Ad Widget

ಸವಣೂರು : ಕೋವಿಡ್ ನಿಯಮ ಉಲ್ಲಂಘನೆ | ಅಂಗಡಿ ಮಾಲಕನ ವಿರುದ್ದ ದೂರು

ಸವಣೂರು : ಕಡಬ ತಾಲೂಕು ಸವಣೂರು ಗ್ರಾಮದ ಸವಣೂರಿನ ಪುದೊಟ್ಟು ಜನರಲ್ ಸ್ಟೋರ್ ನ ಮಾಲಕ ನಜೀರ್ ಎಂಬವರ ವಿರುದ್ದ ಬೆಳ್ಳಾರೆ ಠಾಣಾ ಎಸೈ ಆಂಜನೇಯ ರೆಡ್ಡಿ ಅವರು ದೂರು ದಾಖಲಿಸಿದ್ದಾರೆ.

ನಝೀರ್ ಅವರು ತಮ್ಮ ಅಂಗಡಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಸುಮಾರು 15 ರಿಂದ 20 ಮಂದಿ ಗ್ರಾಹಕರನ್ನು ಗುಂಪಾಗಿ ಸೇರಿಸಿ ವ್ಯಾಪಾರ ಮಾಡುತ್ತಿದ್ದು, ಮಾರಕ ಕೋವಿಡ್-19 ಸಾಂಕ್ರಮಿಕ ರೋಗದ ಸೋಂಕು ಉಲ್ಬಣವಾಗಬಹುದು ಎಂಬುದಾಗಿ ಅರಿವಿದ್ದರೂ, ತೀರಾ ನಿರ್ಲಕ್ಷ್ಯ ವಹಿಸಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಕೋವಿಡ್ -19 ಸೋಂಕು ಪ್ರಸರಣದ ಸರಪಳಿಯನ್ನು ತಡೆಯುವ ಸಲುವಾಗಿ ಹೊರಡಿಸಿದ ಮಾರ್ಗಸೂಚಿ ಆದೇಶಗಳನ್ನು ಉಲ್ಲಂಘಣೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ.

Ad Widget Ad Widget Ad Widget
Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: