ರಾಷ್ಟ್ರಕವಿ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಕೃತಿಗೆ ಕ್ಲಬ್ ಹೌಸ್ ನಲ್ಲಿ ಅವಮಾನ |ಅಶ್ಲೀಲವಾಗಿ ಮಾತನಾಡಿದ ಯುವತಿ ವಿರುದ್ಧ ಭುಗಿಲೆದ್ದಿದೆ ಕನ್ನಡಿಗರ ಆಕ್ರೋಶ

0 5

ಕುವೆಂಪು ಹೆಸರನ್ನು ಕೇಳದ ಕನ್ನಡಿಗನಿಲ್ಲ. ಕನ್ನಡ ನಾಡಿನ ಹೆಮ್ಮೆಯ ರಸಕವಿ ಕುವೆಂಪು ಅವರು. ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಚೇತನ. ಇಂತಹ ಮಹಾನ್ ವ್ಯಕ್ತಿಗೆ ಅವಮಾನ ಮಾಡಿರುವ ಆರೋಪ ಬೆಳಕಿಗೆ ಬಂದಿದೆ.

ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ರಚನೆ ಮಾಡಿರುವ ಶ್ರೀರಾಮಾಯಣ ದರ್ಶನಂ ಕೃತಿ ಬಗ್ಗೆ ಕ್ಲಬ್ ಹೌಸ್‌ನಲ್ಲಿ ಯುವತಿಯೊಬ್ಬಳು ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪ ಕೇಳಿ ಬಂದಿದೆ. ಈ ನಡುವೆ ಕೃತಿ ಬಗ್ಗೆ ಕ್ಲಬ್ ಹೌಸಿನಲ್ಲಿ ಮಾತನಾಡಿರುವ ಆಡಿಯೋ ಕೂಡ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.

‘ಶ್ರೀರಾಮಾಯಣ ದರ್ಶನಂ’ ಕನ್ನಡಕ್ಕೆ ಪ್ರಥಮ ಜ್ಞಾನಪೀಠ ತಂದುಕೊಟ್ಟ ಕೃತಿಯಾಗಿದ್ದು, ಕನ್ನಡ ನಾಡಿನ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ ಮಹಾನ್ ಕೃತಿಯಾಗಿ ನಮ್ಮ ಮುಂದೆ ಗುರುತಿಸಿಕೊಂಡಿದೆ. ಆದರೆ ಇಂತಹ ಕೃತಿಗೇ ಅವಮಾನ ಮಾಡಿರುವುದು ವಿಷಾದಕರ ಸಂಗತಿ.

https://twitter.com/kannadiga1991/status/1447493693145894912?s=20

ಕ್ಲಬ್ ಹೌಸ್‌ನಲ್ಲಿ ‘ನಾಲೆಡ್ಜ್ ಹೌಸ್ ಕನ್ನಡ’ ಎನ್ನುವ ಗ್ರೂಪ್ ನಲ್ಲಿ ಚರ್ಚೆಯೊಂದು ನಡೆಯುತಿತ್ತು. ಈ ವೇಳೇ ದಿವ್ಯ ನಾಯಕ್ ಎನ್ನುವ ಹೆಸರಿನ ಹುಡುಗಿ ಮಾತನಾಡುತ್ತಾ It is something fuck all shit ಅಂಥ ಅವಹೇಳನ ಮಾಡಿದಲ್ಲದೇ, ಕುವೆಂಪು ಅವರ ಮಹಾನ್ ಕೃತಿ ಬಗ್ಗೆ ಹೀಯಾಳಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅವಮಾನ ಮಾಡಿದ್ದಾರಂತೆ.

ಸದ್ಯ ಟ್ವಿಟರ್ ನಲ್ಲಿ ಯುವತಿಯ ಮಾತು ವೈರಲ್ ಆಗಿದ್ದು, ವಿವಾದ ಹುಟ್ಟಿಕೊಳ್ಳುತ್ತಿದ್ದ ಹಾಗೆಯೇ ಆಕೆಗೆ ಬಂಧನದ ಭೀತಿ ಎದುರಾಗಿದೆ.

Leave A Reply