Day: September 13, 2021

ದೇಲಂಪಾಡಿ: ಧರ್ಮಸಿಂಧು ಪ್ರತಿಷ್ಟಾನ ಉದ್ಘಾಟನೆ

ಕಾಸರಗೋಡು: ಇಲ್ಲಿನ ದೇಲಂಪಾಡಿಯಲ್ಲಿ ’ಧರ್ಮಸಿಂಧು’ ಪ್ರತಿಷ್ಠಾನ ದೇಲಂಪಾಡಿ ಎಂಬ ನೂತನ ಸಂಸ್ಥೆಯು ಸೆ.10ರಂದು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಇವರ ಆಶಿರ್ವಚನದೊಂದಿಗೆ ಶ್ರೀ ರಾಮ ಭಜನಾ ಮಂದಿರ ದೇಲಂಪಾಡಿ ಯಲ್ಲಿ ಉದ್ಘಾಟನೆಗೊಂಡಿತು. ಈ ವೇಳೆ 2021ರ ಕೇರಳ ರಾಜ್ಯ ಅಧ್ಯಾಪಕ ಪುರಸ್ಕೃತರಾದ ನಾರಾಯಣ ಮಾಸ್ಟರ್ ದೇಲಂಪಾಡಿ ಇವರನ್ನು ಅಭಿನಂದಿಸಲಾಯಿತು. ಸಮಾರಂಭದ ವೇದಿಕೆಯ ಅಧ್ಯಕ್ಷತೆಯನ್ನು ಶಿವರಾಮ ಕಲ್ಲೂರಾಯ ವಹಿಸಿದ್ದು, ರವಿಕುಮಾರ್ ಬಂದ್ಯಡ್ಕ ಉಪಸ್ಥಿತರಿದ್ದರು.ಸಮಾರಂಭದಲ್ಲಿ ಧರ್ಮಸಿಂಧು ಪ್ರತಿಷ್ಠಾನದ ಅಧ್ಯಕ್ಷರಾಗಿ ಶ್ರೀ ಪದ್ಮನಾಭ ರಾವ್ ಮಯ್ಯಾಳ, ಉಪಾಧ್ಯಕ್ಷರಾಗಿ ಗಣೇಶ್ ದೇಲಂಪಾಡಿ, ಕಾರ್ಯದರ್ಶಿ …

ದೇಲಂಪಾಡಿ: ಧರ್ಮಸಿಂಧು ಪ್ರತಿಷ್ಟಾನ ಉದ್ಘಾಟನೆ Read More »

ಪುತ್ತೂರು : ಗ್ರಾಹಕರ ಸೋಗಿನಲ್ಲಿ ಜೋಸ್ ಆಲುಕ್ಕಾಸ್ ಜುವೆಲ್ಸ್‌ನಿಂದ ಚಿನ್ನಾಭರಣ ಕಳವು | ಮೂವರ ಬಂಧನ

ಚಿನ್ನಾಭರಣ ತೆಗೆದುಕೊಳ್ಳುವ ರೀತಿಯಲ್ಲಿ ಬಂದು ಚಿನ್ನಾಭರಣವನ್ನು ಕಳ್ಳವುಗೈದ ಘಟನೆ ಸೆ.1 ರಂದು ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಜೋಸ್ ಆಲುಕ್ಕಾಸ್ ನಲ್ಲಿ ನಡೆದಿದ್ದು, ಆರೋಪಿಗಳನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ದಾವಣಗೆರೆ ಜಿಲ್ಲೆ ನಿವಾಸಿಗಳಾದ ಬೀಬಿಜಾನ್ , ಹುಸೇನ್ ಬಿ , ಜೈತುಂಬಿ ರವರುಗಳನ್ನು ಪುತ್ತೂರಿನ ಬಿರಮಲೆಗುಡ್ಡೆ ಎಂಬಲ್ಲಿ ವಶಕ್ಕೆ ಪಡೆದು ಆರೋಪಿಗಳಿಂದ 2,60,400/- ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಪುತ್ತೂರಿನ ಹಿಂದೂಸ್ತಾನ್ ಕಾಂಪ್ಲೆಕ್ಸ್ ನಲ್ಲಿರುವ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಗೆ ಸೆ.1 ರಂದು ಬುರ್ಖಾ …

ಪುತ್ತೂರು : ಗ್ರಾಹಕರ ಸೋಗಿನಲ್ಲಿ ಜೋಸ್ ಆಲುಕ್ಕಾಸ್ ಜುವೆಲ್ಸ್‌ನಿಂದ ಚಿನ್ನಾಭರಣ ಕಳವು | ಮೂವರ ಬಂಧನ Read More »

