ಮಾನ್ಸೂನ್ 3 ದಿನ ತಡ | ಜೂನ್ 3 ಕ್ಕೆ ಮಳೆರಾಯ ಕೇರಳ ಪ್ರವೇಶ

ಕೇರಳಕ್ಕೆ ಈ ಬಾರಿಯ ಮಾನ್ಸೂನ್ ಆಗಮನವು ಎರಡು ದಿನ ವಿಳಂಬವಾಗುವ ಸಾಧ್ಯತೆಯಿದ್ದು, ಜೂನ್ 3 ರ ವೇಳೆಗೆ ಮಳೆಗಾಲ ಆರಂಭವಾಗುವ ನಿರೀಕ್ಷೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಇಂದು ಭಾನುವಾರ (ಮೇ 30) ಈ ಬಗ್ಗೆ ಹೇಳಿಕೆ ನೀಡಿರುವ ವಾಯುಮಾನ ಇಲಾಖೆ ಕರ್ನಾಟಕ ಕರಾವಳಿಯುದ್ದಕ್ಕೂ ಚಂಡಮಾರುತ ಚಲಾವಣೆ ಇದ್ದು, ಜೂನ್ 1 ನಂತರ ನೈರುತ್ಯ ಮಾರುತಗಳು ಬಲಗೊಳ್ಳಬಹುದು ಎಂದು ಐಎಂಡಿ ಮಹಾನಿರ್ದೇಶಕ ಎಂ ಮೋಹಪಾತ್ರ ತಿಳಿಸಿದ್ದಾರೆ. ಒಟ್ಟಾರೆ ಜೂನ್ 3 ರಿಂದ ನಾಲ್ಕು ತಿಂಗಳ ಮಳೆಗಾಲದ ಋತುವು ಆರಂಭವಾಗಲಿದೆ ಎಂದು ಅದು ಹೇಳಿದೆ.ಈ ವರ್ಷ ವಾಡಿಕೆಯಂತೆ ಸಾಮಾನ್ಯ ಮುಂಗಾರು ಮಳೆ ಆಗಲಿದೆ ಎಂಬ ನಿರೀಕ್ಷೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ಹೇಳಿತ್ತು. ಇದು ಭಾರತದ ಆರ್ಥಿಕತೆ ಪ್ರಮುಖ ಮೂಲವಾಗಿರುವ ಕೃಷಿಗೆ ಪೂರಕವಾಗಿದೆ.

ಈ ವರ್ಷ ಪ್ರಾರಂಭವಾದ ಮೇಲೆ ಈಗಾಗಲೇ 2 ಚಂಡಮಾರುತಗಳು ಎದ್ದಿದ್ದು, ಅವುಗಳ ಪ್ರಭಾವದಿಂದ ದೇಶದ ಬಹುತೇಕ ಕಡೆ ಪ್ರತಿದಿನ ಮಳೆಯಾಗುತ್ತಲೇ ಇದೆ.ಈ ಹಿಂದೆ ಹವಾಮಾನ ಇಲಾಖೆ ಮೇ 31ಕ್ಕೆ ಕೇರಳಕ್ಕೆ ಮುಂಗಾರು ಆಗಮನದ ಸಾಧ್ಯತೆ ಇದೆ ಎಂದು ಹೇಳಿತ್ತು. ಆ ಮೂಲಕ ಈ ಹಿಂದೆ ಮೇ 31ರಿಂದ ಮಳೆಗಾಲ ಆರಂಭವಾಗುತ್ತದೆ ಎಂದು ಅಂದಾಜಿಸಲಾಗಿತ್ತು.

Leave A Reply

Your email address will not be published.