ಮದುವೆಯಾಗಿ ಮೂರೇ ದಿನಕ್ಕೆ ಕೋವಿಡ್‌ಗೆ ಬಲಿಯಾದ ಯುವಕ

ಮದುವೆಯಾಗಿ ಕೇವಲ ಮೂರೇ ದಿನಕ್ಕೆ ಯುವಕನೊಬ್ಬ ಕೊರೊನಾ ಮಾಹಾಮಾರಿಗೆ ಬಲಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಜಾಟಾನ್ ನಿವಾಸಿ ಅರ್ಜುನ್ ಎಂಬಾತ ಮದುವೆಯಾಗಿ ಮೂರೇ ದಿನಕ್ಕೆ ಕೊರೊನಾದಿಂದ ಸಾವಿಗೀಡಾಗಿದ್ದಾರೆ‌.

ಏ,25 ರಂದು ಅರ್ಜುನನು ಬಬ್ಲಿ ಎಂಬಾಕೆಯನ್ನು ಮದುವೆಯಾಗಿದ್ದರು. ಮದುವೆಯಾಗಿ ಮನೆಗೆ ಬಂದ ದಿನವೇ ಅರ್ಜುನ್ ಆರೋಗ್ಯದಲ್ಲಿ ಏರುಪೇರಾಗಿತ್ತು. ರಾತ್ರಿ ತೀವ್ರ ಜ್ವರ ಕಾಣಿಸಿಕೊಂಡಿತ್ತು.

ಅರ್ಜುನನ್ನು ಕುಟುಂಬಸ್ಥರು ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಈ ವೇಳೆ ಆತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೂಡಲೇ ಅರ್ಜುನ್‍ನನ್ನು ಜಿಲ್ಲಾಸ್ಪತ್ರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಚಿಕಿತ್ಸೆ ನೀಡುತ್ತಿದ್ದರೂ ಅರ್ಜುನ್ ಆರೋಗ್ಯ ಕ್ಷಿಣಿಸುತ್ತಲೇ ಹೋಯಿತು. ಕೊನೆಗೆ ಅರ್ಜುನ್ ಪ್ರಾಣ ಪಕ್ಷಿ ಹಾರಿಹೋಗಿತ್ತು.

Leave A Reply

Your email address will not be published.