Day: July 14, 2021

ಸಂಗಾತಿಯ ಜೊತೆಗೆ ಸ್ನಾನ ಮಾಡಲಿಚ್ಚಿಸುವ ಮೊದಲೊಮ್ಮೆ ಯೋಚಿಸಿ..ನಿಮ್ಮ ಅತಿಯಾಸೆ ದಾಂಪತ್ಯದಲ್ಲಿ ಬಿರುಕು ಮೂಡಿಸಬಹುದು.

ದಾಂಪತ್ಯ ಜೀವನ ಎಂದಮೇಲೆ ಅಲ್ಲಿ ಎಲ್ಲಾ ತರಹದ ಸುಖ ದುಃಖ ಇರುವುದು ಸಾಮಾನ್ಯ.ಉತ್ತಮ ದಾಂಪತ್ಯ ಜೀವನದಲ್ಲಿ ಲೈಂಗಿಕ ಜೀವನವು ಅತೀ ಅಗತ್ಯ. ಲೈಂಗಿಕ ಜೀವನ ಸರಿಯಾಗಿ ಇಲ್ಲದೆ ಇದ್ದರೆ ಮಾನಸಿಕ ಸಮಸ್ಯೆ ಹಾಗೂ ದಾಂಪತ್ಯದಲ್ಲಿ ಬಿರುಕು ಮುಂತಾದ ಹಲವು ಸಮಸ್ಯೆಗಳು ಕಂಡುಬರುತ್ತದೆ. ಲೈಂಗಿಕವಾಗಿ ಹೆಚ್ಚು ಆಸಕ್ತಿ ಹೊಂದಿದ ಪುರುಷರು ತಮ್ಮ ಸಂಗಾತಿಯೊಂದಿಗೆ ಕೆಲವೊಂದು ಸಲ ಜೊತೆಯಾಗಿ ಸ್ನಾನ ಮಾಡಬೇಕೆಂಬ ಬಯಕೆಯಲ್ಲಿರುತ್ತಾರೆ.ಇದರಿಂದ ಲೈಂಗಿಕವಾಗಿ ಅವರಿಬ್ಬರೂ ಹೆಚ್ಚು ಹತ್ತಿರವಾಗುವ ಸಾಧ್ಯತೆ ಹೆಚ್ಚಿದ್ದು ಹೊಸ ಆಕರ್ಷಣೆಯ ಜೊತೆಗೆ ಹೊಸ ಹುರುಪನ್ನು ತರುವಲ್ಲಿ …

ಸಂಗಾತಿಯ ಜೊತೆಗೆ ಸ್ನಾನ ಮಾಡಲಿಚ್ಚಿಸುವ ಮೊದಲೊಮ್ಮೆ ಯೋಚಿಸಿ..ನಿಮ್ಮ ಅತಿಯಾಸೆ ದಾಂಪತ್ಯದಲ್ಲಿ ಬಿರುಕು ಮೂಡಿಸಬಹುದು. Read More »

ತಿಂಗಳಾಡಿ ಹಾಗೂ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ಸಂಕೀರ್ಣವಾಗಿ ಮೇಲ್ದರ್ಜೆಗೆ

ಸುಳ್ಯ ತಾಲೂಕಿನ ಬೆಳ್ಳಾರೆ ಹಾಗೂ ಪುತ್ತೂರು ತಾಲೂಕಿನ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ಸಂಕೀರ್ಣವಾಗಿ ಮೇಲ್ದರ್ಜೆಗೆ ಏರಲಿದೆ. ರಾಜ್ಯದಲ್ಲಿ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಸಂಕೀರ್ಣವಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡದ 12 ಕೇಂದ್ರಗಳನ್ನು ಆಯ್ಕೆ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಪುತ್ತೂರು ತಾಲೂಕಿನ ತಿಂಗಳಾಡಿ,ಸುಳ್ಯ ತಾಲೂಕಿನಿಂದ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತಾವಿತ ಕೇಂದ್ರಗಳಲ್ಲಿ ಕನಿಷ್ಠ 2 ಎಕ್ರೆ ಜಾಗವಿರಬೇಕೆಂಬ ನಿಯಮವಿದೆ. ಮೇಲ್ದರ್ಜೆಗೇರಿಸಿದ ಬಳಿಕ ಇಬ್ಬರು …

ತಿಂಗಳಾಡಿ ಹಾಗೂ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ಸಂಕೀರ್ಣವಾಗಿ ಮೇಲ್ದರ್ಜೆಗೆ Read More »

ಕೇರಳದಲ್ಲಿ ಝಿಕಾ ವೈರಸ್: ದ.ಕ.ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು : ಕೇರಳ ರಾಜ್ಯದ ತಿರುವನಂತಪುರದಲ್ಲಿ ಝಿಕಾ ವೈರಸ್ ರೋಗ ಪ್ರಕರಣಗಳು ವರದಿಯಾಗುತ್ತಿದ್ದು, ಗಡಿ ಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಕೇರಳದಿಂದ ಸಾಕಷ್ಟು ಜನರು ಶಿಕ್ಷಣ, ಆರೋಗ್ಯ ಸಂಬಂಧಿ ಕಾರ್ಯಗಳಿಗೆ ಬಂದು – ಹೋಗುವುದು ಸಾಮಾನ್ಯವಾಗಿರುವುದರಿಂದ, ದ.ಕ.ಜಿಲ್ಲೆಯಲ್ಲಿ ಈ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿರುತ್ತದೆ. ಝಿಕಾ ವೈರಸ್ ಸೋಂಕು ಹೊಂದಿರುವ ಈಡಿಸ್ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಈ ಸೊಳ್ಳೆಗಳು ತೆರೆದ ಸ್ವಲ್ಪ ನೀರಿನ ಸಂಗ್ರಹಣೆಗಳಾದ …

ಕೇರಳದಲ್ಲಿ ಝಿಕಾ ವೈರಸ್: ದ.ಕ.ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ Read More »

ದಕ್ಷಿಣಕನ್ನಡ, ಮೂಡಬಿದಿರೆ | ಆಳ್ವಾಸ್ ಶಿಕ್ಷಣ ಸಂಸ್ಥೆಯ ಇಬ್ಬರು ಕ್ರೀಡಾ ವಿದ್ಯಾರ್ಥಿಗಳು ಈ ಸಲದ ಟೋಕಿಯೋ ಒಲಿಂಪಿಕ್ ನಲ್ಲಿ ಭಾಗಿ !

ಮೂಡುಬಿದಿರೆ: ಜಪಾನಿನ ಟೋಕಿಯೋದಲ್ಲಿ ಜುಲೈ 23 ರಿಂದ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಇಬ್ಬರು ಕ್ರೀಡಾ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಮೂಡಬಿದಿರೆಯ ಆಳ್ವಾಸ್‌ನ ಕ್ರೀಡಾ ವಿಭಾಗ ದತ್ತು ಶಿಕ್ಷಣ ಯೋಜನೆಯಲ್ಲಿ ವ್ಯಾಸಂಗ ಮಾಡುತ್ತಿರುವ ಧನಲಕ್ಷ್ಮೀ ಹಾಗೂ ಶುಭಾ 400 ಮೀಟರ್ ಮಿಕ್ಸೆಡ್ ರಿಲೇಯಲ್ಲಿ ದೇಶದ ತಂಡವನ್ನು ಅವರು ಪ್ರತಿನಿಧಿಸುತ್ತಿದ್ದಾರೆ. ಈ ಇಬ್ಬರೂ ಪ್ರತಿಭಾವಂತ ಕ್ರೀಡಾ ವಿದ್ಯಾರ್ಥಿಗಳು 2016-17ನೇ ಶೈಕ್ಷಣಿಕ ವರ್ಷದಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಾಗಿ ಮಂಗಳೂರು ವಿಶ್ವವಿದ್ಯಾಲಯ ಹಾಗೂ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಕೂಟಗಳಲ್ಲಿ …

ದಕ್ಷಿಣಕನ್ನಡ, ಮೂಡಬಿದಿರೆ | ಆಳ್ವಾಸ್ ಶಿಕ್ಷಣ ಸಂಸ್ಥೆಯ ಇಬ್ಬರು ಕ್ರೀಡಾ ವಿದ್ಯಾರ್ಥಿಗಳು ಈ ಸಲದ ಟೋಕಿಯೋ ಒಲಿಂಪಿಕ್ ನಲ್ಲಿ ಭಾಗಿ ! Read More »

ದೈವಸ್ಥಾನದ ಆವರಣದಲ್ಲಿ ಕ್ರಿಕೆಟ್ ಆಟ ಆಕ್ಷೇಪ | ಧರ್ಮ ದ್ವೇಷ ಬಿತ್ತುವ ಕೆಲಸ ಆರೋಪ ,ಪ್ರಕರಣ ಸುಖಾಂತ್ಯ

