ಫಿನಾಯಿಲ್ ಮಾರುತ್ತಾ ಪರಿಮಳ ಮೂಸುವಂತೆ ಹೇಳಿದರೆ ಎಚ್ಚರ | ಮೂರ್ಛೆ ತಪ್ಪಿಸಿ ಚಿನ್ನಾಭರಣ ಎಗರಿಸುತ್ತಾರೆ ಎಚ್ಚರ

ಫಿನಾಯಿಲ್ ಮಾರುವ ಸೋಗಿನಲ್ಲಿ ಬಂದು ಮೂರ್ಛೆ ತಪ್ಪಿಸಿ, ಚಿನ್ನಾಭರಣ ಕಳ್ಳತನ ಮಾಡುವ ಮಹಿಳೆಯರ ಗುಂಪೊಂದು ಉಡುಪಿ ನಗರದಲ್ಲಿ ಸಕ್ರಿಯವಾಗಿದೆ ಎಂಬ ವದಂತಿ ಇದೀಗ ಹಬ್ಬಿದೆ.

ಈಗಾಗಲೇ ಈ ಫಿನಾಯಿಲ್ ಗ್ಯಾಂಗ್ ತನ್ನ ಕೈ ಚಳಕ ತೋರಿಸಿ ಹಲವು ಕಡೆ ಜನರನ್ನು ಯಾಮಾರಿಸಿ, ಅವರ ಬೆಲೆಬಾಳುವ ವಸ್ತುಗಳನ್ನು ದೋಚಿದೆ ಎಂಬ ಸುದ್ದಿ ಜನರನ್ನು ಬೆಚ್ಚಿಬೀಳಿಸಿದೆ.

ಫಿನಾಯಿಲ್ ಮಾರಾಟ ಮಾಡಲು ಬರುವ ಈ ಮಹಿಳೆಯರ ಗ್ಯಾಂಗ್ ನಲ್ಲಿ ಐದರಿಂದ ಆರು ಮಂದಿ ಸದಸ್ಯರಿದ್ದು, ಆಯ್ದ ಮನೆಗಳಿಗೆ ತೆರಳುವ ಈ ತಂಡ ಫಿನಾಯಿಲ್ ಮಾರಾಟ ಮಾಡುವವರಂತೆ ನಟಿಸುತ್ತದೆ.

Ad Widget
Ad Widget

Ad Widget

Ad Widget

ತಮ್ಮಲ್ಲಿ ವಿವಿಧ ನಮೂನೆಯ ಫಿನಾಯಿಲ್ ಇದೆ ಎಂದು ನಟಿಸುತ್ತಾ ಬಾಟಲಿಯಲ್ಲಿರುವ ಫಿನಾಯಿಲ್‌ನ ವಾಸನೆ ತೋರಿಸುವ ನೆಪದಲ್ಲಿ ಮನೆಯವರಿಗೆ ತಮ್ಮ ದ್ರಾವಣ ಇರುವ ಬಾಟಲಿಯನ್ನು ಮೂಸುವಂತೆ ಪ್ರೇರೇಪಿಸುತ್ತಾರೆ.

ಈ ಬಾಟಲಿಯ ಪರಿಮಳ ಗ್ರಹಿಸುತ್ತಿದ್ದಂತೆ ಮನೆಯಲ್ಲಿದ್ದವರು ಮೂರ್ಛೆ ಹೋಗುತ್ತಾರೆ. ಈ ಸಂದರ್ಭ ಬಳಸಿಕೊಂಡು ತಂಡ ಮನೆಯಲ್ಲಿರುವ ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

error: Content is protected !!
Scroll to Top
%d bloggers like this: