Day: October 19, 2021

ಪುತ್ತೂರು: ರೈತರ ಹಾಗೂ ಸ್ವಸಹಾಯ ಸಂಘಗಳ ಸಾಲ ಜೋಡಣೆ ಉತ್ಸವ

ರೈತರ ಹಾಗೂ ಸ್ವಸಹಾಯ ಸಂಘಗಳ ಸಾಲ ಜೋಡಣಾ ಕಾರ್ಯಕ್ರಮವನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪುತ್ತೂರು ಹಾಗೂ ಸುತ್ತಮುತ್ತಲಿನ ಶಾಖೆಗಳಿಂದ ಜಂಟಿಯಾಗಿ ದಿನಾಂಕ 18.10.2021 ರಂದು ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ RAJKIRAN RAI G ರವರು ಆಗಮಿಸಿ ಕಾರ್ಯಕ್ರಮದಲ್ಲಿ ಒಟ್ಟು ಸುಮಾರು 25 ಸ್ವಸಹಾಯ ಸಂಘಗಳಿಗೆ ಒಂದು ಕೋಟಿಗಿಂತಲೂ ಹೆಚ್ಚಿನ ಸಾಲ ಮಂಜೂರಾತಿ ಪತ್ರವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿ ಅವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೃಷಿ …

ಪುತ್ತೂರು: ರೈತರ ಹಾಗೂ ಸ್ವಸಹಾಯ ಸಂಘಗಳ ಸಾಲ ಜೋಡಣೆ ಉತ್ಸವ Read More »

ದೇವರ ನಾಡಿನಲ್ಲಿ ಪೈನಾಪಲ್ ನಲ್ಲಿ ಸಿಡಿಮದ್ದು ಇಟ್ಟು ಗರ್ಭಿಣಿ ಆನೆ ಹತ್ಯೆ ಮಾಡಿದ ಪ್ರಕರಣದಲ್ಲಿ ಹೊಸ ಬೆಳವಣಿಗೆ | ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಈ ಪ್ರಕರಣದ ಆರೋಪಿ ಪಶ್ಚಾತ್ತಾಪದಿಂದ ನ್ಯಾಯಾಲಯದ ಮುಂದೆ ಶರಣು

ದೇವರ ನಾಡಿನಲ್ಲಿ ಪೈನಾಪಲ್‌ನಲ್ಲಿ ಸಿಡಿಮದ್ದು ಇಟ್ಟು ಗರ್ಭಿಣಿ ಆನೆ ಹತ್ಯೆ ಮಾಡಿದ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಅನೇಕರು ಕಂಬನಿ ಮಿಡಿದು, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದರು. ಘಟನೆಯ ಬೆನ್ನಲ್ಲೇ ಒಂದಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಈ ಪ್ರಕರಣದಲ್ಲಿ ತಾಜಾ ಬೆಳವಣಿಗೆಯೊಂದು ನಡೆದಿದೆ. ಹೌದು, ಆನೆ ಹತ್ಯೆಯಾದ ಒಂದೂವರೆ ವರ್ಷಗಳ ಬಳಿಕ ಎರಡನೇ ಆರೋಪಿ ಪೊಲೀಸರಿಗೆ ಬಂದು ಶರಣಾಗಿದ್ದಾನೆ. ಕಾಡು ಹಂದಿಯನ್ನು ಕೊಲ್ಲಲು ರೂಪಿಸಿದ ಬಲೆಗೆ ಅಮಾಯಕ ಆನೆ ಸಿಲುಕಿ ನರಳಿ ನರಳಿ ಮೃತಪಟ್ಟಿತ್ತು. …

ದೇವರ ನಾಡಿನಲ್ಲಿ ಪೈನಾಪಲ್ ನಲ್ಲಿ ಸಿಡಿಮದ್ದು ಇಟ್ಟು ಗರ್ಭಿಣಿ ಆನೆ ಹತ್ಯೆ ಮಾಡಿದ ಪ್ರಕರಣದಲ್ಲಿ ಹೊಸ ಬೆಳವಣಿಗೆ | ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಈ ಪ್ರಕರಣದ ಆರೋಪಿ ಪಶ್ಚಾತ್ತಾಪದಿಂದ ನ್ಯಾಯಾಲಯದ ಮುಂದೆ ಶರಣು Read More »

ಮೊಬೈಲನ್ನು ಚಾರ್ಜ್ ಗೆ ಹಾಕಿ ಆನ್ಲೈನ್ ತರಗತಿ ಕೇಳುತ್ತಿದ್ದ ವೇಳೆ ಸ್ಫೋಟಗೊಂಡ ಮೊಬೈಲ್ ಫೋನ್, ಬಾಲಕ ಸಾವು

ಕೊರೊನಾದಿಂದಾಗಿ ಇನ್ನೂ ಎಲ್ಲ ಕಡೆ ಶಾಲೆಗಳು ಶುರುವಾಗಿಲ್ಲ. ಕೆಲವು ಕಡೆ ಆನ್ಲೈನ್ ತರಗತಿಗಳು ಮುಂದುವರಿದಿವೆ. ಇದೆ ಆನ್ಲೈನ್ ಕ್ಲಾಸ್ ಬಾಲಕನೊಬ್ಬನ ಜೀವಕ್ಕೆ ಕುತ್ತು ತಂದಿದೆ. ವಿಯೆಟ್ನಾಂನಲ್ಲಿ ಆಸ್ಟ್ರೇನ್ ಪಾಠ, ಬಾಲಕನ ಪ್ರಾಣ ತೆಗೆದಿದೆ. ಐದನೇ ತರಗತಿ ಓದುತ್ತಿದ್ದ ಬಾಲಕ ಮೊಬೈಲ್ ಚಾರ್ಜ್ ಹಾಕಿದ್ದ ವೇಳೆ ಮೊಬೈಲ್ ಸ್ಫೋಟಕ್ಕೆ ಬಲಿಯಾಗಿದ್ದಾನೆ. ನಾಲ್ಕು ಗಂಟೆ ಸುಮಾರಿಗೆ ಬಾಲಕ ಮೊಬೈಲ್ ನಲ್ಲಿ ಆಸ್ಟ್ರೇನ್ ಕ್ಲಾಸ್ ಕೇಳುತ್ತಿದ್ದ. ಹೆಡ್ ಫೋನ್ ಹಾಕಿದ್ದ ಬಾಲಕ, ಮೊಬೈಲ್ ಚಾರ್ಜ್ ಗೆ ಹಾಕಿದ್ದ ಎನ್ನಲಾಗಿದೆ. ಅಚಾನಕ್ ಮೊಬೈಲ್ …

ಮೊಬೈಲನ್ನು ಚಾರ್ಜ್ ಗೆ ಹಾಕಿ ಆನ್ಲೈನ್ ತರಗತಿ ಕೇಳುತ್ತಿದ್ದ ವೇಳೆ ಸ್ಫೋಟಗೊಂಡ ಮೊಬೈಲ್ ಫೋನ್, ಬಾಲಕ ಸಾವು Read More »

45 ವರ್ಷದ ವ್ಯಕ್ತಿಯ ಜೊತೆ 25 ವರ್ಷದ ಯುವತಿ ಮದುವೆ | ಇದು ಈಗಿನ ಧಾರಾವಾಹಿಗಳ ಕಥೆ ಅಲ್ಲ, ರಿಯಲ್ ಸ್ಟೋರಿ !!

ತುಮಕೂರು: ಯಾರು ಯಾರನ್ನ ಮದುವೆ ಆಗಬೇಕು ಎಂಬುದು ದೇವರ ಸೃಷ್ಟಿ ಅಂತ ಮಾತಿದೆ.ವಿವಾಹಕ್ಕೂ ಇಂತಹುದೇ ಒಂದು ಋಣಾನುಬಂಧ ಮುಖ್ಯ.ಆದ್ರೇ.. ಇಲ್ಲೊಬ್ಬ 45 ವರ್ಷದ ವ್ಯಕ್ತಿಯೊಂದಿಗೆ 25 ವರ್ಷದ ಯುವತಿಯೊಬ್ಬಳು ದಾಂಪತ್ಯಕ್ಕೆ ಕಾಲಿಟ್ಟಿರುವಂತ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಲ್ಲಿನ ಅಕ್ಕಿಮರಿಪಾಳ್ಯದ ಶಕರಣ್ಣ(45) ಎಂಬುವರ ಜೊತೆಗೆ ಮೇಘನಾ(25) ದೇವಾಲಯದಲ್ಲಿ ಮದುವೆಯಾದಂತ ಜೋಡಿಯಾಗಿದ್ದಾರೆ. ಹೀಗೆ 45 ವರ್ಷದ ವ್ಯಕ್ತಿ 25 ವರ್ಷಯ ಯುವತಿಯೊಂದಿಗೆ ವಿವಾಹವಾಗಿರುವಂತ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಕಳೆದ …

45 ವರ್ಷದ ವ್ಯಕ್ತಿಯ ಜೊತೆ 25 ವರ್ಷದ ಯುವತಿ ಮದುವೆ | ಇದು ಈಗಿನ ಧಾರಾವಾಹಿಗಳ ಕಥೆ ಅಲ್ಲ, ರಿಯಲ್ ಸ್ಟೋರಿ !! Read More »

ಮೂರನೇ ಹೆರಿಗೆಯಲ್ಲಿ ಬರೋಬ್ಬರಿ ಏಳು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ | ಒಟ್ಟು ಒಂಬತ್ತು ಮಕ್ಕಳಿರುವ ಈ ಪಾಕಿಸ್ತಾನಿ ಕುಟುಂಬ ಹೇಗಿದೆ ಗೊತ್ತಾ??

ಮಗುವಿಗೆ ಜನ್ಮ ನೀಡುವುದು ಆ ದೇವರು ಒಂದು ಹೆಣ್ಣಿಗೆ ನೀಡಿದ ಬಹುದೊಡ್ಡ ಉಡುಗೊರೆ. ಮಹಿಳೆಗಿರುವ ಅದ್ಭುತ ಶಕ್ತಿಗಳಲ್ಲಿ ಒಂದು ತಾಯ್ತಾನ. ಅವಳಿ, ತ್ರಿವಳಿ ಮಕ್ಕಳನ್ನು ಒಂದೇ ಬಾರಿ ಹೆತ್ತ ತಾಯಂದಿರನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬಳು ಮಹಿಳೆ ಬರೋಬ್ಬರಿ 7 ಮಕ್ಕಳಿಗೆ ಒಂದೇ ಬಾರಿ ಜನ್ಮ ನೀಡಿದ್ದಾಳೆ. ಮಹಿಳೆಯ ಹೊಟ್ಟೆಯಲ್ಲಿ ಅಷ್ಟೊಂದು ಮಕ್ಕಳನ್ನು ನೋಡಿದ ವೈದ್ಯರೇ ಅಚ್ಚರಿಗೊಂಡಿದ್ದು, ಇದು ಪವಾಡವೇ ಸರಿ ಎಂದು ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಖೈಬರ್​ ಫಖ್ತಂಖ್ವಾ ಅಬೋಟಾಬಾದ್​ನ ಖಾಸಗಿ …

ಮೂರನೇ ಹೆರಿಗೆಯಲ್ಲಿ ಬರೋಬ್ಬರಿ ಏಳು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ | ಒಟ್ಟು ಒಂಬತ್ತು ಮಕ್ಕಳಿರುವ ಈ ಪಾಕಿಸ್ತಾನಿ ಕುಟುಂಬ ಹೇಗಿದೆ ಗೊತ್ತಾ?? Read More »

