Ad Widget

ಅಶ್ಲೀಲ ಸಿನಿಮಾ ನೋಡಿ ಪೋರ್ನ್ ಸ್ಟಾರ್ ನಂತೆ ವರ್ತಿಸಲು ಮತ್ತು ಮೂತ್ರ ಕುಡಿಯಲು ಒತ್ತಾಯ | ಪತಿ ವಿರುದ್ಧ ಪತ್ನಿ ದೂರು

ಪೋರ್ನ್ ( ಅಶ್ಲೀಲ ಬ್ಲೂ ) ಸಿನಿಮಾಗಳನ್ನು ನೋಡುವಂತೆ ಒತ್ತಾಯಿಸಿ, ಪೋರ್ನ್ ಸ್ಟಾರ್ ನಂತೆ ನಟಿಸಮತ್ತು ಮೂತ್ರ ಕುಡಿಯುವಂತೆ ಒತ್ತಾಯಿಸುತ್ತಿದ್ದ ಪತಿಯ ವಿರುದ್ಧ 22 ವರ್ಷದ ಆತನ ಪತ್ನಿ ದೂರು ದಾಖಲಿಸಿದ್ದಾರೆ. ಈ ದೂರಿನ ಜೊತೆಗೆ ವಿಚ್ಛೇದನಕ್ಕೂ ಆ ಮಹಿಳೆ ಅರ್ಜಿ ಸಲ್ಲಿಸಿದ್ದಾಳೆ.

ದೇವನಹಳ್ಳಿ ನಿವಾಸಿಯಾದ ಈ ಮಹಿಳೆಗೆ 2018ರಲ್ಲಿ ಕಾಡುಗೋಡಿಯ ಶೀಗೆಹಳ್ಳಿ ನಿವಾಸಿ ಅಭಿನಾಷ್ ನ ವಿವಾಹವಾಗಿತ್ತು. ಮದುವೆಯ ನಂತರ 2-3 ತಿಂಗಳು ಪತಿ ಪತ್ನಿ ಸರಿಯಾಗಿಯೇ ಇದ್ದರು. ಅದಾದ ನಂತರ ಆತ ಕಿರುಕುಳ ನೀಡಲು ಪ್ರಾರಂಭಿಸಿದ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

ವಿಚಿತ್ರ ಸ್ವಭಾವದ ಗಂಡ ಮನೆಯಲ್ಲಿ ಏನು ಮಾಡುತ್ತಿದ್ದ?

ಆತ ಮನೆಯಲ್ಲಿ ಪತ್ನಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸುತ್ತಿದ್ದ. ಆ ನಂತರ ಅದರಲ್ಲಿ ಆಕ್ಟ್ ಮಾಡಿದಂತೆ ಆಕೆಯನ್ನೂ ವರ್ತಿಸಲು ಬಲವಂತ ಮಾಡುತ್ತಿದ್ದ. ಒಂದು ವೇಳೆ ನಾನು ನಿರಾಕರಿಸದರೆ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ.

ಅಲ್ಲದೆ ರಾತ್ರಿಯಿಡೀ ಬೆತ್ತಲೆ ಮಲಗುವಂತೆ ಒತ್ತಾಯಿಸುತ್ತಿದ್ದ. ಒಂದೊಂದು ಹೊಸ ಪೋರ್ನ್ ನೋಡಿದಾಗಲೂ ಅದರ ರೀತಿ ವಿಚಿತ್ರ ಭಂಗಿಯಲ್ಲಿ ಸೆಕ್ಸ್ ಮಾಡಲು ಆತ ಒತ್ತಾಯಿಸುತ್ತಿದ್ದ. ತೀರ ಇತ್ತೀಚೆಗೆ ಒಂದು ಪೋರ್ನ್ ನಲ್ಲಿ ಆತನ ಗುಪ್ತಾಂಗ ಹಿಡಿದು ಮೂತ್ರ ಸೇವನೆ ಮಾಡುವಂತೆ ಒತ್ತಾಯಿಸಿದ್ದ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ. ಸಂಪ್ರದಾಯದ ಮನೆಯ ಹುಡುಗಿ ಇದನ್ನೆಲ್ಲ ಮಾಡಲು ಒಪ್ಪಿಲ್ಲ. ಆಗ ಆತ ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹುಡುಗಿ ತನ್ನ ಅತ್ತೆಯ ಬಳಿ ಮೊದಲಿಗೆ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ಆದರೆ ಆ ಅತ್ತೆಯು, ಮಗ ಹೇಳಿದಂತೆ ಕೇಳಲು ತಿಳಿಸಿದ್ದರು. ತಾಯಿ ಮತ್ತು ಮಗ ಇಬ್ಬರೂ ಸೇರಿಕೊಂಡು ತನ್ನ ಪೋಷಕರಿಗೆ ಕರೆ ಮಾಡದಂತೆ ನಿರ್ಬಂಧ ವಿಧಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: