Day: October 3, 2021

ಉಚಿತವಾಗಿ ಮನಸೋ ಇಚ್ಛೆ ಪಿಜ್ಜಾ ತಿನ್ನುವ ಅವಕಾಶ | ಪಿಜ್ಜಾ ಉಚಿತವಾಗಿ ತಿಂದವರಿಗೆ 5 ಲಕ್ಷ ರೂಪಾಯಿಗಳ ಕ್ಯಾಶ್ ಕೊಡುಗೆ ಬೇರೆ !

ಪಿಜ್ಜಾ ಅಂದ್ರೆ ಬಹುತೇಕ ಮಂದಿಗೆ ತುಂಬಾ ಪ್ರೀತಿ. ಅದರಲ್ಲಿಯೂ ಈಗಿನ ಮಕ್ಕಳಿಗಂತೂ ಪಿಜ್ಜಾ, ಬರ್ಗರ್ ಮೇಲೆ ಅತಿ ಹೆಚ್ಚು ಪ್ರೀತಿ. ಇದನ್ನು ಸಿಕ್ಕಾಪಟ್ಟೆ ತಿನ್ನುವುದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಎಂದು ಹೇಳಿದರೂ ಅದರ ಹೆಸರು ಕೇಳಿದರೆ ಬಾಯಲ್ಲಿ ನೀರು ಜಾರಿಸುವವರೆ ಜಾಸ್ತಿ.ಅದೇ ಕಾರಣಕ್ಕೆ ಇರಬೇಕು, ಪಿಜ್ಜಾ ಗೆ ರೇಟ್ ಕೂಡ ತುಂಬಾ ಜಾಸ್ತಿ. ಇಂತಹಾ ಪಿಜ್ಜಾ ಉಚಿತವಾಗಿ ಸಿಗುವಂತಿದ್ದರೆ ಎಂದು ನೀವೆಲ್ಲಾ ಏಷ್ಟೋ ಬಾರಿ ನೀವು ಅಂದುಕೊಂಡಿರಬಹುದು. ಇದೀಗ ನಿಮ್ಮ ಆಸೆ ನೆರವೇರುವ ಸಂದರ್ಭ ಬಂದಿದೆ. ಪಿಜ್ಜಾ …

ಉಚಿತವಾಗಿ ಮನಸೋ ಇಚ್ಛೆ ಪಿಜ್ಜಾ ತಿನ್ನುವ ಅವಕಾಶ | ಪಿಜ್ಜಾ ಉಚಿತವಾಗಿ ತಿಂದವರಿಗೆ 5 ಲಕ್ಷ ರೂಪಾಯಿಗಳ ಕ್ಯಾಶ್ ಕೊಡುಗೆ ಬೇರೆ ! Read More »

ಬಿಸಿಲು-ಮಳೆ‌ ಜುಗಲ್‌ಬಂಧಿ | ಕೋವಿಡ್ ನಡುವೆ ಹೆಚ್ಚುತ್ತಿದೆ ವೈರಲ್ ಜ್ವರ

ಪ್ರಸ್ತುತ ಬಿಸಿಲು ಮತ್ತು ಮಳೆಯ ಜುಗಲ್‌ಬಂಧಿಯ ವಾತಾವರಣ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಹಿರಿಯರು, ಮಕ್ಕಳೆನ್ನದೆ ವೈರಲ್‌ ಜ್ವರ ಕಾಣಿಸುತ್ತಿದೆ. ಕೋವಿಡ್‌ ನಡುವೆ ಇದು ಆತಂಕಕ್ಕೆ ಕಾರಣವಾಗಿದೆ. ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಿದ್ದು, ಮಕ್ಕಳಲ್ಲಿ ಯಾವುದೇ ರೀತಿಯ ಜ್ವರ ಕಂಡು ಬಂದರೂ ಹೆತ್ತವರಲ್ಲಿ ಆತಂಕ ಮನೆ ಮಾಡುತ್ತದೆ. 2 -3 ವಾರಗಳ ಹಿಂದೆ ಜ್ವರ ಬಾಧೆ ಹೆಚ್ಚಾಗಿತ್ತು. ಈಗ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. ಆದರೆ ಕೆಲವು ದಿನಗಳ ಬಿಸಿಲಿನ ಬಳಿಕ ಮತ್ತೆ ಮಳೆ ಸುರಿಯುತ್ತಿರುವುದರಿಂದ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ಕಳೆದ …

ಬಿಸಿಲು-ಮಳೆ‌ ಜುಗಲ್‌ಬಂಧಿ | ಕೋವಿಡ್ ನಡುವೆ ಹೆಚ್ಚುತ್ತಿದೆ ವೈರಲ್ ಜ್ವರ Read More »

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿಯನ್ನು ಬಂಧಿಸಿ, ಗಲ್ಲಿಗೇರಿಸ್ತಾರಂತೆ !! | ಕಾಂಗ್ರೆಸ್ ನಾಯಕನ ಹೇಳಿಕೆ ಆತಂಕ ಸೃಷ್ಟಿಸಿದೆ

ರಾಜಕೀಯದಲ್ಲಿ ಒಬ್ಬರಿಗೊಬ್ಬರ ಕೆಸರೆರಚಾಟ ಮಾಮೂಲು. ಅದು ಬೇರೆ ಹಂತಕ್ಕೆ ತಲುಪುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವೊಮ್ಮೆ ತಮ್ಮ ಮಾತಿನ ಗಡಿ ಮೀರುವವರೂ ಇದ್ದಾರೆ. ಅಂತಹ ಸಾಲಿಗೆ ಇದೀಗ ಕಾಂಗ್ರೆಸ್ ನಾಯಕರೊಬ್ಬರು ಸಿಲುಕಿದ್ದಾರೆ. ತಮ್ಮ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಜಮ್ಮು-ಕಾಶ್ಮೀರದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಅಬ್ದುಲ್ ರಶೀದ್ ಡಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಭವಿಷ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸದ್ಯದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಬಂಧಿಸಿ, ಗಲ್ಲಿಗೇರಿಸುತ್ತೇವೆ …

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿಯನ್ನು ಬಂಧಿಸಿ, ಗಲ್ಲಿಗೇರಿಸ್ತಾರಂತೆ !! | ಕಾಂಗ್ರೆಸ್ ನಾಯಕನ ಹೇಳಿಕೆ ಆತಂಕ ಸೃಷ್ಟಿಸಿದೆ Read More »

ಮಿಸೆಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯ ಕಿರೀಟವನ್ನು ಮುಡಿಗೇರಿಸಿಕೊಂಡ ಸುಳ್ಯದ ಮಹಿಳೆ | ಸಿಂಗಾಪುರದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಕರಾವಳಿಯ ಈ ಕುವರಿ

ಮಿಸೆಸ್ ಇಂಡಿಯಾ ಐ ಆ್ಯಮ್ ಪವರ್ ಫುಲ್ ಏಷ್ಯಾ – 2021 ಆಗಿ ಸುಳ್ಯದ ಬ್ಯಾಂಕ್ ಆಫ್ ಬರೋಡಾ ಉದ್ಯೋಗಿಯಾಗಿರುವ ಸುಳ್ಯ ಬೀರಮಂಗಲ ನಿವಾಸಿ ಶ್ರೀಮತಿ ಸುಪ್ರೀತಾ ಕೆ.ಎಸ್. ರವರು ಆಯ್ಕೆಯಾಗಿದ್ದು, ಈ ಸೌಂದರ್ಯ ಸ್ಪರ್ಧೆಯ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಸೌಂದರ್ಯ ಸ್ಪರ್ಧೆಯು ಸ್ಟೆರ್ಲಿಂಗ್ ಅಥರ್ವ ಜೈಪುರ ಹೋಟೆಲ್ ನ ಸಭಾಂಗಣದಲ್ಲಿ ನಡೆಯಿತು. ಮಿಸೆಸ್ ಇಂಡಿಯಾ ಸೌತ್ ವಿಭಾಗದಲ್ಲಿ ನಂದಿನಿ ನಾಗರಾಜ್ ಮತ್ತು ನಾರ್ತ್ ನಲ್ಲಿ ಜಸ್ಟೀತ್ ಇವರಿಬ್ಬರು ಸೇರಿ ಆಯೋಜಿಸಿದ್ದ ಈ ಮಿಸೆಸ್ ಇಂಡಿಯಾ …

ಮಿಸೆಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯ ಕಿರೀಟವನ್ನು ಮುಡಿಗೇರಿಸಿಕೊಂಡ ಸುಳ್ಯದ ಮಹಿಳೆ | ಸಿಂಗಾಪುರದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಕರಾವಳಿಯ ಈ ಕುವರಿ Read More »

ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯವಾಗಲಿ: ಗೌರಿಶಂಕರ. ಬಿ. ಕೆ

ನಮ್ಮ ಸುತ್ತ ಮುತ್ತಲಿನ ವಾತಾವರಣ ಕೂಡಿದಾಗ ಮಾತ್ರ ನಮ್ಮ ಆರೋಗ್ಯದೊಂದಿಗೆ ನಮ್ಮ ಆಂತರಿಕ ಬೆಳವಣಿಗೆ ಸಾಧ್ಯ. ಆದುದರಿಂದ ಸ್ವಚ್ಛತೆಯಿಂದ ಇರುವುದು ನಮ್ಮ ಆದ್ಯ ಕರ್ತವ್ಯವಾಗಲಿ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳಾದ ಗೌರಿಶಂಕರ ಬಿ. ಕಡೇಚೂರ ಇವರು ಕಣಬರಗಿಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮ ದಿನಾಚರಣೆ ಪ್ರಯುಕ್ತವಾಗಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗಾಂಧಿಯವರು ಸದಾಕಾಲ ಭಜಿಸುತ್ತಿದ್ದ “ರಘುಪತಿ ರಾಘವ …

ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯವಾಗಲಿ: ಗೌರಿಶಂಕರ. ಬಿ. ಕೆ Read More »

ಬಂಟ್ವಾಳ : ಅಂತ್ಯೋದಯ ಸಮಾವೇಶದ ಪೂರ್ವಭಾವಿಯಾಗಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪರಿಶೀಲನೆ | ಅ.4ರಂದು ಬಂಟವಾಳದ ಬಂಟರ ಭವನದಲ್ಲಿ ಅಂತ್ಯೋದಯ ಸಮಾವೇಶ

ಬಂಟ್ವಾಳ: ದ.ಕ. ಜಿಲ್ಲಾಡಳಿತ, ಜಿ.ಪಂ., ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಅ. 4ರಂದು ಬಿ.ಸಿ.ರೋಡ್‌ನ‌ ಬಂಟವಾಳದ ಬಂಟರ ಭವನದಲ್ಲಿ ನಡೆಯಲಿರುವ ಅಂತ್ಯೋದಯ ಸಮಾವೇಶದ ಪೂರ್ವಭಾವಿಯಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭವನವನ್ನು ವೀಕ್ಷಿಸಿ ಅಧಿಕಾರಿಗಳು ಹಾಗೂ ಪ್ರಮುಖರ ಜತೆ ಸಮಾಲೋಚನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಇಲಾಖೆಗಳ ಮಾಹಿತಿಗಳು ಮಧ್ಯವರ್ತಿಗಳ ಕಾಟವಿಲ್ಲದೆ ತಳಮಟ್ಟದ ಜನತೆಗೆ ತಲುಪ ಬೇಕಾದರೆ ಚುನಾಯಿತ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿರುವುದು ಅಗತ್ಯವಾಗಿದೆ. …

ಬಂಟ್ವಾಳ : ಅಂತ್ಯೋದಯ ಸಮಾವೇಶದ ಪೂರ್ವಭಾವಿಯಾಗಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪರಿಶೀಲನೆ | ಅ.4ರಂದು ಬಂಟವಾಳದ ಬಂಟರ ಭವನದಲ್ಲಿ ಅಂತ್ಯೋದಯ ಸಮಾವೇಶ Read More »

