Day: May 30, 2021

ಆತ್ಮಹತ್ಯೆಗೆ ಶರಣಾದ ಪತಿ-ಪತ್ನಿ | ನಾಲ್ಕೇ ತಿಂಗಳಲ್ಲಿ ಅಂತ್ಯ ಕಂಡ ಈ ಪ್ರೇಮ ವಿವಾಹ

ಬೆಂಗಳೂರು: ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾದ ಪ್ರೇಮಿಗಳ ವೈವಾಹಿಕ ಜೀವನ ದುರಂತ ಅಂತ್ಯ ಕಂಡಿದೆ. ಆತ್ಮಹತ್ಯೆಯಿಂದ ಪತ್ನಿ ಸಾವಿಗೀಡಾದ ಬೆನ್ನಿಗೇ ಪತಿಯೂ ನೇಣು ಬಿಗಿದು ಸಾವನ್ನಪ್ಪಿದ ಘಟನೆ ನಡೆದಿದೆ. ಪತಿ ಪುನೀತ್ (21) ಹಾಗೂ ಹರ್ಷಿತಾ (19) ಮೃತಪಟ್ಟ ದಂಪತಿ. ಆತ್ಮಹತ್ಯೆ ಮಾಡಿಕೊಂಡಿರುವ ಸತಿ-ಪತಿ ಇಬ್ಬರೂ ಮಾಗಡಿ ಚೆನ್ನೇನಹಳ್ಳಿ ನಿವಾಸಿಗಳಾಗಿದ್ದು, ಮದುವೆ ಬಳಿಕ ಹೇರೋಹಳ್ಳಿಯಲ್ಲಿ ವಾಸವಾಗಿದ್ದರು. ಇಂದು ಸಂಜೆ ನಾಲ್ಕು ಗಂಟೆಗೆ ಪತಿ ಪುನೀತ್ ಮನೆಗೆ ಮರಳಿದಾಗ ಪತ್ನಿ ನೇಣು ಹಾಕಿಕೊಂಡಿದ್ದ ಸ್ಥಿತಿಯಲ್ಲಿ ಇರುವುದು ಕಂಡು ಬಂದಿತ್ತು. …

ಆತ್ಮಹತ್ಯೆಗೆ ಶರಣಾದ ಪತಿ-ಪತ್ನಿ | ನಾಲ್ಕೇ ತಿಂಗಳಲ್ಲಿ ಅಂತ್ಯ ಕಂಡ ಈ ಪ್ರೇಮ ವಿವಾಹ Read More »

ಬಾವಿಗೆ ಬಿದ್ದ ನಾಗರಹಾವು | ರೋಚಕ ಕಾರ್ಯಾಚರಣೆಯ ಮೂಲಕ ಹಾವಿನ ರಕ್ಷಣೆ

ಉಡುಪಿ: ನಾಗರಹಾವೊಂದು ಬಾವಿಗೆ ಬಿದ್ದಿದ್ದು, ಅದನ್ನು ರಕ್ಷಣೆ ಮಾಡುವ ರೋಚಕ ಕಾರ್ಯಾಚರಣೆಯೊಂದು ಇಂದು ನಡೆದಿದೆ. ಉಡುಪಿ ಕುಕ್ಕೆಹಳ್ಳಿ ಸಮೀಪದ ಕೊರಗು ನಾಯಕ್ ಎಂಬವರಿಗೆ ಸೇರಿದ ಬಾವಿಯಲ್ಲಿ ಭಾರಿ ಗಾತ್ರದ ನಾಗರ ಹಾವು ಕಂಡುಬಂದಿದೆ. ಮೊದಲು ಅದು ಹಗ್ಗದ ತುಂಡು ಎಂದು ಅಂದುಕೊಂಡಿದ್ದರು. ನಂತರ ಅದು ನಾಗರಹಾವು ಬಿದ್ದಿದ್ದು ಎಂದು ಕನ್ಫರ್ಮ್ ಆಗಿದೆ. ಹಾವು ಆಹಾರ ಹುಡುಕುತ್ತಾ ಅತ್ತ ಬಂದಾಗ ಅದು ಬಾವಿಗೆ ಬಿದ್ದಿರಬಹುದು ಎನ್ನಲಾಗಿದೆ. ನೀರಲ್ಲಿದ್ದ ಹಾವು ಮೇಲೆ ಬರಲು ಹೆಣಗಾಡುತ್ತಿದ್ದುದನ್ನು ಗಮನಿಸಿದ ಮನೆಯವರು ಮತ್ತು ಸ್ಥಳೀಯರು …

ಬಾವಿಗೆ ಬಿದ್ದ ನಾಗರಹಾವು | ರೋಚಕ ಕಾರ್ಯಾಚರಣೆಯ ಮೂಲಕ ಹಾವಿನ ರಕ್ಷಣೆ Read More »

ಮಾನ್ಸೂನ್ 3 ದಿನ ತಡ | ಜೂನ್ 3 ಕ್ಕೆ ಮಳೆರಾಯ ಕೇರಳ ಪ್ರವೇಶ

ಕೇರಳಕ್ಕೆ ಈ ಬಾರಿಯ ಮಾನ್ಸೂನ್ ಆಗಮನವು ಎರಡು ದಿನ ವಿಳಂಬವಾಗುವ ಸಾಧ್ಯತೆಯಿದ್ದು, ಜೂನ್ 3 ರ ವೇಳೆಗೆ ಮಳೆಗಾಲ ಆರಂಭವಾಗುವ ನಿರೀಕ್ಷೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಇಂದು ಭಾನುವಾರ (ಮೇ 30) ಈ ಬಗ್ಗೆ ಹೇಳಿಕೆ ನೀಡಿರುವ ವಾಯುಮಾನ ಇಲಾಖೆ ಕರ್ನಾಟಕ ಕರಾವಳಿಯುದ್ದಕ್ಕೂ ಚಂಡಮಾರುತ ಚಲಾವಣೆ ಇದ್ದು, ಜೂನ್ 1 ನಂತರ ನೈರುತ್ಯ ಮಾರುತಗಳು ಬಲಗೊಳ್ಳಬಹುದು ಎಂದು ಐಎಂಡಿ ಮಹಾನಿರ್ದೇಶಕ ಎಂ ಮೋಹಪಾತ್ರ ತಿಳಿಸಿದ್ದಾರೆ. ಒಟ್ಟಾರೆ ಜೂನ್ 3 ರಿಂದ ನಾಲ್ಕು ತಿಂಗಳ …

ಮಾನ್ಸೂನ್ 3 ದಿನ ತಡ | ಜೂನ್ 3 ಕ್ಕೆ ಮಳೆರಾಯ ಕೇರಳ ಪ್ರವೇಶ Read More »

ಪುನರಾರಂಭಗೊಳ್ಳಲಿದೆ ಐಪಿಎಲ್ 2021 | ಸೆಪ್ಟೆಂಬರ್ ನಲ್ಲಿ ಐಪಿಎಲ್ ಪ್ರೇಮಿಗಳಿಗೆ ಕ್ರಿಕೆಟ್ ನ ರಸದೌತಣ

ಐಪಿಎಲ್ ಪ್ರೇಮಿಗಳಿಗೊಂದು ಸಿಹಿಸುದ್ದಿ. ಕೊರೊನಾ ಎರಡನೇ ಅಲೆಯಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿರುವ ಐಪಿಎಲ್ 2021ಆವೃತ್ತಿಯನ್ನು ದುಬೈನಲ್ಲಿ ಮುಂದುವರೆಸಲು ಬಿಸಿಸಿಐ ನಿರ್ಧರಿಸಿದೆ. ಸೆಪ್ಟೆಂಬರ್ 18 ಅಥವಾ 19ರಿಂದ ಐಪಿಎಲ್ 14 ಪುನಾರಂಭಗೊಳ್ಳಲಿದ್ದು ಮೂರು ವಾರಗಳ ಕಾಲ ನಡೆಯಲಿರುವ ಆವೃತ್ತಿಯ ದ್ವಿತೀಯಾರ್ಧದಲ್ಲಿ 10 ಮುಖಾಮುಖಿ ಪಂದ್ಯಗಳನ್ನು ಆಯೋಜಿಸಲು ಚಿಂತಿಸಲಾಗಿದೆ ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆ ಮೂಲಕ ಅರ್ಧದಲ್ಲೇ ನಿಂತು ಕ್ರಿಕೆಟ್ ಪ್ರೇಮಿಗಳಿಗೆ ಉಂಟಾಗಿದ್ದ ನಿರಾಸೆಯನ್ನು ಶಮನ ಮಾಡಲು ಬಿಸಿಸಿಐ ಚಿಂತಿಸುತ್ತಿರುವುದು ದೃಢಪಟ್ಟಿದೆ. ಸೆಪ್ಟೆಂಬರ್ 18 ಶನಿವಾರ ಹಾಗೂ …

ಪುನರಾರಂಭಗೊಳ್ಳಲಿದೆ ಐಪಿಎಲ್ 2021 | ಸೆಪ್ಟೆಂಬರ್ ನಲ್ಲಿ ಐಪಿಎಲ್ ಪ್ರೇಮಿಗಳಿಗೆ ಕ್ರಿಕೆಟ್ ನ ರಸದೌತಣ Read More »

ಸುಳ್ಯದ ಜುವೆಲ್ಲರಿ ಕಳ್ಳತನ | ಹೊಟ್ಟೆನೋವು ಬಿಚ್ಚಿಟ್ಟ 35 ಗ್ರಾಂ ಆಭರಣಗಳ ರಹಸ್ಯ

ಚಿನ್ನ ಕದ್ದು ಸಿಕ್ಕಿ ಬಿದ್ದಿದ್ದ ಕಳ್ಳರಲ್ಲಿ ಓರ್ವ ಅಸೌಖ್ಯಕ್ಕೊಳಗಾಗಿ ಸ್ಕ್ಯಾನಿಂಗ್ ವೇಳೆ ಚಿನ್ನ ನುಂಗಿರುವ ವಿಷಯ ಬಹಿರಂಗ ಗೊಂಡ ಸ್ವಾರಸ್ಯಕರ ಘಟನೆ ನಡೆದಿದೆ. ಸುಳ್ಯದ ಮೋಹನ್ ಶೇಟ್ ಜ್ಯುವೆಲ್ಲರಿ ಮಾರ್ಟ್ ನಲ್ಲಿ ಚಿನ್ನ ಕಳ್ಳತನ ಪ್ರಕರಣದಲ್ಲಿ ಇಬ್ಬರು ಕಳ್ಳರನ್ನು ಪೋಲೀಸರು ಬಂಧಿಸಿದ್ದರು. ಅವರಲ್ಲಿ ತಂಗಚ್ಚನ್ ಎಂಬಾತನನ್ನು ನಿನ್ನೆ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಶಿಬು ಎಂಬ ಇನ್ನೊಬ್ಬ ಆರೋಪಿಯ ಮೆಡಿಕಲ್ ಮಾಡಿಸಲು ಬಾಕಿ ಇತ್ತು. ಅದನ್ನೂ ಕೂಡ ಮಾಡಿಸಿ ಇಂದು ಶಿಬುವನ್ನು ಕೋರ್ಟಿಗೆ ಹಾಜರುಪಡಿಸಲು ನಿರ್ಧರಿಸಲಾಗಿತ್ತು. ಆದರೆ ನಿನ್ನೆ ಸಂಜೆ …

ಸುಳ್ಯದ ಜುವೆಲ್ಲರಿ ಕಳ್ಳತನ | ಹೊಟ್ಟೆನೋವು ಬಿಚ್ಚಿಟ್ಟ 35 ಗ್ರಾಂ ಆಭರಣಗಳ ರಹಸ್ಯ Read More »

ಕುಟುಂಬದ ಸದಸ್ಯನ ಶವವನ್ನು ನದಿಗೆ ಬಿಸಾಕಿ ಕೈತೊಳೆದುಕೊಂಡ ಮನೆಯವರು

ಇತ್ತೀಚಿಗಷ್ಟೆ ಬಿಹಾರ್ ಹಾಗೂ ಉತ್ತರ ಪ್ರದೇಶದಲ್ಲಿ ನದಿಯಲ್ಲಿ ಕೋವಿಡ್ ಸೋಂಕಿನಿಂದ ಮೃತ ಪಟ್ಟವರ ಶವಗಳ ರಾಶಿ ತೇಲಿ ಬಂದ ಘಟನೆ ಮಾಸುವ ಮುನ್ನವೆ, ಪಿಪಿಇ ಕಿಟ್ ಧರಿಸಿದ ವ್ಯಕ್ತಿಯೋರ್ವ ನದಿಗೆ ಶವ ಎಸೆಯುತ್ತಿರುವ ಘಟನೆ ನಡೆದಿದೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ರಪ್ತಿ ನದಿಯಲ್ಲಿ ಈ ರೀತಿಯಾಗಿ ಶವವನ್ನು ಎಸೆಯಲಾಗಿದೆ. ಈ ಘಟನೆ ಮೊನ್ನೆ ಮೇ.28 ರಂದು ನಡೆದಿದೆ. ಇಬ್ಬರು ವ್ಯಕ್ತಿಗಳು ಕೋವಿಡ್ ನಿಂದ ಮೃತ ಪಟ್ಟ ವ್ಯಕ್ತಿಯ ಶವವನ್ನು …

