Day: November 11, 2021

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಸಂವಾದ

ಪುತ್ತೂರು: 2020-21 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಿ.ಇ.ಟಿ, ಜೆ.ಇ.ಇ ಮತ್ತು ನೀಟ್ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ನೀಟ್ ಪರೀಕ್ಷೆಯಲ್ಲಿ ಪಿಡಬ್ಲ್ಯೂಡಿ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಎರಡನೇ ರ‍್ಯಾಂಕ್ ಗಳಿಸಿದ ಸಿಂಚನಾಲಕ್ಷ್ಮಿ, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 579 ನೇ ರ‍್ಯಾಂಕ್ ಗಳಿಸಿದ ಅಮೃತಾ ಭಟ್, ಇಂಜಿನಿಯರಿಂಗ್ ವಿಭಾಗದಲ್ಲಿ 677ನೇ ರ‍್ಯಾಂಕ್ ಗಳಿಸಿದ ಗಣೇಶ ಕೃಷ್ಣ, ಇಂಜಿನಿಯರಿಂಗ್ ವಿಭಾಗದಲ್ಲಿ 784ನೇ ರ‍್ಯಾಂಕ್ ಗಳಿಸಿದ …

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಸಂವಾದ Read More »

SDPI ಕರ್ನಾಟಕ ರಾಜ್ಯದ ನೂತನ ಕಾರ್ಯದರ್ಶಿಯಾಗಿ “ಶಾಫಿ ಬೆಳ್ಳಾರೆ” ಆಯ್ಕೆ

ಸುಳ್ಯ:- ಎಸ್‌ಡಿಪಿಐ ಪಕ್ಷದ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಫಿ ಬೆಳ್ಳಾರೆ ಮತ್ತು ಆನಂದ ಮಿತ್ತಬೈಲ್ ರಾಜ್ಯ ಕಾರ್ಯದರ್ಶಿ ಗಳಾಗಿ ಆಯ್ಕೆಯಾಗಿದ್ದಾರೆ. ನವೆಂಬರ್ 6 ಮತ್ತು 7 ರಂದು ಬೆಂಗಳೂರಿನಲ್ಲಿ ನಡೆದ ಪಕ್ಷದ ರಾಜ್ಯ ಪ್ರತಿನಿಧಿ ಸಭೆಯಲ್ಲಿ 2021-24 ರ ಅವಧಿಗೆ ನಡೆದ ಆಂತರಿಕ ಚುನಾವಣೆಯಲ್ಲಿ ನೂತನ ರಾಜ್ಯಾದ್ಯಕ್ಷರಾಗಿ ಅಬ್ದುಲ್ ಮಜೀದ್ ಮೈಸೂರು,ಉಪಾಧ್ಯಕ್ಷರಾಗಿ ದೇವನೂರು ಪುಟ್ಟನಂಜಯ್ಯ,ಹಾಗೂ ಪ್ರೊ ಸಾಯಿದಾ ಸಾದಿಯಾ,ಪ್ರ.ಕಾರ್ಯದರ್ಶಿ ಗಳಾಗಿ ಅಬ್ದುಲ್ ಲತೀಫ್ ಪುತ್ತೂರು,ಹಾಗೂ ಬಿ.ಆರ್.ಬಾಸ್ಕರ್ ಪ್ರಸಾದ್,ಅಫ್ಸರ್ …

SDPI ಕರ್ನಾಟಕ ರಾಜ್ಯದ ನೂತನ ಕಾರ್ಯದರ್ಶಿಯಾಗಿ “ಶಾಫಿ ಬೆಳ್ಳಾರೆ” ಆಯ್ಕೆ Read More »

ಕೋಡಿಂಬಾಳದಲ್ಲಿ ಅಪ್ರಾಪ್ತ ಬಾಲಕಿ ಗರ್ಭಿಣಿಯಾದ ಪ್ರಕರಣ: ಸಂಬಂಧಿಕ ಯುವಕ ಬಂಧನ

ಕಡಬ: ಕೋಡಿಂಬಾಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯೋರ್ವಳು ಗರ್ಭಿಣಿಯಾದ ಪ್ರಕರಣಕ್ಕೆ ಸಂಬಂಧಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಡಿ ಬಾಲಕಿಯ ಸಂಬಂಧಿಕನೋರ್ವನನ್ನು ಪೋಕ್ಸೋ ಕಾಯ್ದೆಯಡಿ ಕಡಬ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ಗರ್ಭಿಣಿಯಾದಾಗ ಪ್ರಕರಣ ಬೆಳಕಿಗೆ ಕೋಡಿಂಬಾಳ ಗ್ರಾಮದ ಪಾಜೋವು ಸಮೀಪದ ರಮೇಶ್ ಎಂಬಾತ ತನ್ನ ಸಂಬಂಧಿಕರಾಗಿರುವ ಅಪ್ರಾಪ್ತ ಬಾಲಕಿಯನ್ನು ಕಳೆದ ಒಂದೂವರೆ ವರ್ಷದಿಂದ ಸತತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದು ಇದೀಗ ಆಕೆ ಗರ್ಭವತಿಯಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿ ರಮೇಶನನ್ನು ಕಡಬ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ …

ಕೋಡಿಂಬಾಳದಲ್ಲಿ ಅಪ್ರಾಪ್ತ ಬಾಲಕಿ ಗರ್ಭಿಣಿಯಾದ ಪ್ರಕರಣ: ಸಂಬಂಧಿಕ ಯುವಕ ಬಂಧನ Read More »

ಕೇವಲ10 ರೂಪಾಯಿಗೆ ಇನ್ನೊಬ್ಬರ ಹೆಂಡತಿ ಬಾಡಿಗೆಗೆ ಸಿಗ್ತಾಳೆ | ಎಲ್ಲಿ, ಹೇಗೆ ಎಂದು ತಿಳ್ಕೊಳ್ಳೋ ಕುತೂಹಲ ಇದ್ರೆ ಈ ಸ್ಟೋರಿ ನೋಡಿ !!

ಹುಡುಗಿ ಬಾಡಿಗೆಗೆ ಸಿಗುವುದು, ಎಸ್ಕಾರ್ಟ್ಸ್ ಬಾಡಿಗೆಗೆ ಬರುವುದು ಈವರೆಗೆ ನಾವು ನೀವೆಲ್ಲಾ ಕೇಳಿರುವ ವಿಷಯವೇ ! ಆದರೆ ವಿವಾಹವಾದ ಪತ್ನಿ ಬಾಡಿಗೆಗೆ ಕೊಡುವ ಬಗ್ಗೆ ಬಹುಶ ಇದೇ ಮೊದಲ ಬಾರಿಗೆ ನಾವು ಕೇಳುತ್ತಿರುವುದು ! ಇಂತಹದೊಂದು ಪದ್ಧತಿ ಇದು, ಅದು ನಮ್ಮ ದೇಶದಲ್ಲೇ ಇದೆ ಎಂಬುವುದು ಅಚ್ಚರಿಯ ವಿಚಾರವಾಗಿದೆ. ಭಾರತದ ಹಳ್ಳಿಯೊಂದರಲ್ಲಿ ಹೆಂಡತಿಯನ್ನು ಬಾಡಿಗೆಗೆ ಕೊಡುವ ಪದ್ಧತಿ ಇದೆಯಂತೆ. ಅಷ್ಟಕ್ಕೂ ಯಾವ ಹಳ್ಳಿ? ಏನದು ಪದ್ಧತಿ? ಇಲ್ಲಿದೆ ಪೂರ್ಣ ಮಾಹಿತಿ. ಮಧ್ಯ ಪ್ರದೇಶದ ಹಳ್ಳಿಯೊಂದರ ಪದ್ಧತಿಯು ಇದೀಗ ಎಲ್ಲರನ್ನು …

ಕೇವಲ10 ರೂಪಾಯಿಗೆ ಇನ್ನೊಬ್ಬರ ಹೆಂಡತಿ ಬಾಡಿಗೆಗೆ ಸಿಗ್ತಾಳೆ | ಎಲ್ಲಿ, ಹೇಗೆ ಎಂದು ತಿಳ್ಕೊಳ್ಳೋ ಕುತೂಹಲ ಇದ್ರೆ ಈ ಸ್ಟೋರಿ ನೋಡಿ !! Read More »