ಕ್ಯಾಂಪ್ಕೋ ರಿಕ್ರಿಯೇಷನ್ ಸೆಂಟರಿನಲ್ಲಿ ಕುಟುಂಬ ಮಿಲನ್

ಪುತ್ತೂರು:-ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರ್ ವತಿಯಿಂದ ಕ್ಯಾಂಪ್ಕೋ ಉದ್ಯೋಗಿಗಳ ಕುಟುಂಬ ಮಿಲನ್ ಕಾರ್ಯಕ್ರಮವು ಕ್ಯಾಂಪ್ಕೋ ರಿಕ್ರಿಯೇಷನ್ ಸೆಂಟರಿನ ವಸತಿ ನಿಲಯದ ಸಭಾಂಗಣದಲ್ಲಿ ನಡೆಯಿತು.ಕುಟುಂಬ ಮಿಲನ್ ಕಾರ್ಯಕ್ರಮಕ್ಕೆ ಮಾರ್ಗದರ್ಶಕರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಶ್ರೀಯುತ ಸು. ರಾಮಣ್ಣ ನವರು ಉಪಸ್ಥಿತರಿದ್ದರು. ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರಿನ ಕಾರ್ಯದರ್ಶಿ ಶ್ರೀ ರಮೇಶ ನೆಗಳಗುಳಿ ಅವರು ಪ್ರಸ್ಥಾವಿಕ ಮಾತನ್ನಾಡಿ ಕ್ಯಾಂಪ್ಕೋ ಕುಟುಂಬವು ಚೆನ್ನಾಗಿ ನೆಮ್ಮದಿಯಿಂದ ಇದ್ದರೆ ಕ್ಯಾಂಪ್ಕೋ ಉದ್ಯೋಗಿಗಳಿಗೆ ಸಂಸ್ಥೆಯಲ್ಲಿ ಚೆನ್ನಾಗಿ ಕೆಲಸ …

ಕ್ಯಾಂಪ್ಕೋ ರಿಕ್ರಿಯೇಷನ್ ಸೆಂಟರಿನಲ್ಲಿ ಕುಟುಂಬ ಮಿಲನ್ Read More »

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಳ

ಕರಾವಳಿಯ ಪ್ರಮುಖ ದೇಗುಲಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಗಳಲ್ಲಿ ಸೇವೆಗಳಿಗೆ ಹಾಗೂ ವಾರಾಂತ್ಯ ದರ್ಶನಕ್ಕೆ ವಿಧಿಸಿದ್ದ ನಿರ್ಬಂಧಗಳು ತೆರವುಗೊಂಡಿದ್ದು, ಇದೀಗ ವಿವಿಧ ಸೇವೆಗಳು ಹಾಗೂ ಅನ್ನದಾನವೂ ಆರಂಭಗೊಂಡಿವೆ. ಹಾಗಾಗಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಕೊಲ್ಲೂರು, ಉಡುಪಿ ಕೃಷ್ಣಮಠ ಸಹಿತ ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ಭಕ್ತರ ಭೇಟಿ ಚುರುಕಾಗಿದೆ. ಶನಿವಾರ,ಭಾನುವಾರಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಳಗೊಂಡಿದೆ.

ಮಂಗಳೂರು | ಪಿಲಿಕುಳದಲ್ಲಿ ಗೂಡಿನಿಂದ ಹೊರ ಬಂದ ಸಿಂಹ | ಕೆಲಕಾಲ ಆತಂಕ ಸೃಷ್ಟಿಸಿದ್ದ ವಿದ್ಯಮಾನ ತಡವಾಗಿ ಬೆಳಕಿಗೆ !!

ಮಂಗಳೂರಿನ ಪಿಲಿಕುಳ ಡಾ.ಶಿವರಾಮ ಕಾರಂತ ವನ್ಯಜೀವಿ ಧಾಮದ ಸಿಂಹವೊಂದು ತನ್ನ ಗೂಡಿನಿಂದ ಹೊರಗೆ ಬಂದು ಕೆಲಕಾಲ ಆತಂಕ ಸೃಷ್ಟಿಸಿದ್ದ ವಿದ್ಯಮಾನ ತಡವಾಗಿ ಬೆಳಕಿಗೆ ಬಂದಿದೆ. ಈ ವಿದ್ಯಮಾನ ನಡೆದಿರುವುದು ಜುಲೈನಲ್ಲಿ. ಪಿಲಿಕುಳದಲ್ಲಿ ಚಿರತೆ, ಹುಲಿ, ಆ ಬಳಿಕ ಸಿಂಹದ ಎನ್‌ಕ್ಲೋಶರ್ ಇದೆ. ಎನ್‌ಕ್ಲೋಶರ್ ಎಂದರೆ ಮೃಗಾಲಯದ ಪ್ರಾಣಿಗಳಿಗೆ ವಿಹರಿಸುವುದಕ್ಕೆ ಬೇಕಾದ ವಿಶಾಲವಾದ ಆವರಣ. ಇದು ಕೊನೆಯಲ್ಲಿ ಆಳವಾದ ಕಂದಕ ಹಾಗೂ ಬೇಲಿ ಇರುವ ಕಾರಣ ಮೃಗಗಳಿಗೆ ಸಾಮಾನ್ಯವಾಗಿ ಹೊರಗೆ ಬರುವುದ ಆಗುವುದಿಲ್ಲ. ವೀಕ್ಷಕರು ಹೊರಗೆ ನಿಂತು ಸುರಕ್ಷಿತವಾಗಿ …

ಮಂಗಳೂರು | ಪಿಲಿಕುಳದಲ್ಲಿ ಗೂಡಿನಿಂದ ಹೊರ ಬಂದ ಸಿಂಹ | ಕೆಲಕಾಲ ಆತಂಕ ಸೃಷ್ಟಿಸಿದ್ದ ವಿದ್ಯಮಾನ ತಡವಾಗಿ ಬೆಳಕಿಗೆ !! Read More »

ರಸ್ತೆಗೆ ಅಡ್ಡವಾಗಿ ಬಂದ ಕಾಡು ಹಂದಿಗೆ ಸ್ಕೂಟರ್ ಡಿಕ್ಕಿ | ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು, ಗಂಭೀರ ಗಾಯಗೊಂಡ ಕಾಡುಹಂದಿ ಸ್ಥಳದಲ್ಲೇ ಸಾವು

ರಸ್ತೆಗಡ್ಡವಾಗಿ ಬಂದ ಕಾಡಹಂದಿಗೆ ಸ್ಕೂಟರ್ ಬಡಿದ ಪರಿಣಾಮ ಸ್ಕೂಟರ್ ಪಲ್ಟಿಯಾಗಿ ಸವಾರ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಮುಳ್ಳೇರಿಯ ಸಮೀಪದ ಕರ್ಮಂತೋಯಲ್ಲಿ ನಡೆದಿದೆ. ಕರ್ಮಂತೋಡಿ ಕಾವುಂಗಾಲ್ ನ ಕುಞಬು ನಾಯರ್ (60) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮುಳ್ಳೇರಿಯ ಪೇಟೆಗೆ ತೆರಳಿ ಮನೆಗೆ ಮರಳುತ್ತಿದ್ದಾಗ ಕರ್ಮಂತೋಡಿಯಲ್ಲಿ ಕಾಡುಹಂದಿಯು ದಾರಿಗಡ್ಡವಾಗಿ ಓಡಿದ್ದು, ಸ್ಕೂಟರ್ ಹಂದಿಗೆ ಬಡಿದಿದೆ. ಆ ವೇಳೆ ನಿಯಂತ್ರಣ ತಪ್ಪಿದ ಸ್ಕೂಟರ್ ಮಗುಚಿ ಬಿದ್ದಿದ್ದು, ರಸ್ತೆಗೆನಸೆಯಲ್ಪಟ್ಟ ಕುಞಬು ನಾಯರ್, ಗಂಭೀರ ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಮುಳ್ಳೇರಿಯ ಆಸ್ಪತ್ರೆಯಲ್ಲಿ …

ರಸ್ತೆಗೆ ಅಡ್ಡವಾಗಿ ಬಂದ ಕಾಡು ಹಂದಿಗೆ ಸ್ಕೂಟರ್ ಡಿಕ್ಕಿ | ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು, ಗಂಭೀರ ಗಾಯಗೊಂಡ ಕಾಡುಹಂದಿ ಸ್ಥಳದಲ್ಲೇ ಸಾವು Read More »

error: Content is protected !!
Scroll to Top