ವೆನ್ಲಾಕ್ ಆಸ್ಪತ್ರೆ | 1 + 1 ಸೋಂಕಿನ ಭೀತಿ, ಅಟೆಂಡೆಂಟ್ ರನ್ನು ಸೋಂಕಿನಿಂದ ರಕ್ಷಿಸುವವರು ಯಾರು ?
ಮಂಗಳೂರಿನ ವೆನ್ಲಾಕ್ ಕೋವಿಡ್ ಕೇರ್ ಸೆಂಟರ್ ನಲ್ಲಿ ದಿನೇ ದಿನೇ ಸಡಿಲವಾಗುತ್ತಿರುವ ನಿಯಮ ಮತ್ತು ಮಾರಕ ರೋಗದೆಡೆಗೆ ಇರಬೇಕಾಗಿದ್ದ ಗಂಭೀರತೆಯು ಅರೋಗ್ಯವಂತರಲ್ಲಿ ಆತಂಕ ಸೃಷ್ಟಿಸಿದೆ.
ಯಾವುದಾದರೂ ರೋಗಿಯನ್ನೂ ಆತನ ಅಥವಾ ಆಕೆಯ ಪರಿಸ್ಥಿತಿ ವಿಷಮಗೊಳ್ಳುತ್ತಿರುವ ಸಂದರ್ಭದಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗುತ್ತದೆ. ಆದರೆ ಈಗ ವೆನ್ಲಾಕ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಯಾವುದೇ ಅಟೆಂಡೆಂಟ್ ಅನ್ನು ಬಿಡುತ್ತಿಲ್ಲದ ಕಾರಣ ಏನೂ ಸಮಸ್ಯೆ ಇಲ್ಲ. ಆದರೆ, ವೆಂಟಿಲೇಟರ್ ಅಗತ್ಯ ಇಲ್ಲದ ಅಥವಾ ವೆಂಟಿಲೇಟರ್ ಗಾಗಿ ಕಾಯುತ್ತಿರುವ ರೋಗಿಗಳ ಬಳಿ ಸದಾ ರೋಗಿಗಳ ಸಂಬಂಧಿಕರು ಅಟೆಂಡೆಂಟ್ ಗಳಾಗಿ ಇರುತ್ತಾರೆ. ಅವರಲ್ಲಿ ಕೆಲವರು ಡಬ್ಬಲ್ ಮಾಸ್ಕ್ ಹಾಕಿಕೊಂಡು ಆದಷ್ಟು ಜಾಗ್ರತೆ ವಹಿಸುತ್ತಿರುವವರು ಕಂಡುಬರುತ್ತಾರೆ. ಆದರೆ ಆ ರೋಗಿಗಳನ್ನು ಎತ್ತಿಕೊಂಡು ಕೂರಿಸುವುದು, ಮಲ ಮೂತ್ರ ವಿಸರ್ಜನೆ ಮಾಡಿಸೋದು ಎಲ್ಲವೂ ರೋಗಿಗಳ ಜತೆ ಇರುವ ಈ ಅಟೆಂಡೆಂಟ್ ಗಳು. ಈ ಸಮಯದಲ್ಲಿ ಗಾಳಿಯಲ್ಲಿ ಹರಡಬಲ್ಲ ಈ ಮಾರಕ ರೋಗ ಹರಡದೆ ಇದ್ದೀತೆ ಎಂಬ ಪ್ರಶ್ನೆ ಮನೆಮಾಡಿರುವುದು ಸಹಜ.
