ಕಡಬ :ಕುಂತೂರು ಸಮೀಪದ ಅನ್ನಡ್ಕದಲ್ಲಿ ಹರಿಯುವ ಸಣ್ಣ ತೊರೆಯಲ್ಲಿ ತಲೆಬುರುಡೆ ಮತ್ತು ಅಸ್ತಿಪಂಜರ ಪತ್ತೆಯಾದ ಪರಿಸರದಲ್ಲಿ ಈಗ ವಾಚ್ ಮತ್ತು ಬಟ್ಟೆ ಪತ್ತೆಯಾಗಿದೆ.
ಕಡಬ ತಾಲೂಕಿನ ಕುಂತೂರು ಗ್ರಾಮದ ಎರ್ಮಾಳದ ಸತೀಶ್ ಎಂಬವರು ಎರಡು ತಿಂಗಳ ಹಿಂದೆಯೇ ನಾಪತ್ತೆಯಾಗಿದ್ದು ಪತಿ ನಾಪತ್ತೆಯಾದ ಬಗ್ಗೆ ಪತ್ನಿ ಗೀತಾ ಅವರು ಠಾಣೆಗೆ ದೂರು ನೀಡಿದ್ದರು.
ಅಂಗಿ ಪ್ಯಾಂಟ್ ಜೊತೆ ಪತ್ತೆಯಾದ ವಾಚ್ ಹಲವು ವದಂತಿಗಳಿಗೆ ಕಾರಣವಾಗಿದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಸಂಶಯ ಕಾಡಿದೆ. ಏನಿದ್ದರೂ ಪೊಲೀಸರ ಸೂಕ್ತ ತನಿಖೆಯ ಬಳಿಕ ತಿಳಿದು ಬರಲಿದೆ.
You must log in to post a comment.