Ad Widget

ಕನ್ನಡದ ಈ ನಾಯಕ ನಟಿಯ ಪ್ರೀತಿಗೆ ಅಣ್ಣನ ವಿರೋಧ | ಅಣ್ಣನನ್ನು “ಪೀಸ್ ಪೀಸ್” ಮಾಡಿ ಕೊಲೆ ಮಾಡಿದ ಜಿಹಾದಿ !

ಹುಬ್ಬಳ್ಳಿ ಧಾರವಾಡದ ಅವಳಿ ಜಿಲ್ಲೆ ಈ ಲವ್ ಜಿಹಾದ್ ಅಬ್ಬರಕ್ಕೆ ಬೆಚ್ಚಿ ಬಿದ್ದಿದೆ. ಅಲ್ಲಿ ನಡೆದ ರುಂಡ ಮುಂಡ ಬೇರ್ಪಡಿಸಿ ತರಕಾರಿ ತುಂಡರಿಸಿದ ರೀತಿ ದೇಹವನ್ನು ಪೀಸ್ ಪೀಸ್ ನಡೆಸಿದ ಕೊಲೆಯ ಭೀಭತ್ಸತೆಗೆ ನಗರದ  ಜನ ತಲ್ಲಣಗೊಂಡಿದ್ದರು.

ಇದೀಗ ಹುಬ್ಬಳ್ಳಿಯ ಖಡಕ್ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.

ಕಳೆದ ಅಮವಾಸ್ಯೆಯ ದಿನ ಬರ್ಬರವಾಗಿ ಸಿಗಿದು ಹಾಕಿದ ಮೃತದೇಹವೊಂದು ಹುಬ್ಬಳ್ಳಿಯ ಹೊರವಲಯದಲ್ಲಿ ಪತ್ತೆಯಾಗಿತ್ತು. ಈ ಮೃತದೇಹದ ಬಗ್ಗೆ ಯಾವ ಸುಳಿವು ಕೂಡಾ ಪೊಲೀಸರಿಗೆ ಸಿಕ್ಕಿರಲಿಲ್ಲ.
ಆದರೂ ಕೂಡ ಹುಬ್ಬಳ್ಳಿಯ ಗ್ರಾಮೀಣ ಪೋಲಿಸರು ಹಗಲು ರಾತ್ರಿ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ರುಂಡ ಮುಂಡ ಛಿದ್ರಗೊಳಿಸಿ ಕೊಲೆ ಯಾಕೆ ನಡೆಯಿತು ?

ಆಕೆ ಒಬ್ಬನನ್ನು ಪ್ರೀತಿಸಿದ್ದಳು. ಆಕೆಯೇನೋ ಎಲ್ಲರಂತೆ ಸಾಮಾನ್ಯ ಹುಡುಗಿಯಾಗಿರಲಿಲ್ಲ. ಆಕೆಯಲ್ಲಿ ಸೌಂದರ್ಯವಿತ್ತು. ಯೌವನದ ಜತೆಗೆ ಆಕೆಗೆ ನಟನೆಯ ಕಲೆ ಸಿದ್ಧಿಸಿತ್ತು. ಅದರಂತೆ ಆಕೆ ಕನ್ನಡದಲ್ಲಿ ನಾಲ್ಕಾರು ಚಿತ್ರಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ಆಕೆ ಶನಯಾ ಕಾಟ್ವೆ. ಆಕೆ, ‘ ಒಂದು ಗಂಟೆಯ ಕಥೆ, ಇದಂ ಪ್ರೇಮo ಜೀವನಂ ‘ ಮುಂತಾದ ಚಿತ್ರಗಳ ನಾಯಕ ನಟಿ.

ಬದುಕಿನಲ್ಲಿ ಎಲ್ಲಾ ಹಂತದಲ್ಲೂ ಸಕ್ಸಸ್ ಕಾಣುತ್ತಾ ಸಾಗಿದ ಹುಡುಗಿ ತನ್ನ ಬದುಕಿನ ಮುಖ್ಯ ವಿಷಯದಲ್ಲಿ ಆಯ್ಕೆ ಮಾಡುವುದರಲ್ಲಿ ಧಾರುಣವಾಗಿ ಎಡವಿದ್ದಳು. ಲವ್ ಜಿಹಾದ್ ಎನ್ನುವುದು ಸೈಲೆಂಟಾಗಿ ಒಂದಲ್ಲಾ ಒಂದು ರೀತಿಯಲ್ಲಿ ಮರಣವನ್ನು ಬೇಡುತ್ತದೆ ಎಂದು ಗೊತ್ತಿದ್ದೂ ಆಕೆ ಆತನನ್ನು ಪ್ರೀತಿಸಿಬಿಟ್ಟಿದ್ದಳು.

ಆಕೆಯ ಗೆಳತಿಯರು ಈ ಪ್ರೀತಿ ಬೇಡ ಎಂದು ಆಕೆಯನ್ನು ಎಚ್ಚರಿಸಿದ್ದರು. ಆದರೆ ಬಣ್ಣದ ಬದುಕಿನ ಗುಂಗಿನಲ್ಲೇ ಇದ್ದ ಹುಡುಗಿ ಇಂತಹ ಯಾವುದೇ ಸಜೇಶನ್ ಗೆ ಕ್ಯಾರೇ ಅನ್ನಲಿಲ್ಲ. ಪ್ರತಿಯೊಬ್ಬ ಪ್ರೇಮಿ ಯೋಚಿಸುವಂತೆ, ‘ ಈತ ಎಲ್ಲರಂತಲ್ಲ, ಈತ ಒಳ್ಳೆಯವನು. ಎಲ್ಲರೂ ಕೆಟ್ಟವರಿರ್ತಾರಾ? ಇವನು ತುಂಬಾ ಕೇರಿಂಗ್… ಇಂತಹಾ ನೂರು ಸಮರ್ಥನೆಗಳನ್ನು ಎಲ್ಲರಿಗೂ ಕೊಡುತ್ತಾ ಬಂದಿದ್ದಳು. ಬುದ್ದಿ ಹೇಳಿದವರೆಲ್ಲ ಹೇಳುವಷ್ಟು ಹೇಳಿ ಸುಮ್ಮನಾಗಿದ್ದರು : ಆದರೆ ಅವನನ್ನೊಬ್ಬನನ್ನು ಬಿಟ್ಟು.