ಈ ಅಟೆಂಡೆಂಟ್ ಗಳಲ್ಲಿ ಹೆಚ್ಚಿನವರು ಮಲಗೋದು ಅದೇ ಪೇಷಂಟ್ ಮಲಗಿದ ಬೆಡ್ಡಿನ ಕೆಳಗೆ ಎಂಬ ವಿಷಯ ಅಚ್ಚರಿಯಾದರೂ ನಂಬಲೇಬೇಕಾದ ಸತ್ಯ. ಈಗ ವೆನ್ಲಾಕ್ ನಲ್ಲಿ ಫಾಲೋ ಮಾಡುತ್ತಿರುವ ನಿಯಮದ ಪ್ರಕಾರ ಓರ್ವ ಪೇಷಂಟ್ ನಿಂದ ಕನಿಷ್ಠ ಆತನ ಅಟೆಂಡೆಂಟ್ ಗೆ ರೋಗ ಹರಡುವ ಎಲ್ಲಾ ಸಾಧ್ಯತೆ ಇದೆ. ಇದಕ್ಕೆಲ್ಲ ಕಾರಣ ಫುಲ್ ಗ್ಲೌನ್ ppe ಸಿಸ್ಟಮ್ ನ್ನು ಜನರಲ್ ವಾರ್ಡ್ ನಲ್ಲಿ ಪಾಲಿಸಲಾಗುತ್ತಿಲ್ಲ. ಆದುದರಿಂದ ಇಲ್ಲಿ ರೋಗಿಯಲ್ಲದ ವ್ಯಕ್ತಿಗೆ ( ಅಟೆಂಡೆಂಟ್) ಗೆ ಸೋಂಕು ಹರಡಿಸುವ ಸಂಭವವೂ ಇದೆ. ಒಬ್ಬ ರೋಗಿ ಕೋರೋಣ ತಗುಲಿಸಿ ಕೊಂಡಿದ್ದರೆ, ಅದನ ಜತೆಗೆ ಇನ್ನೊಬ್ಬ ಕೂಡಾ (1+1) ಸೊಂಕು ತಗುಲಿಸಿಕೊಳ್ಳುವುದು ಗ್ಯಾರಂಟಿ.
ಆದರೆ ಇದೆಲ್ಲವನ್ನು ಅರಿಯದ ನಾವು ಕಂಟೇನ್ ಮೆಂಟ್, ಸೀಲ್ ಡೌನ್ ಎಂದು ಮಾಡುತ್ತಿದ್ದೇವೆ. ಒಂದೊಮ್ಮೆ ಆ ಕಂಟೇನ್ಮೆಂಟ್ ನಲ್ಲಿ ಪಾಸಿಟಿವ್ ವ್ಯಕ್ತಿ ಇದ್ದು, ಈಗ ಆತ ಆಸ್ಪತ್ರೆ ಸೇರಿದರೂ ಆ ಏರಿಯಾ ಸುರಕ್ಷತೆಯ ದೃಷ್ಟಿಯಿಂದ ಸೀಲ್ ಆಗುತ್ತದೆ. ಇದು ಒಳ್ಳೆಯ ನಿಯಮವೇ ಸರಿ. ಆದರೆ ಆಸ್ಪತ್ರೆಯಲ್ಲಿ ರೋಗಿಗಳ ಮಧ್ಯೆ ಅಟೆಂಡೆಂಟ್ ಗಳು ಯಾಕೆ ಇರಬೇಕು ಹಾಗೂ ಇನ್ನೂ ಯಾಕೆ ಸೂಕ್ತ ಸುರಕ್ಷತಾ ವ್ಯವಸ್ಥೆ ಮಾಡಲಿಲ್ಲ ಎಂನ್ನುವುದೇ ಗಂಭೀರ ಪ್ರಶ್ನೆಯಾಗಿ, ಅನುಮಾನಕ್ಕೂ ಎಡೆಮಾಡಿಕೊಟ್ಟಿದೆ.
ಇದಿಷ್ಟೇ ಅಲ್ಲದೇ ಮೊನ್ನೆ ಓರ್ವ ತನ್ನ ತಾಯಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಆತ ಆಸ್ಪತ್ರೆಯಲ್ಲೇ ಒಂದು ದಿನ ಕಳೆದು ಮರುದಿನ ಮತ್ತೆ ತನ್ನ ಊರಿಗೆ ಬಂದಿದ್ದಾನೆ. ಬಂದಾತ ಎಲ್ಲರೊಂದಿಗೂ ಬೆರೆತಿದ್ದಾನೆ, ಸುತ್ತಾಡಿದ್ದಾನೆ. ಈಗ ಎಲ್ಲಿ ಹೋಯಿತು ಈ ಕಂಟ್ರೋಲ್? ಮಹಾಮಾರಿಯ ಬಗೆಗಿನ ನಿಯಮ ಸಡಿಲವಾಯಿತಾ?
ಇನ್ನಾದರೂ ಪ್ರಜ್ಞಾವಂತ ಅಧಿಕಾರಿ ವರ್ಗ, ವಾರಿಯರ್ಸ್ ಇತ್ತ ಗಮನ ಹರಿಸಬೇಕಿದೆ. ಕೋವಿಡ್ ರೋಗಿಗಳಿಂದ ಸೋಂಕು ಇಲ್ಲದ ಆರೋಗ್ಯವಂತ ಅಟೆಂಡೆಂಟ್ ರನ್ನು ರಕ್ಷಿಸಬೇಕಿದೆ.