ಬ್ಯಾಂಕ್ ಅಧಿಕಾರಿ ಎಂದು ನಂಬಿ ಒಟಿಪಿ ನೀಡಿ ಹಣ ಕಳೆದುಕೊಂಡ ಜಾಲ್ಸೂರಿನ ಯುವಕ | ಇವರು ಕಳೆದುಕೊಂಡಿದ್ದು 40 ಸಾವಿರ
ಸುಳ್ಯದ ವ್ಯಕ್ತಿಯೋರ್ವರಿಗೆ ಕೆನರಾ ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಓಟಿಪಿ ಪಡೆದು 40 ಸಾವಿರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.
ಸುಳ್ಯದ ಜಾಲ್ಸೂರು ಮೂಲದ ವ್ಯಕ್ತಿಯೊಬ್ಬರಿಗೇ ಕೆನರಾ ಬ್ಯಾಂಕಿನ ಮ್ಯಾನೇಜರ್ ತಾನು ಎಂದು ಹೇಳಿದ ವ್ಯಕ್ತಿಯಿಂದ ದೂರವಾಣಿ ಕರೆ ಬಂದಿತ್ತು. ನಿಮ್ಮ ಅಕೌಂಟ್ ಆಕ್ಟಿವೇಟ್ ಮಾಡಲಿಕ್ಕಿದೆ ಎಂದು ನಂಬಿಸಿದ್ದಾನೆ. ನಂತರ ನಿಮ್ಮ ದೂರವಾಣಿ ಸಂಖ್ಯೆಗೆ ಕೆಲವೇ ಕ್ಷಣದಲ್ಲಿ ಒಂದು ಓಟಿಪಿ ನಂಬರ್ ಬರಲಿದೆ ಎಂದಿದ್ದಾನೆ. ಆ ನಂಬರ್ ಬಂದ ಕೂಡಲೇ ನನಗೆ ಮಾಹಿತಿ ನೀಡಬೇಕೆಂದು ಹೇಳಿಕೊಂಡ ಎನ್ನಲಾಗಿದೆ.
ಕೆಲವೇ ಕ್ಷಣದಲ್ಲಿ ಇವರ ದೂರವಾಣಿ ಸಂಖ್ಯೆಗೆ ಓಟಿಪಿ ನಂಬರ್ ಬಂದಿದೆ. ಅದನ್ನು ಅವರು ದೂರವಾಣಿ ಬಂದ ಸೋ ಕಾಲ್ಡ್ ಬ್ಯಾಂಕ್ ಮ್ಯಾನೇಜರ್ ಗೆ ಕಳಿಸಿದ್ದಾರೆ.
ಆ ಕ್ಷಣದಿಂದ ಮೊದಲಿಗೆ 30000 ರೂಪಾಯಿ ಸ್ವೈಪ್ ಮಾಡದೆಯೇ ಕಟ್ ಆಗಿದೆ. ಕಾರ್ಡುದಾರರಿಗೆ ಏನು ಮಾಡಬೇಕೆಂದು ಯೋಚಿಸುವಷ್ಟರಲ್ಲಿ ಎರಡನೆಯ ಬಾರಿಗೆ 9999 ರೂಪಾಯಿ ಹಣ ಮೈನಸ್ ಆಗಿದೆ. ಮೂರನೆಯ ಬಾರಿಗೆ 999 ರೂ ಈ ರೀತಿಯಾಗಿ ಒಟ್ಟು 40,998 ರೂಪಾಯಿ ವ್ಯಕ್ತಿ ಖಾತೆಯಿಂದ ಖತo ಆಗಿದೆ.
ತಾನು ಮೋಸ ಹೊಂದಿರುವುದಾಗಿ ತಿಳಿಯುವಷ್ಟರಲ್ಲಿ ಸಮಯ ಮೀರಿತ್ತು. ಏನೂ ಮಾಡಲಾಗದ ಬ್ಯಾಂಕ್ ಗ್ರಾಹಕ ಸುಳ್ಯ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ತಿಳಿದುಬಂದಿದೆ.