Tamilunadu : ಮಿಸ್ ಆಗಿ ದೇವರ ಹುಂಡಿಗೆ ಬಿದ್ದ ಐ ಫೋನ್ – ದೇವಾಲಯದ ಆಡಳಿತ ಮಂಡಳಿ ಹೇಳಿದ್ದನ್ನು ಕೇಳಿ ಭಕ್ತ ಶಾಕ್ !!

Share the Article

Tamilunadu: ದೇವಸ್ಥಾನದಲ್ಲಿ ದೇವರ ಕಾಣಿಕೆ ಹುಂಡಿಗೆ ಹಾಕಿದ್ದೆಲ್ಲದು ದೇವರಿಗೆ ಎನ್ನುವ ಮಾತಿದೆ. ಅಂದರೆ ದೇವರ ಕಾಣಿಕೆ ಹುಂಡಿಗೆ ಬಿದ್ದದ್ದು ದೇವರಿಗೆ. ವಾಪಸ್ ಕೊಡಿ ಅಂದ್ರೆ ಸಿಗುತ್ತಾ? ಖಂಡಿತ ಸಿಗಲ್ಲ.. ಆದರೆ ಈಗ ತಮಿಳುನಾಡಿನಲ್ಲೊಂದು ವಿಚಿತ್ರ ಘಟನೆ ನಡೆದಿದ್ದು ತಿರುಪೋರೂರ್ ಕಂದಸ್ವಾಮಿ ದೇವಾಲಯದ ಹುಂಡಿಗೆ ಕಾಣಿಕೆ ಹಾಕುವಾಗ ಐಫೋನ್‌ ಬಿದ್ದು ಹೋಗಿದೆ. ಈ ವೇಳೆ ಐಫೋನ್ ಕಳೆದುಕೊಂಡಾತ ಈ ರೀತಿಯಾಗಿ ನಡೆದಿದೆ ದಯವಿಟ್ಟು ನನ್ನ ಐಫೋನನ್ನು ಮರಳಿ ನೀಡಿ ಎಂದು ಆಡಳಿತ ಮಂಡಳಿಯಲ್ಲಿ ಕೇಳಿದಾಗ ಆಡಳಿತ ಮಂಡಳಿ ನೀಡಿದ ಉತ್ತರ ಕೇಳಿ ಭಕ್ತ ಕಂಗಾಲಾಗಿರುವ ಘಟನೆ ನಡೆದಿದೆ.

ಹೌದು, ತಮಿಳುನಾಡಿನ(Tamilunadu) ಚಂಗಲ್​ಪಟ್ಟು ಜಿಲ್ಲೆಯ ತಿರುಪ್ಪೊರೂರ್​ನ ಪ್ರಸಿದ್ಧ ಕಂದಸ್ವಾಮಿ ದೇವಾಲಯಕ್ಕೆ ಭಕ್ತ ದಿನೇಶ್ ಎನ್ನುವರು ಭೇಟಿ ಕೊಟ್ಟಿದ್ದರು. ಈ ವೇಳೆ ಹುಂಡಿಗೆ ಭಕ್ತನ ಐಫೋನ್​ ಆಕಸ್ಮಿಕವಾಗಿ ಬಿದ್ದಿದೆ. ಈ ಘಟನೆ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ಭಕ್ತ, ಐಫೋನ್​ ಬಿದ್ದಿದೆ ಎಂದು ತಿಳಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿ ಹುಂಡಿ ಓಪನ್​ ಮಾಡಿದ್ದು ಐಫೋನ್​ ಕೂಡ ಸಿಕ್ಕಿದೆ.

ಕಾಣಿಕೆ ಹುಂಡಿಯಲ್ಲಿ ಐಫೋನ್ ಸಿಕ್ಕ ವಿಚಾರವನ್ನು ಕೂಡಲೇ ದಿನೇಶ್ ಅವರಿಗೆ ತಿಳಿಸಲಾಗಿದೆ. ಅಲ್ಲದೆ ನಿಮ್ಮ ಐಫೋನ್ ವಾಪಸ್ ಕೊಡಲಾಗದು. ದೇವರ ಹುಂಡಿಗೆ ಬಿದ್ದ ಬಳಿಕ ಅದು ದೇವರಿಗೆ ಸೇರಿದ್ದು. ನೀವು ಐಫೋನ್‌ನಲ್ಲಿರುವ ಡೇಟಾವನ್ನೆಲ್ಲ ನಿಮ್ಮ ಇನ್ನೊಂದು ಫೋನ್‌ಗೆ ವರ್ಗಾವಣೆ ಮಾಡಿಕೊಳ್ಳಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ. ಇದರಿಂದ ಭಕ್ತ ದಿನೇಶ್ ಅಚ್ಚರಿಯಾಗಿದ್ದು ಲ್ಯಾಪ್ ಟಾಪ್ ಇಲ್ಲದ ಕಾರಣ ಎರಡು ದಿನ ಬಿಟ್ಟು ಡಾಟಾ ಪಡೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.