Day: October 13, 2021

ಅ.16ರಂದು ಜಿಲ್ಲಾಧಿಕಾರಿಯವರಿಂದ ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ

ಮಂಗಳೂರು:- ಸರ್ಕಾರದ ಜನಪರ ಯೋಜನೆಗಳನ್ನು ತಳಮಟ್ಟದಲ್ಲಿ ಜನಸಾಮಾನ್ಯರಿಗೆ ನೇರವಾಗಿ ಒದಗಿಸಬೇಕೆಂಬ ಆಶಯದಂತೆ ಜಿಲ್ಲೆಯ ಎಲ್ಲಾ ಕಂದಾಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರತೀ ತಿಂಗಳ ಮೂರನೇ ಶನಿವಾರದಂದು ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ್ಯ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದರಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಇದೇ ಅ.16ರ ಶನಿವಾರ ಸುಳ್ಯ ತಾಲೂಕಿನ ಅಮರಮುಡ್ನೂರು ಮತ್ತು ಅಮರಪಡ್ನೂರು ಗ್ರಾಮಕ್ಕೆ ಭೇಟಿ ನೀಡಿ, ಅಂದು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಗ್ರಾಮ …

ಅ.16ರಂದು ಜಿಲ್ಲಾಧಿಕಾರಿಯವರಿಂದ ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ Read More »

ಕೈಕೊಟ್ಟ ಜಿ – ಮೈಲ್ ಸೇವೆ | ಸೇವೆ ಸ್ಥಗಿತಗೊಂಡು ಸಮಸ್ಯೆ ಎದುರಿಸಿದ ಬಳಕೆದಾರರು

ನವದೆಹಲಿ : ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಗೂಗಲ್ ಒಡೆತನದ ಇಮೇಲ್ ಸೇವೆಯಾಗಿರುವ ಜಿಮೈಲ್ ಸೇವೆ ಸ್ಥಗಿತಗೊಂಡು ಬಳಕೆದಾರರು ಸಂದೇಶ ಕಳುಹಿಸಲು ಸಮಸ್ಯೆ ಎದುರಿಸಿದ್ದಾರೆ. ಕೆಲವರಿಗೆ ಲಾಗಿನ್ ಆಗಲೇ ಆಗುತ್ತಿರಲಿಲ್ಲ ಮತ್ತು ಕೆಲವರಿಗೆ ಸಂದೇಶ ಕಳುಹಿಸುವುದು ಮತ್ತು ಸ್ವೀಕರಿಸಲು ಸಮಸ್ಯೆಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಶೇ 68ರಷ್ಟು ಬಳಕೆದಾರರಿಗೆ ಸಮಸ್ಯೆಯಾಗಿದ್ದು, ಶ 18ರಷ್ಟು ಬಳಕೆದಾರರು ಸರ್ವರ್ ಹಾಗೂ ಶೇ 14ರಷ್ಟು ಮಂದಿ ಲಾಗಿನ್ ಸಮಸ್ಯೆ ಎದುರಿಸಿದ್ದಾರೆ. ಕಳೆದ ವಾರ ಫೇಸ್ಟುಕ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸಪ್‌ಗಳ ಸೇವೆ ಸ್ಥಗಿತಗೊಂಡು …

ಕೈಕೊಟ್ಟ ಜಿ – ಮೈಲ್ ಸೇವೆ | ಸೇವೆ ಸ್ಥಗಿತಗೊಂಡು ಸಮಸ್ಯೆ ಎದುರಿಸಿದ ಬಳಕೆದಾರರು Read More »

ಪೆರಾಬೆ: ಪ.ಜಾತಿ/ಪ.ಪಂಗಡದ ನಿವೇಶನ ರಹಿತರಿಗೆ ಕಾದಿರಿಸಿದ ಜಾಗಕ್ಕೆ ತಂತಿ ಬೇಲಿ ಅಳವಡಿಸಿದ ಗ್ರಾ.ಪಂ

ಕಡಬ :ಕಡಬ ತಾಲೂಕಿನ ಪೆರಾಬೆ ಗ್ರಾಮದ ಇಡಾಳದಲ್ಲಿ ಪ.ಜಾತಿ/ಪ.ಪಂಗಡದ ನಿವೇಶನ ರಹಿತರಿಗೆ ಕಾದಿರಿಸಿದ ಜಾಗಕ್ಕೆ ಅ.13 ರಂದು ಗ್ರಾ.ಪಂ ವತಿಯಿಂದ ಬೇಲಿ ಹಾಕುವ ಕಾರ್ಯ ನಡೆದಿದ್ದು, ಗ್ರಾ.ಪಂ ಅಧಿಕಾರಿಗಳು,ಪೊಲೀಸರ ಉಪಸ್ಥಿತಿಯಲ್ಲಿ ದಲಿತ ಮುಖಂಡರ ಸಹಕಾರದೊಂದಿಗೆ ತಂತಿ ಬೇಲಿ ಹಾಕಲಾಯಿತು. ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಪಿಡಿಒ ಶಾಲಿನಿ, ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ರೈ, ಉಪಾಧ್ಯಕ್ಷೆ ಸಂಧ್ಯಾ ಸ್ಥಳದಲ್ಲಿ ಹಾಜರಿದ್ದರು. ಕಡಬ ಠಾಣಾ ಎ ಎಸೈ ಸುರೇಶ್, ಹೆಡ್ ಕಾನ್ಸ್ಟೇಬಲ್ ದೀಪು ಅವರು ಭದ್ರತೆ ಒದಗಿಸಿದರು. ಅಣ್ಣಿ ಎಳ್ತಿಮಾರ್, …

ಪೆರಾಬೆ: ಪ.ಜಾತಿ/ಪ.ಪಂಗಡದ ನಿವೇಶನ ರಹಿತರಿಗೆ ಕಾದಿರಿಸಿದ ಜಾಗಕ್ಕೆ ತಂತಿ ಬೇಲಿ ಅಳವಡಿಸಿದ ಗ್ರಾ.ಪಂ Read More »

ಕಡಬ : ಎರ್ಮಾಳದಲ್ಲಿ ಪತ್ತೆಯಾದ ಅಸ್ತಿಪಂಜರ ಸತೀಶ್ ಅವರದ್ದು ಎಂಬುದಕ್ಕೆ ಪುಷ್ಟಿ ನೀಡಿದೆ ವಾಚ್

ಕಡಬ: ಕುಂತೂರು ಗ್ರಾಮದ ಎರ್ಮಾಳ ಕಾಡಿನಲ್ಲಿ ಪತ್ತೆಯಾದ ಅಸ್ಥಿಪಂಜರ ಎರಡು ತಿಂಗಳ ನಾಪತ್ತೆಯಾಗಿದ್ದ ಸತೀಶ್ ಅವರದ್ದೆ ಎಂದು ಬಹುತೇಕ ಖಚಿತವಾಗಿದೆ. ಕುಂತೂರು ಗ್ರಾಮದ ಎರ್ಮಾಳ ನಿವಾಸಿ ಸತೀಶ್(50ವ) ನಾಪತ್ತೆಯಾದ ವ್ಯಕ್ತಿಯಾಗಿದ್ದು ಕಳೆದ ಆಗಸ್ಟ್ 2 ರಂದು ಮನೆಬಿಟ್ಟು ಹೋದವರು ಬಳಿಕ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸತೀಶರ ಪತ್ನಿ ಗೀತಾರವರು ಕಡಬ ಠಾಣೆಗೆ ದೂರು ನೀಡಿದ್ದರು. ಸತೀಶ್ ನಾಪತ್ತೆಯಾಗಿ ಎರಡು ತಿಂಗಳಾದ್ರೂ ನಾಪತ್ತೆಯಾದ ವ್ಯಕ್ತಿಯ ಪತ್ನಿ ದೂರು ನೀಡಿರಲಿಲ್ಲ. ಅ.10ರಂದು ನಾಪತ್ತೆಯಾದ ವ್ಯಕ್ತಿಯ ಮನೆಯಿಂದ ಸುಮಾರು ಅರ್ಧ ಕಿ.ಮೀ …

ಕಡಬ : ಎರ್ಮಾಳದಲ್ಲಿ ಪತ್ತೆಯಾದ ಅಸ್ತಿಪಂಜರ ಸತೀಶ್ ಅವರದ್ದು ಎಂಬುದಕ್ಕೆ ಪುಷ್ಟಿ ನೀಡಿದೆ ವಾಚ್ Read More »

ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಸಿಎಂ ಭೇಟಿ

ಮಂಗಳೂರು, ಅ,13(ಕ.ವಾ):- ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಅ.13ರ ಬುಧವಾರ ಮಂಗಳೂರು ನಗರದ ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯಕ್ಕೆ ಭೇಟಿ ನೀಡಿ,  ಅಲ್ಲಿನ ದಸರಾ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರಾದ ಸುನೀಲ್ ಕುಮಾರ್, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಪೊಲೀಸ್ …

ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಸಿಎಂ ಭೇಟಿ Read More »

ನೂಜಿಬಾಳ್ತಿಲ: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ಹಾನಿ

ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಹಳೆನೂಜಿ ಎಂಬಲ್ಲಿ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಉಂಟಾದ ಘಟನೆ ಮಂಗಳವಾರ ಸಂಭವಿಸಿದೆ. ಹಳೆನೂಜಿ ಬಾಬು ಗೌಡರ ಮಗ ಹೊನ್ನಪ್ಪ ಗೌಡ ಎಂಬವರು ವಾಸ್ತವ್ಯವಿದ್ದ ಮನೆಗೆ ಮಂಗಳವಾರ ಆಕಸ್ಮಿಕವಾಗಿ ಬೆಂಕಿ‌ಬಿದ್ದಿದ್ದು, ಘಟನೆಯಲ್ಲಿ ಕೊಠಡಿಯ ಪೀಠೋಪಕರಣ, ವಸ್ತುಗಳು ಬೆಂಕಿ ತಗುಲಿ ಹಾನಿಗೊಳಗಾಗಿದೆ. ಕೊಠಡಿಯಲ್ಲಿದ್ದ ಮೂರು ಕ್ವೀಂಟಾಲ್ ಗೂ ಅಧಿಕ ರಬ್ಬರ್, ಒಂದು ಸಾವಿರ ತೆಂಗು, ಅಡಿಕೆ, ಕರಿ ಮೆಣಸು, ಪೈಪ್, ಇತರೆ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ …

ನೂಜಿಬಾಳ್ತಿಲ: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ಹಾನಿ Read More »

ಪೆರಾಬೆಯ ಅನ್ನಡ್ಕದಲ್ಲಿ ಅಸ್ತಿಪಂಜರ ಪತ್ತೆಯಾದ ಪರಿಸರದಲ್ಲಿ ವಾಚ್,ಬಟ್ಟೆ-ಬರೆ ಪತ್ತೆ | ನಿಗೂಢತೆ ಹೆಚ್ಚಿಸಿದ ಪ್ರಕರಣ

ಕಡಬ :ಕುಂತೂರು ಸಮೀಪದ ಅನ್ನಡ್ಕದಲ್ಲಿ ಹರಿಯುವ ಸಣ್ಣ ತೊರೆಯಲ್ಲಿ ತಲೆಬುರುಡೆ ಮತ್ತು ಅಸ್ತಿಪಂಜರ ಪತ್ತೆಯಾದ ಪರಿಸರದಲ್ಲಿ ಈಗ ವಾಚ್ ಮತ್ತು ಬಟ್ಟೆ ಪತ್ತೆಯಾಗಿದೆ. ಕಡಬ ತಾಲೂಕಿನ ಕುಂತೂರು ಗ್ರಾಮದ ಎರ್ಮಾಳದ ಸತೀಶ್ ಎಂಬವರು ಎರಡು ತಿಂಗಳ ಹಿಂದೆಯೇ ನಾಪತ್ತೆಯಾಗಿದ್ದು ಪತಿ ನಾಪತ್ತೆಯಾದ ಬಗ್ಗೆ ಪತ್ನಿ ಗೀತಾ ಅವರು ಠಾಣೆಗೆ ದೂರು ನೀಡಿದ್ದರು. ಅಂಗಿ ಪ್ಯಾಂಟ್ ಜೊತೆ ಪತ್ತೆಯಾದ ವಾಚ್ ಹಲವು ವದಂತಿಗಳಿಗೆ ಕಾರಣವಾಗಿದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಸಂಶಯ ಕಾಡಿದೆ. ಏನಿದ್ದರೂ ಪೊಲೀಸರ ಸೂಕ್ತ ತನಿಖೆಯ …

ಪೆರಾಬೆಯ ಅನ್ನಡ್ಕದಲ್ಲಿ ಅಸ್ತಿಪಂಜರ ಪತ್ತೆಯಾದ ಪರಿಸರದಲ್ಲಿ ವಾಚ್,ಬಟ್ಟೆ-ಬರೆ ಪತ್ತೆ | ನಿಗೂಢತೆ ಹೆಚ್ಚಿಸಿದ ಪ್ರಕರಣ Read More »

ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರಿಗೆ ಪಡಿತರ ಸ್ಥಗಿತ -ಸಚಿವ ಜೆ.ಸಿ.ಮಾಧುಸ್ವಾಮಿ

ಕೋವಿಡ್-19 ಲಸಿಕೆ ಹಾಕಿಸಿಕೊಳ್ಳದವರಿಗೆ ಪಡಿತರ ನೀಡುವುದನ್ನು ಸ್ಥಗಿತಗೊಳಿಸುವಂತೆ ಸಲಹೆ ನೀಡಿದ್ದೇನೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. ತುಮಕೂರಿನಲ್ಲಿ ಕೆಡಿಪಿ ಸಭೆಯಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಈ ಹಿಂದೆ ಕೋವಿಡ್ ಲಸಿಕೆ ಇಲ್ಲ ಎನ್ನುತ್ತಿದ್ದರು.ಈಗ ಲಸಿಕೆ ಲಭ್ಯವಿದ್ದರೂ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ. ಕೋವಿಡ್ ತಡೆಗಟ್ಟಲು ಎಲ್ಲರಿಗೂ ಲಸಿಕೆ ಹಾಕುವುದು ಅನಿವಾರ್ಯವಾಗಿದ್ದು, ಹಾಕಿಸಿಕೊಳ್ಳದವರಿಗೆ ಪಡಿತರ ನೀಡುವುದನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದರು. ಕೊರೊನಾ ಸೋಂಕು ಯಾವ ಸಮಯದಲ್ಲಿ ಬೇಕಾದರೂ ಹೆಚ್ಚಾಗಬಹುದು. ಹೀಗಾಗಿ ಕೊರೊನಾ ನಿಯಂತ್ರಿಸಲು ಈಗಿನಿಂದಲೇ ಕ್ರಮ ಕೈಗೊಳ್ಳದಿದ್ದರೆ …

ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರಿಗೆ ಪಡಿತರ ಸ್ಥಗಿತ -ಸಚಿವ ಜೆ.ಸಿ.ಮಾಧುಸ್ವಾಮಿ Read More »

ಡಿಕೆಶಿ ಕಲೆಕ್ಷನ್ ಗಿರಾಕಿ ಎಂದ ಕಾಂಗ್ರೆಸ್ ಮುಖಂಡರಾದ ವಿ.ಎಸ್.ಉಗ್ರಪ್ಪ,ಸಲೀಂ ಪಕ್ಷದಿಂದ ಉಚ್ಚಾಟನೆ

ರಾಜ್ಯ ಕಾಂಗ್ರೆಸ್ ನಲ್ಲಿ ಪರ್ಸಂಟೇಜ್ ಬಗ್ಗೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಸಲೀಂ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದ್ದರೆ ಹಿರಿಯ ಮುಖಂಡ ವಿ.ಎಸ್. ಉಗ್ರಪ್ಪ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್. ಉಗ್ರಪ್ಪ ಕೆಪಿಸಿಸಿ ವೇದಿಕೆಯಲ್ಲಿಯೇ ರಾಜ್ಯ ಕಾಂಗ್ರೆಸ್ ನಲ್ಲಿ ಪರ್ಸಂಟೇಜ್ ಪಡೆದುಕೊಳ್ಳುವ ವಿಚಾರವಾಗಿ ಚರ್ಚೆ ನಡೆಸಿದ್ದರು. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಕಲೆಕ್ಷನ್ ಪಡೆದುಕೊಳ್ಳುತ್ತಿರುವ ಬಗ್ಗೆ ಆರೋಪಿಸಿ ಡಿಕೆಶಿ ಕಲೆಕ್ಷನ್ ಗಿರಾಕಿ …

ಡಿಕೆಶಿ ಕಲೆಕ್ಷನ್ ಗಿರಾಕಿ ಎಂದ ಕಾಂಗ್ರೆಸ್ ಮುಖಂಡರಾದ ವಿ.ಎಸ್.ಉಗ್ರಪ್ಪ,ಸಲೀಂ ಪಕ್ಷದಿಂದ ಉಚ್ಚಾಟನೆ Read More »

ರಾಷ್ಟ್ರಕವಿ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಕೃತಿಗೆ ಕ್ಲಬ್ ಹೌಸ್ ನಲ್ಲಿ ಅವಮಾನ |ಅಶ್ಲೀಲವಾಗಿ ಮಾತನಾಡಿದ ಯುವತಿ ವಿರುದ್ಧ ಭುಗಿಲೆದ್ದಿದೆ ಕನ್ನಡಿಗರ ಆಕ್ರೋಶ

ಕುವೆಂಪು ಹೆಸರನ್ನು ಕೇಳದ ಕನ್ನಡಿಗನಿಲ್ಲ. ಕನ್ನಡ ನಾಡಿನ ಹೆಮ್ಮೆಯ ರಸಕವಿ ಕುವೆಂಪು ಅವರು. ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಚೇತನ. ಇಂತಹ ಮಹಾನ್ ವ್ಯಕ್ತಿಗೆ ಅವಮಾನ ಮಾಡಿರುವ ಆರೋಪ ಬೆಳಕಿಗೆ ಬಂದಿದೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ರಚನೆ ಮಾಡಿರುವ ಶ್ರೀರಾಮಾಯಣ ದರ್ಶನಂ ಕೃತಿ ಬಗ್ಗೆ ಕ್ಲಬ್ ಹೌಸ್‌ನಲ್ಲಿ ಯುವತಿಯೊಬ್ಬಳು ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪ ಕೇಳಿ ಬಂದಿದೆ. ಈ ನಡುವೆ ಕೃತಿ …

ರಾಷ್ಟ್ರಕವಿ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಕೃತಿಗೆ ಕ್ಲಬ್ ಹೌಸ್ ನಲ್ಲಿ ಅವಮಾನ |ಅಶ್ಲೀಲವಾಗಿ ಮಾತನಾಡಿದ ಯುವತಿ ವಿರುದ್ಧ ಭುಗಿಲೆದ್ದಿದೆ ಕನ್ನಡಿಗರ ಆಕ್ರೋಶ Read More »

error: Content is protected !!
Scroll to Top