ಕುಟುಂಬದ ಸದಸ್ಯನ ಶವವನ್ನು ನದಿಗೆ ಬಿಸಾಕಿ ಕೈತೊಳೆದುಕೊಂಡ ಮನೆಯವರು Read More »

ಲಸಿಕೆ ಇಲ್ಲದೆ ಪರೀಕ್ಷೆ ಬೇಡ | ಎನ್ ಎಸ್ ಯು ಐ ಸುಳ್ಯ ಅಧ್ಯಕ್ಷ ಕೀರ್ತನ್ ಗೌಡ ಆಗ್ರಹ

ಲಸಿಕೆ ಇಲ್ಲದೆ ಪರೀಕ್ಷೆ ಬೇಡ, ವಿದ್ಯಾರ್ಥಿಗಳ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಬೇಕು ಹಾಗೂ ಕೋರೋನ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಎನ್ ಎಸ್ ಯು ಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ಅವರು ಸರಕಾರವನ್ನು ಆಗ್ರಹಿಸಿದ್ದಾರೆ. ಕೋರೋನ ಮೂರನೇ ಅಲೆಯ ಮುನ್ಸೂಚನೆ ಇದ್ದು ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಲ್ಲಿ ಭಯವನ್ನುಂಟು ಮಾಡಿದೆ. ಇದರ ನಡುವೆ ಪರೀಕ್ಷೆಯನ್ನು ಮಾಡುವುದಾದರೆ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಿ ವ್ಯಾಕ್ಸಿನ್ ನೀಡಬೇಕು ಅಥವಾ ಪರೀಕ್ಷೆಯನ್ನೆ …

ಲಸಿಕೆ ಇಲ್ಲದೆ ಪರೀಕ್ಷೆ ಬೇಡ | ಎನ್ ಎಸ್ ಯು ಐ ಸುಳ್ಯ ಅಧ್ಯಕ್ಷ ಕೀರ್ತನ್ ಗೌಡ ಆಗ್ರಹ Read More »

ಚಂಡಮಾರುತದ ಸಂದರ್ಭ ನಡೆದ ಚಂಡಾಲ ಕೃತ್ಯ | ಮಹಿಳಾ ಪೇದೆಯ ಮೇಲೆ ಮೇಲಧಿಕಾರಿಯಿಂದ ರೇಪ್

ಊರು,ಹೊಲ ಕಾಯಬೇಕಾದ ಪೋಲಿಸ್ ಅಧಿಕಾರಿಯೆ ಮೇಯಲು ಹೋಗಿ ತನ್ನದೇ ಡಿಪಾರ್ಟ್ ಮೆಂಟಿನಲ್ಲಿ ಮಹಿಳಾ ಪೇದೆಯಾಗಿರುವ ಹೆಣ್ಣೊಬ್ಬಳ ಸೆರಗಿಗೆ ಕೈ ಹಾಕಿದ ಕಳವಳಕಾರಿ ಘಟನೆ ನಡೆದಿದೆ. ಅಲ್ಲಿ ಒಡಿಶಾ ರಾಜ್ಯದಲ್ಲಿ ಮಹಿಳಾ ಪೇದೆ ಮೇಲೆ ಪೊಲೀಸ್‌ ಅಧಿಕಾರಿಯೋರ್ವ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.ಈ ಸಂಬಂಧ ಬನ್ಸಿದಾರ್‌ ಪ್ರದಾನ್‌ ಎಂಬ ಪೊಲೀಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಗೋಪಾಲ್ಪುರ ಪ್ರದೇಶದಲ್ಲಿ ಔಟ್ ಪೋಸ್ಟ್ ಇನ್ ಚಾರ್ಜ್ ಅಧಿಕಾರಿಯಾಗಿದ್ದ. ಬಾಲಾಸೋರ್‌ ಜಿಲ್ಲೆಯ ಗೋಪಾಲ್ಪಪುರ ಪ್ರದೇಶದಲ್ಲಿ ಯಾಸ್ ಚಂಡಮಾರುತದ ಕರ್ತವ್ಯದಲ್ಲಿದ್ದ ವೇಳೆ ಈ …

ಚಂಡಮಾರುತದ ಸಂದರ್ಭ ನಡೆದ ಚಂಡಾಲ ಕೃತ್ಯ | ಮಹಿಳಾ ಪೇದೆಯ ಮೇಲೆ ಮೇಲಧಿಕಾರಿಯಿಂದ ರೇಪ್ Read More »

ಇಂಜಿನಿಯರಿಂಗ್ ಪದವೀಧರರಿಗೆ ಬಿಇಎಲ್ ಸಂಸ್ಥೆಯಲ್ಲಿ ವಿವಿಧ ಉದ್ಯೋಗವಕಾಶಗಳು

ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿನ (ಬಿಇಎಲ್) ಸ್ಟ್ರಾಟೆಜಿಕ್ ಕಮ್ಯುನಿಕೇಷನ್ ಆ್ಯಂಡ್ ಅನ್ ಮ್ಯಾನ್ ಸಿಸ್ಟಮ್ ಎಸ್ಬಿಯು ಕಾಂಪ್ಲೆಕ್ಸ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಏರೋಸ್ಪೇಸ್, ಏರೋನಾಟಿಕಲ್ ವಿಭಾಗದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.ಒಟ್ಟು 9 ಹುದ್ದೆಗಳನೇಮಕಾತಿ ನಡೆಯಲಿದೆ. ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ, ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಬೆಂಗಳೂರಿನ ಬಿಇಎಲ್‌ನಿಂದ ನೇಮಕ ಮಾಡಿಕೊಳ್ಳುವ ಅಭ್ಯರ್ಥಿಗಳನ್ನು ಬೆಂಗಳೂರಿನಲ್ಲೇ ನೇಮಕ ಮಾಡಲಾಗುವುದು. 9 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 3 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 3, ಎಸ್ಸಿ -1, …

ಇಂಜಿನಿಯರಿಂಗ್ ಪದವೀಧರರಿಗೆ ಬಿಇಎಲ್ ಸಂಸ್ಥೆಯಲ್ಲಿ ವಿವಿಧ ಉದ್ಯೋಗವಕಾಶಗಳು Read More »

ನದಿಯಲ್ಲಿ ಈಜಲು ಹೋದ ನಾಲ್ಕು ಮಕ್ಕಳು ನೀರುಪಾಲು

ವಿಜಯಪುರ: ಭೀಮಾ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ಮಕ್ಕಳು ನೀರು ಪಾಲಾದ ದುರ್ಘಟನೆ ಮಹಾರಾಷ್ಟ್ರ ಗಡಿಪ್ರದೇಶದಲ್ಲಿ ದಕ್ಷಿಣ ಸೋಲಾಪುರ ತಾಲೂಕಿನ ಲವಗಿ ಗ್ರಾಮದಲ್ಲಿ ನಡೆದಿದೆ. ಶವಗಳಿಗೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದಾರೆ. ಲವಗಿ ಗ್ರಾಮದ ಶಿವಾನಂದ ಪಾರ್ಶೆಟ್ಟಿ ಅವರ ಮಕ್ಕಳಾದ ಆರತಿ (13), ವಿಠ್ಠಲ (10), ಹಾಗೂ ಶಿವಾಜಿ ತಾನವಡೆ ಎಂಬುವವರ ಮಕ್ಕಳಾದ ಸಮೀಕ್ಷಾ (14), ಅರ್ಪಿತಾ(13) ನೀರುಪಾಲಾದ ಮಕ್ಕಳು. ಹಿರಿಯರು ಕೆಲಸದಲ್ಲಿ ತೊಡಗಿದ್ದಾಗ ಮಕ್ಕಳು ಭೀಮಾ‌ ನದಿಗೆ ಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಹರಿವಿದ್ದ …

ನದಿಯಲ್ಲಿ ಈಜಲು ಹೋದ ನಾಲ್ಕು ಮಕ್ಕಳು ನೀರುಪಾಲು Read More »

error: Content is protected !!
Scroll to Top