ಸುಳ್ಯದ ಜಯನಗರ ಸಮೀಪದ ಕೊರಂಬಡ್ಕ ಆದಿಮೊಗೆರ್ಕಳ ದೈವಸ್ಥಾನದಲ್ಲಿ ಕ್ರಿಕೆಟ್ ಆಡುತ್ತಿದ್ದದ್ದಕ್ಕೆ ಸಂಬಂಧಿಸಿ ವಿರೋಧ ವ್ಯಕ್ತಪಡಿಸಿದ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ದೈವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಗಿಡ ನೆಡಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಅದಕ್ಕಾಗಿ ಅಲ್ಲಿ ಗುಂಡಿ ತೆಗೆಯಲಾಗಿತ್ತು. ಇದರಿಂದ ಕ್ರಿಕೆಟ್ ಆಡಲು ಆಗಲ್ಲ ಎಂಬ ಕಾರಣಕ್ಕೆ ಸ್ಥಳೀಯ ಕೆಲ ಯುವಕರು ಆಡಳಿತ ಮಂಡಳಿಯವರ ಕ್ರಮ ಸರಿಯಲ್ಲ ಎಂದು ಪ್ರತಿಭಟಿಸಿದರು. ದೈವಸ್ಥಾನ ಆಡಳಿತ ಮಂಡಳಿಯ ಪ್ರವೀಣ್ ಉಬರಡ್ಕ ಎಂಬವರು ಮಾತನಾಡಿ ಕ್ರಿಕೆಟ್ ಆಡಲು ಇಲ್ಲಿ ಅವಕಾಶವಿಲ್ಲ ಎಂದದ್ದಕ್ಕೆ …

ದೈವಸ್ಥಾನದ ಆವರಣದಲ್ಲಿ ಕ್ರಿಕೆಟ್ ಆಟ ಆಕ್ಷೇಪ | ಧರ್ಮ ದ್ವೇಷ ಬಿತ್ತುವ ಕೆಲಸ ಆರೋಪ ,ಪ್ರಕರಣ ಸುಖಾಂತ್ಯ Read More »

ಕೋಮುಪ್ರಚೋದನೆಯ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹಾಕಿದಾತನ ವಿರುದ್ಧ ಸವಣೂರು ಹಿಂ.ಜಾ.ವೇ.ದೂರು

ಗೋಹತ್ಯೆಯ ನೆಪದಲ್ಲಿ ಯಾರಾದರೂ ಗೂಂಡಾಗಳು ನಿಮ್ಮ ಮೇಲೆ ದಾಳಿ ಮಾಡಲು ಬಂದರೆ ಆತ್ಮರಕ್ಷಣೆಗಾಗಿ ಅವರ ಮೇಲೆ ದಾಳಿ ಮಾಡಬಹುದು ಎಂದು ಕೋಮು ಪ್ರಚೋದನೆಯ ಬರಹವನ್ನು ವಾಟ್ಸಾಪ್ ಹಾಗೂ ಫೇಸ್‌ಬುಕ್‌ ನಲ್ಲಿ ಹಾಕಿದ ವ್ಯಕ್ತಿಯೊಬ್ಬನ ವಿರುದ್ಧ ಸವಣೂರು ಹಿಂದೂ ಜಾಗರಣ ವೇದಿಕೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದೆ. ಕಡಬ ತಾಲೂಕಿನ ಸವಣೂರು ಯಾವುದೇ ಕೋಮು ಪ್ರಚೋದನೆಯಿಲ್ಲದೆ ಜನ ನೆಮ್ಮದಿಯಿಂದ ಜೀವ ನಡೆಸುತ್ತಿರುವ ಗ್ರಾಮೀಣ ಪ್ರದೇಶವಾಗಿದ್ದು, ಇದೀಗ ಸವಣೂರಿನ ಆರಿಗಮಜಲಿನ ನಿಝಾರ್ ಎಂಬಾತ ಗೋಹತ್ಯೆಯ ನೆಪದಲ್ಲಿ ಯಾರಾದರೂ ಗೂಂಡಾಗಳು …

ಕೋಮುಪ್ರಚೋದನೆಯ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹಾಕಿದಾತನ ವಿರುದ್ಧ ಸವಣೂರು ಹಿಂ.ಜಾ.ವೇ.ದೂರು Read More »

ಕಾವಳ ಕಟ್ಟೆ ಕಲಹ | ಎರಡು ವಿಭಿನ್ನ ಪ್ರತಿಭಟನೆಗೆ ಸೇರಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ತಂಡಗಳು ಉದ್ದೇಶ ಮರೆತು ಪರಸ್ಪರ ಕಚ್ಚಾಟಕ್ಕೆ ನಿಂತ ಘಟನೆ !

ಪ್ರತ್ಯೇಕ ಉದ್ದೇಶಗಳಿಗೆ ಪ್ರತಿಭಟನೆ ನಡೆಸಲು ಜಮಾಯಿಸಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದವು ಪರಸ್ಪರ ತಳ್ಳಾಟ, ನೂಕಾಟಕ್ಕೆ ಎಡೆಮಾಡಿಕೊಟ್ಟ ಘಟನೆ ಕಾವಳಕಟ್ಟೆಯಲ್ಲಿ ಇಂದು ನಡೆಯಿತು. ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಕಚೇರಿ ಮುಂಭಾಗ ಪ್ರತಿಭಟನೆ ಸಿದ್ಧತೆ ನಡೆಸಿದ್ದರು. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಾವಳಮೂಡೂರು ಗ್ರಾ.ಪಂ ನೀರು ಹಾಗೂ ಮನೆ ತೆರಿಗೆಯನ್ನು ಏಕಾಏಕಿ ಏರಿಸಿರುವುದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಈ ಹಂತದಲ್ಲಿ ಆರ್‌ಟಿಐ ಕಾರ್ಯಕರ್ತ ಪದ್ಮನಾಭ ಮಯ್ಯ …

ಕಾವಳ ಕಟ್ಟೆ ಕಲಹ | ಎರಡು ವಿಭಿನ್ನ ಪ್ರತಿಭಟನೆಗೆ ಸೇರಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ತಂಡಗಳು ಉದ್ದೇಶ ಮರೆತು ಪರಸ್ಪರ ಕಚ್ಚಾಟಕ್ಕೆ ನಿಂತ ಘಟನೆ ! Read More »

ಬಂಟ್ವಾಳ | ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ, ಆರೋಪಿಯ ಬಂಧನ

ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಮನೆಗೆ ನುಗ್ಗಿ ವಿವಾಹಿತ ಮಹಿಳೆಗೆ ಬೆದರಿಸಿ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ಬಿ.ಸಿ.ರೋಡಿನ ತಲಪಾಡಿಯ ವಿವಾಹಿತ ಮಹಿಳೆಯನ್ನು ಮೊಹಮ್ಮದ್ ಅಯ್ಯೂಬ್ ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡಿದ್ದ. ನಂತರ ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡು, ಮಹಿಳೆಗೆ ಕರೆ ಮಾಡಿ ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಮದುವೆಯಾಗುವಂತೆ ಸದಾ ಪೀಡಿಸುತ್ತಿದ್ದ. ಈ ಬಗ್ಗೆ ಮಹಿಳೆ ವಿರೋಧಿಸಿದ್ದರೂ, ಆತ ಬೆದರಿಕೆ ಹಾಕುತ್ತಿದ್ದನು. ಇತ್ತೀಚಿಗೆ ಮಹಿಳೆ ಬಿ.ಸಿ.ರೋಡಿನ ರಸ್ತೆ ಬದಿಯಲ್ಲಿ ನಿಂತಿದ್ದಾಗ,ಮೊಹಮ್ಮದ್ ಅಯ್ಯೂಬ್ ತನ್ನ ಕಾರಿನಲ್ಲಿ ಬಂದು …

ಬಂಟ್ವಾಳ | ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ, ಆರೋಪಿಯ ಬಂಧನ Read More »

ನಿಮ್ಮ ಸಾವಿನ ದಿನಾಂಕವನ್ನು ಖಡಕ್ ಆಗಿ ಹೇಳುವ ವೆಬ್ ಸೈಟ್ ಒಂದಿದೆ ಗೊತ್ತಾ ? | ಕನ್ಫರ್ಮ್ ಮಾಡ್ಕೊಳ್ಳಿ ನಿಮ್ಮ ಟಿಕೆಟ್ ಯಾವಾಗ ಎಂದು !!