ಸುಬ್ರಹ್ಮಣ್ಯ | ಕುಮಾರಧಾರ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ಇಂದು ಮಧ್ಯಾಹ್ನ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತ ಮಹಿಳೆಗೆ ಸುಮಾರು 55 ವರ್ಷ ಆಗಿರಬಹುದೆಂದು ಅಂದಾಜಿಸಲಾಗಿದೆ. ವಿಳಾಸ ಪತ್ತೆ ಇನ್ನಷ್ಟೇ ಆಗಬೇಕಿದೆ. ಗೃಹ ರಕ್ಷಕ ದಳದ ಸಿಬ್ಬಂದಿಗಳು ಸ್ಥಳೀಯರ ನೆರವಿನೊಂದಿಗೆ ಕುಮಾರಧಾರ ನದಿಯಿಂದ ಮೃತ ದೇಹವನ್ನು ಮೇಲೆಕ್ಕೆತ್ತಿದ್ದಾರೆ. ಬಳಿಕ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮೃತ ದೇಹವನ್ನು ಇರಿಸಲಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಜಂಬೂರಾಜ್ ಮಹಾಜನ್, ಎ ಎಸ್.ಐ ಮೋಹನ್. ಕೆ ಮಹಾಲಕ್ಷ್ಮಿ ಮಹೇಶ್ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಕೊಣಾಜೆ : ಬಿಜೆಪಿ ಕಾರ್ಯಕರ್ತನ ಕೊಲೆಯತ್ನ

ಮಂಗಳೂರು :ಬಿಜೆಪಿ ಕಾರ್ಯಕರ್ತನ ಕೊಲೆಗೆ ಯತ್ನಿಸಿರುವ ಘಟನೆ ಕೊಣಾಜೆ ಸಮೀಪ ನಿನ್ನೆ ತಡರಾತ್ರಿ ನಡೆದಿದೆ. ಬಿಜೆಪಿ ಕಾರ್ಯಕರ್ತ , ಕೊಣಾಜೆ ಗ್ರಾ.ಪಂ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ (38) ಎಂಬವರ ಕೊಲೆಗೆ ಯತ್ನಿಸಲಾಗಿದೆ. ಬೈಕಲ್ಲಿ ಬಂದ ಮೂವರು ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಸ್ನೇಹಿತ ಮಂಜುನಾಥ್ ಜೊತಗೆ ಬೈಕಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ. ಪವಾಡಸದೃಶವಾಗಿ ತಲವಾರು ದಾಳಿ ಕೈಗೆ ಮಾತ್ರ ಬಿದ್ದಿದೆ. ಗಾಯಾಳು ಪ್ರಕಾಶ್ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. …

ಕೊಣಾಜೆ : ಬಿಜೆಪಿ ಕಾರ್ಯಕರ್ತನ ಕೊಲೆಯತ್ನ Read More »

ಬಂಟ್ವಾಳ | ಕಟ್ಟೆಯಲ್ಲಿದ್ದ ಭಗವಾಧ್ವಜ ಹಾಗೂ ಹನುಮನ ಚಿತ್ರಕ್ಕೆ ಹಾನಿಗೈದ ದುಷ್ಕರ್ಮಿಗಳು, ದೂರು ದಾಖಲು

ಮಾರ್ಗಸೂಚಿ ಕಟ್ಟೆಯಲ್ಲಿದ್ದ ಭಗವಾಧ್ವಜ ಹಾಗೂ ಹನುಮಂತನ ಚಿತ್ರಕ್ಕೆ ದುಷ್ಕರ್ಮಿಗಳು ಹಾನಿ ಮಾಡಿದ ಘಟನೆ ಬಂಟ್ವಾಳದ ಎಸ್ ವಿಎಸ್ ಕಾಲೇಜಿನ ಬಳಿ ಇರುವ ಮಂಡಾಡಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. 10-12 ವರ್ಷಗಳಿಂದ ಈ ಕಟ್ಟೆ ಇದ್ದು, ಕಳೆದ ಕೆಲವು ದಿನಗಳ ಹಿಂದೆ ವಿಶ್ವ ಹಿಂದೂ ಪರಿಷತ್ ಮಂಡಾಡಿ ಶಾಖೆಯು ಈ ಕಟ್ಟೆಯನ್ನು ನವೀಕರಣಗೊಳಿಸಿತ್ತು. ಅದಕ್ಕೆ ಹನುಮಂತನ ಚಿತ್ರ, ಭಗವಾಧ್ವಜ ಅಳವಡಿಸಲಾಗಿತ್ತು. ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಕಟ್ಟೆಯನ್ನು ಒಡೆದುಹಾಕಿ, ಭಗವಾಧ್ವಜವನ್ನು ಕಿತ್ತೊಯ್ದಿದ್ದಾರೆ. ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಕಾರೊಂದು …

ಬಂಟ್ವಾಳ | ಕಟ್ಟೆಯಲ್ಲಿದ್ದ ಭಗವಾಧ್ವಜ ಹಾಗೂ ಹನುಮನ ಚಿತ್ರಕ್ಕೆ ಹಾನಿಗೈದ ದುಷ್ಕರ್ಮಿಗಳು, ದೂರು ದಾಖಲು Read More »

ಉಪ್ಪಿನಂಗಡಿ : ದ್ವಿಚಕ್ರ ವಾಹನಕ್ಕೆ ಮೀನು ಸಾಗಾಟದ ಲಾರಿ ಡಿಕ್ಕಿ ,ಬೈಕ್ ಸವಾರ ಸ್ಥಳದಲ್ಲೇ ಮೃತ್ಯು, ಇನ್ನೋರ್ವ ಗಂಭೀರ

ಉಪ್ಪಿನಂಗಡಿ: ಮೀನಿನ ಲಾರಿ ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ದಾರುಣ ಮೃತಪಟ್ಟ ಘಟನೆ ಉಪ್ಪಿನಂಗಡಿ ಗೋಳಿತೊಟ್ಟು ಸಮೀಪ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಮಂಗಳೂರು ಸಮೀಪದ ಕುಂಟಲ್ಪಾಡಿ ಪದವು ನಿವಾಸಿ ಸಚಿನ್(29) ಎಂದು ತಿಳಿದು ಬಂದಿದೆ.ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸವಾರನ ತಲೆಯ ಮೇಲೆ ಮೀನು ತುಂಬಿಸಿಕೊಂಡು ಹೊರಟಿದ್ದ ಲಾರಿ ಹರಿದಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಹಸವಾರನಿಗೆ ಗಂಭೀರ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.

ಮತ್ತೊಂದು ಅನೈತಿಕ ಪೊಲೀಸ್ ಗಿರಿ ಘಟನೆ ಬೆಳಕಿಗೆ | ಅನ್ಯಧರ್ಮದ ಯುವಕನ ಜೊತೆ ಸುತ್ತಾಡಿದ್ದಕ್ಕೆ 20 ಜನರಿಂದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ, ದೂರು ದಾಖಲು

ಬೆಳಗಾವಿಯಲ್ಲಿ ಅನೈತಿಕ ಪೊಲೀಸ್‌ಗಿರಿ ಘಟನೆಯೊಂದು ವರದಿಯಾಗಿದ್ದು, ಅನ್ಯಧರ್ಮದ ಯುವಕನ ಜೊತೆ ಯುವತಿ ಕಾಣಿಸಿಕೊಂಡಿದ್ದಕ್ಕೆ ಇಬ್ಬರನ್ನು ಥಳಿಸಿದ ಘಟನೆ ಬೆಳಕಿಗೆ ಬಂದಿದೆ. ಅಕ್ಟೋಬರ್ 14ರಂದು ರಾಯಭಾಗದ ಯುವಕ ಮತ್ತು ಸಂಕೇಶ್ವರದ ಯುವತಿ ಬೆಳಗಾವಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ನಿಲ್ದಾಣದಲ್ಲಿದ್ದ ಆಟೋ ಚಾಲಕನಲ್ಲಿ ಉದ್ಯಾನವನಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಆಟೋ ಚಾಲಕ ಉದ್ಯಾನವನದ ಬದಲು ಅಮನ್ ನಗರದ ನಿರ್ಜನ ಪ್ರದೇಶದ ಹೊಲಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ತನ್ನ ಸ್ನೇಹಿತರ ಜೊತೆಗೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. …

ಮತ್ತೊಂದು ಅನೈತಿಕ ಪೊಲೀಸ್ ಗಿರಿ ಘಟನೆ ಬೆಳಕಿಗೆ | ಅನ್ಯಧರ್ಮದ ಯುವಕನ ಜೊತೆ ಸುತ್ತಾಡಿದ್ದಕ್ಕೆ 20 ಜನರಿಂದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ, ದೂರು ದಾಖಲು Read More »

error: Content is protected !!
Scroll to Top