ಮೂರನೇ ಹೆರಿಗೆಯಲ್ಲಿ ಬರೋಬ್ಬರಿ ಏಳು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ | ಒಟ್ಟು ಒಂಬತ್ತು ಮಕ್ಕಳಿರುವ ಈ ಪಾಕಿಸ್ತಾನಿ ಕುಟುಂಬ ಹೇಗಿದೆ ಗೊತ್ತಾ??

Share the Article

ಮಗುವಿಗೆ ಜನ್ಮ ನೀಡುವುದು ಆ ದೇವರು ಒಂದು ಹೆಣ್ಣಿಗೆ ನೀಡಿದ ಬಹುದೊಡ್ಡ ಉಡುಗೊರೆ. ಮಹಿಳೆಗಿರುವ ಅದ್ಭುತ ಶಕ್ತಿಗಳಲ್ಲಿ ಒಂದು ತಾಯ್ತಾನ. ಅವಳಿ, ತ್ರಿವಳಿ ಮಕ್ಕಳನ್ನು ಒಂದೇ ಬಾರಿ ಹೆತ್ತ ತಾಯಂದಿರನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬಳು ಮಹಿಳೆ ಬರೋಬ್ಬರಿ 7 ಮಕ್ಕಳಿಗೆ ಒಂದೇ ಬಾರಿ ಜನ್ಮ ನೀಡಿದ್ದಾಳೆ. ಮಹಿಳೆಯ ಹೊಟ್ಟೆಯಲ್ಲಿ ಅಷ್ಟೊಂದು ಮಕ್ಕಳನ್ನು ನೋಡಿದ ವೈದ್ಯರೇ ಅಚ್ಚರಿಗೊಂಡಿದ್ದು, ಇದು ಪವಾಡವೇ ಸರಿ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಖೈಬರ್​ ಫಖ್ತಂಖ್ವಾ ಅಬೋಟಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಏಕಕಾಲದಲ್ಲಿ 7 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪ್ರಾರಂಭದಲ್ಲಿ ಅಲ್ಟ್ರಾಸೌಂಡ್​ ಮತ್ತು ಇನ್ನಿತರ ವರದಿಯನ್ನು ಗಮನಿಸಿದ ವೈದ್ಯರು 5 ಮಕ್ಕಳು ಮಹಿಳೆಯ ಹೊಟ್ಟೆಯಲ್ಲಿದ್ದಾರೆ ಎಂದು ಹೇಳಿದರು. ಆದರೆ ಹೆರಿಗೆ ವೇಳೆ 7 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗೂ 7 ಮಕ್ಕಳು ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ. ಈ ವರ್ಷವೇ ಮಾಲಿ ದೇಶದ ಮಹಿಳೆಯೊಬ್ಬಳು 9 ಮಕ್ಕಳನ್ನು ಹೆತ್ತು ದಾಖಲೆ ನಿರ್ಮಿಸಿದ್ದಳು.

ಯಾರ್​ ಮೊಹಮ್ಮದ್​ ​ ಅವರ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ತಕ್ಷಣ ಅಲ್ಲಿನ ಜಿನ್ನಾ ಅಂತರಾಷ್ಟ್ರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ 7 ಮಕ್ಕಳಲ್ಲಿ ನಾಲ್ಕು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳಿಗೆ ಮೊಹಮ್ಮದ್​ ಪತ್ನಿ ಜನ್ಮ ನೀಡಿದರು.

ಯಾರ್ ಮೊಹಮ್ಮದ್ ಅವರು ಈ ಮಕ್ಕಳನ್ನು ಬೆಳೆಸುವಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಅವರು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದು, ಕುಟುಂಬದ ಪ್ರತಿಯೊಬ್ಬರೂ ಅವರಿಗೆ ಸಹಾಯ ಮಾಡುತ್ತಾರೆ. ಈ 7 ಮಕ್ಕಳ ಜೊತೆಗೆ ಯಾರ್ ಮೊಹಮ್ಮದ್ ಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಂದರೆ ಅವರು ಈಗ ಒಟ್ಟು 9 ಮಕ್ಕಳನ್ನು ಹೊಂದಿದ್ದಾರೆ.

ವೈದ್ಯರು ಈ ಬಗ್ಗೆ ಮಾತನಾಡಿದ್ದು, 8 ತಿಂಗಳ ಗರ್ಭಿಣಿಯಾಗಿದ್ದ ಮಹಿಳೆ ಶನಿವಾರ ಮೊದಲ ಬಾರಿಗೆ ತನ್ನ ಬಳಿಗೆ ಬಂದಿದ್ದರು. ಆ ಸಮಯದಲ್ಲಿ ಆಕೆಯ ಗರ್ಭದಲ್ಲಿ ಐದು ಮಕ್ಕಳಿದ್ದರು ಎಂದು ತಿಳಿದುಬಂತು. ಮಹಿಳೆಯ ರಕ್ತದೊತ್ತಡ ತುಂಬಾ ಹೆಚ್ಚಾಗಿತ್ತು. ಅವಳ ಹೊಟ್ಟೆಯೂ ತುಂಬಾ ಊದಿಕೊಂಡಿತ್ತು. ಆಪರೇಷನ್ ಆಯ್ಕೆಯೂ ಅಪಾಯಕಾರಿ, ಏಕೆಂದರೆ ಮಹಿಳೆ ಈ ಹಿಂದೆ ಎರಡು ಆಪರೇಷನ್ ಗೆ ಒಳಗಾಗಿದ್ದಳು. ಆಕೆಯ ಹಳೆಯ ಹೊಲಿಗೆಗಳು ಮತ್ತು ಗರ್ಭಾಶಯಕ್ಕೆ ಹನಿಯಾಗಬಹುದೆಂಬ ಭಯವೂ ಇತ್ತು. ಹಾಗಾಗಿ ವೈದ್ಯರ ತಂಡವು ಒಂದು ಗಂಟೆಗೂ ಹೆಚ್ಚು ಕಾಲ ಚಿಕಿತ್ಸೆ ನೀಡಿ ನಂತರ ಮಾಡಿಸಿದರು.

ಸದ್ಯ ಮಹಿಳೆಯ ಐಸಿಯುನಲ್ಲಿ ಇದ್ದು, ಎಲ್ಲಾ ಏಳು ಮಕ್ಕಳು ಮತ್ತು ಮಹಿಳೆ ಆರೋಗ್ಯವಾಗಿದ್ದಾರೆ ತಿಳಿದುಬಂದಿದೆ.

Leave A Reply

Your email address will not be published.