್ಯದಲ್ಲಿ ಎದುರಾಗಿರುವ ವರುಣನ ಅಬ್ಬರದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ರಾಜ್ಯಕ್ಕೆ ಮಳೆಯ ಕಾಟ ಇನ್ನೂ ಮುಂದುವರಿಯಲಿದೆ ಎಂಬ ಸೂಚನೆ ನೀಡಿದ್ದಾರೆ.’ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ ‘ಎಂದು ಧಾರವಾಡದಲ್ಲಿ ಕೋಡಿಮಠದ ಸ್ವಾಮೀಜಿ …

ಮತ್ತೊಮ್ಮೆ ಭವಿಷ್ಯ ನುಡಿದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ|ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲವೆಂದು ಭವಿಷ್ಯ!! Read More »

ವಿಧಾನ ಪರಿಷತ್ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಯವರಿಂದ ನಾಮಪತ್ರ ಸಲ್ಲಿಕೆ

ಮಂಗಳೂರು : ದ.ಕ-ಉಡುಪಿ ದ್ವಿಸದಸ್ಯತ್ವ ಹೊಂದಿರುವ ವಿಧಾನಪರಿಷತ್‌ಗೆ ಆಯ್ಕೆ ಬಯಸಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ದ.ಕ.ಜಿಲ್ಲಾಧಿಕಾರಿಯವರಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್,ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ,ಉಡುಪಿ‌ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್,ದ.ಕ.ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಉಪಸ್ಥಿತರಿದ್ದರು.

ದ.ಕ. : ಕಾಂಗ್ರೆಸ್ಸಿನಿಂದ ಮಂಜುನಾಥ ಭಂಡಾರಿ ವಿಧಾನಪರಿಷತ್‌ಗೆ ಅಭ್ಯರ್ಥಿ

ಮಂಗಳೂರು : ರಾಜೇಂದ್ರ ಕುಮಾರ್ ಕಣದಿಂದ ಹಿಂದಕ್ಕೆ ಸರಿದಿದ್ದು,ಕಾಂಗ್ರೆಸ್ ಅಭ್ಯರ್ಥಿಯಾಗಿ ಸಹ್ಯಾದ್ರಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಮಂಜುನಾಥ್ ಭಂಡಾರಿ ಸ್ಪರ್ಧಿಸುವ ಸಾಧ್ಯತೆ ನಿಚ್ಚಳವಾಗಿದೆ.ಈ ಕುರಿತು ಅಧಿಕೃತವಾಗಿ ಕೆಪಿಸಿಸಿ ಪಟ್ಟಿ ಬಿಡುಗಡೆ ಮಾಡಲಿದೆ.ಕಾಂಗ್ರೆಸ್‌‌ನಿಂದ 11 ಮಂದಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಉಮೇದು ಹೊಂದಿದ್ದರು.ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮಂಜುನಾಥ ಭಂಡಾರಿ ಅವರಿಗೆ ಟಿಕೆಟ್ ನೀಡುವ ಕುರಿತಾಗಿ ಮಾತುಕತೆ ‌ನಡೆದಿದೆ ಎನ್ನಲಾಗಿದೆ. ಈಗಾಗಲೇ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.ದಕ್ಷಿಣ ಕನ್ನಡ – ಉಡುಪಿ ದ್ವಿಸ್ಥಾನದಿಂದ ಅವಿರೋಧ …

ದ.ಕ. : ಕಾಂಗ್ರೆಸ್ಸಿನಿಂದ ಮಂಜುನಾಥ ಭಂಡಾರಿ ವಿಧಾನಪರಿಷತ್‌ಗೆ ಅಭ್ಯರ್ಥಿ Read More »

error: Content is protected !!
Scroll to Top