http://www.death-clock.org ಎಂದು ಒಂದು ವೆಬ್ ಸೈಟ್ ಇದೆ.ಈ ವೆಬ್ ಸೈಟು ನಿಮಗೆ ನಿಮ್ಮ ಸಾಯುವ ದಿನಾಂಕವನ್ನು ಲೆಕ್ಕ ಹಾಕಿ ಕೊಡುತ್ತದೆ. ಅಲ್ಲಿ ಹೋಗಿ ಫಾರಂ ಫಿಲ್ ಮಾಡಿ ಕ್ಯಾಲ್ಕುಲೇಟ್ ಅಂತ ಕೊಟ್ಟರೆ ಸಾಕು. ನಿಮ್ಮ ಕಣ್ಣ ಮುಂದೇ ಸಾವು ಬಂದು ಕುಣಿಯಲು ಆರಂಭಿಸುತ್ತದೆ. ಈ ವೆಬ್ ಸೈಟ್ ನಿಮ್ಮ ಸಾಯುವ ದಿನಾಂಕವನ್ನು ತುಂಬಾ ಪ್ರೀತಿಯಿಂದ, ಇನ್ನಿಲ್ಲದ ಕಾಳಜಿಯಿಂದ ಕ್ಯಾಲ್ಕುಲೇಟ್ ಮಾಡಿ ನಿಮ್ಮ ಮುಂದಿಡುತ್ತದೆ. ಆಮೇಲೆ ನೀವುಂಟು, ನಿಮ್ಮಲ್ಲಿ ಮೂಡುವ ಸಾವಿನ ಭಯ ಉಂಟು! ಗಡಿಯಾರದ ಮುಳ್ಳಿನ ಟಿಕ್ …

ನಿಮ್ಮ ಸಾವಿನ ದಿನಾಂಕವನ್ನು ಖಡಕ್ ಆಗಿ ಹೇಳುವ ವೆಬ್ ಸೈಟ್ ಒಂದಿದೆ ಗೊತ್ತಾ ? | ಕನ್ಫರ್ಮ್ ಮಾಡ್ಕೊಳ್ಳಿ ನಿಮ್ಮ ಟಿಕೆಟ್ ಯಾವಾಗ ಎಂದು !! Read More »

ಪ್ರವಾಹದಲ್ಲಿ ಸಂಪೂರ್ಣ ಮುಳುಗಿದ್ದ ಸೇತುವೆಯ ಮೇಲೆ ಫುಲ್ ಜನರನ್ನು ತುಂಬಿಕೊಂಡು ಬಸ್ ಚಲಾಯಿಸಿದ ಸಾರಿಗೆ ಬಸ್ ಡ್ರೈವರ್ !

ಮಹಾರಾಷ್ಟ್ರ: ಪ್ರವಾಹದಿಂದ ಸಂಪೂರ್ಣವಾಗಿ ಮುಳುಗಿದ್ದ ಸೇತುವೆ ಮೇಲೆ ಚಾಲಕನೊಬ್ಬ ಬಸ್ ಚಲಾಯಿಸಿ ಧೈರ್ಯ ಪ್ರದರ್ಶಿಸಲು ಹೋಗಿ ಅಮಾನತ್ ಆಗಿದ್ದಾನೆ. ಈ ಘಟನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ. ಜನರ ಜೀವದ ಜೊತೆ ಚೆಲ್ಲಾಟವಾಡಿದ ಚಾಲಕರನ್ನು ಎಂಎಸ್ಆರ್’ಟಿಸಿ ಅಮಾನತು ಮಾಡಿದೆ. ರಾಯಗಡದ ಮಹಾಡ ತಾಲೂಕಿನ ನದಿಯ ಸೇತುವೆ ಅಲ್ಲಿ ಸುರಿದ ಕುಂಭ ದ್ರೋಣ ಮಳೆಯ ಹಿನ್ನೆಲೆಯಲ್ಲಿ ಮುಳುಗಡೆಯಾಗಿತ್ತು. ಮುಳುಗಿದ ಸೇತುವೆಯ ಮೇಲೆ ನೀರು ಹರಿಯುತ್ತಿತ್ತು. ಅಲ್ಲಿ ಇತರೆ ಯಾವುದೇ ವಾಹನಗಳು ಸಂಚರಿಸಿಲ್ಲ. ಆದರೆ ಎಂಎಸ್ಆರ್’ಟಿಸಿ ಬಸ್ ಚಾಲಕ ದುಸ್ಸಾಹಸಕ್ಕೆ …

ಪ್ರವಾಹದಲ್ಲಿ ಸಂಪೂರ್ಣ ಮುಳುಗಿದ್ದ ಸೇತುವೆಯ ಮೇಲೆ ಫುಲ್ ಜನರನ್ನು ತುಂಬಿಕೊಂಡು ಬಸ್ ಚಲಾಯಿಸಿದ ಸಾರಿಗೆ ಬಸ್ ಡ್ರೈವರ್ ! Read More »

error: Content is protected !!
Scroll to Top