Day: August 3, 2021

ಶಿಥಿಲಾವಸ್ಥೆಗೆ ತಲುಪಿ ಮುರಿದು ಬೀಳುವ ಹಂತದಲ್ಲಿರುವ ಮುತ್ತಜ್ಜ ಇನ್ನಾದರೂ ಕಡಬದ ಪ್ರವಾಸಿ ಬಂಗಲೆ ತೆರವುಗೊಳಿಸುವಲ್ಲಿ ಗಮನಹರಿಸುವರೇ ಅಧಿಕಾರಿಗಳು

1925ರಲ್ಲಿ ಅಂದರೆ ಸರಿ ಸುಮಾರು 96 ವರ್ಷಗಳ ಹಿಂದೆ ಕೊಡುಗೈ ದಾನಿ ದಿ|ಚಂದಯ್ಯ ಶೆಟ್ಟಿ ಅವರು ನಿರ್ಮಿಸಿದ ಪ್ರವಾಸಿ ಬಂಗಲೆ(ನಿರೀಕ್ಷಣ ಮಂದಿರ)ಯು ಸದ್ಯ ಶಿಥಿಲಗೊಂಡು, ಅಲೆಮಾರಿ ಭಿಕ್ಷುಕರ ಆಶ್ರಯತಾಣವಾಗಿ ಇಂದೋ ನಾಳೆಯೋ ಮುರಿದು ಬೀಳುವ ಸ್ಥಿತಿಯಲ್ಲಿದೆ ಸುಮಾರು 96 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಪ್ರವಾಸಿ ಬಂಗಲೆ ಇರುವುದು ಕಡಬದ ಹೃದಯ ಭಾಗದಲ್ಲಿರುವ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದಲ್ಲೇ ಇರುವ ಪ್ರವಾಸಿ ಬಂಗಲೆಯಲ್ಲಿ. ಸದ್ಯ ಈ ಬಂಗಲೆ ಉಪಯೋಗಕ್ಕೆ ಬಾರದೆ ಶಿಥಿಲಗೊಂಡಿದ್ದು, ಬಿರುಸಾಗಿ ಬರುತ್ತಿರುವ ಗಾಳಿ …

ಶಿಥಿಲಾವಸ್ಥೆಗೆ ತಲುಪಿ ಮುರಿದು ಬೀಳುವ ಹಂತದಲ್ಲಿರುವ ಮುತ್ತಜ್ಜ ಇನ್ನಾದರೂ ಕಡಬದ ಪ್ರವಾಸಿ ಬಂಗಲೆ ತೆರವುಗೊಳಿಸುವಲ್ಲಿ ಗಮನಹರಿಸುವರೇ ಅಧಿಕಾರಿಗಳು Read More »

ಮಂಗಳೂರು ವಿಶ್ವಾವಿದ್ಯಾನಿಲಯದ ಪದವಿ ಪರೀಕ್ಷೆಗಳು ಮುಂದೂಡಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಸರ್ಕಾರದ ನಿರ್ದೇಶನದಂತೆ ಕಾಲಕಾಲಕ್ಕೆ ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಟ್ಟುನಿಟ್ಟಿನ ನಿರ್ಬಂಧಗಳ ನಂತರವು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಆಗಿರುವ ಹಿನ್ನಲೆಯಲ್ಲಿ ಸರ್ಕಾರವು ಉಲ್ಲೇಖದಂತೆ ಕಣಾವಲು, ನಿಯಂತ್ರಣ ಮತ್ತು ಜಾಗೃತೆಗೆ ಸಂಬಂಧಿಸಿದಂತೆ ಕೇರಳ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ವಿಶೇಷ ಸರ್ವೇಕ್ಷಣೆಯನ್ನು ಮಾಡಲು ನಿರ್ದೇಶಿಸಿರುತ್ತದೆ. ಮಂಗಳೂರು ವಿಶ್ವಾವಿದ್ಯಾನಿಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಅಂತರ್ ಜಿಲ್ಲೆಯಾದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಿಂದ ಆಗಮಿಸುತ್ತಿದ್ದು, ನೆರೆಯ …

ಮಂಗಳೂರು ವಿಶ್ವಾವಿದ್ಯಾನಿಲಯದ ಪದವಿ ಪರೀಕ್ಷೆಗಳು ಮುಂದೂಡಿಕೆ Read More »

ಫಿನಾಯಿಲ್ ಮಾರುತ್ತಾ ಪರಿಮಳ ಮೂಸುವಂತೆ ಹೇಳಿದರೆ ಎಚ್ಚರ | ಮೂರ್ಛೆ ತಪ್ಪಿಸಿ ಚಿನ್ನಾಭರಣ ಎಗರಿಸುತ್ತಾರೆ ಎಚ್ಚರ

ಫಿನಾಯಿಲ್ ಮಾರುವ ಸೋಗಿನಲ್ಲಿ ಬಂದು ಮೂರ್ಛೆ ತಪ್ಪಿಸಿ, ಚಿನ್ನಾಭರಣ ಕಳ್ಳತನ ಮಾಡುವ ಮಹಿಳೆಯರ ಗುಂಪೊಂದು ಉಡುಪಿ ನಗರದಲ್ಲಿ ಸಕ್ರಿಯವಾಗಿದೆ ಎಂಬ ವದಂತಿ ಇದೀಗ ಹಬ್ಬಿದೆ. ಈಗಾಗಲೇ ಈ ಫಿನಾಯಿಲ್ ಗ್ಯಾಂಗ್ ತನ್ನ ಕೈ ಚಳಕ ತೋರಿಸಿ ಹಲವು ಕಡೆ ಜನರನ್ನು ಯಾಮಾರಿಸಿ, ಅವರ ಬೆಲೆಬಾಳುವ ವಸ್ತುಗಳನ್ನು ದೋಚಿದೆ ಎಂಬ ಸುದ್ದಿ ಜನರನ್ನು ಬೆಚ್ಚಿಬೀಳಿಸಿದೆ. ಫಿನಾಯಿಲ್ ಮಾರಾಟ ಮಾಡಲು ಬರುವ ಈ ಮಹಿಳೆಯರ ಗ್ಯಾಂಗ್ ನಲ್ಲಿ ಐದರಿಂದ ಆರು ಮಂದಿ ಸದಸ್ಯರಿದ್ದು, ಆಯ್ದ ಮನೆಗಳಿಗೆ ತೆರಳುವ ಈ ತಂಡ …

ಫಿನಾಯಿಲ್ ಮಾರುತ್ತಾ ಪರಿಮಳ ಮೂಸುವಂತೆ ಹೇಳಿದರೆ ಎಚ್ಚರ | ಮೂರ್ಛೆ ತಪ್ಪಿಸಿ ಚಿನ್ನಾಭರಣ ಎಗರಿಸುತ್ತಾರೆ ಎಚ್ಚರ Read More »

ಧರ್ಮಸ್ಥಳ | ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಜಿಂಕೆ ಚರ್ಮ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಜಿಂಕೆ ಚರ್ಮವನ್ನು ಬೆಳಗಾವಿಯಿಂದ ಬಸ್ ಮೂಲಕ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬೆಳಗಾವಿಯ ಹನುಮಂತ(35) ಬಂಧಿತ ಆರೋಪಿ.ಬಂಧಿತನಿಂದ ಜಿಂಕೆ ಚರ್ಮ ಹಾಗೂ ಒಂದು ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಇದೀಗ ಬೆಳ್ತಂಗಡಿ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪುತ್ತೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‌ಐ ಶ್ರೀಮತಿ ಜಾನಕಿ ನೇತ್ರತ್ವದಲ್ಲಿ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸುಂದರ್ ಶೆಟ್ಟಿ, ವಿಜಯ್ ಸುವರ್ಣ, ಉದಯ್, ಸಂತೋಷ್ …

ಧರ್ಮಸ್ಥಳ | ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಜಿಂಕೆ ಚರ್ಮ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ Read More »

ನಡುರಸ್ತೆಯಲ್ಲಿ ಮಹಿಳೆಯೊಬ್ಬರು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ | ಮಹಿಳೆಯ ವಿರುದ್ಧ ಎಫ್ಐಆರ್ ದಾಖಲು

ಲಕ್ನೋ: ನಡು ರಸ್ತೆಯಲ್ಲಿಯೇ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಮಹಿಳೆ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಲಕ್ನೋದ ಟ್ರಾಫಿಕ್ ಸಿಗ್ನಲ್‌ನಲ್ಲಿ ಕ್ಯಾಬ್ ಚಾಲಕನಿಗೆ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ಥಳಿಸಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಅದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಬಡಪಾಯಿ ಕ್ಯಾಬ್ ಚಾಲಕನ ಮೇಲೆ ಹಿಂದೆ-ಮುಂದೆ ನೋಡದೆ ಹಲ್ಲೆ ನಡೆಸಿರುವ ಮಹಿಳೆಯನ್ನು ಬಂಧಿಸುವಂತೆ ಬಹಳಷ್ಟು ಮಂದಿ ಆಗ್ರಹಿಸಿದ್ದರು. ಕ್ಯಾಬ್ ಚಾಲಕನಿಗೆ ಥಳಿಸಿರುವ ಮಹಿಳೆಯನ್ನು ಬಂಧಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ …

ನಡುರಸ್ತೆಯಲ್ಲಿ ಮಹಿಳೆಯೊಬ್ಬರು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ | ಮಹಿಳೆಯ ವಿರುದ್ಧ ಎಫ್ಐಆರ್ ದಾಖಲು Read More »

ಕರ್ನಾಟಕ ಸೇರಿದಂತೆ ದೇಶದಲ್ಲಿವೆ 24 ನಕಲಿ ವಿಶ್ವವಿದ್ಯಾಲಯಗಳು | ಮಾಹಿತಿ ನೀಡಿದ ಯುಜಿಸಿ

ಕರ್ನಾಟಕದ ಒಂದು ವಿಶ್ವ ವಿದ್ಯಾಲಯ ಸೇರಿದಂತೆ ದೇಶದಲ್ಲಿ 24 ನಕಲಿ ವಿಶ್ವವಿದ್ಯಾಲಯಗಳನ್ನು ಗುರುತಿಸಲಾಗಿದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಾಹಿತಿ ನೀಡಿದೆ. ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಬಗ್ಗೆ ಮಾಹಿತಿ ನೀಡಿದ್ದು, ‘ಯುಜಿಸಿ 24 ಸ್ವಯಂ ಘೋಷಿತ ಶಿಕ್ಷಣ ಸಂಸ್ಥೆಗಳನ್ನು ನಕಲಿ ಎಂದು ಘೋಷಿಸಿದೆ ಮತ್ತು ನಿಯಮಗಳನ್ನು ಉಲ್ಲಂಘಿಸಿದ ಇನ್ನೂ ಎರಡು ಸಂಸ್ಥೆಗಳನ್ನು ಪತ್ತೆ ಮಾಡಿದೆ. ವಿದ್ಯಾರ್ಥಿಗಳು, ಪೋಷಕರು, ಸಾಮಾನ್ಯ ಜನರು ಮತ್ತು ವಿದ್ಯುನ್ಮಾನ ಮುದ್ರಣ ಮಾಧ್ಯಮದ …

ಕರ್ನಾಟಕ ಸೇರಿದಂತೆ ದೇಶದಲ್ಲಿವೆ 24 ನಕಲಿ ವಿಶ್ವವಿದ್ಯಾಲಯಗಳು | ಮಾಹಿತಿ ನೀಡಿದ ಯುಜಿಸಿ Read More »

ಮೊಬೈಲ್ ಚಾರ್ಜ್ ಹಾಕುವ ವಿಚಾರಕ್ಕೆ ಆರಂಭವಾದ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ

ಮೊಬೈಲ್ ಚಾರ್ಜ್ ಹಾಕುವ ವಿಚಾರಕ್ಕೆ ಪ್ರಾರಂಭವಾದ ಸ್ನೇಹಿತರ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ. ಮಧ್ಯಪ್ರದೇಶ ಮೂಲದ ಇಬ್ಬರು ಯುವಕರು ಗ್ರಾನೈಟ್ ಕೆಲಸ ಮಾಡಿಕೊಂಡು ರಾಜಾಜಿನಗರದ ಮನೆಯಲ್ಲಿ ವಾಸವಾಗಿದ್ದರು. ಮೊನ್ನೆ ಕೆಲಸ ಮುಗಿಸಿ ಬಂದು ಸ್ವಲ್ಪ ಎಣ್ಣೆ ಬೇರೆ ತಗೊಂಡಿದ್ದರು. ಅವರಿಬ್ಬರು ಮೊಬೈಲ್ ಚಾರ್ಜ್ ಹಾಕಲು ಒಂದೇ ಸ್ವಿಚ್ ಬೋರ್ಡ್ ಬಳಕೆ ಮಾಡುತ್ತಿದ್ದರು. ಈ ವೇಳೆ ನಾನು ಹಾಕುತ್ತೇನೆ ಎಂದು ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಕೊಲೆ ಆರೋಪಿ ಮೊಬೈಲ್ ಚಾರ್ಜ್ …

ಮೊಬೈಲ್ ಚಾರ್ಜ್ ಹಾಕುವ ವಿಚಾರಕ್ಕೆ ಆರಂಭವಾದ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ Read More »

ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನ | ಓರ್ವ ಯೋಧ ಹುತಾತ್ಮ

ಭಾರತೀಯ ಸೇನೆಗೆ ಸೇರಿದ ಹೆಲಿಕಾಪ್ಟರೊಂದು ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಲಖನಪುರ ಎಂಬಲ್ಲಿ ಪತನಗೊಂಡು, ಓರ್ವ ಯೋಧ ಹುತಾತ್ಮರಾದ ಘಟನೆ ನಡೆದಿದೆ. ಎಚ್‍ರೆಲ್ ಧ್ರುವ್ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಎದುರಾದ ತಾಂತ್ರಿಕ ದೋಷದಿಂದ ಪತನಗೊಂಡಿದೆ. ಹೆಲಿಕಾಪ್ಟರ್ ನಲ್ಲಿ ಇಬ್ಬರು ಪೈಲೆಟ್‍ಗಳಿದ್ದರು ಎಂದು ತಿಳಿದುಬಂದಿದೆ. ಅವರಲ್ಲಿ ಓರ್ವ ಯೋಧ ಮೃತಪಟ್ಟು, ಇನ್ನೊಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಪಠಾಣ್‍ಕೋಟ್‍ನಿಂದ ಬರುತ್ತಿದ್ದ ಹೆಲಿಕಾಪ್ಟರ್ ಲಖನಪುರದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಈ ಘಟನೆ ಸಂಭವಿಸಿದೆ. ಕೂಡಲೇ …

ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನ | ಓರ್ವ ಯೋಧ ಹುತಾತ್ಮ Read More »

ಮಂಗಳೂರು | ಕೋಳಿ ಅಂಕಕ್ಕೆ ಪೊಲೀಸರ ದಾಳಿ, ಅಂಕದ ಕೋಳಿ ಸಹಿತ ನಾಲ್ವರು ವಶಕ್ಕೆ

ಮಂಗಳೂರು: ಇಲ್ಲಿನ ಪದವು ಗ್ರಾಮದ ಮುಗೋಡಿಕಟ್ಟೆಪುಣಿ ಎಂಬಲ್ಲಿರುವ ಮೈದಾನದಲ್ಲಿ ಕೋಳಿ ಅಂಕಕ್ಕೆ ಹಣವನ್ನು ಪಣವಾಗಿಟ್ಟು ಬಾಜಿ ಆಡುತ್ತಿದ್ದ ಸ್ಥಳಕ್ಕೆ ಕಂಕನಾಡಿ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಶಿವಪ್ರಸಾದ್, ದೀಪಕ್, ಕೃಷ್ಣಪ್ಪ, ವಿಶ್ವನಾಥ ಎಂದು ಗುರುತಿಸಲಾಗಿದೆ. ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಜೂಜಾಟಕ್ಕೆ ಬಳಸಿದ ಆರು ಅಂಕದ ಕೋಳಿ ಹಾಗೂ 1,280 ರೂ. ನಗದು ಮತ್ತು ಕಪ್ಪು …

ಮಂಗಳೂರು | ಕೋಳಿ ಅಂಕಕ್ಕೆ ಪೊಲೀಸರ ದಾಳಿ, ಅಂಕದ ಕೋಳಿ ಸಹಿತ ನಾಲ್ವರು ವಶಕ್ಕೆ Read More »

ಎರಡು ವರ್ಷಗಳಲ್ಲಿ 14 ರಿಂದ 18 ವಯಸ್ಸಿನ ಸುಮಾರು 24,568 ಮಕ್ಕಳು ಆತ್ಮಹತ್ಯೆ | ಸ್ಫೋಟಕ ಮಾಹಿತಿ ನೀಡಿದ ಕೇಂದ್ರ ಸರ್ಕಾರ

ಎರಡು ವರ್ಷಗಳ ಅವಧಿಯಲ್ಲಿ 14 ರಿಂದ 18 ವಯಸ್ಸಿನ ಸುಮಾರು 24,568 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೇಂದ್ರ ಸರ್ಕಾರ ಸ್ಫೋಟಕ ಮಾಹಿತಿ ನೀಡಿದೆ. ಈ ಕುರಿತ ಮಾಹಿತಿಯನ್ನು ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ) ಸಂಸತ್ತಿಗೆ ತಿಳಿಸಿದೆ. 2017 ರಿಂದ 2019ರ ಅವಧಿಯಲ್ಲಿ ಈ ಘಟನೆ ನಡೆದಿದೆ. 2017ರಲ್ಲಿ 14–18ರೊಳಗಿನ 8,029 ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದರೆ, 2018ಕ್ಕೆ ಈ ಸಂಖ್ಯೆಯು 8,162 ಮತ್ತು 2019ಕ್ಕೆ 8,377ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಮಕ್ಕಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಮಧ್ಯಪ್ರದೇಶ, …

ಎರಡು ವರ್ಷಗಳಲ್ಲಿ 14 ರಿಂದ 18 ವಯಸ್ಸಿನ ಸುಮಾರು 24,568 ಮಕ್ಕಳು ಆತ್ಮಹತ್ಯೆ | ಸ್ಫೋಟಕ ಮಾಹಿತಿ ನೀಡಿದ ಕೇಂದ್ರ ಸರ್ಕಾರ Read More »

error: Content is protected !!
Scroll to Top