ಕಣ್ಣೇದುರೇ ಜೀವ ಬಿಡುತ್ತಿರುವ ಕೊರೊನಾ ಸೋಂಕಿತರು | ಮನನೊಂದು ಸೋಂಕಿತರ ಪಾಲಿನ ದೇವರಾಗಿದ್ದ ವೈದ್ಯ ವಿವೇಕ್ ರೈ ಆತ್ಮಹತ್ಯೆ

ದೇಶದಲ್ಲಿ ಕೊರೊನಾ ಎರಡನೇ ಅಲೆ ತನ್ನ ವ್ಯಾಕುಲತೆಯನ್ನು ಹೆಚ್ಚಿಸುತ್ತಿದೆ.ಇದರಿಂದಾಗಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ.

ಈ ಕಾರಣದಿಂದ ಆರೋಗ್ಯ ಕ್ಷೇತ್ರದಲ್ಲಿ ಒತ್ತಡ ಹೆಚ್ಚಿದೆ.ಇದರಿಂದ ಒತ್ತಡ ತಾಳಲಾರದೇ ಖಾಸಗಿ ಆಸ್ಪತ್ರೆಯ ವೈದ್ಯನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನೆಡೆದಿದೆ.

ಡಾ. ವಿವೇಕ್​ ರೈ ಎಂಬವರೇ ಆತ್ಮಹತ್ಯೆಗೈದ ಕೊರೊನ ಸೋಂಕಿತರ ಪಾಲಿಗೆ ದೇವರಂತಿದ್ದ ಯುವ ವೈದ್ಯ.

ಈ ಕುರಿತು ಟ್ವೀಟ್​ ಮಾಡಿರುವ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಯ ಮಾಜಿ ಮುಖ್ಯಸ್ಥ ಡಾ. ರವಿ ವಾಂಖೇಡ್ಕರ್​, ವಿವೇಕ್​ ಓರ್ವ ಪರಿಣಿತ ವೈದ್ಯ.ಅವರು ಉತ್ತರ ಪ್ರದೇಶದ ಗೋರಖ್​ಪುರ್​ ಮೂಲದವರು.

ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ನೂರಾರು ರೋಗಿಗಳ ಪ್ರಾಣ ಉಳಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರನ್ನು ನೋಡಿಕೊಳ್ಳುತ್ತಿದ್ದರು. ಪ್ರತಿದಿನ 7 ರಿಂದ 8 ಗಂಭೀರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೂ ಹೆಚ್ಚು ಹೆಚ್ಚು ಜನ ಕೊರೊನಾದಿಂದ ಬಲಿಯಾಗುವುದನ್ನು ನೋಡಿ ವಿವೇಕ್​ ರೈ ಖಿನ್ನತೆಗೆ ಜಾರಿದ್ದರು.

ಇದರಿಂದ ತೀವ್ರ ಹತಾಶೆಗೊಂಡ ವಿವೇಕ್​ ತೀವ್ರ ಒತ್ತಡಕ್ಕೆ ಒಳಗಾಗಿ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಕಣ್ಣೆದುರಲ್ಲೇ ಜನರ ಪ್ರಾಣ ಹೋಗುವುದನ್ನು ಸಹಿಸದೇ ತಾವೂ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ವಿವೇಕ್​ ಎರಡು ತಿಂಗಳ ಗರ್ಭಿಣಿ ಪತ್ನಿಯನ್ನು ಬಿಟ್ಟು ಅಗಲಿದ್ದಾರೆ ಎಂದು ವಾಂಖೇಡ್ಕರ್​ ತಿಳಿಸಿದ್ದಾರೆ.

ಕೋವಿಡ್ ಬಿಕ್ಕಟ್ಟನ್ನು ನಿರ್ವಹಿಸುವಾಗ ಇದು ಭಾರಿ ಭಾವನಾತ್ಮಕ ಒತ್ತಡವನ್ನು ಗಮನಕ್ಕೆ ತರುತ್ತದೆ. ಯುವ ವೈದ್ಯನ ಈ ಸಾವು ಮೂಲಭೂತ ಆರೋಗ್ಯ ಸೌಲಭ್ಯಗಳ ಕೊರತೆಯ ನಿರಾಶೆಯನ್ನು ಸೃಷ್ಟಿಸಿರುವ ಈ ಕೆಟ್ಟ ವ್ಯವಸ್ಥೆ ಮಾಡಿದ ಕೊಲೆ ಎಂದರೆ ತಪ್ಪಾಗಲಾರದು. ಕೆಟ್ಟ ರಾಜಕೀಯ ಮತ್ತು ಕೆಟ್ಟ ಆಡಳಿತ ದುಷ್ಪರಿಣಾಮವಿದೆ ಎಂದು ವಾಖೇಂಡ್ಕರ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.