ದ.ಕ.ಹಾಲು ಒಕ್ಕೂಟದಿಂದ ಗ್ರಾಹಕರಿಗೆ ಗುಡ್‌ನ್ಯೂಸ್ | 1 ಲೀಟರ್‌ ಹಾಲಿಗೆ 40 ಎಂಎಲ್ ಹಾಲು ಉಚಿತ !

ಮಂಗಳೂರು: ಕೋವಿಡ್ ಸಂಕಷ್ಟದ ನಡುವೆಯೂ ದ.ಕ.ಹಾಲು ಒಕ್ಕೂಟವು ಗ್ರಾಹಕರಿಗೆ ಶುಭಸುದ್ದಿಯೊಂದನ್ನು ನೀಡಿದೆ.

ಹಾಲು ದಿನಾಚರಣೆಯ ದಿನವಾದ ಜೂನ್‌ 1ರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಾಲು ಖರೀದಿಸುವವರಿಗೆ 1 ಲೀಟರ್‌ ಹಾಲಿಗೆ 40 ಎಂ.ಎಲ್ ಹೆಚ್ಚುವರಿ ಹಾಲನ್ನು ಕೊಡುಗೆಯಾಗಿ ನೀಡಲಿದೆ.

ಈ ಆಫರ್ ಅರ್ಧ ಲೀಟರ್‌ ಹಾಲಿನ ಪ್ಯಾಕೆಟ್‌ನಲ್ಲಿಯೂ ಲಭ್ಯ ಇರಲಿದ್ದು,ಅರ್ಧ ಲೀಟರ್‌ಗೆ 20 ಎಂ.ಎಲ್‌ ಹಾಲನ್ನು ಉಚಿತವಾಗಿ ನೀಡಲಿದೆ.

1 ಲೀಟರ್‌ ಹಾಲಿನ ಬೆಲೆಗೆ 1.ಲೀಟರ್ 40 ಎಂ.ಎಲ್‌. ದೊರಕಲಿದೆ.ಹೆಚ್ಚುವರಿ ಹಾಲನ್ನು ಆ ಪ್ಯಾಕೆಟ್‌ನಲ್ಲೇ ತುಂಬಿಸಿ ಗ್ರಾಹಕರಿಗೆ ಉಚಿತವಾಗಿ ನೀಡಲಿದೆ.

ಗ್ರಾಹಕರು ನಿಗದಿತ ಲೀಟರ್‌ಗೆ ಮಾತ್ರ ಈಗಿನಂತೆ ದರ ಪಾವತಿಸಿದರೆ ಸಾಕಾಗುತ್ತದೆ. ಪ್ರಸಕ್ತ ಲಾಕ್‌ಡೌನ್‌ ಇರುವುದರಿಂದ ಲೀಟರ್‌ಗಟ್ಟಲೆ ಹಾಲು ಒಕ್ಕೂಟಗಳಲ್ಲಿ ಶೇಖರಣೆಯಾಗುತ್ತಿದೆ.

ಹಾಲು ಸಂಗ್ರಹ ನಿಲ್ಲಿಸಿದರೆ ಹೈನುಗಾರರಿಗೆ ತೊಂದರೆಯಾಗಲಿದೆ.ಆದ್ದರಿಂದ ಗ್ರಾಹಕರಿಗೆ ಉಚಿತವಾಗಿ 40% ಹಾಲು ನೀಡಲು ಒಕ್ಕೂಟ ನಿರ್ಧರಿಸಿದೆ.

Leave A Reply

Your email address will not be published.