ಹಾಲಿನ ವ್ಯಾನ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು

ಹಾಲಿನ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಉಡುಪಿಯ ಹಿರಿಯಡ್ಕದ ಗುಡ್ಡೆ ಅಂಗಡಿ ಬಳಿ ಇಂದು ಬೆಳಗ್ಗೆ ನಡೆದಿದೆ. ಮೃತ ವ್ಯಕ್ತಿಯನ್ನು ಮಣಿಪಾಲ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿರುವ ಚಿಕ್ಕಲಬೆಟ್ಟು ಬೈಲೂರು ನಿವಾಸಿ ವಿಫೇಶ್ ಪೂಜಾರಿ ಎಂದು ಗುರುತಿಸಲಾಗಿದೆ. ರಾತ್ರಿ ಪಾಳಿಯ ಕರ್ತವ್ಯ ಮುಗಿಸಿ ಮಣಿಪಾಲದಿಂದ ಬೈಲೂರಿಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಡಿಕ್ಕಿಯ ಪರಿಣಾಮವಾಗಿ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಲಿನ ವ್ಯಾನ್ ಬಜಗೋಳಿಯಿಂದ ಉಡುಪಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಹಿರಿಯಡ್ಕ …

ಹಾಲಿನ ವ್ಯಾನ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು Read More »

ಸವಣೂರು : ಎರಡು ಕಾರು- ಬೈಕ್ ನಡುವೆ ಸರಣಿ ಅಪಘಾತ

ಸವಣೂರು: ಎರಡು ಕಾರು ಹಾಗೂ ಬೈಕ್ ನ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಸವಣೂರಿನಲ್ಲಿ ನ.11 ರಂದು ನಡೆದಿದೆ. ಬೈಕ್, ಸ್ವಿಫ್ಟ್ ಕಾರು ಹಾಗೂ ಆಲ್ಲೋ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಸವಣೂರು ಕಡೆಯಿಂದ ಕಾಣಿಯೂರು ಕಡೆ ತೆರಳುತ್ತಿದ್ದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ಕಾಣಿಯೂರು ಕಡೆಯಿಂದ ಸವಣೂರು ಕಡೆ ಬರುತ್ತಿದ್ದ ಬೈಕ್ ಗೆ ಮತ್ತು ಆಲ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದು ಘಟನೆಯಿಂದ ಬೈಕ್ ಸವಾರ ಗಾಯಗೊಂಡಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಅಜ್ಜಿಯ ಕೈಯಲ್ಲಿ ಪಿಜ್ಜಾ !! | ಮೊದಲ ಬಾರಿ ಪಿಜ್ಜಾ ಸವಿದ ಆಕೆಯ ರಿಯಾಕ್ಷನ್ ಗೆ ಫುಲ್ ಫಿದಾ ಆದ ನೆಟ್ಟಿಗರು!!

ಪಿಜ್ಜಾ ಅಂದ್ರೆ ಈಗಿನ ಯುವಪೀಳಿಗೆಗೆ ತುಂಬಾ ಇಷ್ಟ. ನಗರಗಳಲ್ಲಿ ತಿಂಡಿ ಆರ್ಡರ್ ಮಾಡೋಣ ಎಂದಾಗ ಮೊದಲಿಗೆ ನೆನಪಿಗೆ ಬರುವುದೇ ಪಿಜ್ಜಾ. ಫ್ರೆಂಡ್ಸ್​ಗಳೆಲ್ಲಾ ಒಟ್ಟಿಗೆ ಸೇರಿ ಪಾರ್ಟಿ ಮಾಡೋಣ ಅಂದಾಗಲೂ ಮೊದಲು ನೆನಪಾಗೋದು ಪಿಜ್ಜಾ. ಅಷ್ಟು ಅಚ್ಚು ಮೆಚ್ಚಾಗಿಬಿಟ್ಟಿದೆ ಪಿಜ್ಜಾ. ಇದನ್ನು ಸಿಕ್ಕಾಪಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದರೂ ಅದರ ಹೆಸರು ಕೇಳಿದರೆ ಬಾಯಲ್ಲಿ ನೀರೂರಿಸುವವರೇ ಜಾಸ್ತಿ. ಹೀಗಿರುವಾಗ ಈಗ ಇದೇ ಪಿಜ್ಜಾದ ವೀಡಿಯೋವೊಂದು ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಅಜ್ಜಿ ಪಿಜ್ಜಾ ತಿನ್ನುತ್ತಿದ್ದಾಳೆ. ಪಿಜ್ಜಾವನ್ನು …

ಅಜ್ಜಿಯ ಕೈಯಲ್ಲಿ ಪಿಜ್ಜಾ !! | ಮೊದಲ ಬಾರಿ ಪಿಜ್ಜಾ ಸವಿದ ಆಕೆಯ ರಿಯಾಕ್ಷನ್ ಗೆ ಫುಲ್ ಫಿದಾ ಆದ ನೆಟ್ಟಿಗರು!! Read More »

ನಮ್ಮ ಪಕ್ಕದ ಜಿಲ್ಲೆಯಲ್ಲಿದೆ ಒಂದು ವಿಚಿತ್ರ ಆಚರಣೆ | ಹಸಿ ಹಸಿ ಸಗಣಿಯಿಂದ ಹೊಡೆಸಿಕೊಂಡರೆ ಎಲ್ಲಾ ಪರಿಹಾರ !!

ಹಾಸನ:ಅದೆಷ್ಟೋ ದೇವಾಲಯಗಳ ದೇವರು ಬೇಡಿಕೊಂಡು ಬಂದ ಭಕ್ತರಿಗೆ ಇಂಬನ್ನು ಕೊಟ್ಟು ಭಕ್ತರ ಪ್ರೀತಿಗೆ ಪಾತ್ರವಾಗಿದೆ. ಆದರೆ ಇಲ್ಲೊಂದು ದೇವಾಲಯದ ಪದ್ಧತಿಯಿಂದಲೇ ಪ್ರಸಿದ್ಧಿ ಹೊಂದಿದೆ.ಹೌದು. ಇಲ್ಲಿಯ ಹರಕೆ ಸೇವೆ ವಿಚಿತ್ರವಾದರೂ ವಿಶಿಷ್ಟವಾಗಿದೆ.ಅಷ್ಟಕ್ಕೂ ಇದು ಯಾವ ರೀತಿಯಲ್ಲಿದೆ ಎಂಬುದು ಮುಂದೆ ನೋಡಿ. ಇಲ್ಲಿ ಹರಕೆ ತೀರಿಸಲು ಬಂದ ಭಕ್ತರಿಗೆ ಸಗಣಿ ಎಸೆಯುವುದು ಇಲ್ಲಿಯ ಪದ್ಧತಿ.ಹೌದು ಈ ಸಂಜೀವಿನಿ ಆಂಜನೇಯಸ್ವಾಮಿ ನೆಲೆಸಿರುವ ಪುಣ್ಯಕ್ಷೇತ್ರವು ಹಾಸನ ಜಿಲ್ಲೆಯ ಗಡಿ ಭಾಗದಲ್ಲಿರುವ ಗ್ರಾಮವಾಗಿದ್ದು,ಜೈನಕಾಶಿ ಶ್ರವಣಬೆಳಗೊಳದಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಯ ದೇವರ ಹರಕೆ …

ನಮ್ಮ ಪಕ್ಕದ ಜಿಲ್ಲೆಯಲ್ಲಿದೆ ಒಂದು ವಿಚಿತ್ರ ಆಚರಣೆ | ಹಸಿ ಹಸಿ ಸಗಣಿಯಿಂದ ಹೊಡೆಸಿಕೊಂಡರೆ ಎಲ್ಲಾ ಪರಿಹಾರ !! Read More »

ಪುತ್ತೂರಿನ ಮುಳಿಯ ಜುವೆಲ್ಲರ್ಸ್ ನ 45 ವರ್ಷಗಳ ಹಿಂದಿನ ಚಿನ್ನದ ನೆಕ್ಲೇಸ್ ಗೆ ಒಮ್ಮೆಲೆ ಭಾರಿ ಬೇಡಿಕೆ !! | ದೇಶದ ವಿವಿಧೆಡೆಯಿಂದ ಆ ವಿನ್ಯಾಸದ ನೆಕ್ಲೆಸ್ ನ ಕುರಿತು ವಿಚಾರಣೆ

ಒಡವೆ ಎಂದ ತಕ್ಷಣ ಹೆಣ್ಣುಮಕ್ಕಳ ಮೊಗ ಅರಳುತ್ತದೆ, ಕಣ್ಣುಗಳು ಮಿನುಗುತ್ತವೆ. ಚಿನ್ನಕ್ಕೆ ದರ ಹೆಚ್ಚಾದರೂ ಚಿನ್ನದ ಮೇಲಿನ ಪ್ರೀತಿ, ಒಲವು ಸ್ವಲ್ಪವೂ ಕಡಿಮೆಯಾಗಿಲ್ಲ. ಸ್ತ್ರೀಯರು ವರ್ಷಕ್ಕೊಮ್ಮೆಯಾದರೂ ಒಡವೆಗಳನ್ನು ಖರೀದಿ ಮಾಡುತ್ತಲೇ ಇರುತ್ತಾರೆ. ಹೀಗಿರುವಾಗ ಪುರಾತನ ಚಿನ್ನಕ್ಕೆ ಇದೀಗ ಒಮ್ಮೆಲೆ ಭಾರಿ ಬೇಡಿಕೆ ಬಂದ ಘಟನೆಯೊಂದು ವರದಿಯಾಗಿದೆ. ಸುಮಾರು 45 ವರ್ಷಗಳ ಹಿಂದೆ ಖರೀದಿಸಲಾದ ಚಿನ್ನದ ನೆಕ್ಲೆಸ್‌ ಒಂದಕ್ಕೆ ಇದ್ದಕ್ಕಿದ್ದಂತೆ ಮಹತ್ವ ಸೃಷ್ಟಿಯಾಗಿ ಅದೇ ವಿನ್ಯಾಸದ ನೆಕ್ಲೆಸ್‌ಗೆ ಬೇಡಿಕೆ ಉಂಟಾದ ಅಪೂರ್ವ ವಿದ್ಯಮಾನ ಪುತ್ತೂರಿನಲ್ಲಿ ನಡೆದಿದೆ. ಕನ್ನಡ ಭಾವಗೀತಾಭಿನಯದ …

ಪುತ್ತೂರಿನ ಮುಳಿಯ ಜುವೆಲ್ಲರ್ಸ್ ನ 45 ವರ್ಷಗಳ ಹಿಂದಿನ ಚಿನ್ನದ ನೆಕ್ಲೇಸ್ ಗೆ ಒಮ್ಮೆಲೆ ಭಾರಿ ಬೇಡಿಕೆ !! | ದೇಶದ ವಿವಿಧೆಡೆಯಿಂದ ಆ ವಿನ್ಯಾಸದ ನೆಕ್ಲೆಸ್ ನ ಕುರಿತು ವಿಚಾರಣೆ Read More »

ಮೋದಿಯನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ | ಬಿಟ್ ಕಾಯಿನ್ ಬಗೆಗಿನ ಆರೋಪವನ್ನು ನಿರ್ಲಕ್ಷಿಸುವಂತೆ ಪ್ರಧಾನಿ ಸಲಹೆ

ನವದೆಹಲಿ:ಪ್ರಧಾನಿಯನ್ನು ಭೇಟಿಯಾದ ಬೊಮ್ಮಾಯಿ ಹಲವು ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು.ಬಿಟ್ ಕಾಯಿನ್ ಹಗರಣದ ಕುರಿತ ಯಾವುದೇ ಆರೋಪಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ನಿರ್ಲಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸ್ವತಃ ನಾನೇ ಬಿಟ್ ಕಾಯಿನ್ ಬೆಳವಣಿಗೆ ಕುರಿತು ಪ್ರಸ್ತಾಪ ಮಾಡಿದಾಗ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ನಿರ್ಲಕ್ಷಿಸುವಂತೆ ಕಿವಿಮಾತು ಹೇಳಿದರು’ ಎಂದು ಅವರು ತಿಳಿಸಿದರು.ಅರ್ಧ ಗಂಟೆಗೂ ಅಧಿಕ ಸಮಯದ‌ ಭೇಟಿಯ ಸಂದರ್ಭ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ಕುರಿತ ವಿಷಯಗಳು …

ಮೋದಿಯನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ | ಬಿಟ್ ಕಾಯಿನ್ ಬಗೆಗಿನ ಆರೋಪವನ್ನು ನಿರ್ಲಕ್ಷಿಸುವಂತೆ ಪ್ರಧಾನಿ ಸಲಹೆ Read More »

error: Content is protected !!
Scroll to Top