ಪುತ್ತೂರು : ಗ್ರಾಹಕರ ಸೋಗಿನಲ್ಲಿ ಜೋಸ್ ಆಲುಕ್ಕಾಸ್ ಜುವೆಲ್ಸ್‌ನಿಂದ ಚಿನ್ನಾಭರಣ ಕಳವು | ಮೂವರ ಬಂಧನ

ಚಿನ್ನಾಭರಣ ತೆಗೆದುಕೊಳ್ಳುವ ರೀತಿಯಲ್ಲಿ ಬಂದು ಚಿನ್ನಾಭರಣವನ್ನು ಕಳ್ಳವುಗೈದ ಘಟನೆ ಸೆ.1 ರಂದು ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಜೋಸ್ ಆಲುಕ್ಕಾಸ್ ನಲ್ಲಿ ನಡೆದಿದ್ದು, ಆರೋಪಿಗಳನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ದಾವಣಗೆರೆ ಜಿಲ್ಲೆ ನಿವಾಸಿಗಳಾದ ಬೀಬಿಜಾನ್ , ಹುಸೇನ್ ಬಿ , ಜೈತುಂಬಿ ರವರುಗಳನ್ನು ಪುತ್ತೂರಿನ ಬಿರಮಲೆಗುಡ್ಡೆ ಎಂಬಲ್ಲಿ ವಶಕ್ಕೆ ಪಡೆದು ಆರೋಪಿಗಳಿಂದ 2,60,400/- ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಪುತ್ತೂರಿನ ಹಿಂದೂಸ್ತಾನ್ ಕಾಂಪ್ಲೆಕ್ಸ್ ನಲ್ಲಿರುವ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಗೆ ಸೆ.1 ರಂದು ಬುರ್ಖಾ ಧರಿಸಿದ 3 ಜನ ಅಪರಿಚಿತ ಮಹಿಳೆಯರು ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಅಂಗಡಿಯ ಬೆಂಡೋಲೆಗಳನ್ನು ಇರಿಸುವ ವಿಭಾಗಕ್ಕೆ ಬಂದು ಸೇಲ್ಸ್ ಮ್ಯಾನ್ ಬಳಿ ಕಿವಿಯ ಚಿನ್ನಾಭರಣವನ್ನು ಕೇಳಿ ಅವರು ಅದನ್ನು ಟ್ರೇ ನಲ್ಲಿ ಇರಿಸಿದಾಗ 1.72 ಗ್ರಾಂ.ನ 8,800 ರೂ. ಮೌಲ್ಯದ ಚಿನ್ನವನ್ನು ಖರೀದಿಸುವ ಸಮಯ ಅಪರಿಚಿತ ಗ್ರಾಹಕರು 2,60,400 ರೂ. ಯ 50.242 ಗ್ರಾಂ. ತೂಕದ 1ಜೊತೆ ಕಿವಿಯ ರಿಂಗ್ ಅನ್ನು ವಂಚಿಸಿ ಕಳವು ಮಾಡಿಕೊಂಡು ಹೋಗಿರುವುದಾಗಿ ಜೋಸ್ ಆಲುಕ್ಕಾಸ್ ಮ್ಯಾನೇಜರ್ ಠಾಣೆಯಲ್ಲಿ ದೂರು ನೀಡಿದ್ದರು.

ಬಗ್ಗೆ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅ. ಕ್ರ: 68/2021 ಕಲಂ: 420,380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆಯನ್ನು ಕೈಗೆತ್ತಿಗೊಂಡ ಪೊಲೀಸರು, ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹಾಗೂ ಪೊಲೀಸ್ ಉಪಾಧೀಕ್ಷಕರ ಪುತ್ತೂರು ಉಪವಿಭಾಗರವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಗೋಪಾಲ್ ನಾಯ್ಕ, ಸುತೇಶ್ ಕೆ.ಪಿ ನಸೀನಾ ತಾಜ್ ಚಟ್ಟರಕಿ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳಾದ ಮ.ಎ.ಎಸ್.ಐ ಕವಿತಾ, ಹೆಚ್.ಸಿ ರಕ್ಷಿತ್, ಹೆಚ್.ಸಿ ರಾಜೇಶ್, ಪಿ.ಸಿ ಕಿರಣ್, ಪಿ.ಸಿ ಆನಂದ, ರವರುಗಳ ತಂಡ ಸೆ.13 ರಂದು ಪ್ರಕರಣ ಆರೋಪಿಗಳನ್ನು ಪುತ್ತೂರಿನ ಬಿರಮಲೆಗುಡ್ಡೆ ಎಂಬಲ್ಲಿ ವಶಕ್ಕೆ ಪಡೆದು ಆರೋಪಿಗಳಿಂದ 2,60,400/- ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Leave A Reply

Your email address will not be published.