Day: May 11, 2021

ಚಕ್ರಗಳಿಗೆ ಇರಿಸಿದ ಲಿಂಬೆ ಹಣ್ಣು ದಾಟಿಸಲು ಲಾರಿ ಮುಂದಕ್ಕೆ ಹೊರಟ ಸಂದರ್ಭ ಚಲಿಸಿದ ಲಾರಿಯ ಚಕ್ರದಡಿ ಸಿಕ್ಕಿ 5 ರ ಬಾಲಕ ಮೃತ

ಅಮವಾಸ್ಯೆ ಪೂಜೆ ಮುಗಿಸಿದ ಬಳಿಕ ಚಕ್ರಗಳಿಗೆ ಇರಿಸಿದ ಲಿಂಬೆ ಹಣ್ಣು ದಾಟಿಸಲು ಲಾರಿ ಮುಂದಕ್ಕೆ ಹೊರಟ ಸಂದರ್ಭ ಮುಂದೆ ಚಲಿಸಿದ ಲಾರಿಯ ಚಕ್ರದಡಿ ಹುಡುಗನೊಬ್ಬ ಸಿಕ್ಕಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಈ ದುರ್ಘಟನೆ ಖಾನಾಪುರ ತಾಲ್ಲೂಕಿನ ಪ್ರಭುನಗರ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ಆದರ್ಶ ರಮೇಶ ಹರಿಜನ ಮೃತ ಬಾಲಕ. ಇಂದು ಅಮವಾಸ್ಯೆ ಪೂಜೆ ನಿಮಿತ್ತ ಆದರ್ಶನ ಸೋದರ ಸಂಬಂಧಿಯು ಆತನ ಲಾರಿಯನ್ನು ಚೆನ್ನಾಗಿ ತೊಳೆದು ಪೂಜೆ ಮಾಡಿ ಸಿಂಗರಿಸಿದ್ದ. ಪೂಜೆ ಕೂಡ ಮುಗಿಸಿದ್ದರು. ಲಾರಿಯ …

ಚಕ್ರಗಳಿಗೆ ಇರಿಸಿದ ಲಿಂಬೆ ಹಣ್ಣು ದಾಟಿಸಲು ಲಾರಿ ಮುಂದಕ್ಕೆ ಹೊರಟ ಸಂದರ್ಭ ಚಲಿಸಿದ ಲಾರಿಯ ಚಕ್ರದಡಿ ಸಿಕ್ಕಿ 5 ರ ಬಾಲಕ ಮೃತ Read More »

ಸ್ವಾರ್ಥಿಯಾದ ಮನುಕುಲಕ್ಕೆ ಇನ್ನಾದರೂ ಅರ್ಥವಾಗಲಿದೆಯಾ?…ಹೇ ಮನುಜ ಮಣ್ಣಲ್ಲಿ ಮಣ್ಣಾಗಿ ಹೋಗುವಾಗ ನಿನ್ನವರೆಲ್ಲಿ.

ಎತ್ತ ನೋಡಿದರೂ ಲಾಕ್ ಡೌನ್.ಮನುಕುಲಕ್ಕೆ ಇನ್ನಾದರೂ ಅರ್ಥವಾಗಲಿದೆಯಾ ಸಾಮಾಜಿಕತೆ? ಮಾನವೀಯ ಮೌಲ್ಯಗಳೇ ಮರೆಯಾಗಿರುವ ಈ ಮನುಕುಲದಲ್ಲಿ “ನಾನು” “ನನ್ನದೆನ್ನುವ” ಮಾನವನ ಎರಡು ಸ್ವಭಾವ ತರ್ಕಕ್ಕೆ ನಿಲುಕದ್ದು.”ನನ್ನಿಂದಾನೆ ಎಲ್ಲಾ” ಎನ್ನುವ ಮನುಕುಲದ ಅಹಂಕಾರಕ್ಕೆ ಪ್ರಕೃತಿಯ ಸ್ಪಂದನೆ ಹಾಗೂ ಅದರ ಒಳಿತು ಕೆಡುಕುಗಳನ್ನು ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಕಾಣಬಹುದು. ಕೋವಿಡ್-19 ಎಂಬ ನಾಮಾಂಕಿತವನ್ನು ಹೊಂದಿದ ಮಹಾಮಾರಿಯು ಮೊದಲು ಅಪರೂಪವಾಗಿದ್ದು, ಎಲ್ಲೋ ಬೇರೊಂದು ದೂರದ ದೇಶದಲ್ಲಿ ಈ ವೈರಸ್ ಇದೆ ಎಂದು ಕೇಳಿದ್ದ ನಮಗಿಂದು ಈ ವೈರಸ್ ನ ನಾಮವು ಚಿರಪರಿಚಿತವಾಗಿದೆ. …

ಸ್ವಾರ್ಥಿಯಾದ ಮನುಕುಲಕ್ಕೆ ಇನ್ನಾದರೂ ಅರ್ಥವಾಗಲಿದೆಯಾ?…ಹೇ ಮನುಜ ಮಣ್ಣಲ್ಲಿ ಮಣ್ಣಾಗಿ ಹೋಗುವಾಗ ನಿನ್ನವರೆಲ್ಲಿ. Read More »

ಮದುವೆ ಮನೆಯಲ್ಲಿ ನೈಟ್ ಡಿಜೆ ಡ್ಯಾನ್ಸ್ | ವೀಡಿಯೋ ವೈರಲ್ ,ಕ್ರಮಕ್ಕೆ ಡಿಸಿ ಸೂಚನೆ

ಕೋವಿಡ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಸರಕಾರ ಕೋವಿಡ್ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಆದರೆ ಹಲವೆಡೆ ಈ ನಿಯಮಗಳನ್ನು ಗಾಳಿಗೆ ತೂರಿ ಗಮ್‌ಜಾಲ್ ಮಾಡುತ್ತಿರುವುದು ಕಂಡು ಬರುತ್ತಿದೆ.ಇಲ್ಲೊಂದು ಕಡೆ ಮದುವೆ ಮನೆಯಲ್ಲಿ ರಾತ್ರಿ ಡಿಜೆ ನೈಟ್ ಪಾರ್ಟಿಯ ಗಮ್‌ಜಾಲ್ ಮಾಡಿದ್ದಲ್ಲದೆ ಅದರ ವೀಡಿಯೊ ಮಾಡಿ ವೈರಲ್ ಮಾಡಿದ್ದಾರೆ. ಇದು ಮದುವೆ ಮನೆಯವರಿಗೆ ಸಂಕಷ್ಟ ತಂದಿದೆ. ಮಂಗಳೂರು ನಗರದ ಹೊರವಲಯದ ಅಡ್ಯಾರ್‌ನ ಯುವಕನೊಬ್ಬನ ಮದುವೆ ರವಿವಾರ ಸಿದ್ಧಕಟ್ಟೆಯಲ್ಲಿರುವ ಯುವತಿಯ ಮನೆಯಲ್ಲಿ ನಡೆದಿತ್ತು. ಅವರು 25 ಜನರಿಗೆ ಗ್ರಾಪಂನಿಂದ ಅನುಮತಿ …

ಮದುವೆ ಮನೆಯಲ್ಲಿ ನೈಟ್ ಡಿಜೆ ಡ್ಯಾನ್ಸ್ | ವೀಡಿಯೋ ವೈರಲ್ ,ಕ್ರಮಕ್ಕೆ ಡಿಸಿ ಸೂಚನೆ Read More »

ಲಾಕ್ ಡೌನ್ ನ ಮೊದಲ ದಿನದ ಪೊಲೀಸ್ ಲಾಠಿ ಪ್ರಯೋಗದ ವಿರುದ್ಧ ಜನಾಕ್ರೋಶ | ವಿನಾಕಾರಣ ಬಲಪ್ರಯೋಗ ಸಲ್ಲ- ಎಂದು ಸರ್ಕಾರಕ್ಕೆ ಖಡಕ್ ಸೂಚನೆ ಕೊಟ್ಟ ಹೈಕೋರ್ಟ್ !

ರಾಜ್ಯದಲ್ಲಿ ಲಾಕ್ ಡೌನ್ ಮೊದಲ ದಿನ, ಅಂದರೆ ನಿನ್ನೆ ಪೊಲೀಸರು ನಡೆಸಿದ ದೌರ್ಜನ್ಯದ ವಿರುದ್ಧ ತೀವ್ರ ಜನಾಕ್ರೋಶ ವ್ಯಕ್ತವಾಗಿದೆ. ಈಗ ಹೈಕೋರ್ಟ್ ಅನಗತ್ಯ ಬಲಪ್ರಯೋಗ ಮಾಡುವುದು ಬೇಡವೆಂದು ಸರ್ಕಾರಕ್ಕೆ ಸೂಚನೆ ನೀಡಿದೆ. ಕೋವಿಡ್ ಸಂಬಂಧಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠ ಈ ಕುರಿತು ಸೂಚನೆ ನೀಡಿದೆ. ಕಳೆದ ವರ್ಷ ಮಾರ್ಚ್ 30 ರಂದು ಅನಗತ್ಯವಾಗಿ ಬಲಪ್ರಯೋಗ ಮಾಡದಂತೆ ಹೈಕೋರ್ಟ್ ನಿರ್ದೇಶನ ನೀಡಿದೆ …

ಲಾಕ್ ಡೌನ್ ನ ಮೊದಲ ದಿನದ ಪೊಲೀಸ್ ಲಾಠಿ ಪ್ರಯೋಗದ ವಿರುದ್ಧ ಜನಾಕ್ರೋಶ | ವಿನಾಕಾರಣ ಬಲಪ್ರಯೋಗ ಸಲ್ಲ- ಎಂದು ಸರ್ಕಾರಕ್ಕೆ ಖಡಕ್ ಸೂಚನೆ ಕೊಟ್ಟ ಹೈಕೋರ್ಟ್ ! Read More »

ಸಿಬ್ಬಂದಿ ಜತೆಯಲ್ಲೇ ನಡು ರಸ್ತೆಯಲ್ಲಿ ಪುಂಡಿ ತಿಂದ ಕಮೀಷನರ್

ಮಂಗಳೂರು ನಗರದಲ್ಲಿ ಕೋವಿಡ್ ಬಂದೋಬಸ್ತ್ ಕಾರ್ಯದ ನಡುವೆ ಸಿಬ್ಬಂದಿ ಜತೆಯಲ್ಲೇ ನಡು ರಸ್ತೆಯಲ್ಲಿ ನಿಂತು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತುಳುನಾಡಿನ ಸಾಂಪ್ರದಾಯಿಕ ತಿಂಡಿ ಪುಂಡಿ ತಿಂದರು. ಮಂಗಳವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ಬಂದೋಬಸ್ತ್ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕ್ಲಾಕ್ ಟವರ್ ಬಳಿ ಪರಿಶೀಲನೆಗೆ ಆಗಮಿಸಿದ್ದರು. ಆಗ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಕಮಿಷನರ್ ಗೆ ಪುಂಡಿ ಹಾಗೂ ಸಾಂಬಾರ್ ನೀಡಿದರೆ ತಾನು ಐಪಿಎಸ್ ಅಧಿಕಾರಿ ಎಂಬ ಯಾವುದೇ ಬಿಗುಮಾನವಿಲ್ಲದೆ ಸಿಬ್ಬಂದಿ …

ಸಿಬ್ಬಂದಿ ಜತೆಯಲ್ಲೇ ನಡು ರಸ್ತೆಯಲ್ಲಿ ಪುಂಡಿ ತಿಂದ ಕಮೀಷನರ್ Read More »

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪೊಲೀಸರಿಗೆ ಮಾಸ್ಕ್, ಸ್ಯಾನಿಟೈಸ್ ಹಸ್ತಾಂತರ

ಕೊರೋನ ವಾರಿಯರ್ಸ್‌ಗಳಾಗಿರುವ ಪೊಲೀಸ್ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸರಿಗೆ ಮಾಸ್ಕ್, ಸ್ಯಾನಿಟರ್ ಹಸ್ತಾಂತರಿಸಲಾಯಿತು. ಮಂಗಳೂರಿನಲ್ಲಿರುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಂದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸಾಂಕೇತಿಕವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳನ್ನು ಪಡೆದುಕೊಂಡರು. ಮಂಗಳೂರು ನಗರ ವ್ಯಾಪ್ತಿಯ ಪ್ರತಿ ಠಾಣೆಗಳಿಗೆ ತಲಾ 5 ಲೀಟರ್‌ನಂತೆ ಸ್ಯಾನಿಟೈಸರ್ ಹಾಗೂ ಒಟ್ಟು 5000 ಮಾಸ್ಕ್‌ಗಳನ್ನು ಇಂದು ವಿತರಿಸಲಾಗಿದ್ದು, …

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪೊಲೀಸರಿಗೆ ಮಾಸ್ಕ್, ಸ್ಯಾನಿಟೈಸ್ ಹಸ್ತಾಂತರ Read More »

ಸವಣೂರು : ಕೋವಿಡ್ ನಿಯಮ ಉಲ್ಲಂಘನೆ | ಅಂಗಡಿ ಮಾಲಕನ ವಿರುದ್ದ ದೂರು

ಸವಣೂರು : ಕಡಬ ತಾಲೂಕು ಸವಣೂರು ಗ್ರಾಮದ ಸವಣೂರಿನ ಪುದೊಟ್ಟು ಜನರಲ್ ಸ್ಟೋರ್ ನ ಮಾಲಕ ನಜೀರ್ ಎಂಬವರ ವಿರುದ್ದ ಬೆಳ್ಳಾರೆ ಠಾಣಾ ಎಸೈ ಆಂಜನೇಯ ರೆಡ್ಡಿ ಅವರು ದೂರು ದಾಖಲಿಸಿದ್ದಾರೆ. ನಝೀರ್ ಅವರು ತಮ್ಮ ಅಂಗಡಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಸುಮಾರು 15 ರಿಂದ 20 ಮಂದಿ ಗ್ರಾಹಕರನ್ನು ಗುಂಪಾಗಿ ಸೇರಿಸಿ ವ್ಯಾಪಾರ ಮಾಡುತ್ತಿದ್ದು, ಮಾರಕ ಕೋವಿಡ್-19 ಸಾಂಕ್ರಮಿಕ ರೋಗದ ಸೋಂಕು ಉಲ್ಬಣವಾಗಬಹುದು ಎಂಬುದಾಗಿ ಅರಿವಿದ್ದರೂ, ತೀರಾ ನಿರ್ಲಕ್ಷ್ಯ ವಹಿಸಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು …

ಸವಣೂರು : ಕೋವಿಡ್ ನಿಯಮ ಉಲ್ಲಂಘನೆ | ಅಂಗಡಿ ಮಾಲಕನ ವಿರುದ್ದ ದೂರು Read More »

ಡಾಕ್ಟರ್ ಏಪ್ರಾನ್ ಧರಿಸಿ ತರಕಾರಿ ತರಲು ಹೋಗಿ ನಗೆಪಾಟಲಿಗೆ ಈಡಾದ ಯುವಕ !

ವೈದ್ಯರ ಬಿಳಿ ಏಪ್ರಾನ್ ಧರಿಸಿ ತರಕಾರಿ ತರಲು ಹೋಗಿ ವ್ಯಕ್ತಿಯೊಬ್ಬ ನಗೆಪಾಟಲಿಗೆ ಗುರಿಯಾಗಿದ್ದಾನೆ. ಲಾಕ್ಡೌನ್ ನಿಮಿತ್ತ ಪೊಲೀಸರು ರೌಂಡ್ ಶುರುಮಾಡಿದ್ದರು. ನಿಯಮಾವಳಿಗಳು ಗುಣವಾಗಿ 10.00 ಗಂಟೆಯ ಒಳಗೆ ಎಲ್ಲರೂ ದಿನನಿತ್ಯದ ವಸ್ತುಗಳನ್ನು ತಂದು ಮನೆಯೊಳಗೆ ಸೇರಿ ಕೊಳ್ಳಬೇಕಿತ್ತು. ಹೆಚ್ಚು ಹೊತ್ತು ಹೊರಗಿದ್ದರೆ ಫೈನ್ ನ ಭಯ ಮತ್ತು ಲಾರಿಯ ರುಚಿ ನೋಡಬೇಕಾದ ಅನಿವಾರ್ಯತೆ. ಇದರಿಂದ ತಪ್ಪಿಸಿಕೊಳ್ಳಲು ರಾಜ್ಯಾದ್ಯಂತ ಜನರು ತರಹೇವಾರಿ ಐಡಿಯಾಗಳನ್ನು ಹುಡುಕುತ್ತಿದ್ದಾರೆ. ನಿನ್ನೆ ಒಬ್ಬ ಪೇಟೆ ಸುತ್ತಲು ಹಾಲಿನ ಕ್ಯಾನ್ ಯಾವಾಗಲೂ ಜೊತೆಗೆ ಒಯ್ಯುವ ಪರಿಪಾಠ …

ಡಾಕ್ಟರ್ ಏಪ್ರಾನ್ ಧರಿಸಿ ತರಕಾರಿ ತರಲು ಹೋಗಿ ನಗೆಪಾಟಲಿಗೆ ಈಡಾದ ಯುವಕ ! Read More »

ಈ ದೇಶದಲ್ಲಿ ಇಲ್ಲಿಯತನಕ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲ | ಆ ದೇಶ ಯಾವುದು ಗೊತ್ತಾ..?!

ಇಡೀ ವಿಶ್ವವನ್ನೇ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಆಟ ಆಡಿಸುತ್ತಿರುವ ಕೋರೋನಾ ಯಾಕೆ ಒಂದು ದೇಶಕ್ಕೆ ಇನ್ನೂ ಕೊಟ್ಟಿಲ್ಲ ಎಂಟ್ರಿ.‘ ನಮ್ಮ ದೇಶದಲ್ಲಿ ಇಂದಿಗೂ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲ ‘ ಎಂದು ಒಂದು ದೇಶ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ. ಇಡೀ ಜಗತ್ತೇ ಮಾರಕ ಕೊರೋನಾ ವೈರಸ್ ಸೋಂಕಿನಿಂದ ಪರದಾಡುತ್ತಿದ್ದರೆ, ಈ ದೇಶದಲ್ಲಿ ಒಂದೇ ಒಂದು ಸೋಂಕು ಪ್ರಕರಣವಿಲ್ಲದೆ ನೆಮ್ಮದಿಯಾಗಿ ಇದೆ. ನೀವು ಈ ಸುದ್ದಿಯನ್ನು ನಂಬದೇ ಇರಲು ಸಾಧ್ಯವಿದೆ. ಕಾರಣ ಯಾರದ್ದು ಕೋರೋಣ ಸೋಂಕಿತರು …

ಈ ದೇಶದಲ್ಲಿ ಇಲ್ಲಿಯತನಕ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲ | ಆ ದೇಶ ಯಾವುದು ಗೊತ್ತಾ..?! Read More »

ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಅನಿಲ ದುರಂತ | 3 ಸಾವು, ಹಲವರ ಸ್ಥಿತಿ ಚಿಂತಾಜನಕ

ಆಂಧ್ರಪ್ರದೇಶದ ನೆಲ್ಲೂರು ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಅನಿಲ ದುರಂತ ಸಂಭವಿಸಿದೆ. ಅಲ್ಲಿ ವಿಷಾನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವಾರು ಗಾಯಗೊಂಡಿದ್ದು ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ನೆಲ್ಲೂರಿನ ವಂಜಮೂರಿನ ವೆಂಕಟನಾರಾಯಣ ಆಕ್ಟಿವ್ ಫಾರ್ಮಾಸ್ಯುಟಿಕಲ್ ಇಂಗ್ರೆಡಿಯೆಂಟ್ ( ಡ್ರಗ್ ) ತಯಾರಿಕಾ ಕಾರ್ಖಾನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ವಿ. ಜಾಮೂರ್‌ನ ಶರೀಫ್, ಪಿ.ಸೀನು ಮತ್ತು ಚೌತಾ ಭೀಮಾವರಂನ ತಿರುಪಟಯ್ಯ ಎಂದು ಗುರುತಿಸಲಾಗಿದೆ. ಘಟನೆ ನಡೆದ ಕೂಡಲೇ ಕಾರ್ಖಾನೆಯು ಕಾರ್ಮಿಕರನ್ನು ನೆಲ್ಲೂರಿನ   ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಅವರಲ್ಲಿ …

ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಅನಿಲ ದುರಂತ | 3 ಸಾವು, ಹಲವರ ಸ್ಥಿತಿ ಚಿಂತಾಜನಕ Read More »

error: Content is protected !!
Scroll to Top