ಆತ ರಾಜೇಶ್ ಕಾಟ್ವೆ. ಯಾಕೆಂದರೆ ಆತ ಶನಯಾ ಕಾಟ್ವೆಯ ಸ್ವಂತ ಅಣ್ಣನಾಗಿದ್ದ. ತಂಗಿಯನ್ನು ಪ್ರೊಟೆಕ್ಟ್ ಮಾಡುವುದು ಆತನ ಪ್ರೈಮ್ ಕರ್ತವ್ಯವಾಗಿತ್ತು. ಅದರಂತೆ ಆತ ತಂಗಿಗೆ ಬುದ್ದಿ ಹೇಳಿದ್ದ. ಅವಳನ್ನು ನಿರ್ಬಂಧಿಸುತ್ತಿದ್ದ ಮತ್ತು ಮುಖ್ಯವಾಗಿ ನಿಯಾಜನನ್ನು ದೂರ ಇರುವಂತೆ ಎಚ್ಚರಿಸಿದ್ದ. ಅದೇ ರಾಜೇಶ್ ನ ಕಾಟ್ವೆಯ ಪ್ರಾಣಕ್ಕೆ ಮುಳುವಾಗುತ್ತದೆ ಎಂದು ಯಾರೂ ಎಣಿಸಿರಲಿಕ್ಕಿಲ್ಲ.

ಯಾವಾಗ ತನ್ನ ಲವ್ ಗೆ ಶನಯಾಳ ಅಣ್ಣ ರಾಜೇಶ್ ಕಾಟ್ವೆ ಅಡ್ಡಿ ಆಗ್ತಾನೆ ಎಂದೆನಿಸಿದ ನಿಯಾಜ್ ನ ಜಿಹಾದ್ ಬುದ್ದಿ ವರ್ಕ್ ಔಟ್ ಮಾಡಲು ಶುರುಮಾಡಿದೆ. ಹಾಗೆ ತನಗೆ ಅಡ್ಡಿ ಬರುವ ತನ್ನ ಪ್ರೇಯಸಿಯ ಅಣ್ಣ ರಾಜೇಶ್ ಕಾಟ್ವೆಯನ್ನು ನಿಯಾಜ್ ಮತ್ತವನ ದುಷ್ಟ ಹುಡುಗರ ತಂಡ ರುಂಡ ಮುಂಡ ಕಟ್ ಮಾಡಿ ಜೀವ ಚೆಲ್ಲಾಡಿದೆ.

ಹೀಗೆ ತಾನು ಪ್ರೀತಿಸುತ್ತಿದ್ದ ಯುವತಿಯ ಅಣ್ಣನ್ನನ್ನೇ ನಿಯಾಜ್ ಹಾಗೂ ಆತನ ಸಹಚರರು ಸೇರಿ ಕೊಲೆ ಮಾಡಿ ಮನೆಯಲ್ಲಿಯೇ ಚಾಕುವಿನಿಂದ ದೇಹವನ್ನು ತುಂಡು ತುಂಡು ಮಾಡಿ ಸುಟ್ಟು ಹಾಕಿದ್ದರು. ನಂತರ ದೇಹದ ಭಾಗಗಳನ್ನು ಎಲ್ಲೆಂದರಲ್ಲಿ ಬಿಸಾಡಿ ನಂತರ ರಾಜಾರೋಷವಾಗಿ ಅಡ್ಡಾಡುತ್ತಿದ್ದರು.

ಒಂದೇ ಒಂದು ಸಾಕ್ಷಿ ಇಲ್ಲದ, ಅಟ್ ಲೀಸ್ಟ್ ಒಂದು ಮಿಸ್ಸಿಂಗ್ ಕೇಸ್ ಕೂಡ ಇಲ್ಲದ ಕೇಸನ್ನು ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ರಮೇಶ ಗೋಕಾಕ, ಧಾರವಾಡ ಗ್ರಾಮೀಣ ಠಾಣೆಯ ಪಿಎಸ್ಐ ಮಹೇಂದ್ರ ಕುಮಾರ್ ಹಾಗೂ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಸಿಬ್ಬಂದಿಗಳು ಸೇರಿ ರುಂಡ ಮುಂಡ ಚೆಂಡಾಡಿದ ಚಂಡಾಲರನ್ನು ಬಂಧಿಸಿ ರಹಸ್ಯವನ್ನು ಬೇಧಿಸಿದ್ದಾರೆ. ಸದ್ಯ ನಟಿ ಶನಯಾಳನ್ನು ಕೂಡಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದರಲ್ಲಿ ಆಕೆಯ ಪಾತ್ರವನನಾದರೂ ಇದೆಯಾ ಎಂಬ ಬಗ್ಗೆ ಕೂಡ ತನಿಖೆ ಸಾಗಿದೆ.

Leave a Reply

error: Content is protected !!
Scroll to Top
%d bloggers like this: