ಕೇವಲ10 ರೂಪಾಯಿಗೆ ಇನ್ನೊಬ್ಬರ ಹೆಂಡತಿ ಬಾಡಿಗೆಗೆ ಸಿಗ್ತಾಳೆ | ಎಲ್ಲಿ, ಹೇಗೆ ಎಂದು ತಿಳ್ಕೊಳ್ಳೋ ಕುತೂಹಲ ಇದ್ರೆ ಈ ಸ್ಟೋರಿ ನೋಡಿ !!

ಹುಡುಗಿ ಬಾಡಿಗೆಗೆ ಸಿಗುವುದು, ಎಸ್ಕಾರ್ಟ್ಸ್ ಬಾಡಿಗೆಗೆ ಬರುವುದು ಈವರೆಗೆ ನಾವು ನೀವೆಲ್ಲಾ ಕೇಳಿರುವ ವಿಷಯವೇ ! ಆದರೆ ವಿವಾಹವಾದ ಪತ್ನಿ ಬಾಡಿಗೆಗೆ ಕೊಡುವ ಬಗ್ಗೆ ಬಹುಶ ಇದೇ ಮೊದಲ ಬಾರಿಗೆ ನಾವು ಕೇಳುತ್ತಿರುವುದು !

ಇಂತಹದೊಂದು ಪದ್ಧತಿ ಇದು, ಅದು ನಮ್ಮ ದೇಶದಲ್ಲೇ ಇದೆ ಎಂಬುವುದು ಅಚ್ಚರಿಯ ವಿಚಾರವಾಗಿದೆ. ಭಾರತದ ಹಳ್ಳಿಯೊಂದರಲ್ಲಿ ಹೆಂಡತಿಯನ್ನು ಬಾಡಿಗೆಗೆ ಕೊಡುವ ಪದ್ಧತಿ ಇದೆಯಂತೆ. ಅಷ್ಟಕ್ಕೂ ಯಾವ ಹಳ್ಳಿ? ಏನದು ಪದ್ಧತಿ? ಇಲ್ಲಿದೆ ಪೂರ್ಣ ಮಾಹಿತಿ.

ಮಧ್ಯ ಪ್ರದೇಶದ ಹಳ್ಳಿಯೊಂದರ ಪದ್ಧತಿಯು ಇದೀಗ ಎಲ್ಲರನ್ನು ಅಚ್ಚರಿ ಪಡುವಂತೆ ಮಾಡಿದೆ. ಅಂದಹಾಗೆಯೇ ಇಲ್ಲಿ ಹೆಂಗಸರನ್ನು ಅತ್ಯಂತ ಶ್ರೀಮಂತ ವ್ಯಕ್ತಿಗೆ ಅಥವಾ ಸಂಗಾತಿ ಸಿಗದ ಮೇಲ್ವರ್ಗದ ಪುರುಷನಿಗೆ ಬಾಡಿಗೆಗೆ ನೀಡಲಾಗುತ್ತದೆಯಂತೆ. ಮತ್ತೊಂದು ವಿಚಾರವೆಂರೆ ಹೆಂಡತಿಯನ್ನು ಒಂದು ತಿಂಗಳು ಅಥವಾ ಒಂದು ವರ್ಷ ಬಾಡಿಗೆಗೆ ನೀಡಲಾಗುತ್ತದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ಇಂತಹದೊಂದು ಪದ್ಧತಿಯಿದ್ದು, ಇದನ್ನು ಧದೀಚಾ ಪ್ರಾತ ಎಂದು ಕರೆಯಲಾಗುತ್ತದೆ. ಮಾತ್ರವಲ್ಲದೆ ಮಹಿಳೆಯರನ್ನು ಸ್ಟಾಂಪ್​ ಪೇಪರ್​ ಮೇಲೆ ಸಹಿ ಹಾಕುವ ಮೂಲಕ ಗುತ್ತಿದೆ ಆಧಾರ ಮೇಲೆ ಬಾಡಿಗೆಗೆ ಕರೆದುಕೊಂಡು ಹೋಗುತ್ತಾರೆ. 10 ರೂ, ಅಥವಾ 100 ರೂ.ವಿನ ಸ್ಟ್ಯಾಂಪ್​ ಪೇಪರ್​ ಬಳಸಿ ಗುತ್ತಿಗೆಗೆ ಆಧಾರದ ಮೇಲೆ ಅಗತ್ಯವಿರುವ ಪುರುಷನಿಗೆ ಮಹಿಳೆಯನ್ನು ವಿನಿಮಯ ಮಾಡಲಾಗುತ್ತದೆ.

ಧದೀಚಾ ಪ್ರಾತಕ್ಕೆ ಒಂದು ಮಾರುಕಟ್ಟೆ ಬೇರೆ ಇದ್ದು ಅಲ್ಲಿ ಹೆಣ್ಣುಮಕ್ಕಳು ಸಂಪ್ರದಾಯದ ಹೆಸರಿನಲ್ಲಿ ನಿಲ್ಲುವಂತೆ ಮಾಡುತ್ತಾರೆ. ನಂತರ ಪುರುಷರು ತಮ್ಮ ಆಯ್ಕೆಯ ಮಹಿಳೆಯರ ಬೆಲೆಯನ್ನು ನಿರ್ಧರಿಸುವ ಮೂಲಕ ಕರೆದುಕೊಂಡು ಹೋಗುತ್ತಾರೆ. ಮಹಿಳೆ ತನ್ನ ಒಪ್ಪಂದದ ಅಂತ್ಯದ ನಂತರ ಬೇರೊಬ್ಬ ಗಂಡಸಿನೊಂದಿದೆ ಇರಬೇಕಾಗುತ್ತದೆ. ಬಾಡಿಗೆ ಮೊತ್ತ ಹೆಚ್ಚಾದಷ್ಟೂ ಆತನಿಗೆ ಹೆಚ್ಚು ಕಾಲ ಆಕೆಯೊಂದಿಗೆ ಸಮಯ ಇರಬಹುದು.