ಸರ್ಕಾರದ ಮುಖ್ಯ ಸಚೇತಕರಾಗಿ ಶಾಸಕ ಸತೀಶ್ ರೆಡ್ಡಿ

ಬೆಂಗಳೂರಿನಲ್ಲಿ ವಿಧಾನ ಸಭೆ ಅಧಿವೇಶನ ಇಂದಿನಿಂದ ಆರಂಭಗೊಂಡಿದ್ದು,ಅದಕ್ಕೂ ಮೊದಲು ಸರ್ಕಾರದ ಮುಖ್ಯ ಸಚೇತಕ ಹುದ್ದೆ ಆಯ್ಕೆ ನಡೆದಿದೆ.ಶಾಸಕ ಸತೀಶ್ ರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ . ಈ ಹಿಂದೆ ಮುಖ್ಯಸಚೇತಕರಾಗಿದ್ದ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಸಚಿವರಾಗಿರುವುದರಿಂದ ಸಚೇತಕ ಹುದ್ದೆಗೆ ರಾಜೀನಾಮೆ ನೀಡಿದ್ದರು‌.ಇದೀಗ ಶಾಸಕ ಸತೀಶ್ ರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ . ಈ ಸ್ಥಾನಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಹೆಸರೂ ಚಾಲ್ತಿಯಲ್ಲಿತ್ತು.ಆದರೆ ಹಿರಿಯ ಶಾಸಕ ಸತೀಶ್ ರೆಡ್ಡಿ ಅವರನ್ನು ಸರಕಾರ ನೇಮಕಗೊಳಿಸಿ ಆದೇಶಿಸಿದೆ.

ಕಾರ್ಕಳ | ಉಪನ್ಯಾಸಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಉಪನ್ಯಾಸಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ರವಳನಾಥ ಶರ್ಮಾ (32) ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕ ಎಂದು ತಿಳಿದುಬಂದಿದೆ. ಇವರು, ಎಂಬಿಎ ಪದವೀಧರರಾಗಿದ್ದು, 4 ವರ್ಷಗಳ ಹಿಂದೆ ಕಾರ್ಕಳದ ಎಂಪಿಎಂ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದರು. ಜೊತೆಗೆ ಇವರು ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆರ್ಚಕರಾಗಿದ್ದರು. ನಿನ್ನೆ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂದು ಈವರೆಗೆ ತಿಳಿದು ಬಂದಿಲ್ಲ. ಮೃತರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಪ್ರಜಾ ದೇಗುಲವಾಗಿರುವ ವಿಧಾನಸೌಧದಲ್ಲಿ ಕಂಡುಬಂತು ಮದ್ಯದ ಬಾಟಲಿಗಳು | ಅಧಿವೇಶನದ ಈ ಸಮಯದಲ್ಲಿ ಎಣ್ಣೆ ಪಾರ್ಟಿ ನಡೆದದ್ದಾದರೂ ಹೇಗೆ ?!

ವಿಧಾನಸೌಧದಲ್ಲಿ ಎಲ್ಲರಿಗೂ ಅಚ್ಚರಿ ಮೂಡುವಂತಹ ಘಟನೆಯೊಂದು ನಡೆದಿದೆ. ವಿಧಾನಸೌಧದ ಎರಡನೇ ಮಹಡಿಯ ರೂಮ್ ನಂಬರ್ 208ರ ಸನಿಹದಲ್ಲಿಯೇ ಮದ್ಯದ ಬಾಟಲಿಗಳು ಕಂಡು ಬಂದಿದ್ದು, ವಿಧಾನಸೌಧದಲ್ಲಿ ಎಣ್ಣೆ ಪಾರ್ಟಿ ನಡೆದಿದೆಯಾ ಎನ್ನುವ ಸಂಶಯ ವ್ಯಕ್ತವಾಗಿದೆ. ಅಧಿವೇಶನದ ಸಮಯದಲ್ಲಿ ಎಂದಿಗಿಂತಲೂ ಹೆಚ್ಚು ಬಿಗಿ ಭದ್ರತೆ ಇರುತ್ತದೆ. ಇದರ ನಡುವೆಯೂ ಬಿಯರ್ ಬಾಟಲಿಗಳು ವಿಧಾನಸೌಧ ಪ್ರವೇಶಿಸಿದ್ದು ಹೇಗೆ ಎಂಬ ಕೂತೂಹಲ ಇದೀಗ ಎಲ್ಲರಲ್ಲಿ ಮೂಡಿದೆ. ರಾತ್ರಿ ಬೆಳಗಾಗುವ ಹೊತ್ತಿಗೆ 208 ರೂಂ ಪಕ್ಕದ ವಾಟರ್ ಟ್ಯಾಂಕ್ ಬಳಿ 2 ಬಿಯರ್ ಬಾಟಲ್ …

ಪ್ರಜಾ ದೇಗುಲವಾಗಿರುವ ವಿಧಾನಸೌಧದಲ್ಲಿ ಕಂಡುಬಂತು ಮದ್ಯದ ಬಾಟಲಿಗಳು | ಅಧಿವೇಶನದ ಈ ಸಮಯದಲ್ಲಿ ಎಣ್ಣೆ ಪಾರ್ಟಿ ನಡೆದದ್ದಾದರೂ ಹೇಗೆ ?! Read More »

ಕಡಬದ ಸಾನ್ವಿಕಾ ಕೆ.ಎಸ್ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆ

ಕಡಬ: ಡಬ್ಲ್ಯು.ಎಸ್.ಎಸ್ ಸ್ಪೋರ್ಟ್ಸ್ ಅಕಾಡೆಮಿ ನೇತೃತ್ವದಲ್ಲಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಆನ್‌ಲೈನ್ ಪಂದ್ಯಾವಳಿಯ ಕರಾಟೆ ವಿಭಾಗದಲ್ಲಿ ಕಡಬ ತಾಲೂಕಿನ ಪಿಜಕಳ ಗ್ರಾಮದ ಆರಿಗ ಕಂಗುಳೆ ನಿವಾಸಿ ಸಾನ್ವಿಕಾ ಕೆ.ಎಸ್ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಗೊಂಡಿದ್ದಾಳೆ. ಗ್ಲೋಬಲ್ ವರ್ಲ್ಡ್ ರೆಕಾರ್ಡ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಬುಸಾಬ್ ಪ್ರಶಸ್ತಿ ಪ್ರಮಾಣಪತ್ರ ಹಾಗೂ ಬಹುಮಾನ ನೀಡಿ ಗೌರವಿಸಿದ್ದಾರೆ.ಒಂದು ನಿಮಿಷದಲ್ಲಿ ಗರಿಷ್ಠ ಪಂಚಿಗ್ ಸಾಧನೆಗೆ ಈ ಪ್ರಶಸ್ತಿ ಲಭ್ಯವಾಗಿದೆ. ಸಾನ್ವಿಕಾಳು ಪಿಜಕಳ ನಿವಾಸಿ ಸದಾನಂದ ಗೌಡ ಹಾಗೂ ವಾಣಿ ದಂಪತಿಯ ಪುತ್ರಿ, …

ಕಡಬದ ಸಾನ್ವಿಕಾ ಕೆ.ಎಸ್ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆ Read More »

ಭಜರಂಗದಳ ವೇಣೂರು ಪ್ರಖಂಡ ಸಂಚಾಲಕ ರಾಮಪ್ರಸಾದ್ ಮರೋಡಿ ಇನ್ನಿಲ್ಲ

ಬೆಳ್ತಂಗಡಿ : ಮರೋಡಿ ಗ್ರಾಮದ ಪಲಾರಗೋಳಿ ನಿವಾಸಿ, ಬಿಜೆಪಿ ಮುಖಂಡ ರಾಮ ಪ್ರಸಾದ್ ಮರೋಡಿ (37.ವ) ರವರು ಅಲ್ಪಕಾಲದ ಅಸೌಖ್ಯದಿಂದ ಸೆ.13 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದ ಜಾಂಡಿಸ್ ಖಾಯಿಲೆಯಿಂದ ಬಳಲುತ್ತಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊನೆಯುಸಿರೆಳೆದಿದ್ದಾರೆ. ಬಜರಂಗದಳ ವೇಣೂರು ಪ್ರಖಂಡದ ಸಂಚಾಲಕರಾಗಿದ್ದ ರಾಮ ಪ್ರಸಾದ್ ರವರು ಪಲಾರಗೋಳಿ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ, …

ಭಜರಂಗದಳ ವೇಣೂರು ಪ್ರಖಂಡ ಸಂಚಾಲಕ ರಾಮಪ್ರಸಾದ್ ಮರೋಡಿ ಇನ್ನಿಲ್ಲ Read More »

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಲ್ಲಿ ಹೊಸ ನೇಮಕಾತಿಗೆ ಅರ್ಜಿ ಆಹ್ವಾನ | ಇದೇ ಸೆಪ್ಟೆಂಬರ್ 22 ಕ್ಕೆ ನೇರ ಸಂದರ್ಶನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಲ್ಲಿ ಅಪ್ರೆಂಟೀಸ್ ತರಬೇತಿಗೆ ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನೇರ ಸಂದರ್ಶನಕ್ಕೆ ಇದೇ ಸೆಪ್ಟೆಂಬರ್ 22ರಂದು ಹಾಜರಾಗಬಹುದು. ಶಿಶಿಕ್ಷು ಅಧಿನಿಯಮ 1961ರ ಅನ್ವಯ ಪೂರ್ಣ ಅವಧಿಯ ತಾಂತ್ರಿಕ ವೃತ್ತಿಯಲ್ಲಿ ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗ ಅರ್ಜಿಗಳನ್ನು ಆಹ್ವಾನಿಸಿದೆ. ಹುದ್ದೆಗಳ ವಿವರ : ಹುದ್ದೆಗಳು : ಎಲೆಕ್ಟ್ರೀಷಿಯನ್ 24 ಸ್ಥಾನಗಳು, ಫಿಟ್ಟರ್ 7 ಸ್ಥಾನಗಳು, ಮೆಕ್ಯಾನಿಕ್ ಡೀಸೆಲ್ …

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಲ್ಲಿ ಹೊಸ ನೇಮಕಾತಿಗೆ ಅರ್ಜಿ ಆಹ್ವಾನ | ಇದೇ ಸೆಪ್ಟೆಂಬರ್ 22 ಕ್ಕೆ ನೇರ ಸಂದರ್ಶನ Read More »

ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ನಿಧನ

ಮಂಗಳೂರು: ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ನಿವಾಸದಲ್ಲಿ ಯೋಗ ಮಾಡುತ್ತಿದ್ದಾಗ ತಲೆಗೆ ಪೆಟ್ಟಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.

ಪ್ರಾಣಿ ಮತ್ತು ಮನುಷ್ಯನ ನಡುವಿನ ಸಂಬಂಧ ಎಷ್ಟು ಪವಿತ್ರವೆಂಬುದನ್ನು ಸಾರಿ ಹೇಳುತಿದೆ ಈ ಕಥೆ | ವೃದ್ಧ ಮಹಿಳೆ ಆನೆಗೆ ಕೈ ತುತ್ತು ತಿನ್ನಿಸುವ ಹೃದಯಸ್ಪರ್ಶಿ ವಿಡಿಯೋ ವೈರಲ್

ಪ್ರಾಣಿ ಹಾಗೂ ಮನುಷ್ಯನ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳುವುದು ಸುಲಭದ ಮಾತಲ್ಲ. ಅಲ್ಲಿ ಪ್ರೀತಿ, ಆರೈಕೆ, ಅಕ್ಕರೆಯ ಜೊತೆಗೆ ನಂಬಿಕೆಯೂ ಬಹಳ ಮುಖ್ಯ. ಈ ವ್ಯಕ್ತಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಇವರಿಂದ ನನಗೆ ತೊಂದರೆಯಾಗದು ಎಂಬ ನಂಬಿಕೆ ಪ್ರಾಣಿಗಳಿಗೂ, ಮಾತುಬಾರದ ಈ ಮೂಕಪ್ರಾಣಿ ನನ್ನನ್ನು ಅರ್ಥ ಮಾಡಿಕೊಳ್ಳುತ್ತದೆ, ನನಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ ಎಂಬ ನಂಬಿಕೆ ಮನುಷ್ಯನಿಗೂ ಇದ್ದಾಗ ಮಾತ್ರ ಪರಸ್ಪರ ಸಂಬಂಧ ಚೆನ್ನಾಗಿರಲು ಸಾಧ್ಯ. ಇಂದು ಇಲ್ಲಿ ತೋರಿಸಲು ಹೊರಟಿರುವ ವೈರಲ್​ ವಿಡಿಯೋದಲ್ಲಿ ಕೂಡಾ ಪ್ರೀತಿ, …

ಪ್ರಾಣಿ ಮತ್ತು ಮನುಷ್ಯನ ನಡುವಿನ ಸಂಬಂಧ ಎಷ್ಟು ಪವಿತ್ರವೆಂಬುದನ್ನು ಸಾರಿ ಹೇಳುತಿದೆ ಈ ಕಥೆ | ವೃದ್ಧ ಮಹಿಳೆ ಆನೆಗೆ ಕೈ ತುತ್ತು ತಿನ್ನಿಸುವ ಹೃದಯಸ್ಪರ್ಶಿ ವಿಡಿಯೋ ವೈರಲ್ Read More »

error: Content is protected !!
Scroll to Top