ಭಾರತದ ನೆತ್ತಿಯ ಮೇಲೆ ಹಾರಾಟ ನಡೆಸುತ್ತಿದ್ದ, 126 ಪ್ರಯಾಣಿಕರನ್ನು ತುಂಬಿಕೊಂಡು ಹೊರಟಿದ್ದ ವಿಮಾನದ ಪೈಲೆಟ್ ಗೆ ಹೃದಯಾಘಾತ
ನಾಗ್ಪುರ: ಢಾಕಾದಿಂದ ಮಸ್ಕಟ್ ಗೆ ತೆರಳುತ್ತಿದ್ದ ಬಾಂಗ್ಲಾದೇಶದ ಬಿಮಾನ್ ಸಂಸ್ಥೆಯ ವಿಮಾನ ಆಕಾಶದಲ್ಲಿ ಹಾರುತ್ತಿದ್ದಾಗಲೇ ವಿಮಾನ ಚಾಲಕ ಹೃದಯಾಘಾತಕ್ಕೀಡಾದ ಘಟನೆ ನಡೆದಿದೆ. ಬೋಯಿಂಗ್ ವಿಮಾನದಲ್ಲಿ ಈ ಸಂದರ್ಭ 126 ಮಂದಿ ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಾಲಕ ಹೃದಯಾಘಾತಕ್ಕೀಡಾದಾಗ ವಿಮಾನ ಭಾರತದ ಮೇಲೆ ಹಾರುತ್ತಿತ್ತು. ಈ ಸಂದರ್ಭ ಪೈಲೆಟ್ ಗೆ ಹೃದಯಾಘಾತವಾಗಿದೆ. ಆಗ ಅದೇ ವಿಮಾನದ ಮತ್ತೊಬ್ಬ ವಿಮಾನ ಸಹ ಚಾಲಕ ಕೋಲ್ಕತಾದ ವಿಮಾನ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿ ಸಹಾಯ ಯಾಚಿಸಿದ್ದ. …