ಮಹಿಳೆಯು ತಾನು ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಇನ್ನೊಬ್ಬ ಗಂಡಸಿನ ಜತೆ ವಾಸಿಸಲು ರೆಡಿಯಾಗುತ್ತಾಳೆ. ವಾಸಿಸುವುದು ಅಂದರೆ ಬೇರೇನೂ ಅಲ್ಲ, ಅದು ಹಾಸಿಗೆ ಹಂಚಿಕೊಳ್ಳುವುದು. ಬೇರೊಬ್ಬರ ಪತ್ನಿ ಅಂದರೆ ಆತನಿಗೆ ಅದೇನೋ ಮೋಹ. ಅವರಿಬ್ಬರೂ ಒಪ್ಪಂದದಂತೆ ಗಂಡ ಹೆಂಡತಿಯ ಹಾಗೆ ಹಾಸಿಗೆ ಹಂಚಿ ಕೊಂಡು ಸಂಸಾರ ಮಾಡಬಹುದು. ಅಲ್ಲದೆ ಆ ಸಮಯದಲ್ಲಿ ಆಕೆ ಆತನ ಕುಟುಂಬವನ್ನು ಕುಟುಂಬವನ್ನು ನೋಡಿಕೊಳ್ಳಬೇಕಿದೆ.

ಈ ಪದ್ಧತಿ ಕೇವಲ ಮಧ್ಯಪ್ರದೇಶದಲ್ಲಿ ಮಾತ್ರವಿಲ್ಲ, ಗುಜರಾತ್‌ನಲ್ಲೂ ವರದಿಯಾಗಿದೆ. ಹೆಣ್ಣು ಶಿಶುಹತ್ಯೆಯಿಂದಾಗಿ ಮಹಿಳೆಯರ ಕೊರತೆಯಿಂದಾಗಿ, ಗುಜರಾತಿನ ಕೃಷಿ ಕಾರ್ಮಿಕ ಅಟ್ಟ ಪ್ರಜಾಪತಿ ತನ್ನ ಪತ್ನಿ ಲಕ್ಷ್ಮಿಯನ್ನು ಶ್ರೀಮಂತ ಜಮೀನ್ದಾರನಿಗೆ ಒಂದು ತಿಂಗಳ ಕಾಲ ಗುತ್ತಿಗೆ ನೀಡಿದ ಪ್ರಕರಣ ನಡೆದಿತ್ತು. ಈ ವಿನಿಮಯವು ಅವನ ಮಾಸಿಕ ಸಂಬಳದ 10 (ರೂ 8000) ಪಟ್ಟು ಗಳಿಸುವಂತೆ ಮಾಡಿತ್ತು.

ಗುಜರಾತ್-ಮಧ್ಯಪ್ರದೇಶ ಭಾಗದ ಅನೇಕ ಹಳ್ಳಿಗರಿಗೆ ಇದು ಲಾಭದಾಯಕ ವ್ಯಾಪಾರದವಾಗಿದೆ. ಕೆಲವು ಸಂದರ್ಭಗಳಲ್ಲಿ ಮಹಿಳೆಯರನ್ನು 500 ರೂ.ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ, ಇನ್ನು ಕೆಲವು ಕುಟುಂಬಗಳಲ್ಲಿ ತಮ್ಮ ಹೆಣ್ಣು ಮಕ್ಕಳನ್ನು ಕೆಲವು ಸಮುದಾಯಗಳ ಪುರುಷರಿಗೆ 50 ಸಾವಿರ ರೂ ಪಡೆದುಕೊಳ್ಳುವ ಮೂಲಕ ಮದುವೆ ಮಾಡಿಸುತ್ತಾರೆ.

ಕ್ಷೀಣಿಸುತ್ತಿರುವ ಮಹಿಳಾ ಜನಸಂಖ್ಯೆಯ ಹೊರತಾಗಿ ಇಂತಹ ವ್ಯವಹಾರಗಳನ್ನು ಪ್ರೋತ್ಸಾಹಿಸುವ ಮಧ್ಯವರ್ತಿಗಳು ಇದ್ದಾರೆ. ಮಹಿಳೆಯರು ಕುಟುಂಬ ಬಡತನದಿಂದ ಮುಕ್ತಿ ಪಡೆಯಲು ಇಂತಹ ಕಾರ್ಯಗಳಿಗೆ ಬಲಿಯಾಗುತ್ತಾರೆ. ಅದರಲ್ಲೂ ಬುಡಕಟ್ಟು ಕುಟುಂಬಗಳು ಇಂತಹ ಆಚರಣೆಗಳಲ್ಲಿ ತೊಡಗಿಸಿಕೊಂಡಿವೆ ಎಂದು ತಿಳಿದುಬಂದಿದೆ.

Leave a Reply

error: Content is protected !!
Scroll to Top
%d bloggers like this: