ನಿಷೇದಾಜ್ಞೆಯ ನಡುವೆಯೂ ಸರಕಾರಿ ಜಾಗದಲ್ಲಿ ಕೋಳಿ ಅಂಕ | ಪೊಲೀಸ್ ದಾಳಿ, 5 ಮಂದಿ, 7 ಕೋಳಿ, 10 ಬೈಕ್, ನಗದು ವಶಕ್ಕೆ

ಲಾಕ್ ಡೌನ್ ಮದ್ಯೆಯೇ ಕೋಳಿ ಅಂಕ ನಡೆದ ಆಘಾತಕಾರಿ ಘಟನೆ ವರದಿ ಆಗಿದ್ದು, ಇದು ಕೊರೋ ನಾ ರೋಗದ ಕಡೆಗೆ ನಾವೆಷ್ಟು ದೊಡ್ಡ ಮಟ್ಟದ ನಿರ್ಲಕ್ಷ ಹೊಂದಿದ್ದೇವೆ ಎಂಬುದನ್ನು ತೋರಿಸುತ್ತದೆ. ಇದು ನಡೆದದ್ದು, ಇಲ್ಲೇ ಪುತ್ತೂರಿನಲ್ಲಿ.

ಪುತ್ತೂರು : ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ 5 ಮಂದಿಯನ್ನು ಬಂಧಿಸಿ ,7 ಕೋಳಿಗಳನ್ನು, ಹತ್ತು ದ್ವಿಚಕ್ರ ವಾಹನಗಳ ಸಹಿತ 7820 ರೂ.ನಗದು ವಶಕ್ಕೆ ಪಡೆದುಕೊಂಡ ಬಗ್ಗೆ ಪುತ್ತೂರಿನ ಬಲ್ನಾಡಿನಿಂದ ವರದಿಯಾಗಿದೆ.

ಕೋಳಿ ಅಂಕದಲ್ಲಿ ನಿರತರಾಗಿದ್ದ ಲಿಂಗಪ್ಪ ಮೂಲ್ಯ, ಸಂಜೀವ, ನಾರಾಯಣ ನಾಯ್ಕ, ಚಂದ್ರಶೇಖರ ಗೌಡ,ಸುಮಂತ್ ಎಂಬವರು ಬಂಧಿತ ಅರೋಪಿಗಳು

ಈ ವೇಳೆ ಕೆಲವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಂಪ್ಯ ಎಸೈ ಉದಯರವಿ ಅವರ ನೇತೃತ್ವದಲ್ಲಿ ಪ್ರೊಬೆಷನರಿ ಎಸೈ ಶ್ರೀಕಾಂತ್ ರಾಥೋಡ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.

Leave A Reply

Your email address will not be published.